ಮೂಲಕ: ಅಂಕಿತಾ ಕುಲಕರ್ಣಿ
ಅಕ್ಟೋಬರ್ 18 2024
ಉರ್ದು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ ಎಂಬ ವೈರಲ್ ಹೇಳಿಕೆ ಫೇಕ್. ಅಂತಹ ಹೇಳಿಕೆಯನ್ನು ಯಾವುದೇ ಪುರಾವೆಗಳು ಬೆಂಬಲಿಸುವುದಿಲ್ಲ.
ಹೇಳಿಕೆ ಏನು?
ಮಹಾರಾಷ್ಟ್ರದ ಶಿವಸೇನೆ (ಉದ್ಧವ್ ಬಾಲಸಾಹೇಬ್ ಠಾಕ್ರೆ) ಪಕ್ಷದ ನಾಯಕ ಉದ್ಧವ್ ಠಾಕ್ರೆ ಅವರು ಮರಾಠಿಯಂತೆಯೇ ಉರ್ದು ಭಾಷೆಗೂ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ, ಎಂದು ಹೇಳುವ ಗ್ರಾಫಿಕ್ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಪೋಷ್ಟ್ ಠಾಕ್ರೆ ಅವರ ಚಿತ್ರದೊಂದಿಗೆ ಗ್ರಾಫಿಕ್ ಅನ್ನು ಒಳಗೊಂಡಿದೆ. ಮರಾಠಿಯಲ್ಲಿ ಬರೆಯಲಾದ ಅದರ ಮೇಲಿನ ಪಠ್ಯವು ಹೀಗೆ ಅನುವಾದಿಸುತ್ತದೆ: "ಮರಾಠಿಯಂತೆಯೇ ಉರ್ದು ಭಾಷೆಗೂ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ."
ಮಹಾರಾಷ್ಟ್ರ ಬಿಜೆಪಿ (ಭಾರತೀಯ ಜನತಾ ಪಾರ್ಟಿ) ನಾಯಕ ದಿಲೀಪ್ ಮಟ್ಕರ್ ಅವರು ಫೇಸ್‌ಬುಕ್ ನಲ್ಲಿ ಈ ಗ್ರಾಫಿಕ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಅದರ ಶೀರ್ಷಿಕೆ ಮರಾಠಿಯಲ್ಲಿ ಹೀಗಿದೆ, "ತಂದೆ ಹಿಂದೂ ಹೃದಯಗಳ ಚಕ್ರವರ್ತಿ, ಮತ್ತು ಈ ಸಂಭಾವಿತ ವ್ಯಕ್ತಿ ಉರ್ದು ಹೃದಯಗಳ ಚಕ್ರವರ್ತಿ." ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಅಕ್ಟೋಬರ್ ೩, ೨೦೨೪ ರಂದು, ಸರ್ಕಾರವು ಐದು ಭಾಷೆಗಳನ್ನು-ಮರಾಠಿ, ಪಾಲಿ, ಅಸ್ಸಾಮಿ, ಪ್ರಾಕೃತ ಮತ್ತು ಬೆಂಗಾಲಿಗಳನ್ನು ಶಾಸ್ತ್ರೀಯ ಭಾಷೆಗಳಾಗಿ ಗೊತ್ತುಪಡಿಸಿತು, ಇದು ಅಸ್ತಿತ್ವದಲ್ಲಿರುವ ಶಾಸ್ತ್ರೀಯ ಭಾಷೆಗಳಿಗೆ ಸೇರಿಸುತ್ತದೆ: ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಮಲಯಾಳಂ ಮತ್ತು ಒಡಿಯಾ.
ಆದರೆ, ಠಾಕ್ರೆಯವರ ವೈರಲ್ ಉಲ್ಲೇಖವು ಫೇಕ್ ಎಂದು ನಮ್ಮ ತನಿಖೆಯು ಕಂಡುಹಿಡಿದಿದೆ.
ನಾವು ಕಂಡುಕೊಂಡಿದ್ದು ಏನು?
ವೈರಲ್ ಗ್ರಾಫಿಕ್‌ನಲ್ಲಿ 'ಎಬಿಪಿ ಮಾಝಾ' ಲೋಗೋವನ್ನು ನಾವು ಗಮನಿಸಿದ್ದೇವೆ. ಇದನ್ನು ಸುಳಿವಿನಂತೆ ಬಳಸಿಕೊಂಡು, ನಾವು ಎಬಿಪಿ ಮಾಝಾ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇದೇ ರೀತಿಯ ಪೋಷ್ಟ್ ಗಳನ್ನು ಹುಡುಕಿದ್ದೇವೆ ಆದರೆ ಉರ್ದುವಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಕೋರಿ ಠಾಕ್ರೆಯಿಂದ ಯಾವುದೇ ಹೇಳಿಕೆ ಕಂಡುಬಂದಿಲ್ಲ.
ಠಾಕ್ರೆಯನ್ನು ಒಳಗೊಂಡ ಒಂದೇ ರೀತಿಯ ಗ್ರಾಫಿಕ್ ಟೆಂಪ್ಲೇಟ್ ಅನ್ನು ೨೦೨೨ ರಲ್ಲಿ ಎಬಿಪಿ ಮಾಝಾ ಅವರು ಮೊದಲು ಬಳಸಿದ್ದರು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಆದರೆ ಮರಾಠಿಯಲ್ಲಿ ವಿಭಿನ್ನ ಹೇಳಿಕೆಯನ್ನು ಹೊಂದಿದೆ, ಇದನ್ನು ಅನುವಾದಿಸಿದಾಗ: “ಮಂಗಳಮೂರ್ತಿ ಮತ್ತು 'ಅಮಂಗಲಮೂರ್ತಿ' ನಿನ್ನೆ ಮುಂಬೈನಲ್ಲಿ ನೋಡಿದೆ. (ನಾವು) ಭೂಮಿ ತೋರಿಸುವ ಬಗ್ಗೆ ಮಾತನಾಡುವವರಿಗೆ ಆಕಾಶವನ್ನು ತೋರಿಸುತ್ತೇವೆ."
ಈ ಗ್ರಾಫಿಕ್ ಅನ್ನು ಮೇ ೨೦೨೪ ರಲ್ಲಿಯೂ ಸಹ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಎಬಿಪಿ ಮಾಝಾ ಅವರ ಅಧಿಕೃತ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ಬಳಸಲಾಗಿದೆ, ಮರಾಠಿಯಲ್ಲಿ ಠಾಕ್ರೆಯವರ ಮತ್ತೊಂದು ಉಲ್ಲೇಖವನ್ನು ಒಳಗೊಂಡಿದೆ: “ಆ ಪಾತ್ರಹೀನರು, ಭ್ರಷ್ಟರು ಮತ್ತು ದೇಶದ್ರೋಹಿಗಳನ್ನು ಒಟ್ಟುಗೂಡಿಸುವ ಮೂಲಕ ಅವರು ತೃಪ್ತರಾಗುವುದಿಲ್ಲ. ಆದ್ದರಿಂದ ಅವರಿಗೆ ಉಪನಾಮವಿರುವ ಯಾರಾದರೂ ಬೇಕು, ಮತ್ತು ಅವರು ಬಾಡಿಗೆಗೆ ತೆಗೆದುಕೊಂಡಿದ್ದಾರೆ," ಎಂದು ಹೇಳುತ್ತದೆ.
ವೈರಲ್ ಗ್ರಾಫಿಕ್ ಅನ್ನು ೨೦೨೨ ಮತ್ತು ೨೦೨೪ ರಲ್ಲಿ ಎಬಿಪಿ ಮಾಝಾ ಹಂಚಿಕೊಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಫೇಸ್‌ಬುಕ್/ಎಕ್ಸ್/ಸ್ಕ್ರೀನ್‌ಶಾಟ್)
ಲಾಜಿಕಲಿ ಫ್ಯಾಕ್ಟ್ಸ್ ಠಾಕ್ರೆಯವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದ್ದು, ಉರ್ದು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಬೇಡುವ ಯಾವುದೇ ಉಲ್ಲೇಖ ಕಂಡುಬಂದಿಲ್ಲ. ಗೂಗಲ್ ಹುಡುಕಾಟವು ಯಾವುದೇ ಸಂಬಂಧಿತ ಫಲಿತಾಂಶಗಳನ್ನು ನೀಡಲಿಲ್ಲ ಅಥವಾ ಆಪಾದಿತ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳನ್ನು ನೀಡಲಿಲ್ಲ, ಇದು ಹೇಳಿಕೆಯ ಅಸಮರ್ಥತೆಯನ್ನು ಮತ್ತಷ್ಟು ದೃಢೀಕರಿಸುತ್ತದೆ.
ಪ್ರತಿಕ್ರಿಯೆಗಾಗಿ ನಾವು ಎಬಿಪಿ ಅನ್ನು ಸಂಪರ್ಕಿಸಿದ್ದೇವೆ ಮತ್ತು ನಾವು ಅದನ್ನು ಸ್ವೀಕರಿಸಿದ ನಂತರ ಈ ಚೆಕ್ ಅನ್ನು ನವೀಕರಿಸಲಾಗುತ್ತದೆ.
ತೀರ್ಪು
ಉದ್ಧವ್ ಠಾಕ್ರೆ ಅವರು ಮರಾಠಿಯಂತೆ ಉರ್ದು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ನಕಲಿ ಹೇಳಿಕೆ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಗ್ರಾಫಿಕ್ ಅನ್ನು ಸಂಪಾದಿಸಲಾಗಿದೆ ಮತ್ತು ಅಂತಹ ಹೇಳಿಕೆಗಳನ್ನು ಬೆಂಬಲಿಸುವ ಯಾವುದೇ ಪುರಾವೆಗಳು ನಮಗೆ ಕಂಡುಬಂದಿಲ್ಲ.
Read this fact-check in English here.