ಮುಖಪುಟ ನಿತೀಶ್ ಕುಮಾರ್ ಇತ್ತೀಚೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ತೊರೆದಿದ್ದಾರೆ ಎಂದು ಹೇಳಲು ೨೦೨೨ ರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ನಿತೀಶ್ ಕುಮಾರ್ ಇತ್ತೀಚೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ತೊರೆದಿದ್ದಾರೆ ಎಂದು ಹೇಳಲು ೨೦೨೨ ರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್

ಜೂನ್ 25 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ನಿತೀಶ್ ಕುಮಾರ್ ಇತ್ತೀಚೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ತೊರೆದಿದ್ದಾರೆ ಎಂದು ಹೇಳಲು ೨೦೨೨ ರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ ನಿತೀಶ್ ಕುಮಾರ್ ಅವರು ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ಇತ್ತೀಚಿಗೆ ತೊರೆದಿದ್ದಾರೆ ಎಂದು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ವೈರಲ್ ವೀಡಿಯೋ ೨೦೨೨ ರದಾಗಿದ್ದು, ನಿತೀಶ್ ಕುಮಾರ್ ಬಿಹಾರದಲ್ಲಿ ಬಿಜೆಪಿ ಮೈತ್ರಿಯನ್ನು ತೊರೆದು ರಾಷ್ಟ್ರದ ಜನತಾ ದಲ್ ಮತ್ತು ಕಾಂಗ್ರೆಸ್ ಜೊತೆ ಸರ್ಕಾರ ರಚಿಸಲು ನಿರ್ಧರಿಸಿದ್ದರು.

ಹೇಳಿಕೆ ಏನು? 

ನಿತೀಶ್ ಕುಮಾರ್ ಭಾರತೀಯ ಜನತಾ ಪಾರ್ಟಿ ನೇತೃತ್ವದ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ (ಎನ್‌ಡಿಎ) ತೊರೆದಿದ್ದಾರೆ ಎಂಬ ಹೇಳಿಕೆಯೊಂದಿಗೆ ಆಂಕರ್ ಮನಕ್ ಗುಪ್ತಾ ಅವರ ಕಾರ್ಯಕ್ರಮ 'ರಾಷ್ಟ್ರ ಕಿ ಬಾತ್' ಒಳಗೊಂಡ ಹಿಂದಿ ಸುದ್ದಿ ಚಾನೆಲ್ ನ್ಯೂಸ್ ೨೪ ನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ವೈರಲ್ ವೀಡಿಯೋದಲ್ಲಿ ಸನ್ನಿವೇಶಕ್ಕೆ ಹೊಂದಿಸಲು ಮನಕ್ ಗುಪ್ತಾ ಅವರ ಸಣ್ಣ ನಿರೂಪಣೆಯನ್ನು ಹೊಂದಿದೆ ಮತ್ತು ನಂತರ ನಿತೀಶ್ ಕುಮಾರ್ ಅವರ ಮಾಧ್ಯಮಗಳಿಗೆ ನೀಡಿದ ಹೇಳಿಕೆಯನ್ನು ಒಳಗೊಂಡಿದೆ. ಕುಮಾರ್, ಮಾಧ್ಯಮಗಳೊಂದಿಗಿನ ಸಂವಾದದಲ್ಲಿ ಹಿಂದಿಯಲ್ಲಿ ಹೀಗೆ ಹೇಳುತ್ತಾರೆ: “ಶಾಸಕರು, ಮತ್ತು ಪಕ್ಷದ ನಾಯಕರು ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭಾ ನಾಯಕರು... ಎಲ್ಲಾ ಸಭೆಗಳು ಇಂದು ನಡೆದವು ಮತ್ತು ಪ್ರತಿಯೊಬ್ಬರ ಆಶಯವೂ ಎನ್‌ಡಿಎ ತೊರೆಯುವುದಾಗಿದೆ. ಆದ್ದರಿಂದ ಎಲ್ಲರೂ ಎನ್‌ಡಿಎ ತೊರೆಯಲು ನಿರ್ಧರಿಸಿದಾಗ ಮತ್ತು ನಾವು ಅದನ್ನು ಒಪ್ಪಿಕೊಂಡೆವು” (ಹಿಂದಿಯಿಂದ ಅನುವಾದಿಸಲಾಗಿದೆ) 

೪೯ ಸೆಕೆಂಡ್‌ಗಳ ವೈರಲ್ ವೀಡಿಯೋ ಹಿಂದಿಯಲ್ಲಿ ಪಠ್ಯವನ್ನು ಒಳಗೊಂಡಿದ್ದು ಅದು ಹೀಗಿದೆ, “ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗುತ್ತಾರೆ. ಭಾರತ ಮೈತ್ರಿಗೆ ಜಯವಾಗಲಿ. ನಿತೀಶ್ ಕುಮಾರ್ ಮತ್ತೆ ಹಿಂದೆ ಸರಿದಿದ್ದಾರೆ."

೨೦೨೪ ರಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ನಂತರ ನಿತೀಶ್ ಕುಮಾರ್ ಹಿಂದೆ ಸರಿದಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್, ಇಲ್ಲಿ ಆರ್ಕೈವ್ ಮಾಡಲಾಗಿದೆ), ಇನ್‌ಸ್ಟಾಗ್ರಾಮ್ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಮತ್ತು ಯೂಟ್ಯೂಬ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇತರ ಪೋಷ್ಟ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಿ.

ಸಾಮಾಜಿಕ ಮಧ್ಯದಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ) 

ಆದರೆ, ವೈರಲ್ ವೀಡಿಯೋ ಇತ್ತೀಚಿನದಲ್ಲ, ಆಗಸ್ಟ್ ೨೦೨೨ ರಲ್ಲಿ, ನಿತೀಶ್ ಕುಮಾರ್ ಬಿಹಾರದಲ್ಲಿ ಬಿಜೆಪಿಯ ಎನ್‌ಡಿಎ ತೊರೆದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಒಳಗೊಂಡ ಮಹಾಘಟಬಂಧನ್ ಮೈತ್ರಿಯೊಂದಿಗೆ ಸರ್ಕಾರ ರಚಿಸಲು ನಿರ್ಧರಿಸಿದ್ದರು. 

ವಾಸ್ತವಾಂಶಗಳು ಏನು? 

ನಾವು ಸಂಬಂಧಿತ ಕೀವರ್ಡ್‌ಗಳ ಮೂಲಕ ಹುಡುಕಿದ್ದೇವೆ ಮತ್ತು ಆಗಸ್ಟ್ ೯, ೨೦೨೨ ರಂದು ನ್ಯೂಸ್ ೨೪ ರ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೈರಲ್ ವೀಡಿಯೋದ ದೀರ್ಘ ಆವೃತ್ತಿಯನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಕಂಡುಕೊಂಡಿದ್ದೇವೆ. ಈ ವರದಿಯಲ್ಲಿ ನಿತೀಶ್ ಕುಮಾರ್ ಬಿಹಾರದಲ್ಲಿ ಬಿಜೆಪಿ ತೊರೆದಿದ್ದಾರೆ ಎಂದು ಆಂಕರ್ ಮನಕ್ ಗುಪ್ತಾ ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳೊಂದಿಗೆ ಹೊಸ ಸರ್ಕಾರ ರಚಿಸಲಿದ್ದಾರೆ ಎಂದು ಗುಪ್ತಾ ಹೇಳಿದ್ದಾರೆ.

ಇದರಲ್ಲಿ, ವೈರಲ್ ವೀಡಿಯೋ ಭಾಗವನ್ನು ೫೪ ಸೆಕೆಂಡುಗಳ ಕಾಲಾವಧಿಯಲ್ಲಿ ನೋಡಬಹುದು. ವೀಡಿಯೋದಲ್ಲಿ, ನಿತೀಶ್ ಕುಮಾರ್ ಅವರ ಅದೇ ಹೇಳಿಕೆ ಇದೆ. ಇದು ವೈರಲ್ ವೀಡಿಯೋದಲ್ಲಿಯೂ ಗೋಚರಿಸುತ್ತದೆ. ಬಿಜೆಪಿಯಿಂದ ಬೇರ್ಪಡುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್, “ಲೋಕಸಭೆ, ರಾಜ್ಯಸಭಾ ಸಂಸದರು, ಎಲ್ಲಾ ಶಾಸಕರು, ಎಂಎಲ್‌ಸಿಗಳು ಮತ್ತು ಪಕ್ಷದ ನಾಯಕರು. ಇಂದು ಎಲ್ಲ ಸಭೆಗಳು ನಡೆದಿದ್ದು, ಎನ್ ಡಿಎ ತೊರೆಯಬೇಕು ಎಂಬುದು ಎಲ್ಲರ ಆಶಯವಾಗಿತ್ತು. ಹಾಗಾಗಿ ಎನ್‌ಡಿಎ ತೊರೆಯುವ ನಿರ್ಧಾರ ಎಲ್ಲರ ಆಶಯವಾದ ತಕ್ಷಣ ನಾವು ಅದನ್ನು ಒಪ್ಪಿಕೊಂಡಿದ್ದೇವೆ.”

ನಿತೀಶ್ ಕುಮಾರ್ ಅವರನ್ನು ಒಳಗೊಂಡ ಅದೇ ವೀಡಿಯೋವನ್ನು ಎನ್ ಡಿ ಟಿವಿ ಇಂಡಿಯಾ ತನ್ನ ಎಕ್ಸ್ ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಆಗಸ್ಟ್ ೯, ೨೦೨೨ ರಂದು ಹಂಚಿಕೊಂಡಿದೆ.

ಆಗಸ್ಟ್ ೧೦, ೨೦೨೨ ರಂದು, ಭಾರತೀಯ ಸುದ್ದಿವಾಹಿನಿಯಾದ ದಿ ಹಿಂದೂ, 'ನಿತೀಶ್ ಕುಮಾರ್ ಆರ್‌ಜೆಡಿಗಾಗಿ ಬಿಜೆಪಿಯನ್ನು ತೊರೆದಿದ್ದಾರೆ , ಹೊಸದಾಗಿ ಸರ್ಕಾರ ರಚಿಸಲು ಸಜ್ಜಾಗಿದೆ' ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿತು. ಬಿಹಾರದಲ್ಲಿ ಐದು ವರ್ಷಗಳ ನಂತರ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುನರಾಗಮನ ಮಾಡಿದರು ಮತ್ತು ಭ್ರಷ್ಟಾಚಾರವನ್ನು ಉಲ್ಲೇಖಿಸಿ ೨೦೧೭ ರಲ್ಲಿ ಅವರು ದೂರವಾಗಿದ್ದ ಆರ್‌ಜೆಡಿಯನ್ನು ಒಳಗೊಂಡಿರುವ ಪ್ರತಿಪಕ್ಷಗಳೊಂದಿಗೆ ಮತ್ತೆ ಕೈಜೋಡಿಸಿದರು ಎಂದು ವರದಿ ಹೇಳುತ್ತದೆ. ಕುಮಾರ್ ಆರ್‌ಜೆಡಿ ನೇತೃತ್ವದ ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾದರು ಮತ್ತು ಅವರು ಏಳು ಪಕ್ಷಗಳ ೧೬೪ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಲು ರಾಜ್ಯಪಾಲ ಫಾಗು ಚೌಹಾಣ್ ಅವರ ಮುಂದೆ 'ಹಕ್ಕು' ಸಲ್ಲಿಸಿದರು ಎಂದು ಹಿಂದೂ ಲೇಖನವು ವರದಿ ಮಾಡಿದೆ.

ಎಕನಾಮಿಕ್ ಟೈಮ್ಸ್ ಮತ್ತು ಇಂಡಿಯಾ ಟುಡೇ ಸೇರಿದಂತೆ ಹಲವು ಮಾಧ್ಯಮಗಳು ೨೦೨೨ ರಲ್ಲಿ ಈ ಬಗ್ಗೆ ವಿವರವಾದ ವರದಿಗಳನ್ನು ಪ್ರಕಟಿಸಿದ್ದವು.

ಆದರೆ, ೧೭ ತಿಂಗಳ ಒಟ್ಟಿಗೆ ನಂತರ, ನಿತೀಶ್ ಕುಮಾರ್ ಮಹಾಘಟಬಂಧನ್ ಮೈತ್ರಿಯನ್ನು ತೊರೆದರು ಮತ್ತು ೨೦೨೪ ರ ಜನವರಿಯಲ್ಲಿ ಮತ್ತೊಮ್ಮೆ ಎನ್‌ಡಿಎ ಗೆ ಸೇರಿದರು.

ತೀರ್ಪು 

೨೦೨೪ ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ನಿತೀಶ್ ಕುಮಾರ್ ತೊರೆದಿದ್ದಾರೆ ಎಂದು ಹೇಳಲು ಆಗಸ್ಟ್ ೨೦೨೨ ರ ವೀಡಿಯೋವನ್ನು ಬಳಸಲಾಗಿದೆ. ಈ ವೀಡಿಯೋ ೨೦೨೪ ರ ಲೋಕಸಭಾ ಚುನಾವಣೆಯ ನಂತರದ ರಾಜಕೀಯ ಪರಿಸ್ಥಿತಿಗೆ ಯಾವುದೇ ಸಂಬಂಧವಿಲ್ಲ. 

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ