ಮುಖಪುಟ ಉದ್ಧವ್ ಠಾಕ್ರೆ ಮೊಘಲ್ ನ ಔರಂಗಜೇಬನನ್ನು ಹೊಗಳಿದ್ದಾರೆ ಎಂದು ಕ್ಲಿಪ್ ಮಾಡಿದ ವೀಡಿಯೋ ವೈರಲ್

ಉದ್ಧವ್ ಠಾಕ್ರೆ ಮೊಘಲ್ ನ ಔರಂಗಜೇಬನನ್ನು ಹೊಗಳಿದ್ದಾರೆ ಎಂದು ಕ್ಲಿಪ್ ಮಾಡಿದ ವೀಡಿಯೋ ವೈರಲ್

ಮೂಲಕ: ರಾಹುಲ್ ಅಧಿಕಾರಿ

ನವೆಂಬರ್ 18 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಉದ್ಧವ್ ಠಾಕ್ರೆ ಮೊಘಲ್ ಚಕ್ರವರ್ತಿ ಔರಂಗಜೇಬನನ್ನು ಹೊಗಳುತ್ತಿರುವುದನ್ನು ಈ ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್. ಉದ್ಧವ್ ಠಾಕ್ರೆ ಅವರು ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರನ್ನು ಹೊಗಳಿದ್ದಾರೆ ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಪೂರ್ಣ ವೀಡಿಯೋದಲ್ಲಿ ಉದ್ಧವ್ ಠಾಕ್ರೆ ಭಾರತೀಯ ಸೈನಿಕನನ್ನು ಸಹೋದರ ಮತ್ತು ಹುತಾತ್ಮ ಎಂದು ಉಲ್ಲೇಖಿಸಿದ್ದಾರೆ, ಮೊಘಲ್ ಚಕ್ರವರ್ತಿ ಔರಂಗಜೇಬ್ ಅಲ್ಲ.

ಹೇಳಿಕೆ ಏನು?

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ೩೦ ಸೆಕೆಂಡುಗಳ ವೀಡಿಯೋ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕ್ಲಿಪ್ ಮಹಾರಾಷ್ಟ್ರ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷದ ನಾಯಕ ಠಾಕ್ರೆ ಮೊಘಲ್ ಚಕ್ರವರ್ತಿ ಔರಂಗಜೇಬನನ್ನು ಅವರ ಸಹೋದರ ಮತ್ತು ಹುತಾತ್ಮ ಎಂದು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಕ್ಲಿಪ್‌ನಲ್ಲಿ ಠಾಕ್ರೆ ಹೀಗೆ ಹೇಳುವುದನ್ನು ಕೇಳಬಹುದು, “... ದೇಶಕ್ಕಾಗಿ ತನ್ನನ್ನು ತ್ಯಾಗ ಮಾಡಿದ. ಈಗ ಅವನು ನನ್ನ ಸಹೋದರ ಎಂದು ನಾನು ಹೇಳಿದರೆ, ನೀವು ಕೇಳುತ್ತೀರಿ, ಅವನ ಹೆಸರು ನಿಮಗೆ ತಿಳಿದಿದೆಯೇ? ಅವನ ಹೆಸರು ಔರಂಗಜೇಬ್. ಅವರು ಧರ್ಮದಿಂದ ಮುಸಲ್ಮಾನರಾಗಿದ್ದರು, ಆದರೆ ಅವರು ದೇಶಕ್ಕಾಗಿ ತ್ಯಾಗ ಮಾಡಿದರು. ಅವರು ಭಾರತಮಾತೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಅವನು ನನ್ನ ಸಹೋದರನಲ್ಲವೇ? ”

ಎಕ್ಸ್ (ಹಿಂದೆ ಟ್ವಿಟ್ಟರ್) ಮತ್ತು ಫೇಸ್‌ಬುಕ್‌ನಲ್ಲಿ ಹಲವಾರು ಬಳಕೆದಾರರು ಈ ಕ್ಲಿಪ್ ಅನ್ನು ಪೋಷ್ಟ್ ಮಾಡಿದ್ದು, ಠಾಕ್ರೆ ಅವರು ಮೊಘಲ್ ಚಕ್ರವರ್ತಿಯನ್ನು ಹೊಗಳಿದ್ದಾರೆ ಎಂದು ಟೀಕಿಸಿದ್ದಾರೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ನವೆಂಬರ್ ೨೦ ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗು ಮುನ್ನ, ಈ ಹೇಳಿಕೆಗಳು ಹೊರಹೊಮ್ಮಿತು.

ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ಸಂದರ್ಭದಿಂದ ಹೊರಗಿಡಲಾಗಿದೆ. ಮಾಜಿ ಮುಖ್ಯಮಂತ್ರಿಗಳು ವಾಸ್ತವವಾಗಿ ೨೦೧೮ ರಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಔರಂಗಜೇಬ್ ಎಂಬ ಭಾರತೀಯ ಸೇನೆಯ ಹುತಾತ್ಮರನ್ನು ಉಲ್ಲೇಖಿಸಿದ್ದರು.

ನಾವು ಸತ್ಯವನ್ನು ಹೇಗೆ ಕಂಡುಕೊಂಡೆವು?


ಫೆಬ್ರವರಿ ೧೯, ೨೦೨೩ ರಂದು ಠಾಕ್ರೆ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾದ ವೈರಲ್ ಕ್ಲಿಪ್‌ನ (ಇಲ್ಲಿ ಆರ್ಕೈವ್ ಮಾಡಲಾಗಿದೆ) ವಿಸ್ತೃತ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಠಾಕ್ರೆ ಅವರು ರಾಜಕೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಉತ್ತರ ಭಾರತೀಯ ಸಮುದಾಯವನ್ನು ಮುಖ್ಯ ಅತಿಥಿಯಾಗಿ ಉದ್ದೇಶಿಸಿ ಮಾತನಾಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಸಂಪೂರ್ಣ ವೀಡಿಯೋವನ್ನು ಪರಿಶೀಲಿಸಿದ ನಂತರ, ವೈರಲ್ ಕ್ಲಿಪ್ ಅನ್ನು ಈ ದೀರ್ಘ ವೀಡಿಯೋದ ೩೨:೪೭ ಮಾರ್ಕ್‌ನಿಂದ ೩೩:೧೭ ಮಾರ್ಕ್‌ಗೆ ತೆಗೆದುಕೊಳ್ಳಲಾಗಿದೆ ಎಂದು ನಾವು ಗುರುತಿಸಿದ್ದೇವೆ. ಆದರೆ, ೨೦೧೮ ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ಔರಂಗಜೇಬ್ ಎಂಬ ಭಾರತೀಯ ಸೇನಾ ಯೋಧನನ್ನು ಠಾಕ್ರೆ ಉಲ್ಲೇಖಿಸುತ್ತಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.


ಸುಮಾರು ೩೨ ನಿಮಿಷಗಳ ಅವಧಿಯಲ್ಲಿ ಚರ್ಚೆ ಪ್ರಾರಂಭವಾಗುತ್ತದೆ, ಅಲ್ಲಿ ಠಾಕ್ರೆ ಹೀಗೆ ಹೇಳಿದರು, “ಇದು ಮೂರು ಅಥವಾ ನಾಲ್ಕು ವರ್ಷಗಳ ಹಿಂದೆ ಸಂಭವಿಸಿತು. ನೀವು ಮರೆತಿರಬಹುದು ಅಥವಾ ಬಹುಶಃ ನೀವು ಅದರ ಬಗ್ಗೆ ಓದಿಲ್ಲ. ಕಾಶ್ಮೀರದಲ್ಲಿ ಒಬ್ಬ ಯೋಧ ತನ್ನ ಕುಟುಂಬವನ್ನು ಭೇಟಿಯಾಗಲು ರಜೆಯ ಮೇಲೆ ಮನೆಗೆ ಹೋಗುತ್ತಿದ್ದನು. ಅವನು ಒಬ್ಬನೇ ಪ್ರಯಾಣಿಸುತ್ತಿದ್ದನೆಂದು ತಿಳಿದ ಭಯೋತ್ಪಾದಕರು ಅವನನ್ನು ಅಪಹರಿಸಿದರು. ಕೆಲವು ದಿನಗಳ ನಂತರ, ಅವರ ದೇಹದ ಚದುರಿದ ಭಾಗಗಳು ಕಂಡುಬಂದಿವೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರು ನಮ್ಮವನೋ ಅಲ್ಲವೋ. ಈಗ ನಾನು ಅವನು ನನ್ನ ಸಹೋದರ ಎಂದು ಹೇಳಿದರೆ, ನೀವು ಕೇಳುತ್ತೀರಿ, ಅವನ ಹೆಸರು ನಿಮಗೆ ತಿಳಿದಿದೆಯೇ? ಅವನ ಹೆಸರು ಔರಂಗಜೇಬ್. ಅವರು ಧರ್ಮದಿಂದ ಮುಸಲ್ಮಾನರಾಗಿದ್ದರು, ಆದರೆ ಅವರು ದೇಶಕ್ಕಾಗಿ ತ್ಯಾಗ ಮಾಡಿದರು. ಅವರು ಭಾರತಮಾತೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಅವನು ನನ್ನ ಸಹೋದರನಲ್ಲವೇ? ”


ಶಿವಸೇನೆ ನಾಯಕ ಭಾರತೀಯ ಸೇನೆಯ ಯೋಧ ಔರಂಗಜೇಬನನ್ನು ತನ್ನ ಸಹೋದರ ಮತ್ತು ಭಾರತಕ್ಕಾಗಿ ಹುತಾತ್ಮ ಎಂದು ಉಲ್ಲೇಖಿಸಿದ್ದರು, ಮೊಘಲ್ ಚಕ್ರವರ್ತಿ ಔರಂಗಜೇಬ್ ಅಲ್ಲ ಎಂಬುದು ಸ್ಪಷ್ಟವಾಗಿದೆ.


ಭಾರತೀಯ ಸೇನಾ ಯೋಧ ಔರಂಗಜೇಬ್ ಯಾರು?


ಜೂನ್ ೧೫, ೨೦೧೮ ರ ಎನ್‌ಡಿಟಿವಿ ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಔರಂಗಜೇಬ್ ಎಂಬ ಭಾರತೀಯ ಸೇನಾ ಯೋಧನನ್ನು ಭಯೋತ್ಪಾದಕರು ಕಿಡ್ನಾಪ್ ಮಾಡಿ ಕೊಂದಿದ್ದರು. ಅವರು ೪ ಜಮ್ಮು ಮತ್ತು ಕಾಶ್ಮೀರ ಲಘು ಪದಾತಿ ದಳದ ಭಾಗವಾಗಿದ್ದರು ಮತ್ತು ಶೋಪಿಯಾನ್‌ನ ಶಾದಿಮಾರ್ಗ್‌ನಲ್ಲಿರುವ ೪೪ ರಾಷ್ಟ್ರೀಯ ರೈಫಲ್ಸ್ ಶಿಬಿರದಲ್ಲಿ ಅವರು ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಈದ್ ರಜೆಗೆ ತೆರಳುತ್ತಿದ್ದಾಗ ಅವರನ್ನು ಅಪಹರಿಸಿ ಕುತ್ತಿಗೆ ಮತ್ತು ತಲೆಗೆ ಗುಂಡು ಹಾರಿಸಲಾಗಿತ್ತು. ಪುಲ್ವಾಮಾ ಜಿಲ್ಲೆಯ ಕಲಾಂಪೋರಾದಿಂದ ಸುಮಾರು ೧೦ ಕಿಮೀ ದೂರದಲ್ಲಿರುವ ಗುಸ್ಸು ಗ್ರಾಮದಲ್ಲಿ ಅವರ ಮೃತದೇಹ ಪತ್ತೆಯಾಗಿದತ್ತು.


ಮೇ ೯, ೨೦೨೩ ರಂದು, ಭಾರತದ ರಾಷ್ಟ್ರಪತಿಗಳು ರೈಫಲ್‌ಮ್ಯಾನ್ ಔರಂಗಜೇಬ್‌ಗೆ ಮರಣೋತ್ತರವಾಗಿ ಶೌರ್ಯ ಚಕ್ರವನ್ನು ನೀಡಿದರು.


೨೦೨೪ ರ ಲೋಕಸಭಾ ಚುನಾವಣೆಯ ಮೊದಲೂ ಸಹ ಈ ಎಡಿಟ್ ಮಾಡಿದ ವೀಡಿಯೋವನ್ನು ಇದೇ ರೀತಿಯ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿತ್ತು, ಅದನ್ನು ಮುಂಚೆ ಹಿಂದಿಯಲ್ಲಿ ಫ್ಯಾಕ್ಟ್-ಚೆಕ್ ಮಾಡಲಾಗಿತ್ತು. 


ತೀರ್ಪು

ವೈರಲ್ ವೀಡಿಯೋವನ್ನು ಕ್ಲಿಪ್ ಮಾಡಲಾಗಿದೆ ಮತ್ತು ಸಂದರ್ಭ ರಹಿತ ಹಂಚಿಕೊಳ್ಳಲಾಗಿದೆ. ಉದ್ಧವ್ ಠಾಕ್ರೆ ಭಾರತೀಯ ಸೇನೆಯ ಸೈನಿಕನನ್ನು ತನ್ನ ಸಹೋದರ ಮತ್ತು ೨೦೧೮ ರಲ್ಲಿ ಕೊಲ್ಲಲ್ಪಟ್ಟ ಹುತಾತ್ಮ ಎಂದು ಉಲ್ಲೇಖಿಸುವುದನ್ನು ಅಸಲಿ ವೀಡಿಯೋ ತೋರಿಸುತ್ತದೆ.


(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 


Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ