ಮೂಲಕ: ರಾಹುಲ್ ಅಧಿಕಾರಿ
ಅಕ್ಟೋಬರ್ 17 2023
೨೦೧೪ ರಲ್ಲಿ ಪ್ರಧಾನಮಂತ್ರಿಯವರ ಕಿರಿಯ ಪುತ್ರ ಅವ್ನರ್ ನೆತನ್ಯಾಹು ಇಸ್ರೇಲ್ ಡಿಫೆನ್ಸ್ ಫೋರ್ಸ್‌ಗೆ ಸೇರಿದಾಗ ವೈರಲ್ ಚಿತ್ರಣವನ್ನು ತೆಗೆದುಕೊಳ್ಳಲಾಗಿದೆ.
ನಿರೂಪಣೆ ಏನು?
ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಮಗನನ್ನು ಇಸ್ರೇಲ್ ಸಶಸ್ತ್ರ ಪಡೆಗೆ ಸೇರಲು ಸೈನಿಕನಾಗಿ ದೇಶಕ್ಕೆ ಸೇವೆ ಸಲ್ಲಿಸಲು ಕಳುಹಿಸಿದ್ದಾರೆ ಎಂದು ಹೇಳುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪ್ರಶ್ನೆಯಲ್ಲಿರುವ ಚಿತ್ರವು ಇಸ್ರೇಲ್ ಪ್ರಧಾನಿ, ಓರ್ವ ಮಹಿಳೆ ಮತ್ತು ಯುವಕನೊಂದಿಗೆ ನಿಂತಿರುವುದನ್ನು ತೋರಿಸುತ್ತದೆ.
ಹಲವಾರು ಬಳಕೆದಾರರು ಫೇಸ್‌ಬುಕ್‌ನಲ್ಲಿ ಈ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ, "ಇಸ್ರೇಲ್ ಪಿಎಂ ನೆತನ್ಯಾಹು ಮತ್ತು ಅವರ ಪತ್ನಿ, ಪೋಷಕರು ತಮ್ಮ ಮಗನನ್ನು ದೇವರ ಭೂಮಿಯನ್ನು ರಕ್ಷಿಸಲು ಸೈನಿಕನಾಗಿ ದೇಶಕ್ಕೆ ಸೇವೆ ಸಲ್ಲಿಸಲು ಕಳುಹಿಸುತ್ತಾರೆ. ವಿಜಯವು ಖಚಿತ ಮತ್ತು ಖಚಿತವಾಗಿದೆ, ದೇವರ ದೂತನು ಅವನೊಂದಿಗಿದ್ದಾನೆ. ಆಮೆನ್! ನೆನಪಿಡಿ, ಪೋಷಕರು ಅವರನ್ನು ಮಕ್ಕಳಾಗಿ ಬೆಳೆಸುತ್ತಾರೆ, ಆದರೆ ದೇವರು ಅವರನ್ನು ವೀರರನ್ನಾಗಿ ಮಾಡುತ್ತಾನೆ. ದೇವರು ಇಸ್ರೇಲ್ ಅನ್ನು ಆಶೀರ್ವದಿಸುತ್ತಾನೆ.” ಅಂತಹ ಒಂದು ಪೋಷ್ಟ್ ಪ್ರಕಟಿಸುವ ಸಮಯದಲ್ಲಿ ೩೨೦ ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಇದೇ ರೀತಿಯ ಪೋಷ್ಟ್ ಒಂದು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವೈರಲ್ ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.
ಎಕ್ಸ್ ಮತ್ತು ಫೇಸ್‌ಬುಕ್ ನಲ್ಲಿ ವೈರಲ್ ಪೋಷ್ಟಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಚಿತ್ರವು ೨೦೧೪ ರದ್ದು ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವಿನ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿಲ್ಲ.
ನಾವು ಏನು ಕಂಡುಕೊಂಡಿದ್ದೇವೆ?
ಪಿಎಂ ನೆತನ್ಯಾಹು ಅವರ ಕಿರಿಯ ಮಗ ಅವ್ನರ್ ನೆತನ್ಯಾಹು ಅವರು ತಮ್ಮ ಕಡ್ಡಾಯ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಲು ಇಸ್ರೇಲ್ ರಕ್ಷಣಾ ಪಡೆಗೆ (ಐಡಿಎಫ್) ಸೇರಿದಾಗ ೨೦೧೪ ರಲ್ಲಿ ಸೆರೆಹಿಡಿಯಲಾದ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಬಹಿರಂಗಪಡಿಸಿದೆ. ಡಿಸೆಂಬರ್ ೧, ೨೦೧೪ ರಂದು ಪ್ರಕಟವಾದ ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ವೈರಲ್ ಫೋಟೋದಲ್ಲಿರುವ ಮಹಿಳೆ ಮತ್ತು ಯುವಕ ಪ್ರಧಾನಿಯವರ ಪತ್ನಿ ಸಾರಾ ನೆತನ್ಯಾಹು ಮತ್ತು ಮಗ ಅವ್ನರ್ ನೆತನ್ಯಾಹು. ಅವ್ನರ್ ಅವರ ಪೋಷಕರು ಮತ್ತು ಅವರ ಹಿರಿಯ ಸಹೋದರ ಯೈರ್ ನೆತನ್ಯಾಹು ಅವರು ಈಗಾಗಲೇ ಅವರ ಸೇವೆಯನ್ನು ಪೂರ್ಣಗೊಳಿಸಿದ್ದಾರೆ, ಟೆಲ್ ಅವೀವ್ ಬಳಿಯ ಇಂಡಕ್ಷನ್ ಸೆಂಟರ್‌ಗೆ - ಬಸ್ ಹತ್ತಲು ಹೊಸ ನೇಮಕಾತಿದಾರರು ಸೇರುವ ಮುಖ್ಯ ಸ್ಥಳವಾದ ಆಮ್ಯುನಿಷನ್ ಹಿಲ್ ಕಲೆಕ್ಷನ್ ಪಾಯಿಂಟ್‌ನಲ್ಲಿ ಅವರನ್ನು ನೋಡಲು ಹೋದರು ಎಂದು ವರದಿ ಹೇಳಿದೆ.
"ತಮ್ಮ ಮಗ ಸೈನ್ಯಕ್ಕೆ ಹೋಗುವುದನ್ನು ನೋಡುವ ಪ್ರತಿಯೊಬ್ಬ ತಾಯಿ ಮತ್ತು ತಂದೆಯಂತೆಯೇ ನಾವೂ ಭಾವುಕರಾಗಿದ್ದೇವೆ. ನಾವು ಹೆಮ್ಮೆಯಿಂದ ತುಂಬಿದ್ದೇವೆ ಮತ್ತು ಸಹಜವಾಗಿ ಚಿಂತೆ ಮಾಡುತ್ತೇವೆ. ಪ್ರತಿಯೊಬ್ಬರಿಗೂ ಇದು ತಿಳಿದಿದೆ, ಇಸ್ರೇಲ್‌ನಲ್ಲಿರುವ ಪ್ರತಿ ಮನೆ, ಮತ್ತು ನಾವು ಭಿನ್ನವಾಗಿಲ್ಲ. ನಾನು ಅವ್ನರ್ ಗೆ ರಾಜ್ಯವನ್ನು ನೋಡಿಕೊಳ್ಳಲು ಮತ್ತು ತನ್ನನ್ನು ತಾನೇ ನೋಡಿಕೊಳ್ಳಲು ಹೇಳಿದೆ," ಪಿಎಂ ನೆತನ್ಯಾಹು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಡಿಸೆಂಬರ್ ೧, ೨೦೧೪ ರ ಸುದ್ದಿ ವರದಿಯ ಸ್ಕ್ರೀನ್‌ಶಾಟ್. (ಮೂಲ: ಟೈಮ್ಸ್ ಆಫ್ ಇಸ್ರೇಲ್/ಸ್ಕ್ರೀನ್‌ಶಾಟ್)
ಇಸ್ರೇಲಿ ಮಾಧ್ಯಮ ಔಟ್ಲೆಟ್ ಜೆರುಸಲೆಮ್ ಪೋಷ್ಟ್ ಡಿಸೆಂಬರ್ ೧, ೨೦೧೪ ರಂದು ಇದೇ ರೀತಿಯ ವಿವರಗಳನ್ನು ವರದಿ ಮಾಡುವ ಲೇಖನದಲ್ಲಿ ಚಿತ್ರವನ್ನು ಪ್ರಕಟಿಸಿತು. ಅವ್ನರ್ ತನ್ನ ಮೂರು ವರ್ಷಗಳ ಕಡ್ಡಾಯ ಸೇನಾ ಸೇವೆಯನ್ನು ಐಡಿಎಫ್ ನ ಯುದ್ಧ ಗುಪ್ತಚರ ಕಲೆಕ್ಷನ್ ಕಾರ್ಪ್ಸ್‌ನಲ್ಲಿ ಪ್ರಾರಂಭಿಸಿದ್ದಾರೆ ಎಂದು ವರದಿ ಹೇಳಿದೆ.
ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಪ್ರಕಾರ, ೧೮ ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ಇಸ್ರೇಲಿ ಪ್ರಜೆಯು ಯಹೂದಿ, ಡ್ರೂಜ್ ಅಥವಾ ಸರ್ಕಾಸಿಯನ್ ಆಗಿರುವವರು ಕೆಲವು ವಿನಾಯಿತಿಗಳೊಂದಿಗೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಸೇರ್ಪಡೆಗೊಂಡ ಪುರುಷರು ಕನಿಷ್ಠ ೩೨ ತಿಂಗಳುಗಳವರೆಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ ಮತ್ತು ಮಹಿಳೆಯರು ಕನಿಷ್ಠ ೨೪ ತಿಂಗಳುಗಳವರೆಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ.
ಅವ್ನರ್ ನೆತನ್ಯಾಹು ಅವರು ಡಿಸೆಂಬರ್ ೨೦೧೭ ರಲ್ಲಿ ತಮ್ಮ ಕಡ್ಡಾಯ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಿದರು. ಡಿಸೆಂಬರ್ ೨೦೧೭ ರಲ್ಲಿ ಇಸ್ರೇಲ್ ನ್ಯಾಷನಲ್ ನ್ಯೂಸ್ ಪ್ರಕಟಿಸಿದ ವರದಿಯ ಪ್ರಕಾರ, ಪಿಎಂ ನೆತನ್ಯಾಹು ಅವರು ಹೀಗೆ ಹೇಳಿದ್ದರು, “ಅವ್ನರ್ ಸೈನ್ಯದಲ್ಲಿ ಮಹತ್ವದ ಅವಧಿಯನ್ನು ಪೂರ್ಣಗೊಳಿಸಿದರು. ಮೂರು ವರ್ಷಗಳ ಹಿಂದೆ ನಾವು ಬಲವಂತದಿಂದ ನಿಮ್ಮನ್ನು ತಬ್ಬಿಕೊಂಡಿದ್ದವು ಮತ್ತು ಇಂದು ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ತೆರೆಯುವುದರೊಂದಿಗೆ ನಾವು ಉತ್ಸುಕರಾಗಿದ್ದೇವೆ.”
ಹಮಾಸ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಇಸ್ರೇಲಿ ಪ್ರಧಾನ ಮಂತ್ರಿ ತನ್ನ ಮಕ್ಕಳನ್ನು ಮತ್ತೆ ಇಸ್ರೇಲಿ ಸಶಸ್ತ್ರ ಪಡೆಗಳಿಗೆ ಸೇರಲು ಕಳುಹಿಸಿರುವ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ.
ಇಸ್ರೇಲ್-ಹಮಾಸ್ ಯುದ್ಧ
ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಮತ್ತು ಇಸ್ರೇಲ್ ಪ್ರತಿಕ್ರಿಯೆಯಿಂದ, ಗಾಜಾದ ಸಾವಿನ ಸಂಖ್ಯೆ ೨,೦೦೦ ದಾಟಿದೆ. ವರದಿಗಳ ಪ್ರಕಾರ, ಇಸ್ರೇಲ್ ತನ್ನ ಸೈನ್ಯವನ್ನು ಸಜ್ಜುಗೊಳಿಸುತ್ತಿದೆ, ಗಾಜಾ ಗಡಿಯ ಬಳಿ ೩೦೦,೦೦೦ ಮೀಸಲುದಾರರನ್ನು ಸಂಗ್ರಹಿಸುತ್ತಿದೆ, ಇಸ್ರೇಲ್ ಸಂಪೂರ್ಣ ಮುತ್ತಿಗೆಯನ್ನು ಘೋಷಿಸುತ್ತಿದ್ದಂತೆ ವಿದ್ಯುತ್, ನೀರು ಮತ್ತು ಇಂಧನವಿಲ್ಲದೆ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಗಾಜಾ, ಕಲಹ ಪೀಡಿತ ಪ್ರದೇಶ, ಪಟ್ಟಿಯಲ್ಲಿ ಸುಮಾರು ೧೫೦ ಒತ್ತೆಯಾಳುಗಳನ್ನು ಹಮಾಸ್ ಉಗ್ರರು ಹಿಡಿದಿಟ್ಟುಕೊಂಡಿದ್ದಾರೆ.
ತೀರ್ಪು
೨೦೧೪ ರಲ್ಲಿ ಐಡಿಎಫ್‌ನಲ್ಲಿ ಕಡ್ಡಾಯ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಲು ಪಿಎಂ ಬೆಂಜಮಿನ್ ನೆತನ್ಯಾಹು ತನ್ನ ಕಿರಿಯ ಮಗನನ್ನು ಕಳುಹಿಸುತ್ತಿರುವ ಹಳೆಯ ಚಿತ್ರವನ್ನು ಸಂದರ್ಭವಿಲ್ಲದೆ ಹಂಚಿಕೊಳ್ಳಲಾಗಿದೆ ಮತ್ತು ನಡೆಯುತ್ತಿರುವ ಯುದ್ಧಕ್ಕೆ ಲಿಂಕ್ ಮಾಡಲಾಗಿದೆ. ಪ್ರಸ್ತುತ ಇಸ್ರೇಲ್-ಹಮಾಸ್ ಯುದ್ಧದ ನಡುವೆ ನೆತನ್ಯಾಹು ಅವರ ಪುತ್ರರು ಮತ್ತೆ ಸೇನೆಗೆ ಸೇರ್ಪಡೆಗೊಂಡ ಬಗ್ಗೆ ಯಾವುದೇ ವರದಿಗಳಿಲ್ಲ. ಆದ್ದರಿಂದ, ನಾವು ಹಕ್ಕನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತೇವೆ.
(ಅನುವಾದಿಸಿದವರು: ರಜಿನಿ ಕೆ.ಜಿ)