ಮುಖಪುಟ ಇಲ್ಲ, ವೀಡಿಯೋ ನೆತನ್ಯಾಹು ಇರಾನಿನ ದಾಳಿಯಿಂದ ಪಲಾಯನ ಆಗುತ್ತಿರುವುದನ್ನು ತೋರಿಸುವುದಿಲ್ಲ

ಇಲ್ಲ, ವೀಡಿಯೋ ನೆತನ್ಯಾಹು ಇರಾನಿನ ದಾಳಿಯಿಂದ ಪಲಾಯನ ಆಗುತ್ತಿರುವುದನ್ನು ತೋರಿಸುವುದಿಲ್ಲ

ಮೂಲಕ: ಕ್ರಿಶ್ಚಿಯನ್ ಹಾಗ್

ಅಕ್ಟೋಬರ್ 3 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇರಾನ್ ದಾಳಿಯ ಸಮಯದಲ್ಲಿ ನೆತನ್ಯಾಹು ಪಲಾಯನ ಮಾಡುತ್ತಿದ್ದಾರೆ ಎಂದು ಹೇಳುವ ಪಠ್ಯದೊಂದಿಗೆ ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಚಿತ್ರ ತೋರಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಹೇಳಿಕೆಗಳ ಉದಾಹರಣೆಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ವೀಡಿಯೋ ಮೂರು ವರ್ಷಗಳಷ್ಟು ಹಳೆಯದಾಗಿದೆ ಮತ್ತು ಅವರು ಮತ ಚಲಾಯಿಸಲು ಓಡುತ್ತಿರುವುದನ್ನು ತೋರಿಸುತ್ತದೆ.

ಹೇಳಿಕೆ ಏನು?

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಕ್ಟೋಬರ್ ೧ ರಂದು ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿಯ ನಡುವೆ ಬಂಕರ್‌ಗೆ ಪಲಾಯನ ಮಾಡುವುದನ್ನು ತೋರಿಸುತ್ತದೆ ಎಂದು ತಪ್ಪಾಗಿ ಆರೋಪಿಸುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹಳೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಅಂತಹ ಪೋಷ್ಟ್ ಗಳ ಉದಾಹರಣೆಗಳು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಂಡುಬರುತ್ತದೆ. ಒಟ್ಟಾರೆಯಾಗಿ, ಪೋಷ್ಟ್‌ಗಳು ಸುಮಾರು ಮೂರು ಮಿಲಿಯನ್ ವೀಕ್ಷಣೆಗಳನ್ನು ತಲುಪಿವೆ. ಆಪಾದಿತ ರಷ್ಯಾದ ತಪ್ಪು ಮಾಹಿತಿ ಸೈಟ್ Pravda.fr ಮತ್ತು ಟಿಕ್‌ಟಾಕ್‌ನಲ್ಲಿಯೂ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ನಾವು Logically® Accelerate ಅನ್ನು ಬಳಸಿಕೊಂಡು ಹೆಚ್ಚುವರಿ ಟಿಕ್‌ಟಾಕ್‌ ಪೋಷ್ಟ್‌ಗಳನ್ನು ಕಂಡುಕೊಂಡಿದ್ದೇವೆ, ಇದು ಪ್ಲಾಟ್‌ಫಾರ್ಮ್‌ಗಳಲ್ಲಿ ಫ್ಯಾಕ್ಟ್-ಚೆಕ್-ಯೋಗ್ಯ ವಿಷಯದ ಪೂರ್ವಭಾವಿ ಆವಿಷ್ಕಾರವನ್ನು ಸಕ್ರಿಯಗೊಳಿಸುವ ಸಾಧನವಾಗಿದೆ.

ಅಕ್ಟೋಬರ್ ೧ ರ ಸಂಜೆ, ಇರಾನ್ ಇಸ್ರೇಲ್ ಕಡೆಗೆ ಸರಿಸುಮಾರು ೧೮೦ ಕ್ಷಿಪಣಿಗಳನ್ನು ಉಡಾಯಿಸಿತು. ಬಿಬಿಸಿ ಪ್ರಕಾರ, ಇಸ್ರೇಲ್‌ನ ಹೆಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾಹ್, ಐಆರ್‌ಜಿಸಿ ಕಮಾಂಡರ್ ಅಬ್ಬಾಸ್ ನಿಲ್ಫೊರೊಶನ್ ಮತ್ತು ಹಮಾಸ್ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ಸೇರಿದಂತೆ ಇರಾನ್ ಬೆಂಬಲಿತ ಸೇನಾಪಡೆಗಳ ಉನ್ನತ ಕಮಾಂಡರ್‌ಗಳು ಮತ್ತು ನಾಯಕರನ್ನು ಇಸ್ರೇಲ್ ಕೊಂದಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ದಾಳಿಯಾಗಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿದೆ. ಜುಲೈನಲ್ಲಿ ಟೆಹ್ರಾನ್‌ನಲ್ಲಿ ಹನಿಯೆಹ್ ಕೊಲ್ಲಲ್ಪಟ್ಟರು.

ಆದರೆ, ಇರಾನ್ ಕ್ಷಿಪಣಿಗಳ ಪ್ರಭಾವದಿಂದ ನೆತನ್ಯಾಹು ಪಲಾಯನ ಮಾಡುವುದನ್ನು ವೀಡಿಯೋ ತೋರಿಸುವುದಿಲ್ಲ. ಇದು ಮೂರು ವರ್ಷ ಹಳೆಯದು ಮತ್ತು ನೆತನ್ಯಾಹು ೨೦೨೧ ರಲ್ಲಿ ನೆಸ್ಸೆಟ್‌ನಲ್ಲಿ ಮತ ಚಲಾಯಿಸುವುದನ್ನು ತೋರಿಸುತ್ತದೆ.

ವಾಸ್ತವವಾಗಿ

ವೀಡಿಯೋದೊಂದಿಗೆ ಸಂಯೋಜಿತವಾಗಿರುವ ಪದಗಳಿಗಾಗಿ ಹೀಬ್ರೂ ಭಾಷೆಯಲ್ಲಿ ಗೂಗಲ್ ಸರ್ಚ್, ಡಿಸೆಂಬರ್ ೧೩, ೨೦೨೧ ರಂದು ಫೇಸ್‌ಬುಕ್‌ನಲ್ಲಿ ಪೋಷ್ಟ್ ಮಾಡಿದ ದೀರ್ಘ ಆವೃತ್ತಿಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೋ ಹೀಬ್ರೂ ಭಾಷೆಯಲ್ಲಿ ವಿವರಣೆಯನ್ನು ಹೊಂದಿದೆ, ಗೂಗಲ್ ಅನುವಾದವನ್ನು ಬಳಸಿಕೊಂಡು ಹೀಗೆ ಅನುವಾದಿಸುತ್ತದೆ: "ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನೆಸ್ಸೆಟ್‌ನಲ್ಲಿ ಮತಕ್ಕಾಗಿ ಓಡುತ್ತಿರುವುದನ್ನು ನೋಡಲಾಗಿದೆ." ಫೇಸ್‌ಬುಕ್‌ನಲ್ಲಿನ ವೀಡಿಯೋವು ವೈರಲ್ ವೀಡಿಯೋದಂತೆಯೇ ಅದೇ ಮಾರ್ಗದಲ್ಲಿ ಅದೇ ಜನರೊಂದಿಗೆ ಅದೇ ಬಟ್ಟೆಯಲ್ಲಿ ನೆತನ್ಯಾಹು ಓಡುವುದನ್ನು ತೋರಿಸುತ್ತದೆ.

ಫೇಸ್‌ಬುಕ್‌ನ ವೀಡಿಯೋದಲ್ಲಿನ ಮೊದಲ ಕೀಫ್ರೇಮ್‌ನ ರಿವರ್ಸ್ ಇಮೇಜ್ ಸರ್ಚ್ ಮೂಲಕ, ನೆತನ್ಯಾಹು ಅವರೇ ಡಿಸೆಂಬರ್ ೧೩, ೨೦೨೧ ರಂದು ಟ್ವಿಟರ್ ಮತ್ತು ಟಿಕ್‌ಟಾಕ್‌ನಲ್ಲಿ ಅದೇ ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ, ಆದರೆ ಹಿನ್ನೆಲೆಯಲ್ಲಿ "ಐ ಆಫ್ ದಿ ಟೈಗರ್" ಹಾಡನ್ನು ಪೋಷ್ಟ್ ಮಾಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಟಿಕ್‌ಟಾಕ್ ವೀಡಿಯೋ ಮತ್ತು ಟ್ವಿಟ್ಟರ್ ಪೋಷ್ಟ್ ಹೀಬ್ರೂ ಭಾಷೆಯಲ್ಲಿ ವಿವರಣೆಯನ್ನು ಒಳಗೊಂಡಿತ್ತು, ಅದು ಗೂಗಲ್ ಅನುವಾದವನ್ನು ಬಳಸಿಕೊಂಡು ಹೀಗೆ ಅನುವಾದಿಸುತ್ತದೆ: "ನಿಮಗಾಗಿ ಓಡಲು ನಾನು ಯಾವಾಗಲೂ ಹೆಮ್ಮೆಪಡುತ್ತೇನೆ. ಇದನ್ನು ಅರ್ಧ ಘಂಟೆಯ ಹಿಂದೆ ನೆಸ್ಸೆಟ್‌ನಲ್ಲಿ ತೆಗೆದುಕೊಳ್ಳಲಾಗಿದೆ." 

ಇಸ್ರೇಲ್ ನ್ಯಾಷನಲ್ ನ್ಯೂಸ್ ಮತ್ತು ಹಿಡಾಬ್ರೂಟ್‌ನಲ್ಲಿನ ಪ್ರಸಾರವನ್ನು ಒಳಗೊಂಡಂತೆ ವೀಡಿಯೋದ ಕುರಿತು ಹಲವಾರು ಇಸ್ರೇಲಿ ಸುದ್ದಿ ಲೇಖನಗಳನ್ನು ಸಹ ನಾವು ಕಂಡುಕೊಂಡಿದ್ದೇವೆ. ನೆತನ್ಯಾಹು ಅವರು ಇಸ್ರೇಲ್‌ನ ಸಂಸತ್ತಿನ ಕಟ್ಟಡವಾದ ನೆಸ್ಸೆಟ್‌ನಲ್ಲಿ ಹೇಗೆ ಮತದಾನ ಮಾಡಲು ಹೋಗುತ್ತಿದ್ದಾರೆಂದು ವಿವರಿಸುತ್ತವೆ.

ತೀರ್ಪು

ಅಕ್ಟೋಬರ್ ೧ ರಂದು ಇರಾನಿನ ಕ್ಷಿಪಣಿ ಉಡಾವಣೆಗಳಿಂದ ಆಶ್ರಯ ಪಡೆಯಲು ನೆತನ್ಯಾಹು ಬಂಕರ್‌ಗೆ ಓಡಿಹೋಗುವುದನ್ನು ವೀಡಿಯೋ ತೋರಿಸುವುದಿಲ್ಲ ಆದರೆ ೨೦೨೧ ರಲ್ಲಿ ನೆಸ್ಸೆಟ್‌ನಲ್ಲಿ ಮತದಾನ ಮಾಡಲು ಓಡಿಹೋಗುವುದನ್ನು ತೋರಿಸುತ್ತದೆ. ಆದರಿಂದಾಗಿ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ