ನಾವು ಸಾಮಯಿಕ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಹೊಂದಾಣಿಕೆಯಾಗುವ ವಿಷಯಗಳ ಮೇಲೆ ಫ್ಯಾಕ್ಟ್ ಚೆಕ್ ಅನ್ನು ಪ್ರಕಟಿಸುತ್ತೇವೆ. ಟ್ರೆಂಡಿಂಗ್ ನಲ್ಲಿರುವ ತಪ್ಪು ಮಾಹಿತಿಗಳಿಗೆ ಸಂಬಂಧಪಟ್ಟ ನಿರೂಪಣೆಯನ್ನು ಪರಿಶೀಲಿಸಿ ಅದರ ನೈಜ ಮಾಹಿತಿಯನ್ನು ವಿವರಿಸುತ್ತೇವೆ.
ಹಾನಿಗೆ ಗಮನಾರ್ಹವಾಗಿ ಸಂಭಾವ್ಯವಿರುವ ಮಾಹಿತಿಗೆ ಸಂಬಂಧಪಟ್ಟ ವಾಸ್ತವಾಂಶವನ್ನು ಗುರುತಿಸಿ, ಸತ್ಯವಾದ ಮಾಹಿತಿಗೆ ಆದ್ಯತೆ ನೀಡಲು, ನಮ್ಮ ಫ್ಯಾಕ್ಟ್ ಚೆಕರ್ಸ್, ವಿಷಯ ವಿಶ್ಲೇಷಣೆಗಳನ್ನು, ಡೇಟಾಗಳನ್ನು, ಮತ್ತು ವಸ್ತುನಿಷ್ಠ ತೀರ್ಪುಗಳನ್ನು ಬಳಸುತ್ತಾರೆ. ನಮ್ಮ ಅನುಭವಿತ ಸಂಪಾದಕೀಯ ತಂಡ ಮತ್ತು ಫ್ಯಾಕ್ಟ್ ಚೆಕರ್ಸ್ ವೈಯಕ್ತಿಕವಾಗಿ ವಾಸ್ತವ ಮಾಹಿತಿಯ ಹರಡುವಿಕೆ ಮತ್ತು ಪರಿಣಾಮವನ್ನು ವಿಶ್ಲೇಷಿಸುತ್ತಾರೆ.
ಲಾಜಿಕಲಿ ಫ್ಯಾಕ್ಟ್ ಈ ಮಾನದಂಡಗಳ ಆಧಾರದಲ್ಲಿ ತನಿಖೆ ಮಾಡುತ್ತದೆ:
- ಯಾವುದೇ ಒಂದು ವಿಷಯ/ಸುದ್ದಿ/ ಘಟನೆಗೆ ಸಂಬಂಧಪಟ್ಟ ಮಾಹಿತಿ ಸಾರ್ವಜನಿಕವಾಗಿ ಅಥವಾ ಸಾರ್ವಜನಿಕರು ಕಾಣಬಲ್ಲ ಮತ್ತು ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ನೀಡಿದ ಹೇಳಿಕೆಯಾಗಿದ್ದರೆ,
- ಒಂದು ಮಾಹಿತಿಯನ್ನು ಸಮಂಜಸ ಅಥವಾ ಅಸಮಂಜಸ, ಸರಿ ಅಥವಾ ತಪ್ಪು ಎಂದು ಸುಲಭವಾಗಿ ನಿರ್ಣಯಿಸಬಹುದಾದರೆ.
- ಸಾರ್ವಜನಿಕವಾಗಿ ಲಭ್ಯವಾಗುವ ಸಮಂಜಸವಾದ ಮತ್ತು ಸಾಮಾನ್ಯವಾದ ಸಾಕ್ಷಿಗಳ ಮಾನದಂಡಗಳ ಆಧಾರದ ಮೇಲೆ ಇದನ್ನುನಿರ್ಣಯಿಸಬಹುದಾದರೆ.
- ಲಾಜಿಕಲಿ ಫ್ಯಾಕ್ಟ್ಸ್ ನ ಸಮರ್ಥನೆಗಳು ಅಥವಾ ವಾಕ್ಯಗಳು ಸತ್ಯ ಪರಿಶೀಲನೆಯಿಂದ ಕೂಡಿರುತ್ತವೆ. ಅದನ್ನು ಸಮರ್ಥನೆಗಳಾಗಿ ಅರ್ಥೈಸಬಹುದು. ಸಮರ್ಥನೆ ಎಂದರೆ, ಯಾರಾದರೂ, ಏನನ್ನಾದರೂ ನಿಜವೆಂದು ನಂಬುವ ಗುರಿಯನ್ನು ಹೊಂದಿರುವ ವಾಕ್ಯವಾಗಿರುತ್ತದೆ.
ಮೂಲ ಹೇಳಿಕೆಯನ್ನು ಯಾರು ಮಾಡಿದ್ದಾರೆ ಅಥವಾ ಅದು ಯಾವ ರಾಜಕೀಯ ವರ್ಣಪಟಲ ಮೇಲೆ ಬೀಳುತ್ತದೆ ಎಂಬುದನ್ನು ಲೆಕ್ಕಿಸದೆ ಅದೇ ರೀತಿಯ ಕಠಿಣ ಮಾನದಂಡಗಳನ್ನು ಬಳಸಿಕೊಂಡು ಎಲ್ಲಾ ಸಂಭಾವ್ಯ ಪುರಾವೆಗಳನ್ನು ಮೌಲ್ಯಮಾಪನ ಮಾಡಲು ತಂಡವು ಬದ್ಧವಾಗಿದೆ. ತಂಡವು ರಾಜಕೀಯ ವರ್ಣಪಟಲದಲ್ಲಿರುವ ಎಲ್ಲಾ ಹೇಳಿಕೆಗಳನ್ನು ಪರಿಶೀಲಿಸುತ್ತದೆ, ಆದರೆ ಇದು ಪ್ರತಿ ಪಕ್ಷದ ಬಗ್ಗೆ ಸಮಾನ ಸಂಖ್ಯೆಯ ಹೇಳಿಕೆಗಳನ್ನು ವಾಸ್ತವವಾಗಿ ಪರಿಶೀಲಿಸುವುದು ಎಂದರ್ಥವಲ್ಲ.
ಮಾನ್ಯವಾದ ವಿಷಯವನ್ನು ನಾವು ಕೆಲವೊಮ್ಮೆ ನಮ್ಮ ಯಾವುದೇ ಪುರಾವೆಗಳಿಂದ ಇತ್ಯರ್ಥಪಡಿಸಲು ಆಗುವುದಿಲ್ಲ. ಭವಿಷ್ಯದಲ್ಲೂ ಇದು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಇವು, ಐತಿಹಾಸಿಕ ವಿಷಯಗಳಲ್ಲಿ ಸಂಪೂರ್ಣ ಆಧಾರವಿಲ್ಲದಿರುವ ವಿಷಯಗಳಾಗಿರುತ್ತವೆ ಮತ್ತು ಮೂಲಭೂತವಾಗಿ ನೈತಿಕ ಮತ್ತು ಧಾರ್ಮಿಕ ವಿಷಯಗಳು ಯಾವುದೇ ಪುರಾವೆಗಳನ್ನು ಹೊಂದಿರುವುದಿಲ್ಲ. ಇಂತಹ ಮಾನ್ಯವಾದ ವಿಷಯಗಳನ್ನು ಪ್ರವೇಶಿಸುವುದು ಬೇಜವಾಬ್ದಾರಿ ಎಂದು ನಂಬಿರುವ ನಾವು ಇವುಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ.
ನಮಗೆ ಡೋಮೆನ್ ಪರಿಣಿತಿಯು ಸಿಗದಿದ್ದಲ್ಲಿ ಅಥವಾ ಇಂತಹ ಮಾನ್ಯವಾದ ವಿಷಯಗಳ ಸಂಬಂಧ ನಿರ್ಣಯಿಸುವ ಸಾಮರ್ಥ್ಯ ಇಲ್ಲದಿದ್ದಲ್ಲಿ ಅಂತಹ ವಿಷಯಗಳ ಬಗ್ಗೆ ಖಂಡನೆಯನ್ನು ಪ್ರಕಟಿಸಲು ಸ್ಪಷ್ಟವಾಗಿ ಸಾಧ್ಯವಿಲ್ಲ. ನಾವು ಯಾವುದೇ ಟ್ರೋಲ್ ನಲ್ಲಿ ಮತ್ತು ಖಂಡನೆಯನ್ನು ಪ್ರಕಟಿಸಲು ಸ್ಪಷ್ಟವಾದ ಪತ್ರಿಕೋದ್ಯಮದ ಪ್ರಕರಣವಿಲ್ಲದಿದ್ದರೆ ಅದರಲ್ಲಿ ತೊಡಗಿಸಿಕೊಳ್ಳುವುದು, ಒಳಗಾಗುವುದು ಮತ್ತು ಹಾನಿಕಾರಕ ಮೈತ್ರಿಗಳೊಂದಿಗೆ ಮನರಂಜನೆಗೆ ಆಸ್ಪಾದ ನೀಡುವುದಿಲ್ಲ.
ಫ್ಯಾಕ್ಟ್-ಚೆಕ್ ಮಾಡಬಹುದಾದ ಹೇಳಿಕೆಗಳನ್ನು ನಮ್ಮ ತಂಡದೊಂದಿಗೆ ಹಂಚಿಕೊಳ್ಳಲು ನಾವು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ. ಈ ಫಾರ್ಮ್ ಅನ್ನು ಬಳಸಿಕೊಂಡು ನಿಮ್ಮ ವಿನಂತಿಯನ್ನು ನೀವು ಕಳುಹಿಸಬಹುದು ಮತ್ತು ತಂಡವು ಈ ಮೇಲೆ ವಿವರಿಸಿದ ಮಾನದಂಡಗಳನ್ನು, ಹೇಳಿಕೆಯು ಪೂರೈಸುತ್ತದೆಯೇ ಎಂದು ಪರಿಶೀಲಿಸಿ ಫ್ಯಾಕ್ಟ್-ಚೆಕ್ ಅನ್ನು ನಡೆಸಲಾಗುವುದು. ಇದಲ್ಲದೆ, ನಾವು ಕೆಲವೊಮ್ಮೆ ನಮ್ಮ ಸಾಮಾಜಿಕ ಮಾಧ್ಯಮ ಚಾನಲ್‌ಗಳ ಮೂಲಕವೂ ಸಹ ಟಿಪ್-ಆಫ್‌ಗಳು ಮತ್ತು ಫ್ಯಾಕ್ಟ್-ಚೆಕ್ ನ ವಿನಂತಿಗಳನ್ನು ಸ್ವೀಕರಿಸುತ್ತೇವೆ.