ಮುಖಪುಟ ಉತ್ತರ ಪ್ರದೇಶದ ಮಹಿಳೆ ಮೇಲಿನ ದೈಹಿಕ ಹಲ್ಲೆಯ ೨೦೧೮ ರ ಈ ವೀಡಿಯೋಗೆ ಕೋಮು ನಿರೂಪಣೆ ನೀಡಲಾಗಿದೆ

ಉತ್ತರ ಪ್ರದೇಶದ ಮಹಿಳೆ ಮೇಲಿನ ದೈಹಿಕ ಹಲ್ಲೆಯ ೨೦೧೮ ರ ಈ ವೀಡಿಯೋಗೆ ಕೋಮು ನಿರೂಪಣೆ ನೀಡಲಾಗಿದೆ

ಮೂಲಕ: ಚಂದನ್ ಬೋರ್ಗೊಹೈನ್

ಅಕ್ಟೋಬರ್ 25 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಷರಿಯಾ ಕಾನೂನಿನ ಅಡಿಯಲ್ಲಿ ಸಾರ್ವಜನಿಕವಾಗಿ ಮಹಿಳೆಯನ್ನು ಶಿಕ್ಷಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್ ಅನ್ನು ಈ ಚಿತ್ರವು ತೋರಿಸುತ್ತದೆ. ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ತಪ್ಪಾದ ಕೋಮುವಾದಿ ಹೇಳಿಕೆಯನ್ನು ಮಾಡಲು ಉತ್ತರ ಪ್ರದೇಶದ ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋ ೨೦೧೮ ರದ್ದು ಮತ್ತು ಉತ್ತರ ಪ್ರದೇಶದ ವ್ಯಕ್ತಿಯು ಆಪಾದಿತ ಸಂಬಂಧದ ಹಿನ್ನಲೆಯಲ್ಲಿ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದನ್ನು ತೋರಿಸುತ್ತದೆ. ಷರಿಯಾ ಕಾನೂನಿಗೆ ಸಂಬಂಧವಿಲ್ಲ.

(ಪ್ರಚೋದಕ ಎಚ್ಚರಿಕೆ: ಈ ಕಥೆಯು ದೈಹಿಕ ಹಿಂಸಾಚಾರದ ವಿವರಣೆಯನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ. ಇದರಿಂದ ಲಾಜಿಕಲಿ ಫ್ಯಾಕ್ಟ್ಸ್ ವೀಡಿಯೋದ ನೇರ ಲಿಂಕ್‌ಗಳನ್ನು ಸೇರಿಸುವುದರಿಂದ ದೂರವಿರುತ್ತವೆ.)

ಹೇಳಿಕೆ ಏನು?

ವೀಕ್ಷಕರ ಗುಂಪಿನಿಂದ ಸುತ್ತುವರಿದಿದ್ದ ಮರಕ್ಕೆ ಕಟ್ಟಿದ ಮಹಿಳೆಯನ್ನು ಬೆಲ್ಟ್‌ನಿಂದ ವ್ಯಕ್ತಿಯೊಬ್ಬ ಹಿಂಸಾತ್ಮಕವಾಗಿ ಥಳಿಸುವ ವೀಡಿಯೋ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಷರಿಯಾ ಕಾನೂನಿನ ಅಡಿಯಲ್ಲಿ (ಇಸ್ಲಾಂನ ಕಾನೂನು ವ್ಯವಸ್ಥೆ) ಶಿಕ್ಷೆಗೆ ಒಳಗಾಗುವ 'ಅತ್ಯಾಚಾರ ಬದುಕುಳಿದವರನ್ನು' ಇದು ಚಿತ್ರಿಸುತ್ತದೆ ಎಂದು ಹೇಳಲಾಗಿದೆ. 

ಎಕ್ಸ್ ನಲ್ಲಿ (ಹಿಂದೆ ಟ್ವಿಟ್ಟರ್), ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), "ಷರಿಯಾ ಕಾನೂನಿನ ಅಡಿಯಲ್ಲಿ, ಮಹಿಳೆ ಅತ್ಯಾಚಾರಕ್ಕೊಳಗಾದರೆ, ಅದನ್ನು ಮದುವೆಯ ಹೊರಗಿನ ಲೈಂಗಿಕತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಆಕೆಗೆ ಶಿಕ್ಷೆ ವಿಧಿಸಲಾಗುತ್ತದೆ. ಹೆಚ್ಚಿನ ಷರಿಯಾ ದೇಶಗಳಲ್ಲಿ, ಮಹಿಳೆಯರು ಅವರು ಅತ್ಯಾಚಾರವೆಸಗಿದ್ದಾರೆಂದು ವರದಿ ಮಾಡಿದರೆ ಕಲ್ಲೆಸೆದು ಸಾಯಿಸುತ್ತಾರೆ." 

ಈ ಪೋಷ್ಟ್ ೫.೬ ಮಿಲಿಯನ್ ವೀಕ್ಷಣೆಗಳು, ೪೦,೦೦೦ ಲೈಕ್ ಗಳು ಮತ್ತು ೧೮,೦೦೦ ಮರು ಪೋಷ್ಟ್ ಗಳನ್ನು ಗಳಿಸಿದೆ. ಅದೇ ರೀತಿಯ ಹೇಳಿಕೆ ಇಂದ ಹಂಚಿಕೊಂಡ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ವೀಡಿಯೋವನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. 
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ನಮ್ಮ ತನಿಖೆಯ ಪ್ರಕಾರ ವೀಡಿಯೋ ಮಾರ್ಚ್ ೨೦೧೮ ರ ಹಿಂದಿನದು ಮತ್ತು ಉತ್ತರ ಭಾರತದ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ. ಅತ್ಯಾಚಾರಕ್ಕೊಳಗಾದ ಮಹಿಳೆಗೆ ಶಿಕ್ಷೆಯಾಗುವುದನ್ನು ಇದು ಚಿತ್ರಿಸುವುದಿಲ್ಲ.

ನಾವು ಏನು ಕಂಡುಕೊಂಡಿದ್ದು ಏನು?

ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ವೈರಲ್ ವೀಡಿಯೋದ ದೃಶ್ಯಗಳನ್ನು ಒಳಗೊಂಡಿರುವ ಮಾರ್ಚ್ ೨೦೧೮ ರ ಹಲವಾರು ಮಾಧ್ಯಮ ವರದಿಗಳು ಕಂಡುಬಂದವು. 

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಬುಲಂದ್‌ಶಹರ್ ಜಿಲ್ಲೆಯ ಲೌಂಗಾ ಗ್ರಾಮದಲ್ಲಿ ಮಾರ್ಚ್ ೧೦, ೨೦೧೮ ರಂದು ಈ ಘಟನೆ ಸಂಭವಿಸಿದೆ. ಪಲಾಯನಗೈದ ಆರೋಪದ ಮೇಲೆ ಸಾರ್ವಜನಿಕವಾಗಿ ಶೌದನ್ ಸಿಂಗ್ ಎಂದು ಗುರುತಿಸಲಾದ  ಮಹಿಳೆಯೊಬ್ಬಳು ಆಕೆಯ ಪತಿಯಿಂದ ದೈಹಿಕವಾಗಿ ಹಲ್ಲೆಗೆ ಒಳಗಾಗಿದ್ದನ್ನು ಕ್ಲಿಪ್ ತೋರಿಸುತ್ತದೆ. ಗ್ರಾಮ ಪಂಚಾಯಿತಿ (ಗ್ರಾಮ ಸಭೆ) ಆದೇಶದ ಮೇರೆಗೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿತ್ತು. ಬುಲಂದ್‌ಶಹರ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ಪ್ರವೀಣ್ ರಂಜನ್ ಸಿಂಗ್ ಅವರನ್ನು ಉಲ್ಲೇಖಿಸಿ, ವರದಿಯಲ್ಲಿ, “ಮಾಜಿ ಪ್ರಧಾನ್ ಶೇರ್ಸಿಂಗ್, ಅವರ ಮಗ ಶ್ರವಣ್ ಮತ್ತು ಮಹಿಳೆಯ ಪತಿ ಶೌದನ್ ಸಿಂಗ್ ಅವರನ್ನು ಬಂಧಿಸಲಾಗಿದೆ ಮತ್ತು ಇತರ ಆರೋಪಿಗಳನ್ನು ಬಂಧಿಸಲು ತನಿಖೆ ನಡೆಯುತ್ತಿದೆ.”

ಮಾರ್ಚ್ ೨೩, ೨೦೧೮ ರಂದು ನವಭಾರತ್ ಟೈಮ್ಸ್‌ನ ವರದಿಯು ಸಿಂಗ್ ಅವರ ಹೇಳಿಕೆಯನ್ನು ಒಳಗೊಂಡಿದೆ, "ಈ ಘಟನೆಯು ಹಲವು ದಿನಗಳ ಹಿಂದೆ ಸಂಭವಿಸಿದೆ. ನಾವು ವೀಡಿಯೋವನ್ನು ಸ್ವೀಕರಿಸಿದ ತಕ್ಷಣ, ಸಂತ್ರಸ್ತೆಯನ್ನು ಕರೆದಿದ್ದೇವೆ. ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪಂಚಾಯತ್‌ನ ಮಾಜಿ ಮುಖ್ಯಾಧಿಕಾರಿ, ಆಕೆಯ ಪತಿ ಮತ್ತು ಇತರ ಆರು ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ."

ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಮಹಿಳೆ ತನ್ನ ದೂರಿನಲ್ಲಿ, "ನಾನು ನಮ್ಮ ನೆರೆಹೊರೆಯವರೊಂದಿಗೆ ಹೋಗಿದ್ದೆ, ಆದರೆ ಐದು ದಿನಗಳ ನಂತರ, ಮಾರ್ಚ್ ೧೦ ರಂದು ಕೆಲವು ಗ್ರಾಮಸ್ಥರು ನಮ್ಮನ್ನು ಹಳ್ಳಿಗೆ ಕರೆತಂದರು ಮತ್ತು ಬೆಳಿಗ್ಗೆ ೭ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ  ನನ್ನ ಕೈಗಳನ್ನು ಮರಕ್ಕೆ ಕಟ್ಟಲಾಯಿತು, ಮತ್ತು ಸಾರ್ವಜನಿಕರ ದೃಷ್ಟಿಯಲ್ಲಿ ನನ್ನ ಪತಿ ಶೌದನ್ ಸಿಂಗ್ ಬೆಲ್ಟ್ ಮತ್ತು ಕೋಲುಗಳಿಂದ ಗಂಟೆಗಳ ಕಾಲ ನನ್ನನ್ನು ಥಳಿಸಿದರು."

ಮಾರ್ಚ್ ೨೦೧೮ ರಿಂದ ಉತ್ತರ ಪ್ರದೇಶ ಮೂಲದ ಪತ್ರಕರ್ತ ಪಿಯೂಷ್ ರೈ ಅವರ ಎಕ್ಸ್ ಪೋಷ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ, ಅದು ವೈರಲ್ ವೀಡಿಯೋವನ್ನು ಒಳಗೊಂಡಿತ್ತು ಮತ್ತು  ಬುಲಂದ್‌ಶಹರ್‌ನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ  ದಾಂಪತ್ಯ ದ್ರೋಹದ ಆರೋಪದ ಮೇಲೆ ಆಕೆಯ ಪತಿಯಿಂದ ಚಿತ್ರಹಿಂಸೆಗೆ ಗುರಿಪಡಿಸಲಾಗಿತ್ತು, ಹಾಗು ಅದು ಸ್ಥಳೀಯ ಪಂಚಾಯತ್ ಮೀರಿಗೆ ನಡೆದಿತ್ತು ಎಂದು ಹೇಳಲಾಗಿದೆ. 

ಲಾಜಿಕಲಿ ಫ್ಯಾಕ್ಟ್ಸ್ ಬುಲಂದ್‌ಶಹರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಿಜುಲ್ ಅವರನ್ನು ಸಂಪರ್ಕಿಸಿದ್ದು, ಅವರು ಬುಲಂದ್‌ಶಹರ್ ಜಿಲ್ಲೆಯ ಸಯಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಲೌಂಗಾ ಗ್ರಾಮದಲ್ಲಿ ೨೦೧೮ ರಲ್ಲಿ ಈ ಘಟನೆ ಸಂಭವಿಸಿದೆ ಎಂದು ದೃಢಪಡಿಸಿದರು.

ಮಾರ್ಚ್ ೨೩, ೨೦೧೮ ರ ಬುಲಂದ್‌ಶಹರ್ ಪೊಲೀಸರ ಎಕ್ಸ್ ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸೂಚಿಸಿದೆ. ಮಹಿಳೆಯ ಪತಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಈ ಪ್ರಕರಣದಲ್ಲಿ ದಾಖಲಾದ ಎಫ್‌ಐಆರ್‌ನ ಪ್ರತಿಯನ್ನು ಸಹ ನಾವು ಪಡೆದುಕೊಂಡಿದ್ದೇವೆ, ಅದು ಘಟನೆಯನ್ನು ದೃಢೀಕರಿಸುತ್ತದೆ ಮತ್ತು ಆರೋಪಿಯಾಗಿ ಶೇರ್ ಸಿಂಗ್ ಪ್ರಧಾನ್, ಶ್ರವಣ್, ರಾಧೇಶ್ಯಾಮ್, ನರೇಶ್, ನನ್ಹೆ, ಜಿತೇಂದ್ರ ಅಲಿಯಾಸ್ ಜೀತು, ವೀರಪಾಲ್, ಹರ್ಕೇಶ್, ರಮೇಶ್ ಚಂದ್, ಹಂಸರಾಜ್ ಮತ್ತು ೧೦-೧೫ ಅನಾಮಧೇಯ ವ್ಯಕ್ತಿಗಳನ್ನು ಹೆಸರಿಸಿದೆ.

ತೀರ್ಪು

ಉತ್ತರ ಪ್ರದೇಶದಲ್ಲಿ ವಿವಾಹೇತರ ಸಂಬಂಧದ ಆರೋಪದ ಮೇಲೆ ಹಿಂದೂ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ಮಾರ್ಚ್ ೨೦೧೮ ರಲ್ಲಿ ನಡೆದಿದೆ ಮತ್ತು ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿಗೆ ಯಾವುದೇ ಸಂಬಂಧವಿಲ್ಲ, ಅಥವಾ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಂತೆ ಅತ್ಯಾಚಾರವನ್ನು ವರದಿ ಮಾಡಿದ್ದಕ್ಕಾಗಿ ಪುರುಷನು ತನ್ನ ಹೆಂಡತಿಯನ್ನು ಹೊಡೆಯುವುದನ್ನು ಚಿತ್ರಿಸುವುದಿಲ್ಲ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ