ಮೂಲಕ: ಪ್ರಭಾನು ದಾಸ್
ಅಕ್ಟೋಬರ್ 24 2024
ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ನ್ಯೂಸ್ ಪೋರ್ಟಲ್ ಆದ ಲೋಕಮತ್ ಕೂಡ ಈ ಗ್ರಾಫಿಕ್ ಅನ್ನು ಪ್ರಕಟಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೇಳಿಕೆ ಏನು?
ಮಹಾರಾಷ್ಟ್ರ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷದ ನಾಯಕ ಮತ್ತು ಸಂಸತ್ತಿನ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರ ಹೇಳಿಕೆ ಎಂದು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಗ್ರಾಫಿಕ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ಪೋಷ್ಟ್ ನಲ್ಲಿ ಪಠ್ಯದೊಂದಿಗೆ ರಾವುತ್ ಅವರ ಚಿತ್ರವಿದೆ, ಅದು ಹೀಗೆ ಅನುವಾದಿಸುತ್ತದೆ, “ಜನರು ಉದ್ಧವ್ ಠಾಕ್ರೆ ಅವರನ್ನು ಮುಸ್ಲಿಮರ ಹೃದಯದ ರಾಜ ಎಂದು ಕರೆದರೆ, ಅದರಲ್ಲಿ ತಪ್ಪೇನು? ಹಿಂದೂ ಹೃದಯಗಳ ರಾಜನ ಮಗ ಇತರ ಧರ್ಮಗಳ ಹೃದಯದ ರಾಜನಾಗಬಹುದು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶಿವಸೇನೆ (ಯುಬಿಟಿ) ನೇತೃತ್ವ ವಹಿಸಿದ್ದಾರೆ.
ಮತ್ತು ಪೋಷ್ಟ್ ನ ವಿನ್ಯಾಸವು ಲೋಕಮತ್ ನ ಸಾಮಾಜಿಕ ಮಾಧ್ಯಮ ಟೆಂಪ್ಲೇಟ್‌ನಂತೆಯೇ ಇದೆ, ಮರಾಠಿ ಭಾಷೆಯ ಸುದ್ದಿ ಮಾಧ್ಯಮವು ಪಶ್ಚಿಮ ಭಾರತದ ರಾಜ್ಯವಾದ ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ವೀಕ್ಷಿಸಲ್ಪಡುತ್ತದೆ.
ಪೋಷ್ಟ್ ನ ಆರ್ಕೈವ್ ಲಿಂಕ್ ಅನ್ನು ಇಲ್ಲಿ ಕಾಣಬಹುದು.
ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
"ಮುಸ್ಲಿಂ ಹೃದಯ ಸಾಮ್ರಾಟ್," ಎಂದರೆ "ಮುಸ್ಲಿಂ ಹೃದಯಗಳ ರಾಜ", ಇದು "ಹಿಂದೂ ಹೃದಯ ಸಾಮ್ರಾಟ್" ಅಥವಾ "ಹಿಂದೂ ಹೃದಯಗಳ ರಾಜ" ಎಂಬ ಶೀರ್ಷಿಕೆಯ ಒಂದು ರೀತಿಯಾಗಿದೆ. ಶಿವಸೇನೆಯ ಸಂಸ್ಥಾಪಕ ಮತ್ತು ಉದ್ಧವ್ ಠಾಕ್ರೆ ಅವರ ತಂದೆ ಬಾಳ್ ಠಾಕ್ರೆಗೆ ಅವರನ್ನು ಸೂಚಿಸಲು ಬಳಸಲಾಗುತ್ತದೆ. ನವೆಂಬರ್ ೨೦ ರಂದು ನಡೆಯಲಿರುವ ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ಈ ಪೋಷ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ.
ಆದರೆ, ರಾವುತ್ ಅಂತಹ ಹೇಳಿಕೆಯನ್ನು ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ನಮಗೆ ಕಂಡುಬಂದಿಲ್ಲ, ವೈರಲ್ ಹೇಳಿಕೆ ಫೇಕ್ ಎಂದು ಸೂಚಿಸುತ್ತದೆ.
ಹೆಚ್ಚುವರಿಯಾಗಿ, ಲಾಜಿಕಲಿ ಫ್ಯಾಕ್ಟ್ಸ್ ಇತ್ತೀಚೆಗೆ ಠಾಕ್ರೆ ಅವರು ಉರ್ದು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ ತಪ್ಪಾದ ಹೇಳಿಕೆಯನ್ನು ಫೇಕ್ ಎಂದು ವರದಿ ಮಾಡಿದೆ.
ನಾವು ಕಂಡುಕೊಂಡದ್ದು ಏನು?
ವೈರಲ್ ಪೋಷ್ಟ್ ಸಮರ್ಥನೆಯನ್ನು ಬೆಂಬಲಿಸುವ ಪುರಾವೆಗಳನ್ನು ಒದಗಿಸದಿದ್ದರೂ, ಗೂಗಲ್ ಹುಡುಕಾಟವು ರಾವುತ್ ಠಾಕ್ರೆ ಬಗ್ಗೆ ಅಂತಹ ಹೇಳಿಕೆಯನ್ನು ಉಲ್ಲೇಖಿಸಿ ಯಾವುದೇ ವರದಿಗಳನ್ನು ನಮಗೆ ತೋರಿಸಲಿಲ್ಲ.
ಪೋಷ್ಟ್ ನಲ್ಲಿ ಲೋಕಮಾತ್ ಅವರ ಲೋಗೋವನ್ನು ಪರಿಗಣಿಸಿ, ನಾವು ಸುದ್ದಿ ಮಾಧ್ಯಮದ ಎಕ್ಸ್ ಪುಟವನ್ನು ಪರಿಶೀಲಿಸಿದ್ದೇವೆ ಆದರೆ ಅಂತಹ ಯಾವುದೇ ಪೋಸ್ಟ್ ಕಂಡುಬಂದಿಲ್ಲ. ಬದಲಾಗಿ, ಅಕ್ಟೋಬರ್ ೧೯, ೨೦೨೪ ರಂದು ಪೋಷ್ಟ್ ಮಾಡಲಾದ ಹೇಳಿಕೆಯನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಾವು ಕಂಡುಕೊಂಡಿದ್ದೇವೆ, ಅದರಲ್ಲಿ ಸುದ್ದಿ ಮಾಧ್ಯಮವು ಈ ಗ್ರಾಫಿಕ್ ಅಥವಾ ವರದಿಯನ್ನು ರಚಿಸಿಲ್ಲ ಎಂದು ಸ್ಪಷ್ಟಪಡಿಸಿದೆ, ವೈರಲ್ ಪೋಷ್ಟ್ ಅನ್ನು ಫೇಕ್ ಎಂದು ಫ್ಲ್ಯಾಗ್ ಮಾಡಿದೆ.
ಲೋಕಮತ್ ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷದ ನಾಯಕ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರ ಬಗ್ಗೆ ತಪ್ಪುದಾರಿಗೆಳೆಯುವ ಗ್ರಾಫಿಕ್ 'ಲೋಕಮತ್' ಹೆಸರಿನಲ್ಲಿ ವೈರಲ್ ಆಗಿದೆ. ಆದರೆ, ಅಂತಹ ಯಾವುದೇ ಗ್ರಾಫಿಕ್ ಅನ್ನು 'ಲೋಕಮತ್' ಮಾಡಿಲ್ಲ ಆದರೆ ಇದು 'ಲೋಕಮತ್' ನ ಹೆಸರು ಮತ್ತು ಲೋಗೋವನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ನಿರ್ದಿಷ್ಟ ಸಿದ್ಧಾಂತದ ಬೆಂಬಲಿಗರು ಮಾಡಿದ ವಂಚನೆ," ಎಂದು ಹೇಳಿದೆ.
ವೈರಲ್ ಪೋಷ್ಟ್ ನ ಗ್ರಾಫಿಕ್ ಫೇಕ್ ಎಂದು ಹೇಳುವ ಲೋಕಮತ್ ಸ್ಪಷ್ಟೀಕರಣದ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಹೆಚ್ಚುವರಿಯಾಗಿ, ಲೋಕಮತ್ ಇತ್ತೀಚೆಗೆ ರಾವುತ್ ಅವರ ಉಲ್ಲೇಖದೊಂದಿಗೆ ಇದೇ ರೀತಿಯ ಗ್ರಾಫಿಕ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪ್ರಕಟಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ. ಸ್ವರೂಪವು ವೈರಲ್ ಚಿತ್ರವನ್ನು ಹೋಲುತ್ತದೆ, ಆದರೆ ಫಾಂಟ್ ವಿಭಿನ್ನವಾಗಿತ್ತು, ಈ ಗ್ರಾಫಿಕ್ ಅನ್ನು ಬಳಸಿಕೊಂಡು ಫೇಕ್ ಚಿತ್ರವನ್ನು ರಚಿಸಲಾಗಿದೆ ಎಂದು ಸೂಚಿಸುತ್ತದೆ.
ಅದೇ ಸ್ವರೂಪದಲ್ಲಿ (ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) ಲೋಕಮಾತ್ ಪ್ರಕಟಿಸಿದ ಇತರ ಗ್ರಾಫಿಕ್ಸ್‌ಗಳನ್ನು ಸಹ ನಾವು ಕಂಡುಕೊಂಡಿದ್ದೇವೆ.
ಫಾಂಟ್ ಎರಡೂ ಗ್ರಾಫಿಕ್ಸ್‌ನಲ್ಲಿ ಭಿನ್ನವಾಗಿದೆ, ವೈರಲ್ ಪೋಷ್ಟ್ ನಲ್ಲಿ ಬಳಸಲಾದ ಗ್ರಾಫಿಕ್ ಅನ್ನು ಈ ಲೋಕಮಾತ್ ಫಾರ್ಮ್ಯಾಟ್ ಬಳಸಿ ಮಾರ್ಫ್ ಮಾಡಲಾಗಿದೆ ಎಂದು ಸೂಚಿಸುತ್ತದೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ತೀರ್ಪು
ವೈರಲ್ ಪೋಷ್ಟ್ ನಲ್ಲಿ ಸಂಜಯ್ ರಾವುತ್ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ಪುರಾವೆಗಳಿಲ್ಲ. ವೈರಲ್ ಗ್ರಾಫಿಕ್‌ನಲ್ಲಿ ಟೆಂಪ್ಲೇಟ್ ಅನ್ನು ಬಳಸಿರುವ ಲೋಕಮತ್, ತಾನು ಈ ಪೋಷ್ಟ್ ಅನ್ನು ಪ್ರಕಟಿಸಿಲ್ಲ ಮತ್ತು ಅದನ್ನು ಫೇಕ್ ಚಿತ್ರ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.