ಮುಖಪುಟ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಪ್ರತಿಮೆ ಧ್ವಂಸಗೊಂಡ ವೀಡಿಯೋಗೆ ಕೋಮು ನಿರೂಪಣೆ ನೀಡಲಾಗಿದೆ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಪ್ರತಿಮೆ ಧ್ವಂಸಗೊಂಡ ವೀಡಿಯೋಗೆ ಕೋಮು ನಿರೂಪಣೆ ನೀಡಲಾಗಿದೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ

ಸೆಪ್ಟೆಂಬರ್ 5 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕರ್ನಾಟಕದ ಈ ವೀಡಿಯೋದಲ್ಲಿ ಮುಸ್ಲಿಮರು ಹಿಂದೂ ಸಮುದಾಯಕ್ಕೆ ಸೇರಿದ ಪ್ರತಿಮೆಯನ್ನು ಧ್ವಂಸಗೊಳಿಸುತ್ತಿರುವುದನ್ನು ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್ ಅನ್ನು ಚಿತ್ರವು ತೋರಿಸುತ್ತದೆ. ಕರ್ನಾಟಕದಲ್ಲಿ ಮುಸ್ಲಿಮರು ಹಿಂದೂ ಸಮುದಾಯಕ್ಕೆ ಸೇರಿದ ಪ್ರತಿಮೆಯನ್ನು ಧ್ವಂಸಗೊಳಿಸುತ್ತಿರುವುದನ್ನು ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋ ಕರ್ನಾಟಕದ್ದಲ್ಲ; ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಎರಡು ಪ್ರತಿಸ್ಪರ್ಧಿ ಗುಂಪುಗಳ ನಡುವಿನ ವಿವಾದದವನ್ನು ತೋರಿಸುತ್ತದೆ.

ಹೇಳಿಕೆ ಏನು?

ಟ್ರಾಕ್ಟರ್ ಪದೇ ಪದೇ ಢಿಕ್ಕಿ ಹೊಡೆದು ಪ್ರತಿಮೆಯನ್ನು ಕೆಡವುತ್ತಿರುವುದನ್ನು ಚಿತ್ರಿಸುವ ೫೮ ಸೆಕೆಂಡ್‌ಗಳ ವೀಡಿಯೋ ಆನ್‌ಲೈನ್‌ನಲ್ಲಿ ಹರಿದಾಡಿದ್ದು, ಅದು ಕರ್ನಾಟಕದ್ದು ಎಂದು ಹೇಳಲಾಗುತ್ತಿದೆ. ದೃಶ್ಯಾವಳಿಗಳಲ್ಲಿ, ಪ್ರತಿಮೆಯ ಹಿಂದೆ ಹಿಂದೂ ದೇವರು ಭಗವಾನ್ ರಾಮನ ಕಟ್-ಔಟ್ ಗೋಚರಿಸುತ್ತದೆ. ನಂತರ ಒಬ್ಬ ವ್ಯಕ್ತಿ ಪ್ರತಿಮೆಯ ಮೇಲೆ ಹತ್ತಿ ಕೋಲಿನಿಂದ ಹೊಡೆಯುತ್ತಾನೆ. ಕೊನೆಯಲ್ಲಿ, ಅಲ್ಪಸಂಖ್ಯಾತರು (೨೦ ಪ್ರತಿಶತ) ಹಿಂಸಾಚಾರಕ್ಕೆ ಕಾರಣವಾಗುತ್ತಿರುವಾಗ ಬಹುಸಂಖ್ಯಾತರಾಗಿ (೮೦ ಪ್ರತಿಶತ) ಇರುವ ಮೌಲ್ಯವನ್ನು ಹಿಂದಿಯಲ್ಲಿ ಮಾತನಾಡುವವರು ಪೋಷ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ಅವರು ಮಾತಿನಲ್ಲಿ ಏಕತೆಯ ಮಹತ್ವವನ್ನು ಒತ್ತಿಹೇಳುತ್ತಾ  ಸಂದೇಶವನ್ನು ಹಂಚಿಕೊಳ್ಳಲು ವೀಕ್ಷಕರನ್ನು ಪ್ರೋತ್ಸಾಹಿಸಿದ್ದಾರೆ. ೮೦ ಪ್ರತಿಶತ ಮತ್ತು ೨೦ ಪ್ರತಿಶತದ ಉಲ್ಲೇಖವನ್ನು ಕ್ರಮವಾಗಿ ಹಿಂದೂ ಮತ್ತು ಮುಸ್ಲಿಂ ಜನಸಂಖ್ಯೆಯ ವ್ಯಾಖ್ಯಾನ ಎಂದು ವ್ಯಾಖ್ಯಾನಿಸಲಾಗಿದೆ, ಅಲ್ಪಸಂಖ್ಯಾತರ ಕ್ರಮಗಳ ವಿರುದ್ಧ ಬಹುಸಂಖ್ಯಾತರು ಒಂದಾಗಬೇಕು ಎಂದು ಸೂಚಿಸುತ್ತದೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಹಿಂದಿಯಲ್ಲಿ ಬರೆದ ಪೋಷ್ಟ್ ನ ಶೀರ್ಹಿಕೆ ಹೀಗೆ ಹೇಳುತ್ತದೆ, ಮುಸ್ಲಿಂ ತುಷ್ಟೀಕರಣದ ನೀತಿಗಳಿಂದಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸರ್ಕಾರವನ್ನು ಕಾಂಗ್ರೆಸ್‌ನೊಂದಿಗೆ ಬದಲಾಯಿಸಲು ಹಿಂದೂಗಳು ವಿಷಾದಿಸುತ್ತಿದ್ದಾರೆ ಎಂದು ಅದು ಸೂಚಿಸುತ್ತದೆ. ಈ ಘಟನೆ ನಡೆದಿರುವುದು ಕರ್ನಾಟಕದಲ್ಲಿ ಮತ್ತು ಅದನ್ನು ಮುಸ್ಲಿಮರು ಮಾಡಿದ್ದಾರೆ ಎಂದು ಪೋಷ್ಟ್ ನಲ್ಲಿ ಹೇಳಲಾಗಿದೆ. ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಇನ್‌ಸ್ಟಾಗ್ರಾಮ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)


ಆದರೆ , ವೈರಲ್ ವೀಡಿಯೋ ವಾಸ್ತವವಾಗಿ ಜನವರಿ ೨೦೨೪ ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸುವುದನ್ನು ತೋರಿಸುತ್ತದೆ, ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ  ಘರ್ಷಣೆ.  

ನಾವು ಕಂಡುಕೊಂಡಿದ್ದು ಏನು?

ಕರ್ನಾಟಕದಲ್ಲಿ ಪ್ರತಿಮೆ ಧ್ವಂಸಗೊಳಿಸುವಿಕೆಯ ಬಗ್ಗೆ ಇತ್ತೀಚಿನ ಸುದ್ದಿ ವರದಿಗಳಿಗಾಗಿ ನಮ್ಮ ಹುಡುಕಾಟವು ಯಾವುದೇ ಸಂಬಂಧಿತ ಫಲಿತಾಂಶಗಳನ್ನು ನೀಡಲಿಲ್ಲ.

ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಜನವರಿ ೨೬, ೨೦೨೪ ರಂದು  ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ವರದಿಯನ್ನು ಬಹಿರಂಗಪಡಿಸಿತು. ವರದಿಯ ಶೀರ್ಷಿಕೆ, "ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸರ್ದಾರ್ ಪಟೇಲ್ ಪ್ರತಿಮೆ ಧ್ವಂಸ; ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದವು." ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಪಟೇಲರ ಪ್ರತಿಮೆಯನ್ನು ಉರುಳಿಸಿದ ನಂತರ ಎರಡು ಗುಂಪುಗಳ ನಡುವಿನ ಘರ್ಷಣೆಯನ್ನು ಲೇಖನವು ವಿವರಿಸಿದೆ. ಪಟೇಲ್ ಹಾಗೂ ಡಾ.ಭೀಮ್ ರಾವ್ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಸಂಘರ್ಷ ಏರ್ಪಟ್ಟಿತ್ತು ಎಂದು ಹೇಳಲಾಗಿದೆ.

ವರದಿಯ ಪ್ರಕಾರ ಒಂದು ಗುಂಪು ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲು ಮತ್ತೊಂದು ಗುಂಪು ಯೋಜಿಸಿದ ಸ್ಥಳದಲ್ಲಿ ಪಟೇಲ್ ಪ್ರತಿಮೆಯನ್ನು ಸ್ಥಾಪಿಸಿತು. ಉದ್ವಿಗ್ನತೆ ಉಲ್ಬಣಗೊಂಡು, ಕಲ್ಲು ತೂರಾಟ ಮತ್ತು ಪೋಲೀಸರ ಮಧ್ಯಸ್ಥಿಕೆಗೆ ಕಾರಣವಾಯಿತು. ವರದಿಯು ಘಟನೆಯ ವೀಡಿಯೋವನ್ನು ಒಳಗೊಂಡಿದೆ.


ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ನೊಂದಿಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಸ್ಕ್ರೀನ್‌ಶಾಟ್. (ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್)

ಪಟೇಲ್ ಪ್ರತಿಮೆಯನ್ನು ಜನವರಿ ೨೪ ರಂದು ಮಕ್ಡೋನ್ ಗ್ರಾಮದಲ್ಲಿ ಪಾಟಿದಾರ್ ಸಮುದಾಯದವರು ಸ್ಥಾಪಿಸಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಜನವರಿ ೨೫ ರಂದು ಬೆಳಿಗ್ಗೆ, ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯವನ್ನು ಪ್ರತಿನಿಧಿಸುವ ಭೀಮ್ ಆರ್ಮಿಗೆ ಸಂಬಂಧಿಸಿದ ಗುಂಪು ಪ್ರತಿಮೆಯನ್ನು ಧ್ವಂಸಗೊಳಿಸಿತು. ಭೀಮ್ ಆರ್ಮಿ ಸಾರ್ವಜನಿಕ ಚೌಕದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಪ್ರತಿಪಾದಿಸುತ್ತಿತ್ತು. ವೈರಲ್ ವೀಡಿಯೋದಲ್ಲಿ ಕಂಡುಬರುವಂತೆ ಪಟೇಲ್ ಪ್ರತಿಮೆಗೆ ಜನರು ಕಲ್ಲು ಎಸೆಯುತ್ತಿರುವ ಚಿತ್ರಗಳನ್ನು ವರದಿ ಒಳಗೊಂಡಿದೆ.

ವಿಧ್ವಂಸಕ ಕೃತ್ಯದ ನಂತರ, ಎರಡು ಗುಂಪುಗಳ ನಡುವೆ ಘರ್ಷಣೆಗಳು ಭುಗಿಲೆದ್ದವು, ಕಲ್ಲು ತೂರಾಟ, ಬೆತ್ತದ ದಾಳಿಗಳು, ಧ್ವಂಸಗೊಳಿಸಿದ ಅಂಗಡಿಗಳು ಮತ್ತು ವಾಹನಗಳನ್ನು ಸುಟ್ಟುಹಾಕಲಾಯಿತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸಬ್ ಇನ್ಸ್ ಪೆಕ್ಟರ್ ಹಾಗೂ ಕೆಲ ಸ್ಥಳೀಯರು ಗಾಯಗೊಂಡಿದ್ದರು.

ಟೈಮ್ಸ್ ನೌ ನವಭಾರತ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಘಟನೆಯನ್ನು ವರದಿ ಮಾಡಿದ್ದು, ಯೂಟ್ಯೂಬ್‌ನಲ್ಲಿ ಪ್ರತಿಮೆಯ ಧ್ವಂಸದ ದೃಶ್ಯಗಳನ್ನು ಹಂಚಿಕೊಂಡಿದೆ ಮತ್ತು ಉಜ್ಜಯಿನಿಯಲ್ಲಿನ ಪ್ರತಿಮೆ ಸ್ಥಾಪನೆಗಳ ಸುತ್ತಲಿನ ಉದ್ವಿಗ್ನತೆಯನ್ನು ಚರ್ಚಿಸಿದೆ.


ಟೈಮ್ಸ್ ನೌ ನವ ಭಾರತ್ ಅಪ್‌ಲೋಡ್ ಮಾಡಿದ ವೀಡಿಯೋದೊಂದಿಗೆ  ವೈರಲ್ ವೀಡಿಯೋದ ಹೋಲಿಕೆ. 
(ಮೂಲ: ಎಕ್ಸ್/ಯೂಟ್ಯೂಬ್)

ಎಎಸ್ಪಿ  ಗುರು ಪ್ರಸಾದ್ ಪರಾಶರ್ ಅವರ ಹೇಳಿಕೆಯು ಜನವರಿ ೨೫, ೨೦೨೪ ರಂದು ಎಎನ್ಐ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಷ್ಟ್ ಮಾಡಲ್ಪಟ್ಟಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಮತ್ತು ಘಟನೆಯನ್ನು ವಿವರಿಸಲಾಗಿದೆ. ಪರಾಶರ್ ಅವರು, "ಕೃಷಿ ಉಪಜ್ ಮಂಡಿ ಛೇದಕದಲ್ಲಿ ಸ್ಥಾಪಿಸಲಾದ ಗಣ್ಯ ನಾಯಕರ ಪ್ರತಿಮೆಯನ್ನು ನಿರ್ದಿಷ್ಟ ಸಮುದಾಯದ ವ್ಯಕ್ತಿಗಳು ಇಂದು ಧ್ವಂಸಗೊಳಿಸಿದ್ದಾರೆ. ಇದು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಪರಿಸ್ಥಿತಿ ಸಹಜವಾಗಿದೆ. ಘಟನೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಗಾಯಗೊಂಡಿದ್ದಾರೆ. ನಿರ್ಲಕ್ಷ್ಯದ ಕಾರಣಕ್ಕಾಗಿ ಮ್ಯಾಕ್ಡೋನ್ ಪಿಎಸ್ ಉಸ್ತುವಾರಿಯನ್ನು ಅಮಾನತುಗೊಳಿಸಲಾಗಿದೆ.


ಎಎನ್ಐ ನ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್)


ಎನ್ ಡಿಟಿವಿ  ಮಧ್ಯಪ್ರದೇಶದ ನಂತರದ ವರದಿಯು ಕಲೆಕ್ಟರ್ ನೀರಜ್ ಕುಮಾರ್ ಸಿಂಗ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಚಿನ್ ಶರ್ಮಾ ನಡುವಿನ ಸಭೆಯು ಒಪ್ಪಂದಕ್ಕೆ ಕಾರಣವಾಯಿತು ಎಂದು ಗಮನಿಸಿದೆ: ಅಂಬೇಡ್ಕರ್ ಪ್ರತಿಮೆಯನ್ನು ಅಂಬೇಡ್ಕರ್ ಬಸ್ ನಿಲ್ದಾಣದಲ್ಲಿ ಮತ್ತು ಪಟೇಲ್ ಪ್ರತಿಮೆಯನ್ನು ಮಂಡಿ ಚೌಕ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.

ವೈರಲ್ ವೀಡಿಯೋ ಉಜ್ಜಯಿನಿಯಲ್ಲಿ ಜನವರಿ ೨೦೨೪ ರಂದು ನಡೆದ ಹಳೆಯ ಘಟನೆಯನ್ನು ಚಿತ್ರಿಸುತ್ತದೆ ಎಂದು ಸ್ಥಳೀಯ ವರದಿಗಾರ ವಿಜಯ್ ಯಾದವ್ ಲಾಜಿಕಲಿ ಫ್ಯಾಕ್ಟ್ಸ್‌ಗೆ ದೃಢಪಡಿಸಿದರು. ಈ ಘರ್ಷಣೆಯಲ್ಲಿ ಎರಡು ಸಮುದಾಯಗಳು ಪಟೇಲ್ ಮತ್ತು ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ವಿವಾದವನ್ನು ಒಳಗೊಂಡಿದ್ದು, ಅಂಬೇಡ್ಕರ್ ಅವರ ಪ್ರತಿಮೆಯನ್ನು ಬೆಂಬಲಿಸುವ ಗುಂಪಿನಿಂದ ಪಟೇಲ್ ಪ್ರತಿಮೆಯನ್ನು ಕೆಡವಲಾಯಿತು. ಘಟನೆಯಲ್ಲಿ ಯಾವುದೇ ಕೋಮು ಕೋನ ಒಳಗೊಂಡಿಲ್ಲ ಎಂದು ಯಾದವ್ ಒತ್ತಿ ಹೇಳಿದರು.

ತೀರ್ಪು

ಈ ವೀಡಿಯೋ ಮಧ್ಯಪ್ರದೇಶದ ಉಜ್ಜಯಿನಿಯಿಂದ ಬಂದಿದೆ, ಕರ್ನಾಟಕದ್ದಲ್ಲ. ಜನವರಿ ೨೦೨೪ ರಲ್ಲಿ, ಪಟೇಲ್ ಮತ್ತು ಡಾ. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಾಪಿಸುವ ವಿಷಯದಲ್ಲಿ ಎರಡು ಗುಂಪುಗಳು ಘರ್ಷಣೆಯಾಗಿ ಪಟೇಲ್ ಅವರ ಪ್ರತಿಮೆಯನ್ನು ಉರುಳಿಸಲು ಕಾರಣವಾಯಿತು. ಈ ಘಟನೆಯಲ್ಲಿ ಕೋಮು ನಿರೂಪಣೆ ಇಲ್ಲ ಬದಲಾಗಿ ವಿವಿಧ ರಾಜಕೀಯ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸುವ ಪೈಪೋಟಿಯಾಗಿತ್ತು.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ