ಮುಖಪುಟ ‘GOAT’ ಚಿತ್ರದ ಪ್ರದರ್ಶನದಲ್ಲಿ ಪಟಾಕಿ ಸಿಡಿಸಲಾಗಿದೆ ಎಂದು ಹಳೆಯ ವೀಡಿಯೋ ವೈರಲ್

‘GOAT’ ಚಿತ್ರದ ಪ್ರದರ್ಶನದಲ್ಲಿ ಪಟಾಕಿ ಸಿಡಿಸಲಾಗಿದೆ ಎಂದು ಹಳೆಯ ವೀಡಿಯೋ ವೈರಲ್

ಮೂಲಕ: ಉಮ್ಮೆ ಕುಲ್ಸುಮ್

ಸೆಪ್ಟೆಂಬರ್ 13 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ನಟ ವಿಜಯ್ ಅಭಿನಯದ ‘GOAT’ ಚಿತ್ರದ ಪ್ರದರ್ಶನದಲ್ಲಿ ಪಟಾಕಿಗಳು ಸಿಡಿದಿದ್ದನ್ನು ಈ ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್ ಅನ್ನು ಈ ಚಿತ್ರವು ತೋರಿಸುತ್ತದೆ. ವಿಜಯ್ ಅವರ ಇತ್ತೀಚಿನ ಚಿತ್ರ 'GOAT' ಪ್ರದರ್ಶನದ ವೇಳೆ ತಮಿಳುನಾಡಿನ ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸಲಾಗಿದೆ ಎಂದು ಹೇಳುವ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

೨೦೨೩ ರ ಹಿಂದಿನ ಈ ವೀಡಿಯೋವನ್ನು ಮಹಾರಾಷ್ಟ್ರದಲ್ಲಿ ನಟ ಸಲ್ಮಾನ್ ಖಾನ್ ಒಳಗೊಂಡಿರುವ ಬಾಲಿವುಡ್ ಚಲನಚಿತ್ರ 'ಟೈಗರ್ ೩' ಪ್ರದರ್ಶನದ ಸಮಯದಲ್ಲಿ ಚಿತ್ರೀಕರಿಸಲಾಗಿದೆ.

ಹೇಳಿಕೆ ಏನು?

ತಮಿಳುನಾಡಿನ ಸೂಪರ್‌ಸ್ಟಾರ್ ತಲಪತಿ ವಿಜಯ್ ಅವರ ಇತ್ತೀಚಿನ ಚಿತ್ರ 'GOAT'  ಪ್ರದರ್ಶನದ ಸಂದರ್ಭದಲ್ಲಿ ಚಿತ್ರಮಂದಿರದೊಳಗೆ ಪಟಾಕಿ ಸಿಡಿಸಲಾಗಿದೆ ಎಂದು ಹೇಳುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಈ ವೀಡಿಯೋವನ್ನು ಆಕ್ರೋಶದ ಕಾಮೆಂಟ್‌ಗಳೊಂದಿಗೆ ಹೀಗೆ ಬರೆದಿದ್ದಾರೆ, "ಇದು ಶುದ್ಧ ಅಜಾಗರೂಕತೆ. ತಮಿಳುನಾಡಿನಲ್ಲಿ ವಿಜಯ್ ಅವರ ಹೊಸ ಚಲನಚಿತ್ರ 'GOAT' ಪ್ರದರ್ಶನದ ಸಂದರ್ಭದಲ್ಲಿ ಪಟಾಕಿ. ಥಿಯೇಟರ್‌ನಲ್ಲಿ ಅವರನ್ನು ಹೇಗೆ ಅನುಮತಿಸಲಾಯಿತು? ಏನು ಕ್ರಮ ಅಧಿಕಾರಿಗಳು ತೆಗೆದುಕೊಂಡಿದ್ದಾರೆಯೇ?" ಈ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಈ ವೀಡಿಯೋ ಫೇಸ್‌ಬುಕ್‌ನಲ್ಲಿಯೂ ಗಮನ ಸೆಳೆದಿದೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.


ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
 (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ತಮಿಳು ಸೂಪರ್‌ಸ್ಟಾರ್ ವಿಜಯ್ ಫೆಬ್ರವರಿ ೨೦೨೪ ರಲ್ಲಿ ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನ್ನು ಪ್ರಾರಂಭಿಸಿದರು. ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (GOAT), ವಿಜಯ್ ನಟಿಸಿದ ತಮಿಳು ಭಾಷೆಯ ವೈಜ್ಞಾನಿಕ ಕಾಲ್ಪನಿಕ ಆಕ್ಷನ್ ಚಲನಚಿತ್ರವು ಸೆಪ್ಟೆಂಬರ್ ೫, ೨೦೨೪ ರಂದು ಥಿಯೇಟರ್‌ಗಳಲ್ಲಿ ಪ್ರಥಮ ಪ್ರದರ್ಶನಗೊಂಡಿತು.

ಆದರೆ, ಹಂಚುಕೊಳ್ಳಲಾಗುತ್ತಿರುವ ವೀಡಿಯೋಗೂ ಈ ಚಿತ್ರಕ್ಕೂ ಅಥವಾ ತಮಿಳುನಾಡಿನ ಯಾವುದೇ ಘಟನೆಗಳಿಗೆ ಸಂಬಂಧವಿಲ್ಲ.

ನಾವು ಕಂಡುಕೊಂಡದ್ದು ಏನು?

ವೈರಲ್ ವೀಡಿಯೋದಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ನವೆಂಬರ್ ೧೩, ೨೦೨೩ ರಂದು ಎನ್‌ಡಿಟಿವಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಯ ಯೂಟ್ಯೂಬ್ ಕ್ಲಿಪ್‌ ಅನ್ನು ಕಂಡುಕೊಂಡೆವು. "ಟೈಗರ್ ೩ ನೈಟ್ ಶೋ ಸಮಯದಲ್ಲಿ ಮಹಾರಾಷ್ಟ್ರ ಸಿನಿಮಾದಲ್ಲಿ ಕ್ರ್ಯಾಕರ್ಸ್ ಗೋ ಆಫ್" ಎಂಬ ಶೀರ್ಷಿಕೆಯನ್ನು ಹೊಂದಿದೆ. ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿರುವ ಮೋಹನ್ ಚಿತ್ರಮಂದಿರದಲ್ಲಿ ಸಲ್ಮಾನ್ ಖಾನ್ ಅಭಿನಯದ 'ಟೈಗರ್ ೩' ಚಿತ್ರದ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ. ಆಸನದ ಸ್ಥಳದ ಬಳಿ ಪಟಾಕಿ ಸಿಡಿಸುತ್ತಿರುವುದನ್ನು ವೀಡಿಯೋದಲ್ಲಿ ತೋರಿಸಲಾಗಿದ್ದು, ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿತ್ತು ಆದರೆ ಯಾವುದೇ ಗಾಯಗಳು ವರದಿಯಾಗಿಲ್ಲ.

ನವೆಂಬರ್ ೨೦೨೩ ರಲ್ಲಿ ಟೈಮ್ಸ್ ಆಫ್ ಇಂಡಿಯಾ ಮತ್ತು ಇಂಡಿಯಾ ಟುಡೇ ಈ ಘಟನೆಯ ಬಗ್ಗೆ ವರದಿ ಮಾಡಿದೆ. ಮಾಲೆಗಾಂವ್ ಚವಾನಿ ಪೊಲೀಸ್ ಇನ್ಸ್‌ಪೆಕ್ಟರ್ ರಘುನಾಥ್ ಶೆಲಾರ್, ಸುತ್ತುವರಿದ ಥಿಯೇಟರ್‌ನಲ್ಲಿ ಜೀವಕ್ಕೆ ಅಪಾಯವನ್ನುಂಟುಮಾಡುವ ಆರೋಪಗಳನ್ನು ಉಲ್ಲೇಖಿಸಿ ಹೊಣೆಗಾರರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದರು. ಸಲ್ಮಾನ್ ಖಾನ್ ಕೂಡ ಎಕ್ಸ್ ನಲ್ಲಿ ಘಟನೆಯನ್ನು ಖಂಡಿಸಿದ್ದು, ಇದು ಅಪಾಯಕಾರಿ ಎಂದು ಬಣ್ಣಿಸಿದ್ದರು.

ಮಾಲೆಗಾಂವ್‌ನ ಸಹಾಯಕ ಪೊಲೀಸ್ ಅಧೀಕ್ಷಕರಾದ ಅನಿಕೇತ್ ಭಾರತಿ ಅವರು ಘಟನೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ, ಇದನ್ನು ಎಎನ್ಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನವೆಂಬರ್ ೧೩, ೨೦೨೩ ರಂದು ವರದಿ ಮಾಡಿದೆ.

ತೀರ್ಪು

ನವೆಂಬರ್ ೧೨, ೨೦೨೩ ರಂದು ಮಹಾರಾಷ್ಟ್ರದ ಮಾಲೆಗಾಂವ್‌ನ ಮೋಹನ್ ಥಿಯೇಟರ್‌ನಲ್ಲಿ 'ಟೈಗರ್ ೩' ಚಿತ್ರದ ಪ್ರದರ್ಶನದ ಸಮಯದಲ್ಲಿ ಸೆರೆಹಿಡಿಯಲಾದ ವೀಡಿಯೋವನ್ನು ತಮಿಳುನಾಡಿನ ಥಿಯೇಟರ್‌ ನಲ್ಲಿ ನಟ-ರಾಜಕಾರಣಿ ವಿಜಯ್ ಅಭಿನಯದ 'GOAT' ಪ್ರದರ್ಶನಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ