Lorena Martinez

ಲೊರೆನಾ ಮಾರ್ಟಿನೆಜ್

ಹೆಡ್ ಆಫ್ ಎಡಿಟೋರಿಯಲ್ ಆಪರೇಷನ್ಸ್ (ಯುರೋಪ್)

ಟ್ವಿಟರ್‌ನಲ್ಲಿ ಆರು ವರ್ಷಗಳ ಕಾಲ, ಸುದ್ದಿ ಮಾಧ್ಯಮ ಹಾಗು ಸಂಪಾದಕೀಯ ಕ್ಷೇತ್ರದಲ್ಲಿ ಹತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ನಂತರ ಲೊರೆನಾ ಲಾಜಿಕಲಿ ಫ್ಯಾಕ್ಟ್ಸ್‌ಗೆ ಸೇರಿದರು. ಅವರ ಹಿಂದಿನ ಉದ್ಯೋಗ ಪಾತ್ರದಲ್ಲಿ ,ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುವ  ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯಲು ಕಾರ್ಯಕಾರಿ ಯೋಜನೆಗಳನ್ನು ನಡೆಸಿದರು. ಇಂಗ್ಲಿಷ್, ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ವಿಶ್ವಾಸಾರ್ಹ ಮಾಹಿತಿಯನ್ನು ಗುರುತಿಸುವ ಮತ್ತು ಉನ್ನತೀಕರಿಸುವ ಪ್ರಯತ್ನಗಳನ್ನು ವಿಸ್ತರಿಸಲು ಫ್ಯಾಕ್ಟ್ ಚೆಕಿಂಗ್ ಸಂಸ್ಥೆಗಳೊಂದಿಗೆ ಟ್ವಿಟ್ಟರ್ ನ ಗ್ಲೋಬಲ್ ಮಿಸ್ ಇನ್ಫೋರ್ಮೇಷನ್   
ಪರ್ಟ್ನರ್ಷಿಪ್  ಪ್ರೋಗ್ರಾಮ್ ಕಾರ್ಯಕ್ರಮವನ್ನು ಚಾಲನೆ ಮಾಡಲು ಅವರು ಸಹಾಯ ಮಾಡಿದರು. ಅವರ ಸಂಪಾದಕೀಯ ಮತ್ತು ಕಾರ್ಯಾಚರಣೆಯ ಕೆಲಸವು ಜಾಗತಿಕ ಪ್ರೇಕ್ಷಕರಿಗೆ ವಿಶ್ವಾಸಾರ್ಹ ಮತ್ತು ಅಧಿಕೃತ ಮಾಹಿತಿಯನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಟ್ವಿಟರ್‌ಗೆ ಸೇರುವ ಮೊದಲು, ಅವರು ಸ್ಪೇನ್, ಜರ್ಮನಿ ಮತ್ತು ಲ್ಯಾಟಿನ್ ಅಮೆರಿಕದ ಮಾಧ್ಯಮಗಳಿಗೆ ಯು.ಕೆ. ನಲ್ಲಿ ಬ್ರೇಕಿಂಗ್ ನ್ಯೂಸ್ ಮತ್ತು ಪ್ರಮುಖ ಘಟನೆಗಳನ್ನು ಕವರ್ ಮಾಡುತ್ತಿದ್ದರು.
0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ