ಮುಖಪುಟ ಮಹಿಳೆಯು ವಿಮಾನದಲ್ಲಿ ಭಕ್ತಿಗೀತೆ ಹಾಡುತ್ತಿರುವ ವೀಡಿಯೋಗೆ ತಪ್ಪಾದ ಕೋಮು ನಿರೂಪಣೆ ನೀಡಲಾಗಿದೆ

ಮಹಿಳೆಯು ವಿಮಾನದಲ್ಲಿ ಭಕ್ತಿಗೀತೆ ಹಾಡುತ್ತಿರುವ ವೀಡಿಯೋಗೆ ತಪ್ಪಾದ ಕೋಮು ನಿರೂಪಣೆ ನೀಡಲಾಗಿದೆ

ಮೂಲಕ: ರಜಿನಿ ಕೆ.ಜಿ

ಸೆಪ್ಟೆಂಬರ್ 11 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮುಸ್ಲಿಂ ವ್ಯಕ್ತಿ ವಿಮಾನದಲ್ಲಿ ನಮಾಜ್ ಮಾಡಿದ ಪ್ರತಿಯಾಗಿ ಹಿಂದೂ ಮಹಿಳೆ ಭಕ್ತಿಗೀತೆಯನ್ನು ಹಾಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ ಅನ್ನು ಈ ಚಿತ್ರವು ತೋರಿಸುತ್ತದೆ. ಮುಸ್ಲಿಂ ವ್ಯಕ್ತಿ ವಿಮಾನದಲ್ಲಿ ನಮಾಜ್ ಮಾಡಿದ ಪ್ರತಿಯಾಗಿ ಹಿಂದೂ ಮಹಿಳೆಯು 'ನಮೋ ನಮೋ ಶಂಕರ' ಹಾಡನ್ನು ಹಾಡಿರುವ ಎಂದು ಹೇಳುವ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಅಂತಾರಾಷ್ಟ್ರೀಯ ಮಹಿಳಾ ದಿನದಂದು ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಭಕ್ತಿಗೀತೆ ಗಾಯಕಿ ನಿಶಾ ಶಿವದಾಸನಿಯವರು ಹಾಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ.

ಹೇಳಿಕೆ ಏನು?

ವಿಮಾನದೊಳಗೆ ಬಿಳಿ ಕೋಟ್ ಮತ್ತು ಗುಲಾಬಿ ಶರ್ಟ್‌ನಲ್ಲಿ ಮಹಿಳೆಯೊಬ್ಬರು ಚಪ್ಪಾಳೆ ತಟ್ಟುವ ಮತ್ತು ಹಾಡುವ ವೀಡಿಯೋ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ, ಇದು ಮುಸ್ಲಿಂ ವ್ಯಕ್ತಿಯೊಬ್ಬರು ವಿಮಾನದೊಳಗೆ ನಮಾಜ್ ಅಥವಾ ಇಸ್ಲಾಮಿಕ್ ಪ್ರಾರ್ಥನೆ ಸಲ್ಲಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಹಾಡಲಾಗಿತ್ತು ಎಂದು ಹೇಳಲಾಗಿದೆ. 'ಕೇದಾರನಾಥ್' ಹಿಂದಿ ಚಲನಚಿತ್ರದ 'ನಮೋ ನಮೋ ಶಂಕರ’ ಹೆಸರಿನ ಹಾಡನ್ನು ಮಹಿಳೆ ಹಾಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಮತ್ತು ಕ್ಯಾಬಿನ್ ಸಿಬ್ಬಂದಿ ಮಹಿಳೆಯನ್ನು ರೆಕಾರ್ಡ್ ಮಾಡುತ್ತಿರುವುದನ್ನು ತೋರಿಸುತ್ತದೆ.

ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ, "ವಿಮಾನದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ನಮಾಜ್ ಪ್ರಾರಂಭಿಸಿದರು, ಹಿಂದೂ ಮಹಿಳೆ ನಮೋ ನಮೋ ಶಂಕರ ಭಜನೆ ಹಾಡಲು ಪ್ರಾರಂಭಿಸಿದರು... ಈ ಧೈರ್ಯಶಾಲಿ ಸನಾತನ ಸಿಂಹಿಣಿಗೆ ನಮಸ್ಕಾರಗಳು... ದಯವಿಟ್ಟು ಇದನ್ನು ಗರಿಷ್ಠವಾಗಿ ಹಂಚಿಕೊಳ್ಳಿ (sic)." ಪೋಷ್ಟ್ ೩೬,೦೦೦ ಲೈಕ್ಸ್ ಮತ್ತು ೮,೦೦೦ ಮರುಪೋಷ್ಟ್ ಹೊಂದಿತ್ತು. ಇದೇ ರೀತಿಯ ಫೇಸ್‌ಬುಕ್‌ ಪೋಷ್ಟ್ ಗಳ ಆರ್ಕೈವ್ ಅನ್ನು ಇಲ್ಲಿ, ಇಲ್ಲಿ, ಮತ್ತು ಇಲ್ಲಿ ಕಾಣಬಹುದು.



ಸಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್ . 
(ಮೂಲ: ಎಕ್ಸ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)


ಆದರೆ, ವೀಡಿಯೋ ಮಾರ್ಚ್ ೨೦೨೪ ರದ್ದು ಮತ್ತು ೨೦೨೪ ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಭಕ್ತಿ ಗಾಯಕ ಹಾಡುವುದನ್ನು ತೋರಿಸುತ್ತದೆ.

ವಾಸ್ತವಾಂಶಗಳು ಇಲ್ಲಿವೆ

ರಿವರ್ಸ್ ಇಮೇಜ್ ಸರ್ಚ್ ಮೂಲಕ, ವೀಡಿಯೋದಲ್ಲಿ ಹಾಡುತ್ತಿರುವ ಮಹಿಳೆ ಕಲಾವಿದೆ ಮತ್ತು ಭಕ್ತಿ ಗಾಯಕಿ ನಿಶಾ ಶಿವದಾಸನಿ ಎಂದು ನಾವು ಕಂಡುಕೊಂಡಿದ್ದೇವೆ. ಮಾರ್ಚ್ ೮, ೨೦೨೪ ರಂದು ಅಪ್‌ಲೋಡ್ ಮಾಡಲಾದ ಶಿವದಾಸನಿಯವರ ಯೂಟ್ಯೂಬ್ ಚಾನೆಲ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಿ) ಈ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. "ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು ೨೦೨೪ | ನಿಶಾ ಶಿವದಾಸನಿ | ಇಂಡಿಗೋ ಏರ್‌ಲೈನ್‌ಗೆ ಧನ್ಯವಾದಗಳು" ಎಂದು ಶೀರ್ಷಿಕೆ ನೀಡಲಾಗಿದೆ. ವೀಡಿಯೋದಲ್ಲಿ, ಅವರು ಇತರ ಪ್ರಯಾಣಿಕರಿಗೆ ತನ್ನನ್ನು ಪರಿಚಯಿಸಿಕೊಂಡಿದ್ದಾರೆ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನದಂದು ಶುಭಾಶಯಗಳನ್ನು ತಿಳಿಸಿದ್ದಾರೆ. 

ನಾವು ವೈರಲ್ ವೀಡಿಯೋವನ್ನು ಹೋಲಿಸಿದ್ದೇವೆ ಮತ್ತು ನಿಶಾ ಅವರ ಉಡುಗೆ ವೈರಲ್ ವೀಡಿಯೋಗೆ ಹೊಂದಿಕೆಯಾಗುತ್ತಿದೆ. ಈ ವೀಡಿಯೋ ಮತ್ತು ವೈರಲ್ ವೀಡಿಯೋದಲ್ಲಿ ಕೆಂಪು ಟೋಪಿಯಲ್ಲಿ ಒಬ್ಬ ವ್ಯಕ್ತಿ ಕುಳಿತಿರುವುದನ್ನು ನಾವು ಗುರುತಿಸಬಹುದು.

ಯೂಟ್ಯೂಬ್ ವೀಡಿಯೋದೊಂದಿಗೆ ವೈರಲ್ ಕ್ಲಿಪ್ ನ ಹೋಲಿಕೆ. (ಮೂಲ: ಯೂಟ್ಯೂಬ್)

ಇತ್ತೀಚಿಗೆ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ನಮಾಜ್ ಮಾಡಿದ ಬಗ್ಗೆ ನಮಗೆ ಯಾವುದೇ ಪುರಾವೆಗಳು ಅಥವಾ ವರದಿಗಳು ಕಂಡುಬಂದಿಲ್ಲ. ಲಾಜಿಕಲಿ ಫ್ಯಾಕ್ಟ್ಸ್ ಕಾಮೆಂಟ್‌ಗಾಗಿ ಇಂಡಿಗೋ ಏರ್‌ಲೈನ್ಸ್ ಅನ್ನು ಸಂಪರ್ಕಿಸಿದೆ. ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ಚೆಕ್ ಅನ್ನು ನವೀಕರಿಸಲಾಗುತ್ತದೆ. 

ತೀರ್ಪು

೨೦೨೪ ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಭಕ್ತಿಗೀತೆ ಹಾಡುವ ಆರು ತಿಂಗಳ ಹಳೆಯ ವೀಡಿಯೋವನ್ನು ಅವರು ಮುಸ್ಲಿಂ ವ್ಯಕ್ತಿಯೊಬ್ಬರು ವಿಮಾನದಲ್ಲಿ ನಮಾಜ್ ಸಲ್ಲಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಹಾಗೆ ಮಾಡಿದ್ದರು ಎಂಬ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here. 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ