ಮುಖಪುಟ ಹಳೆಯ, ಸಂಬಂಧವಿಲ್ಲದ ವೀಡಿಯೋವನ್ನು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಹಳೆಯ, ಸಂಬಂಧವಿಲ್ಲದ ವೀಡಿಯೋವನ್ನು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ: ರಾಜೇಶ್ವರಿ ಪರಸ

ಜನವರಿ 16 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಹಳೆಯ, ಸಂಬಂಧವಿಲ್ಲದ ವೀಡಿಯೋವನ್ನು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಜುಲೈ ೨೦೨೩ರಲ್ಲಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ದೃಶ್ಯಗಳನ್ನು ವೈರಲ್ ವೀಡಿಯೋ ತೋರಿಸುತ್ತದೆ.

ಹೇಳಿಕೆ ಏನು?

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನ ರಾಮ ಮಂದಿರವನ್ನು ಜನವರಿ ೨೨ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಉದ್ಘಾಟನೆಗು ಮುನ್ನ, ಅಯೋಧ್ಯೆಯಲ್ಲಿ ಆಯೋಜಿಸಲಾದ ಧಾರ್ಮಿಕ ಮೆರವಣಿಗೆ ಯದ್ದು (ಕಲಶ ಯಾತ್ರೆ) ಎನ್ನಲಾದ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. 

೨:೩೬ ನಿಮಿಷಗಳ ವೀಡಿಯೋದಲ್ಲಿ ಜನರು ಕೇಸರಿ ಬಟ್ಟೆಗಳು ಮತ್ತು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ರಾಮ ದೇವರನ್ನು ಸ್ತುತಿಸಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಕೆಲವು ಮಹಿಳೆಯರು ಕ್ಲಿಪ್‌ನಲ್ಲಿ ತಮ್ಮ ತಲೆಯ ಮೇಲೆ ಕಲಶವನ್ನು (ಕೆಲವು ಹಿಂದೂ ಆಚರಣೆಗಳಲ್ಲಿ ಬಳಸುವ ಮಡಕೆ ) ಹಿಡಿದಿರುವುದನ್ನು ಕಾಣಬಹುದು. ಫೇಸ್‌ಬುಕ್‌ ನಲ್ಲಿ ಅಂತಹ ಪೋಷ್ಟ್ ಒಂದರ ಶೀರ್ಷಿಕೆ ಹೀಗಿದೆ, "ತನ್ನ ತವರು ಮನೆಯಿಂದ (ಜಾನಕ್ ಪುರಿ, ನೇಪಾಳ) ಅಯೋಧ್ಯೆಗೆ ಮಾತೇ ಸಿತಾದೇವಿಯ ಸೀರೆ, ಬಹುಮಾನಗಳನ್ನು ತೆಗೆದುಕೊಂಡು ಬರುತ್ತಿರುವ ಜಾನಕ್ ಪುರಿಯ ನಿವಾಸಿಗಳು.. ರಾಮನ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ." ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಇದೇ ರೀತಿಯ ನಿರೂಪಣೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡ ಇತರ ಪೋಷ್ಟ್ ಗಳ ಆರ್ಕೈವ್ ಅನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. 

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ:  ಫೇಸ್‌ಬುಕ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೀಡಿಯೋ ಅಯೋಧ್ಯೆಯಲ್ಲಿ ಸೆರೆಹಿಡಿಯಲಾಗಿಲ್ಲ. ಇದು ಜುಲೈ ೨೦೨೩ ರಲ್ಲಿ ಗ್ರೇಟರ್ ನೋಯ್ಡಾದಲ್ಲಿ ನಡೆದ ಮೆರವಣಿಗೆಯನ್ನು ತೋರಿಸುತ್ತದೆ. 

ಸತ್ಯ ಏನು?

ವೀಡಿಯೋದ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಅದು ಜುಲೈ ೨೦೨೩ ರಂದು ಎಕ್ಸ್ (ಹಿಂದೆ ಟ್ವಿಟರ್) ಪೋಷ್ಟ್ ಗೆ  ನಮ್ಮನ್ನು ಕರೆದೊಯ್ಯಿತು. ಅದು ವೈರಲ್ ಕ್ಲಿಪ್ ನ ಅದೇ ದೃಶ್ಯಗಳನ್ನು ಹೊಂದಿದೆ ಮತ್ತು "ನೋಯ್ಡಾದಲ್ಲಿ ಬಾಗೇಶ್ವರ್ ಧಾಮ್ ಸರ್ಕಾರ್ ಕಲಾಶ್ ಯಾತ್ರೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. 

ಜುಲೈ ೯, ೨೦೨೩ ರಂದು ಈಟಿವಿ ಭಾರತ್ ದೆಹಲಿ ಪ್ರಕಟಿಸಿದ ಹಿಂದಿ ಸುದ್ದಿ ವರದಿಯನ್ನು ನಾವು ಕಂಡುಕೊಂಡೆವು. ಅದು ವೈರಲ್ ವೀಡಿಯೋದ ದೃಶ್ಯಗಳನ್ನು ಹೊಂದಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ 'ಬಾಗೇಶ್ವರ್ ಧಾಮ್ ಸರ್ಕಾರ್' ಜುಲೈ ೧೦-೧೬, ೨೦೨೩ ರಿಂದ ನಡೆಯಲಿರುವ 'ಭಗವತ್ ಕಥಾ' ಎಂಬ ಹಿಂದೂ ಕಾರ್ಯಕ್ರಮಕ್ಕೆ ಮುಂಚಿತವಾಗಿ 'ಕಲಶ ಯಾತ್ರೆ' ನಡೆಸಲಾಯಿತು ಎಂದು ವರದಿ ಹೇಳಿದೆ. ಜುಲೈ ೯ ರಂದು ನಡೆದ ಕಾರ್ಯಕ್ರಮಕ್ಕೆ ಮುಂಚಿತವಾಗಿ, ಭಕ್ತರು ಮೂರು ಕಿಲೋಮೀಟರ್ ಉದ್ದದ ‘ಕಲಶ ಯಾತ್ರೆ’ಯಲ್ಲಿ ಪಾಲ್ಗೊಂಡರು ಎಂದು ವರದಿ ತಿಳಿಸುತ್ತದೆ.

ಹೆಚ್ಚಿನ ಸಂಶೋಧನೆಯು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿರುವ 'ಬಾಗೇಶ್ವರ್ ಧಾಮ್ ಸರ್ಕಾರ್'- ದೇವಾಲಯದ ಅಧಿಕೃತ ಯೂಟ್ಯೂಬ್ ಚಾನಲ್‌ಗೆ ನಮ್ಮನ್ನು ಕರೆದೊಯ್ಯಿತು. ಚಾನೆಲ್ ಜುಲೈ ೯, ೨೦೨೩ ರಂದು “ಜೈತ್‌ಪುರ ಗ್ರೇಟರ್ ನೋಯ್ಡಾ ಶೋಬಾ ಯಾತ್ರೆ ಮತ್ತು ಕಲಶ ಯಾತ್ರೆ” ಎಂಬ ಶೀರ್ಷಿಕೆಯೊಂದಿಗೆ ಮೆರವಣಿಗೆಯ ವೀಡಿಯೋವನ್ನು ಅಪ್‌ಲೋಡ್ ಮಾಡಿದೆ. ವೈರಲ್ ಕ್ಲಿಪ್‌ನಿಂದ ಇದೇ ರೀತಿಯ ದೃಶ್ಯಗಳನ್ನು ಈ ಯೂಟ್ಯೂಬ್ ವೀಡಿಯೋದಲ್ಲಿ ೦:೫೭ ಟೈಮ್‌ಸ್ಟ್ಯಾಂಪ್‌ನಲ್ಲಿ ಗುರುತಿಸಬಹುದು.

ಬಾಗೇಶ್ವರ್ ಧಾಮ್ ಸರ್ಕಾರ್ ಅವರ ಯೂಟ್ಯೂಬ್ ಚಾನೆಲ್ ಹಂಚಿಕೊಂಡಿರುವ ವೀಡಿಯೋದ ಸ್ಕ್ರೀನ್‌ಶಾಟ್.
(ಮೂಲ: ಯೂಟ್ಯೂಬ್/ Bageshwar Dham Sarkar)

ವರದಿಗಳ ಪ್ರಕಾರ, ಜನವರಿ ೪ ರಂದು ಅಯೋಧ್ಯೆಯಲ್ಲಿ ನಿಜವಾಗಿಯೂ 'ಕಲಶ ಯಾತ್ರೆ' ನಡೆಯಿತು. ಸುದ್ದಿ ವಾಹಿನಿ ನ್ಯೂಸ್ ೧೮ ತನ್ನ ಯೂಟ್ಯೂಬ್ ಚಾನೆಲ್ 'ನ್ಯೂಸ್ ೧೮ ಡಿಬೇಟ್ಸ್ ಅಂಡ್ ಇಂಟರ್ವ್ಯೂಸ್' ನಲ್ಲಿ ಈ ಕಾರ್ಯಕ್ರಮವನ್ನು ಲೈವ್-ಸ್ಟ್ರೀಮ್ ಮಾಡಿದೆ,"ಲೈವ್: ಅಯೋಧ್ಯೆ ರಾಮ ಮಂದಿರ, ಅಕ್ಷತ ಕಲಶ ಯಾತ್ರೆ” ಎಂಬ ಶೀರ್ಷಿಕೆ ನೀಡಲಾಗಿದೆ. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ತಲೆಯ ಮೇಲೆ ಕಲಶವನ್ನು ಹಿಡಿದಿರುವ ಜನರನ್ನು ನಾವು ಇಲ್ಲಿಯೂ ನೋಡಬಹುದು, ಆದರೆ ವೈರಲ್ ಪೋಷ್ಟ್ ನಲ್ಲಿ ಕಂಡುಬರುವ ದೃಶ್ಯಗಳು ವಿಭಿನ್ನವಾಗಿವೆ.  ವೈರಲ್ ಪೋಷ್ಟ್ ನಲ್ಲಿ ಜನರು ಎರಡೂ ಬದಿಗಳಲ್ಲಿ ಹಸಿರು ಹೊಂದಿರುವ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ತೋರಿಸಿದರೆ, ಜನವರಿ ೪ ರ ಮೆರವಣಿಗೆಯ ದೃಶ್ಯಗಳು ರಸ್ತೆಗಳಲ್ಲಿ ಕಟ್ಟಡಗಳು ಮತ್ತು ವಾಹನಗಳನ್ನು ತೋರಿಸುತ್ತವೆ.

ಅಯೋಧ್ಯೆ ಎಂದು ಹೇಳಿಕೊಳ್ಳುವ ವೈರಲ್ ವೀಡಿಯೋ ಮತ್ತು ಜನವರಿ ೪ ರಂದು ಅಲ್ಲಿ ನಡೆದ ‘ಕಲಶ ಯಾತ್ರೆ’ಯ ದೃಶ್ಯಗಳ ನಡುವಿನ ಹೋಲಿಕೆ. (ಮೂಲ: ಯೂಟ್ಯೂಬ್/ನ್ಯೂಸ್ ೧೮/ಸ್ಕ್ರೀನ್‌ಶಾಟ್)

ತೀರ್ಪು

ಗ್ರೇಟರ್ ನೋಯ್ಡಾದಲ್ಲಿ ೨೦೨೩ ರಲ್ಲಿ ನಡೆದ ಧಾರ್ಮಿಕ ಮೆರವಣಿಗೆಯ ದೃಶ್ಯಗಳನ್ನು ಅಯೋಧ್ಯೆಯಲ್ಲಿ ಇತ್ತೀಚೆಗೆ ನಡೆದ ಮೆರವಣಿಗೆ ಎಂದು ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ