ಮುಖಪುಟ ನೀರಿನಲ್ಲಿ ನಮಾಜ್ ಮಾಡುತ್ತಿರುವ ಮುಸ್ಲಿಮರ ಹಳೆಯ ಚಿತ್ರವನ್ನು ೨೦೨೪ ರ ಬಾಂಗ್ಲಾದೇಶದ ಪ್ರವಾಹಕ್ಕೆ ಲಿಂಕ್ ಮಾಡಲಾಗಿದೆ

ನೀರಿನಲ್ಲಿ ನಮಾಜ್ ಮಾಡುತ್ತಿರುವ ಮುಸ್ಲಿಮರ ಹಳೆಯ ಚಿತ್ರವನ್ನು ೨೦೨೪ ರ ಬಾಂಗ್ಲಾದೇಶದ ಪ್ರವಾಹಕ್ಕೆ ಲಿಂಕ್ ಮಾಡಲಾಗಿದೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ

ಆಗಸ್ಟ್ 27 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೪ ರ ಬಾಂಗ್ಲಾದೇಶದ ಪ್ರವಾಹದ ಸಮಯದಲ್ಲಿ ಮುಸ್ಲಿಮರು ನೀರಿನಲ್ಲಿ ಪ್ರಾರ್ಥನೆ ಮಾಡುವುದನ್ನು ಚಿತ್ರ ತೋರಿಸುತ್ತದೆ ಎಂದು ಹೇಳಿಕೊಂಡು ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ ಅನ್ನು ಈ ಚಿತ್ರವು ತೋರಿಸುತ್ತದೆ. ವಾಹದ ನೀರಿನಲ್ಲಿ ಪ್ರಾರ್ಥನೆ ಮಾಡುತ್ತಿರುವ ಮುಸ್ಲಿಮರ ಈ ಫೋಟೋ ೨೦೨೪ ರ ಬಾಂಗ್ಲಾದೇಶದ ಪ್ರವಾಹದಿಂದ ಬಂದಿದೆ ಎಂದು ಹೇಳುವ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

೨೦೨೧ ರಲ್ಲಿ ಬಾಂಗ್ಲಾದೇಶದ ಸತ್ಖಿರಾದಲ್ಲಿ ಮುಸ್ಲಿಮರು ಪ್ರವಾಹದ ನೀರಿನಲ್ಲಿ ಪ್ರಾರ್ಥನೆ ಮಾಡುತ್ತಿರುವ ಈ ಚಿತ್ರವನ್ನು ದೇಶದ ಇತ್ತೀಚಿನ ಪ್ರವಾಹಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ.

ಹೇಳಿಕೆ ಏನು?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ ಮುಸ್ಲಿಂ ಪುರುಷರ ಗುಂಪೊಂದು ಭುಜದವರೆಗೆ ನಿಂತಿರುವ ನೀರಿನಲ್ಲಿ ನಮಾಜ್ ಮಾಡುತ್ತಿರುವುದನ್ನು ತೋರಿಸುತ್ತದೆ. ಈ ಚಿತ್ರವು ೨೦೨೪ ರಲ್ಲಿ ಬಾಂಗ್ಲಾದೇಶದಲ್ಲಿ ಇತ್ತೀಚಿನ ಪ್ರವಾಹಕ್ಕೆ ಸಂಬಂಧಿಸಲಾಗಿದೆ.

ಸರ್ಕಾರಿ ವಿರೋಧಿ ಪ್ರತಿಭಟನೆಗಳು ಮತ್ತು ಹಿಂಸಾಚಾರದ ನಂತರ ಬಾಂಗ್ಲಾದೇಶವು ಪ್ರಸ್ತುತ ತೀವ್ರ ಪ್ರವಾಹದಿಂದ ಬಳಲುತ್ತಿದೆ. ತೀವ್ರವಾದ ಮಳೆ ಮತ್ತು ಉಕ್ಕಿ ಹರಿಯುವ ನದಿಗಳಿಂದ ಉಂಟಾದ ಪ್ರವಾಹದಿಂದ ೨೦ ಸಾವುಗಳು ಮತ್ತು ೫ ಮಿಲಿಯನ್ ಜನರು ಸಂತ್ರಸ್ತರಾಗಿದ್ದಾರೆ ಎಂದು ಎನ್ ಡಿಟಿವಿ  ವರದಿ ಮಾಡಿದೆ. ರಾಯಿಟರ್ಸ್ ಪ್ರಕಾರ, ಹಾನಿಗೊಳಗಾದ ರಸ್ತೆಗಳು, ಸಮುದಾಯಗಳನ್ನು ಪ್ರತ್ಯೇಕಿಸಿವೆ ಮತ್ತು ಪರಿಹಾರ ಪ್ರಯತ್ನಗಳನ್ನು ಸಂಕೀರ್ಣಗೊಳಿಸುವುದರಿಂದ ಹಲವಾರು ಪ್ರದೇಶಗಳನ್ನು ಕಡಿತಗೊಳಿಸಲಾಗಿದೆ.

ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ, ಈ ಚಿತ್ರವನ್ನು  ಹಂಚಿಕೊಳ್ಳಲಾಗಿದೆ ಮತ್ತು ಅದರ ಶೀರ್ಷಿಕೆ ಹೀಗಿದೆ, "ಕೆಲವು ದಿನಗಳ ಹಿಂದೆ ಹಿಂಸಾತ್ಮಕವಾಗಿ ಹಿಂದೂಗಳ  ರಕ್ತ ಚೆಲ್ಲಿ ದ್ದನ್ನು ಸ್ವಚ್ಛ ಮಾಡಿದ ಜಲ ಪ್ರವಾಹ .ಬಾಂಗ್ಲಾದೇಶ ಪ್ರವಾಹ ಅನ್ನಕ್ಕಾಗಿ ಹಾಹಾಕಾರ. ಪಾಪದ ಕೊಡ ತುಂಬಿದ್ರೆ ಹೀಗೆಯೇ ಆಗೋದು.ಕರ್ಮಾ ರಿಟರ್ನ್ಸ್. ಈ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಫೇಸ್‌ಬುಕ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಚಿತ್ರವು ಬಾಂಗ್ಲಾದೇಶದದ್ದಾಗಿದ್ದರೂ, ಇದನ್ನು ೨೦೨೧ ರಲ್ಲಿ ತೆಗೆದುಕೊಳ್ಳಲಾಗಿದೆ ಮತ್ತು ಇತ್ತೀಚಿನ ಪ್ರತಿಭಟನೆಗಳು ಮತ್ತು ರಾಜಕೀಯ ಅಶಾಂತಿಯ ನಂತರ ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ.

ನಾವು ಕಂಡುಕೊಂಡಿದ್ದು ಏನು?

"ಪ್ರೇ ಫಾರ್ ಮರ್ಸಿ" ಎಂಬ ಶೀರ್ಷಿಕೆಯ ಚಿತ್ರವನ್ನು ಶರ್ವರ್ ಹುಸೇನ್ ಅವರು ಅಕ್ಟೋಬರ್ ೮, ೨೦೨೧ ರಂದು ತೆಗೆದಿದ್ದಾರೆ ಎಂದು ರಿವರ್ಸ್ ಇಮೇಜ್ ಸರ್ಚ್ ಬಹಿರಂಗಪಡಿಸಿತು. ಇದು ಇಂಟರ್ನ್ಯಾಷನಲ್ ಫೋಟೋಗ್ರಫಿ ಅವಾರ್ಡ್ಸ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ, ಈ ಚಿತ್ರವನ್ನು ಬಾಂಗ್ಲಾದೇಶದ ಸತ್ಖಿರಾ- ಪ್ರಪಂಚದ ಅತಿ ದೊಡ್ಡ ಮ್ಯಾಂಗ್ರೋವ್ ಅರಣ್ಯವಾದ ಸುಂದರಬನ್ಸ್ ಬಳಿಯ ತಗ್ಗು ಪ್ರದೇಶದ ಕರಾವಳಿ ಪ್ರದೇಶದಲ್ಲಿ, ನಿವಾಸಿಗಳನ್ನು ತೋರಿಸುತ್ತದೆ ಎಂದು ವಿವರಿಸಲಾಗಿದೆ.  

ಜನರು ಮೊಣಕಾಲಿನಿಂದ ಎದೆಯ ಆಳದ ನೀರಿನಲ್ಲಿ ಪ್ರಾರ್ಥಿಸುತ್ತಿರುವುದನ್ನು ಚಿತ್ರ ತೋರಿಸುತ್ತದೆ ಎಂದು ವಿವರಣೆಯು ಹೇಳುತ್ತದೆ. ಫೋಟೋ ತೆಗೆದ ಸ್ವಲ್ಪ ಸಮಯದ ನಂತರ ಚಿತ್ರದಲ್ಲಿ ತೋರಿಸಿರುವ ಮಸೀದಿಯು ಉಬ್ಬರವಿಳಿತದ ಪ್ರವಾಹದಿಂದ ನಾಶವಾಯಿತು ಎಂದು ವರದಿಯಾಗಿದೆ.

ಇಂಟರ್ನ್ಯಾಷನಲ್ ಫೋಟೋಗ್ರಫಿ ಅವಾರ್ಡ್ಸ್ ವೆಬ್‌ಸೈಟ್‌ನಲ್ಲಿ ಪೋಷ್ಟ್ ಮಾಡಿದ ಚಿತ್ರದ ಸ್ಕ್ರೀನ್‌ಶಾಟ್. (ಮೂಲ: ಇಂಟರ್ನ್ಯಾಷನಲ್ ಫೋಟೋಗ್ರಫಿ ಅವಾರ್ಡ್ಸ್ ವೆಬ್‌ಸೈಟ್)

ಹೆಚ್ಚುವರಿಯಾಗಿ, ಅದೇ ಚಿತ್ರವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಛಾಯಾಗ್ರಹಣ ಸ್ಟುಡಿಯೋ ಹೌಸ್ ಆಫ್ ಲೂಸಿ ಒಸ್ಟುನಿ ಖಾತೆಯಿಂದ ಸೆಪ್ಟೆಂಬರ್ ೧೯, ೨೦೨೩ ರಂದು ಪೋಷ್ಟ್ ಮಾಡಲಾಗಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಾಗು ಹುಸೇನ್ ಅವರನ್ನು ಛಾಯಾಗ್ರಾಹಕ ಎಂದು ಟ್ಯಾಗ್ ಮಾಡಿದ್ದಾರೆ. ಶೀರ್ಷಿಕೆಯು ಹೀಗಿದೆ: "ಶ್ರವರ್ ಹುಸೇನ್ ಅವರಿಂದ ಕರುಣೆಗಾಗಿ ಪ್ರಾರ್ಥಿಸು ಅತಿ ಎತ್ತರದ ಅಲೆಗಳ ವಿರುದ್ಧ ಅಲ್ಲಾಹನ ರಕ್ಷಣೆ."

ಹುಸೇನ್ ಅವರು ಮಾರ್ಚ್ ೨೯, ೨೦೨೨ ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅದರ ಶೀರ್ಷಿಕೆ ಹೀಗಿದೆ: "ನನ್ನ ಕೆಲಸ @wwdphc-2022 ಗೆಲುವಿನ ಪಟ್ಟಿಯಲ್ಲಿದೆ. ಇದು ನನ್ನ ದೀರ್ಘಕಾಲೀನ ಸಾಕ್ಷ್ಯಚಿತ್ರದಿಂದ ಒಂದೇ ಫೋಟೋವಾಗಿದೆ 'ಟಿಯರ್ಸ್ ಆಫ್ ಗ್ಲೋಬಲ್ ವಾರ್ಮಿಂಗ್' ಶೀರ್ಷಿಕೆಯ ಯೋಜನೆ. ಈ ಫೋಟೋವನ್ನು ಹಂಚಿಕೊಳ್ಳುವ ಮತ್ತು ಭಾಗವಹಿಸುವ ನನ್ನ ಉದ್ದೇಶವು ಜಾಗತಿಕ ತಾಪಮಾನ ಏರಿಕೆಗೆ ಕನಿಷ್ಠ ಕೊಡುಗೆ ನೀಡುವ ಆದರೆ ಹೆಚ್ಚು ಪರಿಣಾಮ ಬೀರುವ ಎರಡನೇ ಮತ್ತು ಮೂರನೇ ಜಗತ್ತಿನ ದೇಶಗಳ ಮೇಲೆ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ವಿಶಾಲ ಪ್ರೇಕ್ಷಕರಿಗೆ ಮತ್ತು ವಿಶ್ವ ನಾಯಕರಿಗೆ ಸಂದೇಶವನ್ನು ಕಳುಹಿಸುವುದು. ಎರಡನೇ ಸ್ಥಾನವನ್ನು ಗೆಲ್ಲುವುದು ನನಗೆ ಜಾಗತಿಕ ಪ್ರೇಕ್ಷಕರನ್ನು ತಲುಪಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ ಮತ್ತು ಎಲ್ಲಾ ತೀರ್ಪುಗಾರರಿಗೆ ಮತ್ತು ತಂಡಕ್ಕೆ @wwdphc-2022 ಧನ್ಯವಾದಗಳು.

ಸರ್ವರ್ ಹುಸೇನ್ ಅವರು ಹಂಚಿಕೊಂಡ ಇನ್‌ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.(ಮೂಲ: ಇನ್‌ಸ್ಟಾಗ್ರಾಮ್)

ಲಾಜಿಕಲಿ ಫ್ಯಾಕ್ಟ್ಸ್ ಹುಸೇನ್ ಅವರನ್ನು ಸಂಪರ್ಕಿಸಿದೆ ಮತ್ತು ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ಈ ಫ್ಯಾಕ್ಟ್-ಚೆಕ್ ಅನ್ನು ನವೀಕರಿಸಲಾಗುವುದು.

ಬಾಂಗ್ಲಾದೇಶದ ೨೦೨೧ ಪ್ರವಾಹ

೨೦೨೧ ರಲ್ಲಿ, ಭಾರೀ ಮಳೆಯು ಬಾಂಗ್ಲಾದೇಶದಲ್ಲಿ ತೀವ್ರ ಪ್ರವಾಹಕ್ಕೆ ಕಾರಣವಾಯಿತು, ಜುಲೈ ೨೭ ರಿಂದ ಕನಿಷ್ಠ ೨೧,೦೦೦ ಜನರನ್ನು ಸ್ಥಳಾಂತರಿಸಲಾಯಿತು. ಬಾಂಗ್ಲಾದೇಶ ಪೋಷ್ಟ್ ಆಗಸ್ಟ್ ೨೦೨೧ ರಲ್ಲಿ ಸತ್ಖಿರಾ ನಿರಂತರ ಮಳೆಯನ್ನು ಅನುಭವಿಸಿತ್ತು ಎಂದು ವರದಿ ಮಾಡಿದೆ, ಜುಲೈ ೨೯ ರಿಂದ ೩೦ ರವರೆಗಿನ ಭಾರೀ ಮಳೆಯು ವ್ಯಾಪಕ ಪ್ರವಾಹಕ್ಕೆ ಕಾರಣವಾಯಿತು.

ನೆಟ್‌ವರ್ಕ್ ಫಾರ್ ಮಾಹಿತಿ, ಪ್ರತಿಕ್ರಿಯೆ, ಮತ್ತು ವಿಪತ್ತು ಕುರಿತ ಸನ್ನದ್ಧತೆ ಚಟುವಟಿಕೆಗಳು (ಎನ್ಐಆರ್ ಎಪಿಎಡಿ) ತಮ್ಮ ಅಕ್ಟೋಬರ್ ೨೦೨೧ ರ ವರದಿಯಲ್ಲಿ ರಂಗ್‌ಪುರ, ಸಿಲ್ಹೆಟ್ ಮತ್ತು ಬರ್ಗುನಾದಲ್ಲಿ ಭಾರೀ ಮಳೆಯಾಗಿದೆ ಎಂದು ಗಮನಿಸಿದತ್ತು. ಹೆಚ್ಚುವರಿಯಾಗಿ, ರಾಜಬರಿ, ಖುಲ್ನಾ, ಗೋಪಾಲ್‌ಗಂಜ್, ಸಿರಾಜ್‌ಗಂಜ್ ಮತ್ತು ಜಮಾಲ್‌ಪುರ್‌ಗಳಲ್ಲಿನ ಒಡ್ಡು ವೈಫಲ್ಯಗಳು ರಂಗ್‌ಪುರ, ಸತ್ಖಿರಾ ಮತ್ತು ತಂಗೈಲ್ ಜಿಲ್ಲೆಗಳಲ್ಲಿ ಗಮನಾರ್ಹವಾದ ಜಲಾವೃತಕ್ಕೆ ಕಾರಣವಾಯಿತು ಎಂದು ವರದಿ ಮಾಡಲಾಗಿದೆ.

ತೀರ್ಪು

೨೦೨೧ ರಲ್ಲಿ ಸತ್ಖಿರಾದಲ್ಲಿ ಸಂಭವಿಸಿದ ಪ್ರವಾಹದ ಸಮಯದಲ್ಲಿ ಛಾಯಾಗ್ರಾಹಕ ಶರ್ವರ್ ಹುಸೇನ್ ಸೆರೆಹಿಡಿದ ಮುಸ್ಲಿಮರು ತಮ್ಮ ಭುಜದವರೆಗೆ ನೀರಿನಲ್ಲಿ ನಿಂತು ನಮಾಜ್ ಮಾಡುತ್ತಿರುವ ಚಿತ್ರವನ್ನು ೨೦೨೪ ರಲ್ಲಿ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹಕ್ಕೆ ತಪ್ಪಾಗಿ ಜೋಡಿಸಲಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ