ಮುಖಪುಟ ಸಿರಿಯಾದ ಹಳೆಯ, ಸಂಬಂಧವಿಲ್ಲದ ವೀಡಿಯೋವನ್ನು 'ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಾಳಿ' ಎಂದು ಹಂಚಿಕೊಳ್ಳಲಾಗಿದೆ

ಸಿರಿಯಾದ ಹಳೆಯ, ಸಂಬಂಧವಿಲ್ಲದ ವೀಡಿಯೋವನ್ನು 'ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಾಳಿ' ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ಪ್ರಭಾನು ದಾಸ್

ಸೆಪ್ಟೆಂಬರ್ 4 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಶವದೊಳಗೆ ಟೈಮ್ ಬಾಂಬ್ ಇಟ್ಟು ಇಸ್ರೇಲ್ ಪ್ಯಾಲೆಸ್ಟೀನಿಯನ್ನರ ಮೇಲೆ ದಾಳಿ ಮಾಡಿತು ಎಂದು ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ ಅನ್ನು ಈ ಚಿತ್ರವು ತೋರಿಸುತ್ತದೆ. "ಭಯೋತ್ಪಾದಕ" ಶವದೊಳಗೆ "ಟೈಮ್-ಬಾಂಬ್" ಅನ್ನು ಇರಿಸುವ ಮೂಲಕ ಪ್ಯಾಲೆಸ್ಟೀನಿಯಾದ ಮೇಲೆ ಇಸ್ರೇಲಿ ನಡೆಸಿದ ದಾಳಿಯನ್ನು ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋ ೨೦೧೨ ರದ್ದು, ಮತ್ತು ಇದು ಸಿರಿಯಾದಲ್ಲಿ ವ್ಯಕ್ತಿಯ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಸ್ಫೋಟವನ್ನು ತೋರಿಸುತ್ತದೆ ಎಂದು ವರದಿಯಾಗಿದೆ.

ಹೇಳಿಕೆ ಏನು?

ಎಕ್ಸ್‌ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ ನಲ್ಲಿ ಹಲವಾರು ಪೋಷ್ಟ್ ಗಳು  ಸ್ಫೋಟದ ನಂತರ ಅಂತ್ಯಕ್ರಿಯೆಯ ಮೆರವಣಿಗೆಯಂತೆ ತೋರುವ ಸುಮಾರು ಎರಡು ನಿಮಿಷಗಳ ಅವಧಿಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಪ್ಯಾಲೆಸ್ಟೀನಿಯಾದವರಿಗೆ ಶವವನ್ನು ಮರಳಿ ನೀಡುವ ಮೊದಲು ಇಸ್ರೇಲ್ "ಭಯೋತ್ಪಾದಕ" ದೇಹದೊಳಗೆ "ಟೈಮ್ ಬಾಂಬ್" ಹಾಕುವ ಮೂಲಕ ಪ್ಯಾಲೆಸ್ಟೀನಿಯರ ಮೇಲೆ ದಾಳಿ ನಡೆಸಿದೆ ಎಂದು ಪೋಷ್ಟ್ ಗಳಲ್ಲಿ ಹೇಳಲಾಗಿದೆ.


'ಭಯೋತ್ಪಾದಕ' ಶವದೊಳಗೆ ಟೈಮ್ ಬಾಂಬ್ ಇರಿಸುವ ಮೂಲಕ ಇಸ್ರೇಲ್ ಪ್ಯಾಲೆಸ್ಟೀನಿಯಾದ ಮೇಲೆ ದಾಳಿ ಮಾಡಿದೆ ಎಂದು ಹೇಳುವ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ , ವೀಡಿಯೋ ಹಳೆಯದು ಮತ್ತು ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿಲ್ಲ. ಸುದ್ದಿ ವರದಿಯ ಪ್ರಕಾರ, ವೀಡಿಯೋ ೨೦೧೨ ರದ್ದು ಮತ್ತು ಸಿರಿಯಾದಲ್ಲಿ ಅಂತ್ಯಕ್ರಿಯೆಯ ಮೆರವಣಿಗೆಯ ಸಮಯದಲ್ಲಿ ಸ್ಫೋಟವನ್ನು ತೋರಿಸುತ್ತದೆ. 

ನಾವು ಕಂಡುಕೊಂಡದ್ದು ಏನು?

ವೈರಲ್ ವೀಡಿಯೋದ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಜುಲೈ ೨, ೨೦೧೨ ರಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಎಬಿಸಿ) ನ್ಯೂಸ್‌ನಿಂದ ಪ್ರಕಟಿಸಲಾದ  ೪೪-ಸೆಕೆಂಡ್ ಕ್ಲಿಪ್‌ಗೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಮ್ಮನ್ನು ನಿರ್ದೇಶಿಸಿತು. ವೀಡಿಯೋದ ಶೀರ್ಷಿಕೆ ಹೀಗಿದೆ, "ವೀಡಿಯೋ ತುಣುಕು ಸಿರಿಯಾದ ಡಮಾಸ್ಕಸ್ ಬಳಿ ಶವಸಂಸ್ಕಾರದ ಮೆರವಣಿಗೆಯ ಸಮಯದಲ್ಲಿ ಆದ  ಸ್ಫೋಟವು ತೋರಿಸುತ್ತದೆ."


ಜುಲೈ ೨, ೨೦೧೨ ರಂದು ಎಬಿಸಿ ನ್ಯೂಸ್ ಅಪ್‌ಲೋಡ್ ಮಾಡಿದ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಬಿಸಿ ನ್ಯೂಸ್)

ಅದೇ ವೀಡಿಯೋವನ್ನು ೨೦೧೨ ರಲ್ಲಿ ಎನ್ ಬಿ ಸಿ ನ್ಯೂಸ್ ಕೂಡ ಪ್ರಕಟಿಸಿದೆ. ಸಿಎನ್ಎನ್  ಮತ್ತು    ಲಾಸ್ ಏಂಜಲೀಸ್ ಟೈಮ್ಸ್‌ನ ಸುದ್ದಿ ವರದಿಗಳನ್ನೂ ಸಹ ನಾವು ಕಂಡುಕೊಂಡಿದ್ದೇವೆ ಅವು ವೈರಲ್  ದೃಶ್ಯಗಳನ್ನು ವಿವರಿಸಿವೆ. ವರದಿಗಳ ಪ್ರಕಾರ  ಜೂನ್ ೩೦, ೨೦೧೨ ರಂದು ಸಿರಿಯಾ ರಾಜಧಾನಿ ಡಮಾಸ್ಕಸ್ ಬಳಿಯ ಉಪನಗರವಾದ ಜಮಾಲ್ಕಾದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ಸರ್ಕಾರಿ ಪಡೆಗಳಿಂದ ಕೊಲ್ಲಲ್ಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ಜನರು ಸೇರಿದ್ದ ಸಮಯದಲ್ಲಿ ಕಾರ್ ಬಾಂಬ್ ಸ್ಫೋಟಗೊಂಡು ಕನಿಷ್ಠ ೮೫ ಜನರು ಸಾವನ್ನಪ್ಪಿದರು ಮತ್ತು ೩೦೦ ಕ್ಕೂ ಹೆಚ್ಚು ಜನರು ಗಾಯಗೊಂಡರು ತಿಳಿಸಲಾಗಿದೆ. 

ತೀರ್ಪು

ಸ್ಪಷ್ಟವಾಗಿ, ವೀಡಿಯೋ ೨೦೧೨ ರದ್ದು ಮತ್ತು ಇದು ಸಿರಿಯಾದಲ್ಲಿ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಸಂಭವಿಸಿದ ಸ್ಫೋಟವನ್ನು ತೋರಿಸುತ್ತದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ