ಮುಖಪುಟ ಚೆನ್ನೈನ ಸತ್ಯಬಾಮಾ ಕಾಲೇಜಿನಲ್ಲಿ ಕಂಡ ಪ್ರವಾಹದ ಹಳೆಯ ವೀಡಿಯೋ ಇತ್ತೀಚಿನದ್ದು ಎಂದು ವೈರಲ್

ಚೆನ್ನೈನ ಸತ್ಯಬಾಮಾ ಕಾಲೇಜಿನಲ್ಲಿ ಕಂಡ ಪ್ರವಾಹದ ಹಳೆಯ ವೀಡಿಯೋ ಇತ್ತೀಚಿನದ್ದು ಎಂದು ವೈರಲ್

ಮೂಲಕ: ವನಿತಾ ಗಣೇಶ್

ಅಕ್ಟೋಬರ್ 21 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಚೆನ್ನೈನ ಸತ್ಯಬಾಮಾ ಕಾಲೇಜಿನಲ್ಲಿ ಇತ್ತೀಚಿನ ಮಳೆಯಿಂದ ಉಂಟಾದ ಪ್ರವಾಹವನ್ನು ಈ ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್. ಇತ್ತೀಚಿನ ಮಳೆಯಿಂದ ಚೆನ್ನೈನ ಸತ್ಯಬಾಮ ಕಾಲೇಜು ಪ್ರವಾಹಕ್ಕೆ ಸಿಲುಕಿರುವುದನ್ನು ಈ ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ವೈರಲ್ ವೀಡಿಯೋ ೨೦೨೩ ರದ್ದು ಮತ್ತು ಚೆನ್ನೈನಲ್ಲಿ ಮೈಚಾಂಗ್ ಚಂಡಮಾರುತದ ಸಮಯದಲ್ಲಿ ಸತ್ಯಬಾಮಾ ಇಂಜಿನಿಯರಿಂಗ್ ಕಾಲೇಜು ಪ್ರವಾಹಕ್ಕೆ ಒಳಗಾಯಿತು, ಇತ್ತೀಚಿನ ಮಳೆಯಲ್ಲಿ ಅಲ್ಲ.

ಹೇಳಿಕೆ ಏನು?

ಚೆನ್ನೈ ನಗರದಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆಯ ನಡುವೆ ಅಲ್ಲಿನ ಸತ್ಯಬಾಮಾ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಾಮಾನುಗಳನ್ನು ಹಿಡಿದುಕೊಂಡು ಎದೆಯ ಆಳದ ನೀರಿನಲ್ಲಿ ಅಲೆದಾಡುತ್ತಿರುವುದನ್ನು ತೋರಿಸುವ ವೀಡಿಯೋ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. 

ಕಾಲೇಜಿನ ಹೆಸರಿನ ಬಸ್‌ಗಳು ಮತ್ತು ಗೇಟ್‌ಗಳು ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಗುಂಪು ನೀರಿನಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ತಮಿಳಿನಲ್ಲಿ ಹೀಗೆ ಹೇಳುತ್ತಾರೆ (ಅನುವಾದಿಸಲಾಗಿದೆ), “ಈ ಕಾಲೇಜಿಗೆ ಎಂದಿಗೂ ಸೇರಬೇಡಿ. ಮತ್ತು ನೀವು ಮಾಡಿದರೆ, ಹಾಸ್ಟೆಲ್‌ಗೆ ಸೇರಬೇಡಿ. ”

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರೊಬ್ಬರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ, “ಸತ್ಯಭಾಮಾ ಇಂಜಿನಿಯರಿಂಗ್ನಲ್ಲಿ ಪ್ರಸ್ತುತ ಪರಿಸ್ಥಿತಿ. ಕಾಲೇಜು, ಚೆನ್ನೈ.” ಈ ಫ್ಯಾಕ್ಟ್-ಚೆಕ್ ಅನ್ನು ಬರೆಯುವಾಗ ಪೋಷ್ಟ್ ೯,೦೦೦ ಲೈಕ್‌ಗಳನ್ನು ಹೊಂದಿತ್ತು. ಇದೇ ರೀತಿಯ ಪೋಷ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು ಮತ್ತು ವಾಟ್ಸ್ ಆಪ್ ನಲ್ಲಿ ಹಲವಾರು ಬಾರಿ ಫಾರ್ವರ್ಡ್ ಮಾಡಲಾಗಿದೆ. ವೀಡಿಯೋವನ್ನು ಈಟಿ ನೌ, ವ್ಯಾಪಾರ ದಿನಪತ್ರಿಕೆ, ಇಂಡಿಯಾ ಟುಡೆ ಎನ್ಈ ಮತ್ತು ಸ್ಥಳೀಯ ಸುದ್ದಿ ಔಟ್ಲೆಟ್ V6 ನ್ಯೂಸ್ ತೆಲುಗು ಹಂಚಿಕೊಂಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ಕಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. 
(ಮೂಲ: ಫೇಸ್‌ಬುಕ್‌/ಎಕ್ಸ್/ಇನ್‌ಸ್ಟಾಗ್ರಾಮ್/ವಾಟ್ಸ್ ಆಪ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಅಕ್ಟೋಬರ್ ೧೫, ೨೦೨೪ ರಂದು ತಮಿಳುನಾಡಿನ ರಾಜಧಾನಿ ಚೆನ್ನೈ ಮತ್ತು ನೆರೆಹೊರೆಯ ಪ್ರದೇಶಗಳು ಭಾರೀ ಮಳೆಯಾದ ಹಿನ್ನಲೆಯಲ್ಲಿ ವೀಡಿಯೋ ಕಾಣಿಸಿಕೊಂಡಿದೆ. ಅಕ್ಟೋಬರ್ ೧೭ ರಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಚೆನ್ನೈ ಸೇರಿದಂತೆ ದಕ್ಷಿಣ ಭಾರತದ ರಾಜ್ಯದ ಏಳು ಜಿಲ್ಲೆಗಳಿಗೆ ಆರೆಂಜ್ ಎಚ್ಚರಿಕೆಯನ್ನು ನೀಡಿತು. 

ಆದರೆ, ನಮ್ಮ ತನಿಖೆಯ ಪ್ರಕಾರ, ವಿದ್ಯಾರ್ಥಿಗಳು ಪ್ರವಾಹದ ನೀರಿನಲ್ಲಿ ನಡೆದುಕೊಂಡು ಸತ್ಯಬಾಮಾ ಕಾಲೇಜಿನಿಂದ ಹೋಗುತ್ತಿರುವ ವೀಡಿಯೋ ಡಿಸೆಂಬರ್ ೨೦೨೩ ರದ್ದು, ೨೦೨೪ ರದ್ದಲ್ಲ.

ನಾವು ಕಂಡುಕೊಂಡದ್ದು ಏನು?


ರಿವರ್ಸ್ ಇಮೇಜ್ ಸರ್ಚ್ ಮೂಲಕ, ನಾವು ಡಿಸೆಂಬರ್ ೧೫, ೨೦೨೩ ರಂದು ಪ್ರಕಟಗೊಂಡ ಯೂಟ್ಯೂಬ್ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಕಂಡುಕೊಂಡೆವು, “@ಸತ್ಯಬಾಮಾ ಪ್ರವಾಹ ೨೦೨೩..... ಚೆನ್ನೈ @ಮಿಚಾಂಗ್” ಶೀರ್ಷಿಕೆಯ ಈ ವೀಡಿಯೋವನ್ನು ‘ಮುಸ್ಕನ್ ಸಿಂಗ್ ವ್ಲಾಗ್ಸ್’ ಎಂಬ ಚಾನೆಲ್ ನಲ್ಲಿ ಹಂಚಿಕೊಳ್ಳಲಾಗಿತ್ತು. ಹಿನ್ನಲೆಯಲ್ಲಿ ಕಾಲೇಜು ಗೋಚರಿಸುವಂತೆ ಮರದ ಹಲಗೆಗಳ ಮೇಲೆ ಜನರು ತಮ್ಮ ಸಾಮಾನುಗಳನ್ನು ಸಾಗಿಸುವ ದೃಶ್ಯಗಳನ್ನು ಇದು ತೋರಿಸುತ್ತದೆ.


ಈ ೨೦೨೩ ರ ತುಣುಕಿನಲ್ಲಿ ವಿಭಿನ್ನ ಕೋನದಿಂದ ಚಿತ್ರೀಕರಿಸಲಾದ ವೈರಲ್ ಕ್ಲಿಪ್ ನಲ್ಲಿ ಕಾಣುವ ಇಬ್ಬರು ವ್ಯಕ್ತಿಗಳನ್ನು ನಾವು ಗುರುತಿಸಿದ್ದೇವೆ. ೧೪-ಸೆಕೆಂಡ್‌ನಲ್ಲಿ, ವೈರಲ್ ವೀಡಿಯೋದಿಂದ ಅದೇ ವ್ಯಕ್ತಿ "ಈ ಕಾಲೇಜಿಗೆ ಎಂದಿಗೂ ಸೇರಬೇಡಿ" ಎಂದು ಹೇಳುವುದನ್ನು ನಾವು ಗಮನಿಸಿದ್ದೇವೆ.

೨೦೨೩ ರ ಯೂಟ್ಯೂಬ್ ಕ್ಲಿಪ್‌ ಮತ್ತು ವೈರಲ್ ಕ್ಲಿಪ್‌ನ ಹೋಲಿಕೆ. (ಮೂಲ: ಫೇಸ್‌ಬುಕ್‌/ಯೂಟ್ಯೂಬ್)

ಡಿಸೆಂಬರ್ ೨೦೨೩ ರಲ್ಲಿ ತಮಿಳುನಾಡಿನ ಕೆಲವು ಭಾಗಗಳನ್ನು ಅಪ್ಪಳಿಸಿದ ಮೈಚಾಂಗ್ ಚಂಡಮಾರುತವು ಕನಿಷ್ಠ ೧೩ ಸಾವುಗಳಿಗೆ ಕಾರಣವಾಯಿತು ಮತ್ತು ೩೦೦,೦೦೦ ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿತು. ಕೆರಿಯರ್ಸ್ ೩೬೦, ಶೈಕ್ಷಣಿಕ ಸುದ್ದಿ ಪೋರ್ಟಲ್ ಪ್ರಕಾರ, ಸತ್ಯಬಾಮಾ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಗಮನಾರ್ಹವಾಗಿ ಪ್ರಭಾವಿತರಾಗಿದ್ದಾರೆ. ಎರಡು ದಿನ ಆಹಾರ ಅಥವಾ ವಿದ್ಯುತ್ ಇಲ್ಲದೆ ಸಹಿಸಿಕೊಂಡ ನಂತರ ವಿದ್ಯಾರ್ಥಿಗಳು ತಮ್ಮ ನೀರಿನಿಂದ ತುಂಬಿರುವ ಹಾಸ್ಟೆಲ್‌ಗಳನ್ನು ಸ್ಥಳಾಂತರಿಸಲು ಒತ್ತಾಯಿಸಲಾಯಿತು ಎಂದು ವರದಿಯು ಗಮನಿಸಿದೆ.

ನಾವು ಡಿಸೆಂಬರ್ ೬, ೨೦೨೩ ರ ಇನ್‌ಸ್ಟಾಗ್ರಾಮ್ ರೀಲ್ ಅನ್ನು ಸಹ ಕಂಡುಹಿಡಿದಿದ್ದೇವೆ, ಇದು ಈಗ ವೈರಲ್ ವೀಡಿಯೋದ ಒಂದು ಭಾಗವನ್ನು ಒಳಗೊಂಡಿದೆ. 'sathyabamites' ಖಾತೆಯಿಂದ ಹಂಚಿಕೊಳ್ಳಲಾಗಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), ರೀಲ್ ಪ್ರವಾಹಕ್ಕೆ ಒಳಗಾದ ಸತ್ಯಬಾಮಾ ಕ್ಯಾಂಪಸ್‌ನ ಮಾಂಟೇಜ್ ಆಗಿದೆ, ವಿದ್ಯಾರ್ಥಿಗಳು ತಮ್ಮ ಲಗೇಜ್‌ನೊಂದಿಗೆ ಎದೆಯ ಆಳದ ನೀರಿನಲ್ಲಿ ಅಲೆದಾಡುವುದನ್ನು ತೋರಿಸುತ್ತದೆ. ಈ ವೀಡಿಯೋ ೨೦೨೩ ರಿಂದ ಪ್ರಸಾರವಾಗುತ್ತಿದೆ ಮತ್ತು ಇತ್ತೀಚೆಗೆ ಚೆನ್ನೈನಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಂಭಂದಿಸಿಲ್ಲ ಎಂದು ಖಚಿತಪಡಿಸುತ್ತದೆ.

೨೦೨೩ ರ ಇನ್‌ಸ್ಟಾಗ್ರಾಮ್  ರೀಲ್‌ನೊಂದಿಗೆ ಈಗ ವೈರಲ್ ಕ್ಲಿಪ್‌ನ ಹೋಲಿಕೆ. (ಮೂಲ: ಫೇಸ್‌ಬುಕ್‌/ಇನ್‌ಸ್ಟಾಗ್ರಾಮ್)

ಲಾಜಿಕಲಿ ಫ್ಯಾಕ್ಟ್ಸ್ ಫೋರ್ ಪಾಯಿಂಟ್ಸ್ ನಲ್ಲಿರುವ ರಿಸೆಪ್ಷನ್ ಡೆಸ್ಕ್ ಅನ್ನು ಶೆರಟಾನ್ ಮೂಲಕ ಸಂಪರ್ಕಿಸಿದೆ, ಇದು ಚೆನ್ನೈನ ಶೋಲಿಂಗನಲ್ಲೂರಿನ ಕಾಲೇಜು ಬಳಿಯ ಹೋಟೆಲ್. ಇತ್ತೀಚಿನ ಮಳೆಯ ಸಮಯದಲ್ಲಿ ಕ್ಯಾಂಪಸ್ ಅಥವಾ ಸುತ್ತಮುತ್ತಲಿನ ಪ್ರದೇಶವು ಪ್ರವಾಹವನ್ನು ಅನುಭವಿಸಿಲ್ಲ ಎಂದು ಅವರು ದೃಢಪಡಿಸಿದರು, "ಪರಿಸ್ಥಿತಿ ಸಾಮಾನ್ಯವಾಗಿದೆ" ಎಂದು ಹೇಳಿದ್ದಾರೆ. 

ಹೆಚ್ಚುವರಿಯಾಗಿ, ಈ ವಾರ ಕ್ಯಾಂಪಸ್‌ನಲ್ಲಿ ಯಾವುದೇ ಪ್ರವಾಹ ಉಂಟಾಗಿಲ್ಲ ಎಂದು ಖಚಿತಪಡಿಸಿದ ಸತ್ಯಬಾಮಾ ಕಾಲೇಜು ವಿದ್ಯಾರ್ಥಿನಿಯ ತಾಯಿ ಪ್ರೇಮಾ ಅವರೊಂದಿಗೆ ನಾವು ಮಾತನಾಡಿದ್ದೇವೆ.

ತೀರ್ಪು


ನಮ್ಮ ಸಂಶೋಧನೆಯು ತಮಿಳುನಾಡಿನ ಚೆನ್ನೈನಲ್ಲಿ ಪ್ರವಾಹಕ್ಕೆ ಒಳಗಾದ ಸತ್ಯಬಾಮ ಕಾಲೇಜಿನ ವೀಡಿಯೋ ೨೦೨೩ ರಿಂದ ಆನ್‌ಲೈನ್‌ನಲ್ಲಿದೆ ಮತ್ತು ಅದನ್ನು ಇತ್ತೀಚಿಗೆ  ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ತೋರಿಸುತ್ತದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English 
here


ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ