ಮುಖಪುಟ ಹೆಜ್ಬೊಲ್ಲಾ-ಇಸ್ರೇಲ್ ಸಂಘರ್ಷದ ದೃಶ್ಯಗಳೆಂದು ಸಂಬಂಧವಿಲ್ಲದ ಕ್ಲಿಪ್‌ಗಳನ್ನು ಹಂಚಿಕೊಳ್ಳಲಾಗಿದೆ

ಹೆಜ್ಬೊಲ್ಲಾ-ಇಸ್ರೇಲ್ ಸಂಘರ್ಷದ ದೃಶ್ಯಗಳೆಂದು ಸಂಬಂಧವಿಲ್ಲದ ಕ್ಲಿಪ್‌ಗಳನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಇಶಿತಾ ಗೋಯಲ್ ಜೆ

ಸೆಪ್ಟೆಂಬರ್ 30 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಚಿತ್ರವು ಸಾಮಾಜಿಕ ಮಾಧ್ಯಮ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೋರಿಸುತ್ತದೆ, ವೀಡಿಯೋವು ಇಸ್ರೇಲ್‌ನ ಮೇಲೆ ಹೆಜ್ಬೊಲ್ಲಾ ದಾಳಿಯನ್ನು ತೋರಿಸುತ್ತದೆ ಎಂದು ತಪ್ಪಾಗಿ ಹೇಳುತ್ತದೆ. ಇಸ್ರೇಲ್ ಮೇಲೆ ಹೆಜ್ಬೊಲ್ಲಾ ದಾಳಿಯನ್ನು ತೋರಿಸಲು ತಪ್ಪಾಗಿ ಹೇಳಿಕೊಳ್ಳುವ ಸಾಮಾಜಿಕ ಮಾಧ್ಯಮ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಅಲ್ಜೀರ್ಸ್‌ನಲ್ಲಿ ಫುಟ್‌ಬಾಲ್ ಕ್ಲಬ್‌ನ ಸಂಭ್ರಮಾಚರಣೆಯನ್ನು ಮತ್ತು ಇಂಡೋನೇಷ್ಯಾದ ಮಾರುಕಟ್ಟೆಯೊಂದರಲ್ಲಿ ಸಂಭವಿಸಿದ ಬೆಂಕಿಯನ್ನು ತಪ್ಪು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಹೇಳಿಕೆ ಏನು?

ಇಸ್ರೇಲ್ ಮತ್ತು ಲೆಬನಾನ್ ಮೂಲದ  ಹೆಜ್ಬೊಲ್ಲಾ ನಡುವಿನ ಇತ್ತೀಚಿನ ಉಲ್ಬಣಗಳು ಮತ್ತು ದಾಳಿಗಳು, ಸಾಮಾಜಿಕ ಮಾಧ್ಯಮದ ಪೋಷ್ಟ್ ಗಳ ಉಲ್ಬಣಕ್ಕೆ ಕಾರಣವಾಗಿವೆ. ಎರಡು ವೀಡಿಯೋ ಗಳನ್ನು ಒಟ್ಟಿಗೆ ಸೇರಿಸುವ ಮೂಲಕ ರಚಿಸಲಾದ ಅಂತಹ ಒಂದು ವೀಡಿಯೋ, ಇಸ್ರೇಲ್ ಮತ್ತು ದೇಶದ ರಾಜ್ಯದ ಮೇಲೆ ಹೆಜ್ಬೊಲ್ಲಾದ ದಾಳಿಯನ್ನು ತೋರಿಸುತ್ತದೆ ಎಂದು ಹೇಳಲಾಗುತ್ತಿದೆ. ಮೊದಲ ಭಾಗವು ಆಕಾಶದಲ್ಲಿ ಬೆಂಕಿಯ ಚೆಂಡುಗಳಂತೆ ಗೋಚರಿಸುವ ಪ್ರಕಾಶಮಾನವಾದ ಪಟಾಕಿಗಳನ್ನು ಹೊಂದಿದೆ ಮತ್ತು ಎರಡನೇ ಭಾಗದಲ್ಲಿ, ದೊಡ್ಡ ಪ್ರದೇಶವು ಬೆಂಕಿಯಲ್ಲಿದೆ. ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್), ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ "ಹೆಜ್ಬೊಲ್ಲಾ ಇಸ್ರೇಲ್ ಅನ್ನು ಇಸ್ರಾ-ನರಕಕ್ಕೆ ತಿರುಗಿಸಿದರು" ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಪೋಷ್ಟ್‌ಗೆ ಆರ್ಕೈವ್‌ಗಳು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿವೆ

ಅಲ್ಲದೆ, ಹೆಜ್ಬೊಲ್ಲಾಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿರುವ ವಸತಿ ಪ್ರದೇಶದ ಮೇಲೆ ಇಸ್ರೇಲ್ ದಾಳಿ ಮಾಡುವುದನ್ನು ತೋರಿಸುವ ಸನ್ನಿವೇಶದಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಅಂತಹ ಪೋಷ್ಟ್‌ನ ಆರ್ಕೈವ್ ಅನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವಾಸ್ತವಾಂಶಗಳೇನು?

ರಿವರ್ಸ್ ಇಮೇಜ್ ಸರ್ಚ್ ಅನ್ನು ಬಳಸಿಕೊಂಡು, ಎರಡೂ ಕ್ಲಿಪ್‌ಗಳು ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಇತ್ತೀಚಿನ ದಾಳಿಯ ವಿನಿಮಯಕ್ಕೆ ಸಂಬಂಧಿಸಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ.

ಕ್ಲಿಪ್ ೧: ಆಕಾಶದಲ್ಲಿ ಪಟಾಕಿ

ರಿಸರ್ಚ್ ಇಮೇಜ್ ಸರ್ಚ್ ಯೂಟ್ಯೂಬ್‌ನಲ್ಲಿ ಆಗಸ್ಟ್ ೯, ೨೦೨೪ ರಂದು ಪೋಷ್ಟ್ ಮಾಡಲಾದ ವಿಭಿನ್ನ ಕೋನದಿಂದ ತೆಗೆದ ಇದೇ ರೀತಿಯ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹೊಂದಿದ್ದು,  ಶೀರ್ಷಿಕೆ ಅರೇಬಿಕ್‌ನಲ್ಲಿ ಹೀಗೆ ಇದೆ: "ಮೌಲೌಡಿಯಾ ಅಲ್ಜೀರ್ಸ್ ಬೆಂಬಲಿಗರು ಡೀನ್ ಸ್ಥಾಪನೆಯ ೧೦೩ ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಾರೆ." (ಗೂಗಲ್ ಅನುವಾದವನ್ನು ಬಳಸಿ ಅನುವಾದಿಸಲಾಗಿದೆ)

ವೈರಲ್ ವೀಡಿಯೋ ಮತ್ತು ಯೂಟ್ಯೂಬ್ ವೀಡಿಯೋ ಹೋಲಿಸಿದಾಗ ಎರಡರಲ್ಲೂ ಹಸಿರು ಟೀ ಶರ್ಟ್, ರಸ್ತೆ, ಕಟ್ಟಡ, ಕಂಬದ ಮೇಲಿರುವ ಗಡಿಯಾರ, ಪಟಾಕಿ ಸಿಡಿಸುವ ವ್ಯಕ್ತಿಯನ್ನುಕಾಣಬಹುದು.

ಆಲ್ಜೀರಿಯನ್ ಫುಟ್ಬಾಲ್ ಕ್ಲಬ್ ಮೌಲೌಡಿಯಾ ಕ್ಲಬ್ ಡಿ'ಅಲ್ಗರ್ (MCA) ನ ೧೦೩ ನೇ ವಾರ್ಷಿಕೋತ್ಸವವನ್ನು ವಿವರಿಸುವ, ಪೈರೋಟೆಕ್ನಿಕ್ ಪ್ರದರ್ಶನದಿಂದ ಗುರುತಿಸಲಾದ ಆಗಸ್ಟ್ ೨೪ ರಂದು ಯೂಟ್ಯೂಬ್ ನಲ್ಲಿ ಪೋಷ್ಟ್ ಮಾಡಲಾದ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಾವು ಕಂಡುಕೊಂಡಿದ್ದೇವೆ.

ಅಲ್ಜಿಯರ್ಸ್‌ನಲ್ಲಿರುವ ಎಲ್ ಬಿಲಾಡ್ ಎಂಬ ಸುದ್ದಿ ವೆಬ್‌ಸೈಟ್ ಕೂಡ ಆಚರಣೆಯ ಚಿತ್ರವನ್ನು ಹಂಚಿಕೊಂಡಿದೆ ಮತ್ತು ಆಲ್ಜೀರ್ಸ್‌ನಲ್ಲಿರುವ ಫುಟ್‌ಬಾಲ್ ಕ್ಲಬ್‌ನ ಅಭಿಮಾನಿಗಳು ಕ್ಲಬ್ ಸ್ಥಾಪನೆಯ ೧೦೩ ನೇ ವಾರ್ಷಿಕೋತ್ಸವವನ್ನು ಆಗಸ್ಟ್ ೮, ೨೦೨೪ ರಂದು ಆಚರಿಸಿದ್ದಾರೆ ಎಂದು ಬರೆದಿದ್ದಾರೆ. ರಾಜಧಾನಿಯ ಆಕಾಶವು ಪಟಾಕಿಗಳೊಂದಿಗೆ ಬೆಳಗಿದೆ ಎಂದು ಅವರು ವರದಿ ಮಾಡಿದ್ದಾರೆ.

ಕ್ಲಿಪ್ ೨: ದೊಡ್ಡ ಪ್ರದೇಶದಲ್ಲಿ ಬೆಂಕಿ

ರಿವರ್ಸ್ ಇಮೇಜ್ ಸರ್ಚ್ ಮೂಲಕ, ಈ ವೀಡಿಯೋವನ್ನು ಆಗಸ್ಟ್ ೨೨, ೨೦೨೪ ರಂದು ಸ್ಥಳೀಯ ಸುದ್ದಿ ಪೋರ್ಟಲ್‌ನ ಇನ್ಸ್ಟಾಗ್ರಾಮ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಖಾತೆಯಲ್ಲಿ ಪೋಷ್ಟ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಮಲಯ ಭಾಷೆಯಲ್ಲಿ ಬರೆಯಲಾದ ಪೋಷ್ಟ್, ದೇಸಾ ಬೆನುವಾ ಬರುವಿನ ಸಾಂಗ್ಕುಲಿರಾಂಗ್ ಮಾರ್ಕೆಟ್ ಸ್ಥಳದಲ್ಲಿ ಬೆಂಕಿಯನ್ನು ತೋರಿಸಿದೆ ಎಂದು ಹೇಳಿದೆ. ನಾವು ೦:೦೩ ಮತ್ತು ೦:೦೨೧ ಟೈಮ್‌ಸ್ಟ್ಯಾಂಪ್‌ಗಳ ನಡುವಿನ ದೃಶ್ಯಗಳನ್ನು ವೈರಲ್ ವೀಡಿಯೋಗೆ ಹೊಂದಿಕೆ ಮಾಡಿದೆವು.

ಇನ್‌ಸ್ಟಾಗ್ರಾಮ್‌ನಲ್ಲಿ ಕಂಡುಬರುವ ವೀಡಿಯೋ ಬೆಂಕಿಯನ್ನು ತೋರಿಸುತ್ತದೆ. (ಮೂಲ: Kabar.kutim/ಸ್ಕ್ರೀನ್‌ಶಾಟ್)

ಸ್ಥಳೀಯ ಸುದ್ದಿ ಪೋರ್ಟಲ್ ಬೊಂಟಾಂಗ್ ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಆಗಸ್ಟ್ ೨೨ ರಂದು ಫೇಸ್‌ಬುಕ್‌ನಲ್ಲಿ ಪೋಷ್ಟ್ ಮಾಡಿದ ವೀಡಿಯೋವನ್ನು ಸಹ ನಾವು ಕಂಡುಕೊಂಡಿದ್ದೇವೆ, ಅದು ಇದೇ ರೀತಿಯ ದೃಶ್ಯಗಳನ್ನು ಹೊಂದಿದೆ. ಇಂಡೋನೇಷ್ಯಾದ ಪೂರ್ವ ಕುಟೈ, ಸಾಂಗ್ಕುಲಿರಾಂಗ್ ಜಿಲ್ಲೆಯ ಬೆನುವಾ ಬರು ಇಲಿರ್ ಗ್ರಾಮದ ಸಾಂಗ್ಕುಲಿರಾಂಗ್ ಮಾರುಕಟ್ಟೆಯಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ ಎಂದು ಮಲಯ್ ಭಾಷೆಯಲ್ಲಿ ವರದಿ ಹೇಳಿದೆ. 

ಇಂಡೋನೇಷ್ಯಾದ ಮತ್ತೊಂದು ಆನ್‌ಲೈನ್ ನ್ಯೂಸ್ ಪೋರ್ಟಲ್, ಡೆಟಿಕ್, ಬೆಂಕಿಯಿಂದ ಮಾರುಕಟ್ಟೆಯಲ್ಲಿ ಸುಮಾರು ೩೫೦ ಮಳಿಗೆಗಳು ಸುಟ್ಟುಹೋಗಿವೆ ಎಂದು ವರದಿ ಮಾಡಿದೆ. ಜತೆಗೆ ಮಾರುಕಟ್ಟೆಯ ಸುತ್ತಮುತ್ತಲಿನ ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ. ಬೆಂಕಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ.

ಇಸ್ರೇಲ್-ಹೆಜ್ಬೊಲ್ಲಾ ಸಂಘರ್ಷ

ಸೆಪ್ಟೆಂಬರ್ ೧೭ ರಿಂದ ಇಸ್ರೇಲ್ ಮತ್ತು ಲೆಬನಾನ್‌ನ ಹೆಜ್ಬೊಲ್ಲಾ ನಡುವೆ ಸರಣಿ ದಾಳಿಗಳು ನಡೆದಿವೆ. ಸೆಪ್ಟೆಂಬರ್ ೨೩ ರಂದು ಇಸ್ರೇಲ್ ಲೆಬನಾನ್ ಮೇಲೆ ದಾಳಿ ಮಾಡುವುದರೊಂದಿಗೆ ಇತ್ತೀಚಿನ ದಾಳಿ ಸಂಭವಿಸಿದೆ, ವರದಿಯ ಪ್ರಕಾರ ವೈಮಾನಿಕ ದಾಳಿಯ ತೀವ್ರ ವಾಗ್ದಾಳಿಯನ್ನು ಪ್ರಾರಂಭಿಸಿತು. ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪಿನ ಮೇಲೆ ಇಸ್ರೇಲ್ ದಾಳಿಯು ಕನಿಷ್ಠ ೨೦೦೬ ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಯುದ್ಧದ ನಂತರ ದೇಶಕ್ಕೆ ಮಾರಣಾಂತಿಕ ದಿನವಾಗಿದೆ ಎಂದು ಸಿಏನ್ಏನ್ (CNN) ವರದಿ ಮಾಡಿದೆ.

ತೀರ್ಪು

ವೈರಲ್ ವೀಡಿಯೋ ನಡೆಯುತ್ತಿರುವ ಹೆಜ್ಬೊಲ್ಲಾ-ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿಲ್ಲ. ಅಲ್ಜೀರ್ಸ್‌ನಲ್ಲಿನ ಫುಟ್‌ಬಾಲ್ ಕ್ಲಬ್‌ನ ವಾರ್ಷಿಕೋತ್ಸವದ ಆಚರಣೆಯ ತುಣುಕುಗಳು ಮತ್ತು ಇಂಡೋನೇಷ್ಯಾದ ಮಾರುಕಟ್ಟೆಯೊಂದರಲ್ಲಿ ಬೆಂಕಿಯ ವೀಡಿಯೋವನ್ನು ಇಸ್ರೇಲ್‌ನ ಮೇಲಿನ ದಾಳಿ ಎಂದು ತಪ್ಪಾಗಿ ಬಿಂಬಿಸಲಾಗಿದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ