ಜೂನ್ ೫ ರಂದು ಬ್ಯಾಂಕಾಕ್‌ಗೆ ತೆರಳಲಿರುವ ರಾಹುಲ್ ಗಾಂಧಿಯವರ ಬೋರ್ಡಿಂಗ್ ಪಾಸ್ ಅನ್ನು ಇದು ತೂರಿಸುತ್ತದೆಯೇ? ಇಲ್ಲ, ಅದನ್ನು ಎಡಿಟ್ ಮಾಡಲಾಗಿದೆ!

ಮೂಲಕ: ಅಂಕಿತಾ ಕುಲಕರ್ಣಿ
ಜೂನ್ 4 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಜೂನ್ ೫ ರಂದು ಬ್ಯಾಂಕಾಕ್‌ಗೆ ತೆರಳಲಿರುವ ರಾಹುಲ್ ಗಾಂಧಿಯವರ ಬೋರ್ಡಿಂಗ್ ಪಾಸ್ ಅನ್ನು ಇದು ತೂರಿಸುತ್ತದೆಯೇ? ಇಲ್ಲ, ಅದನ್ನು ಎಡಿಟ್ ಮಾಡಲಾಗಿದೆ!

ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಹುಲ್ ಗಾಂಧಿ ಬ್ಯಾಂಕಾಕ್‌ಗೆ 'ಓಡಿಹೋಗುತ್ತಿದ್ದಾರೆ' ಎಂಬ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮೂಲ ಚಿತ್ರವನ್ನು ಅಂಕಣಕಾರರಾದ ಅಜಯ್ ಅವತಾನೆ ಅವರು ಹಂಚಿಕೊಂಡಿದ್ದಾರೆ. ೨೦೧೯ ರ ಆಗಸ್ಟ್‌ನಲ್ಲಿ ದೆಹಲಿಯಿಂದ ಸಿಂಗಪೋರ್ ಗೆ ಹೋದ ವಿಸ್ತಾರಾ ವಿಮಾನದ ಬೋರ್ಡಿಂಗ್ ಪಾಸ್ ಆಗಿತ್ತು.

ಕ್ಲೈಮ್ ಐಡಿ 3efe781c

ಹೇಳಿಕೆ ಏನು?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೆಸರಿನಲ್ಲಿ ಥಾಯ್ಲೆಂಡ್‌ನ ಬ್ಯಾಂಕಾಕ್‌ಗೆ ಕಾಯ್ದಿರಿಸಲಾಗಿದೆ ಎಂದು ಹೇಳಲಾದ ಭಾರತೀಯ ವಿಮಾನಯಾನ ಸಂಸ್ಥೆ ವಿಸ್ತಾರಾ ನಿರ್ವಹಿಸುವ ವಿಮಾನದ ಬೋರ್ಡಿಂಗ್ ಪಾಸ್‌ನ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಲೋಕಸಭೆ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಒಂದು ದಿನದ ನಂತರ ಗಾಂಧಿಯವರು "ಜೂನ್ ೫ ರಂದು ಬ್ಯಾಂಕಾಕ್‌ಗೆ ಓಡಿಹೋಗುತ್ತಿದ್ದಾರೆ" ಎಂದು ಹೇಳಿಕೊಂಡು ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಏಪ್ರಿಲ್ ೧೯ ರಂದು ಆರಂಭವಾದ ಏಳು ಹಂತಗಳ ಚುನಾವಣೆ ಜೂನ್ ೧ ರಂದು ಕೊನೆಗೊಂಡಿತು.

ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ರಾಹುಲ್ ಗಾಂಧಿಯವರ ಜೂನ್ ೫, ೨೦೨೪ ರ ಬ್ಯುಸಿನೆಸ್ ಕ್ಲಾಸ್ ವಿಸ್ತಾರಾ ಏರ್‌ಲೈನ್ಸ್ ಫ್ಲೈಟ್ ಟಿಕೆಟ್.” ಇದರ ಆರ್ಕೈವ್ ಮಾಡಿದ ಲಿಂಕ್‌ ಮತ್ತು ಅಂತಹ ಇನ್ನೊಂದು ಪೋಷ್ಟ್ ಅನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಅದರ  ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿ ಮತ್ತು ಇಲ್ಲಿ ಲಭ್ಯವಿದೆ. ಇದೇ ರೀತಿಯ ಹೇಳಿಕೆಗಳೊಂದಿಗೆ ಚಿತ್ರವು ವಾಟ್ಸ್ ಆಪ್ ನಲ್ಲಿಯೂ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಫೇಸ್‌ಬುಕ್‌/ವಾಟ್ಸ್ ಆಪ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಹೆಚ್ಚಿನ ಎಕ್ಸಿಟ್ ಪೋಲ್ ಸಮೀಕ್ಷೆಗಳು ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್‌ಗೆ ಸೋಲು ಮತ್ತು ಬಿಜೆಪಿ (ಭಾರತೀಯ ಜನತಾ ಪಾರ್ಟಿ) ನೇತೃತ್ವದ ಎನ್‌ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್) ಗೆಲುವನ್ನು ಊಹಿಸಿದ ನಂತರ ಈ ಪೋಷ್ಟ್ ಗಳನ್ನು ಹಂಚಿಕೊಳ್ಳಲಾಗಿದೆ.

ಆದರೆ, ಚಿತ್ರವನ್ನು ಡಿಜಿಟಲಿ ಎಡಿಟ್ ಮಾಡಲಾಗಿದೆ. ಮೂಲ ಬೋರ್ಡಿಂಗ್ ಪಾಸ್ ಅಂಕಣಕಾರ ಅಜಯ್ ಅವತಾನೆ ಅವರ ಹೆಸರನ್ನು ತೋರಿಸುತ್ತದೆ ಮತ್ತು ೨೦೧೯ ರಲ್ಲಿ ಸಿಂಗಾಪುರಕ್ಕೆ ನೀಡಿದ ಫ್ಲೈಟ್ ಟಿಕೆಟ್ ಆಗಿದೆ. 

ನಾವು ಯಾವ ವ್ಯತ್ಯಾಸಗಳನ್ನು ಗಮನಿಸಿದ್ದೇವೆ?

ವೈರಲ್ ಚಿತ್ರವನ್ನು ಸೂಕ್ಷಮವಾಗಿ ನೋಡಿದಾಗ ವ್ಯತ್ಯಾಸಗಳನ್ನು ಕಾಣಬಹುದು: ಟಿಕೆಟ್ ಎರಡು ವಿಭಿನ್ನ ವಿಮಾನ ಸಂಖ್ಯೆಗಳನ್ನು ಉಲ್ಲೇಖಿಸುತ್ತದೆ. ಎಡಭಾಗವು "UK121" ಎಂದು ತೋರಿಸುತ್ತದೆ ಮತ್ತು ಬಲಭಾಗದಲ್ಲಿ "UK115" ಅನ್ನು ನೋಡಬಹುದು, ಇದು ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂದು ಸೂಚಿಸುತ್ತದೆ.

ವೈರಲ್ ಚಿತ್ರದಲ್ಲಿ ಹಲವಾರು ವ್ಯತ್ಯಾಸಗಳು ಗಮನಿಸಬಹುದಾಗಿದೆ.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವಿಮಾನ ಸಂಖ್ಯೆ UK121 ದೆಹಲಿಯಿಂದ ಬ್ಯಾಂಕಾಕ್‌ಗೆ ಹೋಗುವ ವಿಮಾನ ಎಂದು ನಾವು ಕಂಡುಹಿಡಿದಿದ್ದೇವೆ ಹಾಗು UK115 ದೆಹಲಿಯಿಂದ ಸಿಂಗಾಪುರಕ್ಕೆ ಹೋಗುವ ವಿಸ್ತಾರದ  ವಿಮಾನವಾಗಿದೆ. ಹೆಚ್ಚುವರಿಯಾಗಿ, ಜೂನ್ ೫, ೨೦೨೪ ಕ್ಕೆ UK121 ಫ್ಲೈಟ್ ಅನ್ನು ಬೆಳಗ್ಗೆ ೮:೨೫  ಘಂಟೆಗೆ ನಿಗದಿಪಡಿಸಲಾಗಿದೆ, ಇದು ಬೋರ್ಡಿಂಗ್ ಪಾಸ್‌ನಲ್ಲಿ ಕಾಣುವ ೨೩:೪೫ ಸಮಯಕ್ಕೆ ಹೊಂದಿಕೆಯಾಗುವುದಿಲ್ಲ. ಹಾಗು, ಸಿಂಗಾಪುರಕ್ಕೆ UK 115 ವಿಮಾನವು ರಾತ್ರಿ ೧೧:೪೫ ಕ್ಕೆ ನಿಗದಿಯಾಗಿದೆ.

UK121 ಮತ್ತು UK115 ಸಂಖ್ಯೆಯ ವಿಸ್ತಾರಾ ವಿಮಾನಗಳ ಸ್ಕ್ರೀನ್‌ಶಾಟ್. (ಮೂಲ: ವಿಸ್ತಾರಾ ಏರ್‌ಲೈನ್ಸ್/ ಸ್ಕ್ರೀನ್‌ಶಾಟ್) 

ಈ ವ್ಯತ್ಯಾಸಗಳು ಚಿತ್ರವನ್ನು ಎಡಿಟ್ ಮಾಡಲಾಗಿದೆ ಮತ್ತು ಬ್ಯಾಂಕಾಕ್‌ಗೆ ಹೊರಡುವ ವಿಮಾನದ ಬೋರ್ಡಿಂಗ್ ಪಾಸ್ ಅನ್ನು ತೋರಿಸುವುದಿಲ್ಲ ಎಂದು ಸೂಚಿಸುತ್ತವೆ.

ಮೂಲ ಚಿತ್ರ ಎಲ್ಲಿಂದ ಬಂದಿದೆ?

ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಲೈವ್ ಫ್ರಮ್ ಎ ಲೌಂಜ್‌  ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಲೇಖನೆಯನ್ನು ಕಂಡುಕೊಂಡೆವು. "ಆನ್‌ಬೋರ್ಡ್ ವಿಸ್ತಾರ ಟು ಸಿಂಗಾಪುರ: ಮೊದಲ ವಿಸ್ತಾರಾ ಅಂತರಾಷ್ಟ್ರೀಯ ವಿಮಾನಯಾನ!" ಎಂಬ ತಲೆಬರಹವನ್ನು ಹೊಂದಿದೆ, ಅದು ಅಜಯ್ ಎಂಬ ಲೇಖಕರಿಂದ ಬರೆಯಲಾಗಿದೆ. ಲೇಖನವು ಅದೇ ಚಿತ್ರವನ್ನು ಒಳಗೊಂಡಿತ್ತು, ಆದರೆ ಹೆಸರು  "ಅಜಯ್  ಅವತಾನೆ" ಎಂದು ನಮೂದಿಸಲಾಗಿದೆ.

ಮೂಲ ಚಿತ್ರವು ಫ್ಲೈಟ್ ಸಂಖ್ಯೆ ಉಕ್೧೧೫, ಆಗಸ್ಟ್ ೬, ೨೦೧೯ ರಂದು ದೆಹಲಿಯಿಂದ ಸಿಂಗಾಪುರಕ್ಕೆ ಹೋರಾಟ ದಿನಾಂಕವನ್ನು ತೋರಿಸುತ್ತದೆ. ಗೇಟ್ ಸಂಖ್ಯೆ, ಬೋರ್ಡಿಂಗ್ ಸಮಯ ಮತ್ತು ಸೀಟ್ ಸಂಖ್ಯೆ ವೈರಲ್ ಚಿತ್ರಕ್ಕೆ ಹೊಂದಿಕೆಯಾಗುತ್ತದೆ.

ವೈರಲ್ ಚಿತ್ರ ಮತ್ತು ೨೦೧೯ ರ ಚಿತ್ರದ ನಡುವಿನ ಹೋಲಿಕೆ. (ಮೂಲ: ಎಕ್ಸ್ /ಲೈವ್ ಫ್ರಮ್ ಎ ಲೌಂಜ್/ ಸ್ಕ್ರೀನ್‌ಶಾಟ್) 

ಲೇಖನವು ವಿಸ್ತಾರಾ ಅವರ ಮೊದಲ ಅಂತರರಾಷ್ಟ್ರೀಯ ವಿಮಾನಯಾನದಲ್ಲಿ ಲೇಖಕರ ಅನುಭವವನ್ನು ವಿವರಿಸಿದೆ. ಅವತಾನೆ ಅವರು ಲೈವ್ ಫ್ರಮ್ ಎ ಲೌಂಜ್‌ನ ಸಂಸ್ಥಾಪಕರಾಗಿದ್ದಾರೆ, ಇದು ವಿಮಾನಯಾನ ಮತ್ತು ಹೋಟೆಲ್‌, ಹಾಗು ಪ್ರಯಾಣದ ಸಲಹೆಗಳನ್ನು ವರದಿ ಮಾಡುವ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ. ಅವತಾನೆಯವರು ಬಿಬಿಸಿ, ಸಿಏನ್ ಬಿಸಿ ಟಿವಿ೧೮, ಎನ್ ಡಿ ಟಿವಿ , ಮತ್ತು ಈಟಿ ನೌ ಗೆ ಅಂಕಣಕಾರರಾಗಿ ಕೊಡುಗೆ ನೀಡಿದ್ದಾರೆ.

ಆಗಸ್ಟ್ ೮, ೨೦೧೯ ರಂದು ಅವತಾನೆ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ದೆಹಲಿ ಇಂದ ಸಿಂಗಾಪುರ ವಿಮಾನದಲ್ಲಿ ಅವರ ಅನುಭವವನ್ನು ಚಿತ್ರಗಳೊಂದಿಗೆ ವಿವರಿಸಿದ್ದಾರೆ. ಶೀರ್ಷಿಕೆಯು, "@delhiairport ಮತ್ತು @changiairport ನಡುವೆ ವಿಮಾನವನ್ನು ಪ್ರಾರಂಭಿಸುವುದರೊಂದಿಗೆ @vistara ಅದರ ಮೊದಲ ಅಂತರಾಷ್ಟ್ರೀಯ ಸೇವೆಯನ್ನು ಪ್ರಾರಂಭಿಸಿದ್ದಕ್ಕಾಗಿ ವಿಸ್ತಾರಾದಲ್ಲಿನ ಇಡೀ ತಂಡಕ್ಕೆ ಅಭಿನಂದನೆಗಳು" ಎಂದು ಬರೆಯಲಾಗಿದೆ.

ಜುಲೈ ೨೦೧೯ ರಲ್ಲಿ ವಿಸ್ತಾರಾ ತನ್ನ ಫೇಸ್‌ಬುಕ್ ಪುಟದಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ದೆಹಲಿಯಿಂದ ಸಿಂಗಾಪುರಕ್ಕೆ ತನ್ನ ಮೊದಲ ಅಂತರರಾಷ್ಟ್ರೀಯ ವಿಮಾನವನ್ನು ಆಗಸ್ಟ್ ೬, ೨೦೧೯ ರಂದು ನಿಗದಿಪಡಿಸಲಾಗಿದೆ ಎಂದು ಪೋಷ್ಟ್ ಮಾಡಿದೆ.

ಲಾಜಿಕಲಿ ಫ್ಯಾಕ್ಟ್ಸ್ ಅವತಾನೆ ಅವರನ್ನು ಸಂಪರ್ಕಿಸಿದರು, ಅವರು ಆಗಸ್ಟ್ ೨೦೧೯ ರಲ್ಲಿ ದೆಹಲಿ ಮತ್ತು ಸಿಂಗಾಪುರದ ನಡುವೆ ಕಾರ್ಯಾಚರಣೆ ನಡೆಸಿದ ವಿಸ್ತಾರಾ ವಿಮಾನದ ಮೊದಲ ಅಂತರರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಅವರು ಈ ಚಿತ್ರವನ್ನು ತೆಗೆದಿದ್ದಾರೆ ಎಂದು ಖಚಿತಪಡಿಸಿದರು.

ತೀರ್ಪು

೨೦೨೪ ರ ಭಾರತೀಯ ಲೋಕಸಭಾ ಚುನಾವಣಾ ಫಲಿತಾಂಶಗಳ ಘೋಷಣೆಯ ನಂತರ ರಾಹುಲ್ ಗಾಂಧಿ ಬ್ಯಾಂಕಾಕ್‌ಗೆ ಓಡಿಹೋಗುತ್ತಿದ್ದಾರೆ ಎಂದು ಹೇಳಲು ಬೋರ್ಡಿಂಗ್ ಪಾಸ್‌ನ ಸಂಪಾದಿತ ಚಿತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ೨೦೧೯ ರಲ್ಲಿ ದೆಹಲಿಯಿಂದ ಸಿಂಗಾಪುರಕ್ಕೆ ವಿಮಾನದಲ್ಲಿ ಪ್ರಯಾಣಿಸಿದ ಅಜಯ್ ಅವತಾನೆಯವರಿಗೆ ಟಿಕೆಟ್ ಸೇರಿದೆ ಎಂದು ಮೂಲ ಚಿತ್ರ ತೋರಿಸುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.