ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಭೇಟಿಯನ್ನು ವಿರೋಧಿಸಿ ಕನ್ಯಾಕುಮಾರಿಯಲ್ಲಿ ನಡೆದ ಪ್ರತಿಭಟನೆ ಎಂದು ಹಳೆಯ, ಎಡಿಟ್ ಮಾಡಿದ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಇಶಿತಾ ಗೋಯಲ್ ಜೆ
ಜೂನ್ 3 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಭೇಟಿಯನ್ನು ವಿರೋಧಿಸಿ ಕನ್ಯಾಕುಮಾರಿಯಲ್ಲಿ ನಡೆದ ಪ್ರತಿಭಟನೆ ಎಂದು ಹಳೆಯ, ಎಡಿಟ್ ಮಾಡಿದ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ

ಮೋದಿಯವರ ಇತ್ತೀಚಿನ ಕನ್ಯಾಕುಮಾರಿ ಭೇಟಿಯ ವಿರುದ್ಧದ ಪ್ರತಿಭಟನೆಯ ದೃಶ್ಯಗಳನ್ನು ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಹಂಚಿಕೊಳ್ಳಲಾಗುತ್ತಿರುವ ಎರಡು ದೃಶ್ಯಗಳು ಮೋದಿಯವರ ಇತ್ತೀಚಿನ ಕನ್ಯಾಕುಮಾರಿ ಭೇಟಿಗೆ ಸಂಬಂಧಿಸಿಲ್ಲ. ಮೊದಲ ಚಿತ್ರವನ್ನು ಎಡಿಟ್ ಮಾಡಲಾಗಿದೆ, ಎರಡನೆಯದು ೨೦೨೩ ರದ್ದು.

ಕ್ಲೈಮ್ ಐಡಿ 113a9a25

ಹೇಳಿಕೆ ಏನು? 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡಿನ ದೇವಾಲಯದ ಪಟ್ಟಣವಾದ ಕನ್ಯಾಕುಮಾರಿಯಲ್ಲಿ ಲೋಕಸಭೆ ಚುನಾವಣೆಗಳ ಪ್ರಚಾರದ ನಂತರ ೪೫ ಗಂಟೆಗಳ ಕಾಲ ಧ್ಯಾನವನ್ನು ಮಾಡಿದ್ದಾರೆ ಎಂದು ವರದಿಯಾಗಿದೆ. ಮೇ ೩೦ ರಂದು ಪ್ರಾರಂಭವಾದ ಅವರ ಭೇಟಿಯ ನಡುವೆ, ಮೂರು ದೃಶ್ಯಗಳು, ಪ್ರತಿಯೊಂದರಲ್ಲೂ "ಗೋ ಬ್ಯಾಕ್ ಮೋದಿ" ಎಂಬ ಘೋಷಣೆಯು ಪ್ರಮುಖವಾಗಿ ಗೋಚರಿಸುತ್ತದೆ, ಅಂತಹ ಪೋಷ್ಟ್ ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ತಮಿಳುನಾಡಿನ ಜನರು ಪ್ರಧಾನಿಯವರ ಭೇಟಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ಅದು ತೋರಿಸುತ್ತಾರೆ ಎಂದು ಹೇಳಲಾಗುತ್ತಿದೆ. 

ಕಳೆದ ಕೆಲವು ವರ್ಷಗಳಲ್ಲಿ, ಮೋದಿಯವರ ತಮಿಳುನಾಡಿನ ಭೇಟಿಗಳು ವಿವಾದಾಸ್ಪದವಾಗಿದ್ದು, ರಾಜ್ಯದಲ್ಲಿ ಪ್ರತಿಭಟನೆಗಳು ಹೆಚ್ಚಾಗಿ "ಮೋದಿ ಗೋ ಬ್ಯಾಕ್" ಘೋಷಣೆಯನ್ನು ಬಳಸಿಕೊಂಡು ಪ್ರತಿಭಟನೆಗಳು  ಕಂಡುಬಂದಿದ್ದವು.

ಈ ಕೊಲಾಜ್‌ಗಳಲ್ಲಿನ ಮೊದಲ ಚಿತ್ರವು ಆಂಗ್ಲ ಮತ್ತು ತಮಿಳಿನಲ್ಲಿ ಸ್ಥಳದ ಹೆಸರನ್ನು ಹೊಂದಿರುವ ಕನ್ಯಾಕುಮಾರಿ ಎಂಬ ರೈಲ್ವೇ ನಿಲ್ದಾಣದ ಸೈನ್‌ಬೋರ್ಡ್ ಅನ್ನು ತೋರಿಸುತ್ತದೆ, ಆದರೆ ನಡುವೆ "ಗೋ ಬ್ಯಾಕ್ ಮೋದಿ" ಎಂದು ಬರೆಯಲಾಗಿದೆ. ಎರಡನೆಯದು ಅದೇ ಮೋದಿ ವಿರೋಧಿ ವಾಕ್ಯವನ್ನು ಬರೆದಿರುವ ಕಪ್ಪು ಬಲೂನ್‌ಗಳನ್ನು ವ್ಯಕ್ತಿಯೊಬ್ಬ ಬಿಡುಗಡೆ ಮಾಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ವೀಡಿಯೋದಲ್ಲಿ ಅವರು ತಮಿಳಿನಲ್ಲಿ ಹೀಗೆ ಹೇಳಿದ್ದಾರೆ, "ಇದರಂತೆ ಲಕ್ಷ ಬಲೂನ್‌ಗಳು ಗಾಳಿಯಲ್ಲಿ ಹಾರಲು ಸಿದ್ಧವಾಗಿವೆ ಮತ್ತು ನಾಳೆ ಬಿಡುಗಡೆಯಾಗುತ್ತವೆ." ಮೂರನೆಯದು "ಗೋ ಬ್ಯಾಕ್ ಮೋದಿ" ಎಂದು ಹೇಳುವ ಅದೇ ಪೋಷ್ಟರ್ ಗಳ ಹಲವಾರು ಫೋಟೋಗಳನ್ನು ಬಳಸಿಕೊಂಡು ರಚಿಸಲಾದ ವೀಡಿಯೋ ಅದಾಗಿದೆ. 

ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, "ಸ್ವಾಮಿ ವಿವೇಕಾನಂದರ ಸ್ಮಾರಕವಾದ #ರಾಕ್ ಮೆಮೋರಿಯಲ್ ನಲ್ಲಿ ಧ್ಯಾನ ಮಾಡಲಿರುವ ಪ್ರಧಾನಿ ಮೋದಿಯವರ ೨ ದಿನಗಳ ಕನ್ಯಾಕುಮಾರಿ ಭೇಟಿಗೆ #ತಮಿಳುನಾಡಿನ ಜನರು ಈ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ. #ಕನ್ಯಾಕುಮಾರಿ (sic)." ಮತ್ತೊಬ್ಬ ಬಳಕೆದಾರರು ರೈಲ್ವೇ ನಿಲ್ದಾಣದ ಸೈನ್‌ಬೋರ್ಡ್‌ನ ಫೋಟೋವನ್ನು "ಗೋ ಬ್ಯಾಕ್ ಮೋದಿ" ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಕೊನೆಯ ಹಂತದ ಚುನಾವಣೆ ನಡೆಯುವ ಜೂನ್ ೧ ರವರೆಗೆ ಮೋದಿ ಕನ್ಯಾಕುಮಾರಿಯಲ್ಲಿದ್ದರು. 

ವಾಸ್ತವಾಂಶಗಳೇನು?

ಮೊದಲ ಚಿತ್ರವು ಹಳೆಯದು ಮತ್ತು ಎಡಿಟ್ ಮಾಡಲಾಗಿದೆ, ಎರಡನೇ ವೀಡಿಯೋ ೨೦೨೩ ರಎದ್ದು ಎಂದು ನಾವು ಕಂಡುಕೊಂಡಿದ್ದೇವೆ. ಆದರೆ, ಮೂರನೇ ವೀಡಿಯೋ ತಮಿಳುನಾಡಿನ ಇತ್ತೀಚಿನ ಘಟನೆಗಳನ್ನು ತೋರಿಸುತ್ತದೆ.

ರೈಲ್ವೆ ನಿಲ್ದಾಣದ ಸೈನ್ ಬೋರ್ಡ್

ರಿವರ್ಸ್ ಇಮೇಜ್ ಸರ್ಚ್ ಮೂಲಕ, ನಾವು ಫೋಟೋ ಸುದ್ದಿ ಸೈಟ್ ಪೆಟಾಪಿಕ್ಸೆಲ್ ನಲ್ಲಿ ಫೋಟೋ ಪ್ರಬಂಧದಲ್ಲಿ ಮೂಲ ಚಿತ್ರವನ್ನು ಕಂಡುಕೊಂಡೆವು. ವೆಬ್‌ಸೈಟ್ ಮಾರ್ಚ್ ೯, ೨೦೧೬ ರಂದು ಈ ಚಿತ್ರವನ್ನು ಪ್ರಕಟಿಸಿದೆ. ಪ್ರಬಂಧದ ಪ್ರಕಾರ ಭಾರತದ 'ಉದ್ದದ ರೈಲು', ದಿಬ್ರುಗಢ-ಕನ್ಯಾಕುಮಾರಿ ವಿವೇಕ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ ೧೫೯೦೬)  ಅಸ್ಸಾಂನ ಪೂರ್ವ ಮೂಲೆಯಿಂದ ಕನ್ಯಾಕುಮಾರಿಯವರೆಗೆ ೪,೨೭೩ ಕಿಮೀ ಪ್ರಯಾಣಿಸುತ್ತದೆ. ಫೋಟೋ ಪ್ರಬಂಧವು ಚಿತ್ರದ ಮೂಲ ಆವೃತ್ತಿಯನ್ನು "ಎಂಡ್ ಆಫ್ ದಿ ಲೈನ್" ಎಂಬ ಶೀರ್ಷಿಕೆಯನ್ನು ಹೊಂದಿದೆ. ಈ ಚಿತ್ರವು ಕನ್ಯಾಕುಮಾರಿ ಎಂಬ ಸ್ಥಳದ ಹೆಸರನ್ನು ತಮಿಳು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರದರ್ಶಿಸುವ ಫಲಕವನ್ನು ತೋರಿಸುತ್ತದೆ. ಚಿತ್ರಗಳನ್ನು ಹೋಲಿಸುವ ಮೂಲಕ, ವೈರಲ್ ಚಿತ್ರವನ್ನು ಸಂಪಾದಿಸಲಾಗಿದೆ ಎಂದು ನಾವು ನೋಡಬಹುದು; ಹಿಂದಿಯಲ್ಲಿ ಕನ್ಯಾಕುಮಾರಿ ಎಂದು ಓದುತ್ತಿದ್ದ ಎರಡನೇ ಸಾಲನ್ನು "ಗೋ ಬ್ಯಾಕ್ ಮೋದಿ" ಎಂದು ಬದಲಿಸಲಾಗಿದೆ. 

ಪೆಟಾಪಿಕ್ಸೆಲ್ ಫೋಟೋದಲ್ಲಿನ ಇತರ ವಿವರಗಳಾದ ಹಿನ್ನೆಲೆಯಲ್ಲಿ ಪ್ರಯಾಣಿಕರು, ಬೆಂಚ್ ಮತ್ತು ಎಲೆಕ್ಟ್ರಿಕಲ್ ಲೈನ್, ವೈರಲ್ ಚಿತ್ರದಲ್ಲಿನ ದೃಶ್ಯಗಳಿಗೆ ಹೊಂದಿಕೆಯಾಗುತ್ತದೆ, ಇದು ವೈರಲ್ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂಬುದನ್ನು ಸೂಚಿಸುತ್ತದೆ.

ಪೆಟಾಪಿಕ್ಸೆಲ್ ಫೋಟೋದೊಂದಿಗೆ ವೈರಲ್ ಚಿತ್ರದ ಹೋಲಿಕೆ.
(ಮೂಲ: ಎಕ್ಸ್ /ಪೆಟಾಪಿಕ್ಸೆಲ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

 ಕಪ್ಪು ಬಲೂನ್‌ಗಳನ್ನು ಹೊಂದಿರುವ ವ್ಯಕ್ತಿಯ ವೀಡಿಯೋ

ರಿವರ್ಸ್ ಇಮೇಜ್  ಸರ್ಚ್ ಮೂಲಕ, ಎಕ್ಸ್ ಬಳಕೆದಾರ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅದೇ ವೀಡಿಯೋವನ್ನು ಏಪ್ರಿಲ್ ೯, ೨೦೨೩ ರಂದು ಪೋಷ್ಟ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ, ತಮಿಳಿನಲ್ಲಿ "ಗೋ ಬ್ಯಾಕ್ ಮೋದಿ" ಎಂದು ಅನುವಾದಿಸಲಾಗಿದೆ.

ಹೆಚ್ಚಿನ ಸಂಶೋಧನೆಯಿಂದ ಏಪ್ರಿಲ್ ೮, ೨೦೨೩ ರಂದು ದಿ ನ್ಯೂಸ್ ಮಿನಿಟ್ ಪ್ರಕಟಿಸಿದ ಲೇಖನವನ್ನು ಕಂಡುಕೊಂಡೆವು, "ಮೋದಿ ಭೇಟಿ: ಪೊಲೀಸರು ಕಾಂಗ್ರೆಸ್ ನಾಯಕನನ್ನು ಬಂಧಿಸಿದ್ದಾರೆ, ಚೆನ್ನೈನಲ್ಲಿ ಕಪ್ಪು ಬಲೂನ್‌ಗಳನ್ನು ವಶಪಡಿಸಿಕೊಂಡಿದ್ದಾರೆ" ಎಂಬ ತಲೆಬರಹವನ್ನು ಹೊಂದಿದೆ. ಲೇಖನವು ವೈರಲ್ ವೀಡಿಯೋದ ವ್ಯಕ್ತಿಯ ಸ್ಕ್ರೀನ್‌ಶಾಟ್ ಅನ್ನು ಹೊಂದಿದ್ದು, ಘಟನೆಯು ಏಪ್ರಿಲ್ ೨೦೨೩ ರ ಹಿಂದಿನದು ಎಂದು ದೃಢಪಡಿಸುತ್ತದೆ. ತಮಿಳುನಾಡು ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎಂಪಿ ರಂಜನ್ ಕುಮಾರ್ ಅವರು ತಮ್ಮ ಮನೆಯಲ್ಲಿ ಅಂತಹ ೫೦೦ ಕಪ್ಪು ಬಲೂನ್‌ಗಳನ್ನು ಸಂಗ್ರಹಿಸಿದ್ದಾರೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸತ್ಯಮೂರ್ತಿ ಭವನದಲ್ಲಿ ಸುಮಾರು ೨,೦೦೦ ಬಲೂನ್‌ಗಳನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ. ಮೋದಿಯವರ ನಗರಕ್ಕೆ ಭೇಟಿ ನೀಡುವುದನ್ನು ವಿರೋಧಿಸಿ ಅವರನ್ನು ಬಲೂನ್‌ಗಳನ್ನು ಬಿಡುಗಡೆ ಮಾಡಲು ಯೋಜಿಸಿದ್ದರು ಎನ್ನಲಾಗಿದೆ.

ಅದೇ ವ್ಯಕ್ತಿಯನ್ನು ಒಳಗೊಂಡಿರುವ ನ್ಯೂಸ್ ಮಿನಿಟ್ ವರದಿ. (ಮೂಲ: ಸ್ಕ್ರೀನ್‌ಶಾಟ್/ದಿ ನ್ಯೂಸ್ ಮಿನಿಟ್)

ಈ ಘಟನೆಯ ಬಗ್ಗೆ ದಿ ಹಿಂದೂ ಕೂಡ ವರದಿ ಮಾಡಿದೆ, ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಮೋದಿ ವಿರುದ್ಧ ರಾಜ್ಯದಲ್ಲಿ ಕಾಂಗ್ರೆಸ್ ಅನೇಕ ಪ್ರತಿಭಟನೆಗಳನ್ನು ನಡೆಸಿದ್ದನ್ನು ಹೇಳಲಾಗಿದೆ. 

ಚೆನ್ನೈ ಮತ್ತು ಕೊಯಮತ್ತೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಫ್ಲ್ಯಾಗ್ ಆಫ್ ಮಾಡಲು, ಚೆನ್ನೈ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲು ಮತ್ತು ಹಲವಾರು ಇತರ ಮೂಲಸೌಕರ್ಯ ಕಾಮಗಾರಿಗಳನ್ನು ಉದ್ಘಾಟಿಸಲು ಮೋದಿ ಏಪ್ರಿಲ್ ೮, ೨೦೨೩ ರಂದು ತಮಿಳುನಾಡಿನ ಚೆನ್ನೈಗೆ ಭೇಟಿ ನೀಡಿದ್ದರು.

ವಿವಿಧೆಡೆ ಮೋದಿ ವಿರೋಧಿ ಬ್ಯಾನರ್‌ಗಳ ವೀಡಿಯೋ 

ತಮಿಳುನಾಡಿನಲ್ಲಿ "ಗೋ ಬ್ಯಾಕ್ ಮೋದಿ" ಪೋಷ್ಟರ್ ಗಳ ಕುರಿತು ಇತ್ತೀಚಿನ ವರದಿಗಳನ್ನು ಹುಡುಕುತ್ತಿರುವಾಗ, ವೀಡಿಯೋದಲ್ಲಿ ಬಳಸಲಾದ ಅದೇ ಪೋಷ್ಟರ್ ನ  ಅದೇ ಚಿತ್ರಗಳನ್ನು ಹೊಂದಿರುವ ಮೇ ೩೦ ರಂದು ಪ್ರಕಟವಾದ ಹಲವಾರು ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ.

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ವಕೀಲ ಹೇಮಂತ್ ಅಣ್ಣಾದೊರೈ ಅವರು ತಮಿಳುನಾಡಿಗೆ ಮೋದಿ ಭೇಟಿಯನ್ನು ಖಂಡಿಸಿ ಈ ಪೋಷ್ಟರ್ ಗಳನ್ನು ತಯಾರಿಸಿ ಚೆನ್ನೈನ ಪ್ರಮುಖ ಪ್ರದೇಶಗಳಲ್ಲಿ ಅಂಟಿಸಿದ್ದಾರೆ ಎಂದು ಹೇಳಲಾಗಿದೆ. ಅಂತಹ "ಗೋ ಬ್ಯಾಕ್ ಮೋದಿ" ಪೋಷ್ಟರ್ ಗಳು ತಿರುವಲ್ಲಿಕೇಣಿ, ಪೂಕಡೈ ಮತ್ತು ಪರಿಮಳ ಗ್ರಾಮಗಳಲ್ಲಿ ಸಂಚಲನಗೊಂಡಿದ್ದವು ಎಂದು ಈಟಿವಿ ಭಾರತ್ ವರದಿ ಮಾಡಿದೆ. 

ತಮಿಳು ಭಾಷೆಯ ಸುದ್ದಿ ಮಾಧ್ಯಮವಾದ ಸೇಇತಿಪೂನಲ್, ಡಿಎಂಕೆಯ ವಕೀಲರಿಂದ ಈ ಪೋಷ್ಟರ್ ಗಳನ್ನು ರಚಿಸಲಾಗಿದೆ ಮತ್ತು "ಚೆನ್ನೈ ಹೈಕೋರ್ಟ್ ಕಾಂಪ್ಲೆಕ್ಸ್, ಸೆಂಟ್ರಲ್ ರೈಲ್ವೇ ನಿಲ್ದಾಣ, ಜಿ ಹೆಚ್, ಅಣ್ಣಾ ರಸ್ತೆ, ಜೆಮಿನಿ ಓವರ್‌ಪಾಸ್, ಎಂಎಲ್ಎ ಹಾಸ್ಟೆಲ್, ಚೆನ್ನೈ ಪ್ರೆಸ್ ಹಾಗು ಮುಂತಾದ ಸ್ಥಳಗಳಲ್ಲಿ ಅಂಟಿಸಲಾಗಿದೆ" ಎಂದು ವರದಿ ಮಾಡಿದೆ. 

ಪೋಷ್ಟರ್ ಗಳಲ್ಲಿ ಹೇಮಂತ್ ಅಣ್ಣಾದೊರೈ ಅವರ ಫೋಟೋ ಕೂಡ ಇದೆ. ಮೇ ೩೦ ರಂದು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅವರ ಎಕ್ಸ್ ಖಾತೆಯಲ್ಲಿನ ಪೋಷ್ಟ್ ನಲ್ಲಿ ನೋಡಿದಂತೆ ಪೋಷ್ಟರ್ ಗಳ ಹಲವಾರು ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.

ಹೇಮಂತ್ ಅಣ್ಣಾದೊರೈ ಪೋಷ್ಟ್ ಮಾಡಿದ ಚಿತ್ರ. (ಮೂಲ: ಸ್ಕ್ರೀನ್‌ಶಾಟ್/ಎಕ್ಸ್)

ತೀರ್ಪು

ಕನ್ಯಾಕುಮಾರಿ ಭೇಟಿಯ ನಡುವೆ ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ವಿರುದ್ಧ ಇತ್ತೀಚಿನ ಪ್ರತಿಭಟನೆಗಳನ್ನು ತೋರಿಸಲು ಕೆಲವು ಹಳೆಯ ಮತ್ತು ಎಡಿಟ್ ಮಾಡಿದ ದೃಶ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ, ನಾವು ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.