ಮೂಲಕ: ತಾಹಿಲ್ ಅಲಿ
ಸೆಪ್ಟೆಂಬರ್ 12 2024
ನಿರೂಪಕರು ೨೦೨೪ ರ ಲೋಕಸಭೆ ಚುನಾವಣೆಗೆ ಸಿಪಿಐ(ಎಂ)ನ ಪ್ರಣಾಳಿಕೆಯನ್ನು ಚರ್ಚಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಕಾಂಗ್ರೆಸ್ ಇನ್ನೂ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ.
ಹೇಳಿಕೆ ಏನು?
ಮುಂಬರುವ ೨೦೨೪ ರ ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿ ಚುನಾವಣೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (INC) ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಎಂದು ಬಹು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ; ಇನ್ನು, ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳ ಪ್ರಕಾರ, ಕಾಂಗ್ರೆಸ್ "ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಉಡುಗೊರೆಯಾಗಿ ನೀಡಲು ಸಿದ್ಧವಾಗಿದೆ" ಎಂದು ಅವರು ಹೇಳಿದ್ದಾರೆ. ಬಳಕೆದಾರರು ಕ್ಲೈಮ್‌ನೊಂದಿಗೆ ವೀಡಿಯೋವನ್ನು ಪ್ರಸಾರ ಮಾಡುತ್ತಿದ್ದಾರೆ, ಇದರಲ್ಲಿ ನಿರೂಪಕರು ಉದ್ದೇಶಿತ ಪ್ರಣಾಳಿಕೆಯನ್ನು ಚರ್ಚಿಸುತ್ತಾರೆ.
ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕ್ಲಿಪ್‌ನೊಂದಿಗೆ ವೀಡಿಯೋ ಪ್ರಾರಂಭವಾಗುತ್ತದೆ, ಹಿನ್ನಲೆಯಲ್ಲಿ "ಪ್ರಣಾಳಿಕೆಯ ಪ್ರಮುಖ ಅಂಶಗಳನ್ನು" ನಿರೂಪಕರೊಂದಿಗೆ ಚರ್ಚಿಸುವ ದಾಖಲೆಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಮುಂದೆ, ನಿರೂಪಕರು ಆರ್ಟಿಕಲ್ ೩೭೦ ಅನ್ನು ಹಿಂತೆಗೆದುಕೊಳ್ಳುವಿಕೆ, ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ಮತಾಂತರ ವಿರೋಧಿ ಕಾನೂನು, ರಾಷ್ಟ್ರೀಯ ಶಿಕ್ಷಣ ನೀತಿ (NEP), ರಾಷ್ಟ್ರೀಯ ಭದ್ರತಾ ಕಾಯಿದೆ (NSA) ನಂತಹ ಕಾನೂನುಗಳು ಮತ್ತು ನೀತಿಗಳನ್ನು ರದ್ದುಗೊಳಿಸಲು ಪ್ರಸ್ತಾಪಿಸುವ ಉದ್ದೇಶಿತ ಪ್ರಣಾಳಿಕೆಯನ್ನು ಚರ್ಚಿಸುತ್ತಾರೆ. ಮತ್ತು ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆ (UAPA), ಹಾಗೆಯೇ ಮರಣದಂಡನೆ. ಹೆಚ್ಚುವರಿಯಾಗಿ, ವೈರಲ್ ವೀಡಿಯೋ ಚತುರ್ಭುಜ ಭದ್ರತಾ ಸಂವಾದದಿಂದ (QUAD) ಭಾರತವನ್ನು ಹಿಂತೆಗೆದುಕೊಳ್ಳುವ ಮತ್ತು ಅದರ ಪರಮಾಣು ಶಸ್ತ್ರಾಸ್ತ್ರಗಳನ್ನು ತೆಗೆದುಹಾಕುವ ಬಗ್ಗೆ ಹೇಳಿಕೆಗಳನ್ನು ಹೊಂದಿದೆ.
ಎಕ್ಸ್ (ಹಿಂದೆ ಟ್ವಿಟ್ಟರ್), ಫೇಸ್‌ಬುಕ್ ಮತ್ತು ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೀಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಒಬ್ಬ ಎಕ್ಸ್ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಹೀಗೆ ಬರೆದಿದ್ದಾರೆ, “ನೀವು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಉಡುಗೊರೆಯಾಗಿ ನೀಡಲು ಸಿದ್ಧರಿದ್ದೀರಾ? "ಇಲ್ಲ" ಆದರೂ, ಕಾಂಗ್ರೆಸ್ ಬಯಸುತ್ತದೆ! #ಜಮ್ಮು-ಕಾಶ್ಮೀರ ಚುನಾವಣೆಯ #ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ಸಾರ್ವಜನಿಕ ಡೊಮೇನ್‌ನಲ್ಲಿ ಹೊರಬಂದಿದೆ, ಇದು #ಆರ್ಟಿಕಲ್ ೩೭೦ ಅನ್ನು ಮರುಸ್ಥಾಪಿಸಲು ಮತ್ತು #CAA, #NSA, #UAPA, ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸುವ ಭರವಸೆ ನೀಡಿದೆ.
ಫೇಸ್‌ಬುಕ್‌ನಲ್ಲಿ ಮತ್ತೊಬ್ಬ ಬಳಕೆದಾರರು ವೀಡಿಯೋವನ್ನು "ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ (ಹಿಂದಿಯಿಂದ ಅನುವಾದಿಸಲಾಗಿದೆ)" ಎಂದು ಶೀರ್ಷಿಕೆ ನೀಡಿದ್ದಾರೆ. ಇತರ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ವೈರಲ್ ವೀಡಿಯೋದಲ್ಲಿ ಚರ್ಚಿಸಲಾಗುತ್ತಿರುವ ಪ್ರಣಾಳಿಕೆಯು ಹಳೆಯದಾಗಿದೆ ಮತ್ತು ಈ ವರ್ಷದ ಆರಂಭದಲ್ಲಿ ನಡೆದ ಭಾರತದ ಸಂಸತ್ತಿನ ಚುನಾವಣೆಗಾಗಿ ಕಮ್ಯುನಿಟಿ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) (ಸಿಪಿಐ(ಎಂ)) ಬಿಡುಗಡೆ ಮಾಡಿದೆ ಎಂದು ನಾವು ಕಂಡುಕೊಂಡಿದ್ದೇವೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆಯೇ?
೨೦೨೪ ರ ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಎಂದು ಸೂಚಿಸುವ ಸಂಬಂಧಿತ ಕೀವರ್ಡ್ ಸರ್ಚ್ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳನ್ನು ನೀಡಲಿಲ್ಲ. ಆಗಸ್ಟ್ ೨೪, ೨೦೨೪ ರ ವರದಿಯ ಪ್ರಕಾರ, ಪಕ್ಷವು ಕರಡು ಪ್ರಣಾಳಿಕೆಯನ್ನು ಅಂತಿಮಗೊಳಿಸಿದೆ ಮತ್ತು ಇತರ ನಾಯಕರ ಅನುಮೋದನೆಯ ನಂತರವೇ ಅದನ್ನು ಸಾರ್ವಜನಿಕಗೊಳಿಸಲಾಗುತ್ತದೆ. ಈ ಕಥೆಯನ್ನು ಬರೆಯುವ ಸಮಯದಲ್ಲಿ, ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರಲಿಲ್ಲ.
ನಾವು ನಂತರ ಎಲ್ಲಾ ಪಕ್ಷದ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಪರಿಶೀಲಿಸಿದ್ದೇವೆ ಆದರೆ ಬರೆಯುವ ಸಮಯದಲ್ಲಿ ಅಂತಹ ಪ್ರಣಾಳಿಕೆಯನ್ನು ಸಾರ್ವಜನಿಕಗೊಳಿಸಿದ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದರೆ, ನಾವು INC ಸಂದೇಶ್‌ನ ಎಕ್ಸ್ ಖಾತೆಯಲ್ಲಿ ಸೆಪ್ಟೆಂಬರ್ ೪, ೨೦೨೪ ರ ಪೋಷ್ಟ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಕಂಡುಕೊಂಡಿದ್ದೇವೆ, ಇದು ಕಾಂಗ್ರೆಸ್ ಪಕ್ಷದ ಪ್ರಕಟಣೆಗಳಿಗೆ ಅಧಿಕೃತ ಹ್ಯಾಂಡಲ್ ಆಗಿದೆ. "ಜಮ್ಮುವಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಈ ಕೆಳಗಿನ ನಾಯಕರೊಂದಿಗೆ ಪ್ರಣಾಳಿಕೆ ಸಮನ್ವಯ ಸಮಿತಿಯ ರಚನೆಯ ಪ್ರಸ್ತಾವನೆಯನ್ನು ಮಾನ್ಯ ಕಾಂಗ್ರೆಸ್ ಅಧ್ಯಕ್ಷರು ಅನುಮೋದಿಸಿದ್ದಾರೆ" ಎಂದು ಪೋಷ್ಟ್ ಹೇಳುತ್ತದೆ.
ವೈರಲ್ ವೀಡಿಯೋ ಬಗ್ಗೆ ಏನು?
ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ಮೂಲಕ, ನಿರೂಪಕರು ಅನ್ನು ಭಾರತ ಮೂಲದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಮಾನವೇಂದ್ರ ಚೌಹಾನ್ ಎಂದು ಗುರುತಿಸಲು ನಮಗೆ ಸಾಧ್ಯವಾಯಿತು. ಅವರ ಇನಸ್ಟಾಗ್ರಾಮ್ ಖಾತೆಯಲ್ಲಿ, '_thehelpingmind', ಮೇ ೧೧ ರಂದು ಪೋಷ್ಟ್ ಮಾಡಲಾದ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಾವು ಕಂಡುಕೊಂಡಿದ್ದೇವೆ, ಇದರಲ್ಲಿ ಅವರು ರಾಷ್ಟ್ರೀಯ ಚುನಾವಣೆಗಳಿಗಾಗಿ (ಸಿಪಿಐ(ಎಂ)) ಪ್ರಣಾಳಿಕೆಯನ್ನು ಸಂಕ್ಷಿಪ್ತವಾಗಿ ಚರ್ಚಿಸಿದ್ದಾರೆ. ವೈರಲ್ ವೀಡಿಯೋದಂತೆಯೇ, ವೀಡಿಯೋದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ನಿರ್ಮೂಲನೆ, ಮತಾಂತರ ವಿರೋಧಿ ಕಾನೂನುಗಳ ರದ್ದತಿ, ಮರಣದಂಡನೆ ತೆಗೆದುಹಾಕುವಿಕೆ, ಆರ್ಟಿಕಲ್ ೩೭೦ ರ ರದ್ದತಿ, ಸಿಎಎ ರದ್ದತಿ ಮತ್ತು QUAD ನಿಂದ ಭಾರತವನ್ನು ಹಿಂತೆಗೆದುಕೊಳ್ಳುವುದು ಮುಂತಾದ ವಿವಿಧ ನೀತಿ ಪ್ರಸ್ತಾಪಗಳನ್ನು ಉಲ್ಲೇಖಿಸಲಾಗಿದೆ. ವೈರಲ್ ವೀಡಿಯೋದಲ್ಲಿರುವಂತೆ ನಿರೂಪಕರು ಅದೇ ಉಡುಪನ್ನು ಹಾಕಿರುವುದನ್ನು ಕಾಣಬಹುದು. ಯೂಟ್ಯೂಬ್ ನಲ್ಲಿ ಈ ವೀಡಿಯೋದ ದೀರ್ಘ ಆವೃತ್ತಿಯನ್ನು ನಾವು ಹುಡುಕಲಾಗಲಿಲ್ಲ.
ಮೇ ೧೧ ರಂದು ನಿರೂಪಕರು ಅಪ್‌ಲೋಡ್ ಮಾಡಿದ ಇದೇ ರೀತಿಯ ಮೂಲ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಇನಸ್ಟಾಗ್ರಾಮ್: _thehelpingmind//ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ವೈರಲ್ ವೀಡಿಯೋ ಪ್ರಾರಂಭದಲ್ಲಿ ಗಾಂಧಿಯವರ ಸಂಕ್ಷಿಪ್ತ ಕ್ಲಿಪ್ ಮತ್ತು ಕೆಳಗಿನ ಬಲಭಾಗದಲ್ಲಿ ಇರಿಸಲಾದ ಫೋಟೋವನ್ನು ಒಳಗೊಂಡಿದೆ. ತನಿಖೆಯ ನಂತರ, ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಕ್ಲಿಪ್ ಅನ್ನು ಏಪ್ರಿಲ್ ೫ ರಂದು ನಡೆದ 'ನ್ಯಾಯ್ ಪತ್ರ' - ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಕಾರ್ಯಕ್ರಮದಿಂದ ತೆಗೆದುಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಕಾಂಗ್ರೆಸ್ ನಾಯಕ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ೫೧:೦೭-ಮಾರ್ಕ್‌ನಲ್ಲಿ ಪೋಷ್ಟ್ ಮಾಡಿದ ಮೂಲ ವೀಡಿಯೋದಲ್ಲಿ ಪ್ರಣಾಳಿಕೆಯನ್ನು ಹಿಡಿದಿರುವ ಗಾಂಧಿಯ ಒಂದೇ ರೀತಿಯ ದೃಶ್ಯಗಳನ್ನು ನೋಡಬಹುದು.
ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್ ಮತ್ತು ರಾಹುಲ್ ಗಾಂಧಿ ಅವರ ವೀಡಿಯೋ. (ಮೂಲ: ಎಕ್ಸ್/ರಾಹುಲ್ ಗಾಂಧಿ (ಯೂಟ್ಯೂಬ್)/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಕಾಂಗ್ರೆಸ್ ಪ್ರಣಾಳಿಕೆ ೨೦೨೪ - 'ನ್ಯಾಯ ಪತ್ರ'
ನಾವು ೨೦೨೪ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯ ಪತ್ರ' ವನ್ನು ಪರಿಶೀಲಿಸಿದ್ದೇವೆ ಮತ್ತು ಆರ್ಟಿಕಲ್ ೩೭೦ ಮರುಸ್ಥಾಪನೆಯ ಬಗ್ಗೆ ಯಾವುದೇ ಉಲ್ಲೇಖವನ್ನು ಒಳಗೊಂಡಿಲ್ಲ; ಆದರೆ, "ನಾವು ತಕ್ಷಣವೇ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸುತ್ತೇವೆ" ಎಂದು ಅದು ಹೇಳುತ್ತದೆ. ಪ್ರಣಾಳಿಕೆಯು ನೇರವಾಗಿ NEP ಅನ್ನು ರದ್ದುಗೊಳಿಸುವುದನ್ನು ಸೂಚಿಸಲಿಲ್ಲ, ಬದಲಿಗೆ, "ನಾವು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ NEP ಅನ್ನು ಮರುಪರಿಶೀಲಿಸುತ್ತೇವೆ ಮತ್ತು ತಿದ್ದುಪಡಿ ಮಾಡುತ್ತೇವೆ" ಎಂದು ಹೇಳುತ್ತದೆ.
ಸಿಎಎ, ಮತಾಂತರ ವಿರೋಧಿ ಕಾನೂನುಗಳು, UAPA ಅಥವಾ ಮರಣದಂಡನೆಯನ್ನು ರದ್ದುಗೊಳಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಏನನ್ನೂ ಉಲ್ಲೇಖಿಸಿಲ್ಲ. ಆದರೆ, "ರಾಷ್ಟ್ರೀಯ ಭದ್ರತಾ ಮಂಡಳಿ (NSC) ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರ (NSA) ಕಚೇರಿಯನ್ನು ಸಂಸತ್ತಿನ ಆಯ್ಕೆ ಸಮಿತಿಯ ಮೇಲ್ವಿಚಾರಣೆಗೆ ಒಳಪಡಿಸಲಾಗುವುದು" ಎಂದು ಅದು ಹೇಳುತ್ತದೆ, ಆದರೆ NSA ಅನ್ನು ರದ್ದುಗೊಳಿಸುವ ಭರವಸೆ ನೀಡುವುದಿಲ್ಲ.
ಹೆಚ್ಚುವರಿಯಾಗಿ, QUAD ಮತ್ತು I2U2 ನಂತಹ ಕಾರ್ಯತಂತ್ರದ ಮೈತ್ರಿಗಳಿಂದ ಭಾರತವು ನಿರ್ಗಮಿಸಲು ಅಥವಾ ದೇಶದ ಪರಮಾಣು ಶಸ್ತ್ರಾಗಾರವನ್ನು ತೊಡೆದುಹಾಕಲು ಸಂಬಂಧಿಸಿದ ೨೦೨೪ ರ ರಾಷ್ಟ್ರೀಯ ಚುನಾವಣೆಗಳ ಪ್ರಣಾಳಿಕೆಯಲ್ಲಿ ಪಕ್ಷವು ಮಾಡಿದ ಯಾವುದೇ ಬದ್ಧತೆಯನ್ನು ನಾವು ಕಂಡುಕೊಂಡಿಲ್ಲ.
೨೦೨೪ ರ ಲೋಕಸಭೆ ಚುನಾವಣೆಗೆ ಸಿಪಿಐ(ಎಂ) ಪ್ರಣಾಳಿಕೆ
ಅವರ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ೨೦೨೪ ರ ಭಾರತೀಯ ಸಂಸತ್ತಿನ ಚುನಾವಣೆಯ ಸಿಪಿಐ(ಎಂ) ಪ್ರಣಾಳಿಕೆಯನ್ನು ಸಹ ನಾವು ಪರಿಶೀಲಿಸಿದ್ದೇವೆ. ಆರ್ಟಿಕಲ್ ೩೫A ಮತ್ತು ೩೭೦ ರ ಮರುಸ್ಥಾಪನೆಗೆ ಪಕ್ಷವು ಬದ್ಧವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ, ಸಂಬಂಧಿತ ಮಧ್ಯಸ್ಥಗಾರರೊಂದಿಗೆ ಸಂವಾದ ಪ್ರಕ್ರಿಯೆಯನ್ನು ಪ್ರಾರಂಭಿಸುವುದು, ಪ್ರದೇಶದ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಗಡಿ ಪ್ರದೇಶಗಳನ್ನು ಹೊರತುಪಡಿಸಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ (AFSPA) ಹಿಂತೆಗೆದುಕೊಳ್ಳುವಿಕೆ.
೨೦೨೪ ರ ಸಂಸತ್ ಚುನಾವಣೆಗೆ ಸಿಪಿಐ(ಎಂ) ಪ್ರಣಾಳಿಕೆಯ ಸ್ಕ್ರೀನ್‌ಶಾಟ್. (ಮೂಲ: ಸಿಪಿಐ(ಎಂ).org/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಸಿಎಎ ಯನ್ನು ರದ್ದುಪಡಿಸಲು, ಮತಾಂತರ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಲು ಮತ್ತು ದೇಶದಲ್ಲಿನ ಶಾಸನಗಳಿಂದ ಮರಣದಂಡನೆಯನ್ನು ತೆಗೆದುಹಾಕಲು ಪಕ್ಷವು ಕೆಲಸ ಮಾಡುತ್ತದೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. UAPA, NSA ಮತ್ತು AFSPA ನಂತಹ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ಅದು ಉಲ್ಲೇಖಿಸುತ್ತದೆ.
೨೦೨೪ ರ ಸಂಸತ್ ಚುನಾವಣೆಗೆ ಸಿಪಿಐ(ಎಂ) ಪ್ರಣಾಳಿಕೆಯ ಸ್ಕ್ರೀನ್‌ಶಾಟ್. (ಮೂಲ: ಸಿಪಿಐ(ಎಂ).org/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಪಕ್ಷದ ಪ್ರಣಾಳಿಕೆಯು 'ಭದ್ರತಾ ವಿಷಯಗಳ' ಅಡಿಯಲ್ಲಿ ಮತ್ತಷ್ಟು ಹೇಳುತ್ತದೆ, ಪಕ್ಷವು ಭಾರತ-ಯುಎಸ್‌ನಂತಹ ರಕ್ಷಣಾ ಮತ್ತು ಕಾರ್ಯತಂತ್ರದ ಮೈತ್ರಿಗಳಿಂದ ಹಿಂದೆ ಸರಿಯುತ್ತದೆ. ರಕ್ಷಣಾ ಚೌಕಟ್ಟು ಒಪ್ಪಂದ, QUAD ಮತ್ತು I2U2. ಇದಲ್ಲದೆ, ಪರಮಾಣು ಶಸ್ತ್ರಾಸ್ತ್ರಗಳು ಮತ್ತು ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಸಾಮೂಹಿಕ ವಿನಾಶದ ಇತರ ಶಸ್ತ್ರಾಸ್ತ್ರಗಳ ನಿರ್ಮೂಲನೆಗೆ ಪಕ್ಷವು ಬದ್ಧವಾಗಿದೆ.
ಹೆಚ್ಚುವರಿಯಾಗಿ, 'ಜನರ ಕಲ್ಯಾಣಕ್ಕಾಗಿ' ಅಡಿಯಲ್ಲಿ, NEP ಅನುಷ್ಠಾನವನ್ನು ನಿಲ್ಲಿಸಲು ಕೆಲಸ ಮಾಡಲು ಪಕ್ಷವು ಹೇಳಿದೆ ಮತ್ತು ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸಲು, ಕೋಮುವಾದಗೊಳಿಸಲು ಮತ್ತು ಕೇಂದ್ರೀಕರಿಸಲು ಅವಕಾಶ ನೀಡುವುದಿಲ್ಲ.
೨೦೨೪ ರ ಸಂಸತ್ ಚುನಾವಣೆಗಾಗಿ ಸಿಪಿಐ(ಎಂ) ಪ್ರಣಾಳಿಕೆಯ ಸ್ಕ್ರೀನ್‌ಶಾಟ್. (ಮೂಲ: ಸಿಪಿಐ(ಎಂ).org/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ವೈರಲ್ ವೀಡಿಯೋದಲ್ಲಿ ಚರ್ಚೆಯಾಗುತ್ತಿರುವ ಎಲ್ಲಾ ಅಂಶಗಳು ವಾಸ್ತವವಾಗಿ ೨೦೨೪ ರ ಲೋಕಸಭಾ ಚುನಾವಣೆಯ ಸಿಪಿಐ(ಎಂ) ಪ್ರಣಾಳಿಕೆಯಿಂದ ಬಂದವು, ಕಾಂಗ್ರೆಸ್‌ನದ್ದಲ್ಲ ಎಂಬುದು ಮತ್ತಷ್ಟು ಸ್ಪಷ್ಟವಾಗಿದೆ. ಮುಂಬರುವ ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ಕಾಂಗ್ರೆಸ್ ಅಂತಹ ಯಾವುದೇ ಭರವಸೆಗಳನ್ನು ನೀಡಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ನಮಗೆ ಕಂಡುಬಂದಿಲ್ಲ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ೨೦೨೪
ಜಮ್ಮು ಮತ್ತು ಕಾಶ್ಮೀರವು ೨೦೧೪ ರಿಂದ ಮೊದಲ ಬಾರಿಗೆ ಅಸೆಂಬ್ಲಿ ಚುನಾವಣೆಗೆ ಸಜ್ಜಾಗಿದೆ. ಭಾರತದ ಚುನಾವಣಾ ಆಯೋಗವು ಆಗಸ್ಟ್ ೨೦೨೪ ರಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ ಮತ್ತು ಮತಗಳ ಎಣಿಕೆ ಅಕ್ಟೋಬರ್ ೪ ರಂದು ನಡೆಯಲಿದೆ ಎಂದು ಘೋಷಿಸಿತು. ಚುನಾವಣಾ ಫಲಿತಾಂಶಗಳನ್ನು ಅಕ್ಟೋಬರ್ ೮, ೨೦೨೪ ರಂದು ಘೋಷಿಸಲಾಗುತ್ತದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ೯೦ ವಿಧಾನಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ ಒಂಬತ್ತು ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ, ಏಳು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮತ್ತು ಉಳಿದ ೭೪ ಮೀಸಲಾತಿಯಿಲ್ಲ.
ಚುನಾವಣೆಯಲ್ಲಿ ಕಣದಲ್ಲಿರುವ ಪಕ್ಷಗಳು ಈ ಪ್ರದೇಶದ ಅತ್ಯಂತ ಹಳೆಯ ಪಕ್ಷಗಳಲ್ಲಿ ಒಂದಾದ ನ್ಯಾಷನಲ್ ಕಾನ್ಫರೆನ್ಸ್ (NC), ಕಾಂಗ್ರೆಸ್ ಪಕ್ಷ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP), ಭಾರತೀಯ ಜನತಾ ಪಕ್ಷ, ಹಾಗೆಯೇ ಹಲವಾರು ಸ್ಥಳೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು.
ತೀರ್ಪು
ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ತೋರಿಸುವುದಾಗಿ ಹೇಳುವ ವೈರಲ್ ವೀಡಿಯೋ ತಪ್ಪು. ವೀಡಿಯೋದಲ್ಲಿ, ನಿರೂಪಕರು ೨೦೨೪ ರಲ್ಲಿ ನಡೆದ ಭಾರತೀಯ ಸಂಸತ್ತಿನ ಚುನಾವಣೆಗಾಗಿ ಸಿಪಿಐ(ಎಂ) ಪ್ರಣಾಳಿಕೆಯನ್ನು ಚರ್ಚಿಸುತ್ತಿದ್ದಾರೆ, ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಅಲ್ಲ.
(ಅನುವಾದಿಸಿದವರು: ರಜಿನಿ ಕೆ.ಜಿ.)
Read this fact-check in English here.