ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 12 2023
೨೦೧೯ ರ ವೀಡಿಯೋವಿನ ಸಣ್ಣ ಕ್ಲಿಪ್ ಒಂದನ್ನು ಇತ್ತೀಚಿನದ್ದು ಎಂದು ತಪ್ಪು ಪ್ರಚಾರ ಮಾಡಲಾಗಿದೆ.
ಸಂದರ್ಭ
ಕರ್ನಾಟಕ ರಾಜ್ಯ ಚುನಾವಣೆಯ ಹಿನ್ನಲೆಯಲ್ಲಿ ನಟ ಮತ್ತು ರಾಜಕಾರಣಿ ಪ್ರಕಾಶ್ ರಾಜ್ ಅವರು "ಕಾಂಗ್ರೆಸ್‌ಗೆ ನಿಮ್ಮ ಮತವನ್ನು ನೀಡಿ ವ್ಯರ್ಥ ಮಾಡಬೇಡಿ" ಎಂದು ಹೇಳುವ ಹಳೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ. ರೂಪಾ ಮೂರ್ತಿ ಎಂಬ ಟ್ವಿಟ್ಟರ್ ಬಳಕೆದಾರರು ಈ ವೀಡಿಯೋವನ್ನು ಪ್ರಿಯ ಕರ್ನಾಟಕ, ಕಾಂಗ್ರೆಸ್‌ಗೆ ನಿಮ್ಮ ಮತಗಳನ್ನು ವ್ಯರ್ಥ ಮಾಡಬೇಡಿ ಎಂದು ಪ್ರಕಾಶ ನಿಮ್ಮೆಲ್ಲರನ್ನು ಕೇಳಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಕೊಳಕು ರಾಜಕಾರಣದಿಂದ ನೊಂದಿದ್ದಾರೆ. ಆದ್ದರಿಂದ ದಯವಿಟ್ಟು ಬಿಜೆಪಿಗೆ ಮತ ನೀಡಿ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಆದರೆ ಈ ವೀಡಿಯೋ ಎಡಿಟ್ ಮಾಡಿ ತಪ್ಪಾದ ಹೇಳಿಕೆಯೊಂದಿಗೆ ಶೇರ್ ಮಾಡಲಾಗಿದೆ.
ವಾಸ್ತವವಾಗಿ
೨೦೧೯ರಲ್ಲಿ ನಟ ಹಂಚಿಕೊಂಡ ವೈರಲ್ ವೀಡಿಯೋದ ದೀರ್ಘ ಆವೃತ್ತಿಯನ್ನು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ ಪ್ರಕಾಶ್ ರಾಜ್ ಅವರು ಏಪ್ರಿಲ್ ೧೭, ೨೦೧೯ ರಂದು ಆ ವರ್ಷದ ಲೋಕಸಭೆ ಚುನಾವಣೆಯ ಮೊದಲು ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಅವರ ಆಪ್ತ ಸಹಾಯಕ, ಅರ್ಷದ್ ಮತ್ತು ರಾಜ್ ಭೇಟಿಯಾಗಿರುವ ಹಳೆಯ ಚಿತ್ರವನ್ನು ಉಲ್ಲೇಖಿಸಿ, ಅರ್ಷದ್ ರಾಜ್ ಅವರ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ಸುಳ್ಳು ಪ್ರಚಾರವನ್ನು ಹರಡುತ್ತಿದ್ದಾರೆ ಎಂದು ನಟ ಹೇಳಿದ್ದಾರೆ.
ತಾನು ಸ್ವತಂತ್ರ ಅಭ್ಯರ್ಥಿ ಮತ್ತು ಕಾಂಗ್ರೆಸ್‌ನಿಂದ "ಈ ಕೊಳಕು ರಾಜಕೀಯವು ಗಂಭೀರವಾದ ಅಪರಾಧ" ಎಂದು ರಾಜ್ ವೀಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ರಾಜ್ ಅವರ ಹೇಳಿಕೆಯ ಭಾಗವನ್ನು ಎಡಿಟ್ ಮಾಡಲಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ತಾವು ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಯಾವುದೇ ಪಕ್ಷದೊಂದಿಗೆ ಕೈಜೋಡಿಸಿಲ್ಲವೆಂದು ವೀಡಿಯೋದಲ್ಲಿ ಸ್ಪಷ್ಟಪಡಿಸಲಾಗಿತ್ತು.
ವೈರಲ್ ಆಗಿರುವ ವೀಡಿಯೋ ಮತ್ತು ೨೦೨೩ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದು ರಾಜ್ ಯಾವುದೇ ಹೇಳಿಕೆ ನೀಡಿಲ್ಲ.
ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವೀಡಿಯೋಗಳು ತಪ್ಪಾದ ನಿರೂಪಣೆಗಳೊಂದಿಗೆ ಹರಿದಾಡುತ್ತಿವೆ. ಲಾಜಿಕಲಿ ಫ್ಯಾಕ್ಟ್ಸ್ ಚುನಾವಣೆಗಳಿಗೆ ಸಂಬಂಧಿಸಿದ ಇದೇ ರೀತಿಯ ಪೋಷ್ಟ್ ಗಳನ್ನೂ ಪರಿಶೀಲಿಸಿದೆ.
ತೀರ್ಪು
ಲೋಕಸಭಾ ಚುನಾವಣೆಗೆ ಮುನ್ನ ೨೦೧೯ರ ರಾಜ್ ಅವರ ಹಳೆಯ ವೀಡಿಯೋವನ್ನು ಬೇರೆ ಸಂದರ್ಭಕ್ಕೆ ಅನುಸಾರವಾಗಿ ಶೇರ್ ಮಾಡಲಾಗಿದೆ ಮತ್ತು ೨೦೨೩ ರ ಕರ್ನಾಟಕ ಚುನಾವಣೆಗೆ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ. ಆದ್ದರಿಂದ, ನಾವು ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರಿತಿಸಿದ್ದೇವೆ.