ಮೂಲಕ: ರಜಿನಿ ಕೆ.ಜಿ
ಜುಲೈ 9 2024
೨೦೨೪ರ ಜೂನ್‌ನಲ್ಲಿ ಷರೀಫ್ ಶೇಖ್ ಮುಹಮ್ಮದ್ ಅಸ್ಗರ್ ಅಸ್ಲಾಮಿ ಬೆಡ್‌ಫೋರ್ಡ್‌ನಲ್ಲಿರುವ ಮಸೀದಿಗೆ ಭೇಟಿ ನೀಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಅವರು ಬ್ರೈಟನ್‌ನ ಮೇಯರ್ ಅಲ್ಲ.
ಹೇಳಿಕೆ ಏನು?
ಮುಸ್ಲಿಂ ವ್ಯಕ್ತಿಯನ್ನು ಇತರ ಮುಸ್ಲಿಮರು ಹೂ ಮಾಲೆಯಿಂದ ಸ್ವಾಗತಿಸುವ ವೀಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ, ಇದು ಬ್ರೈಟನ್‌ನ ಹೊಸದಾಗಿ ಆಯ್ಕೆಯಾದ ಮೇಯರ್ ಅನ್ನು ತೋರಿಸುತ್ತದೆ ಎಂದು ಹೇಳಲಾಗುತ್ತಿದೆ. ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ, “ಸ್ಪಷ್ಟವಾಗಿ ಇದು ಯು.ಕೆ. ಯ ಬ್ರೈಟನ್‌ನ ಹೊಸ ಮೇಯರ್!! ಇಂಡಿಯಾನಾ ಜೋನ್ಸ್ ಮತ್ತು ಟೆಂಪಲ್ ಆಫ್ ಬ್ಲಡಿ ಡೂಮ್‌ನ ದೃಶ್ಯದಂತೆ ತೋರುತ್ತಿದೆ!! ಯು.ಕೆ. ಅಕ್ಷರಶಃ ಸ್ಕ್ರೂವ್ ಆಗಿದೆ...." ಪೋಷ್ಟ್ ನ ಆರ್ಕೈವ್ ಅವರುತ್ತಿಯನ್ನು ಇಲ್ಲಿ ಕಾಣಬಹುದು.
ಅದೇ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, "ಬ್ರೇಕಿಂಗ್: ಯು. ಕೆ. ಯ ಬ್ರೈಟನ್‌ನ ಹೊಸ ಮೇಯರ್ ಅವರ ಆಚರಣೆಯ ಈ ತುಣುಕನ್ನು ಬಿಡುಗಡೆ ಮಾಡಿದ ನಂತರ ವೈರಲ್ ಆಗುತ್ತಿದೆ. ಮೊಹಮ್ಮದ್ ಅಸಾದುಝಮಾನ್ ಅವರು ಬಾಂಗ್ಲಾದೇಶದ ಹೊಸ ಮೇಯರ್ ಆಗಿದ್ದಾರೆ. ನಾನು ಬೆಳೆಯುತ್ತಿರುವಾಗ ಇಂಗ್ಲೆಂಡ್ ಈ ರೀತಿ ಕಾಣುತ್ತಿರಲಿಲ್ಲ. ಪೋಷ್ಟ್ ೧,೫೦೦,೦೦೦ ವೀಕ್ಷಣೆಗಳನ್ನು ಹೊಂದಿದೆ ಮತ್ತು ೪,೩೦೦ ಲೈಕ್ ಗಳನ್ನು ಗಲಸಿದೆ. ಪೋಷ್ಟ್ ನ ಆರ್ಕೈವ್ ಲಿಂಕ್ ಅನ್ನು ಇಲ್ಲಿ ಕಾಣಬಹುದು.
ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಹೇಳಿಕೆ ತಪ್ಪು. ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿ ಮುಸ್ಲಿಂ ಧರ್ಮಗುರು ಶೇಖ್ ಸೂಫಿ ಮುಹಮ್ಮದ್ ಅಸ್ಗರ್ ಅಸ್ಲಾಮಿ, ಬ್ರೈಟನ್ ಮೇಯರ್ ಮೊಹಮ್ಮದ್ ಅಸಾದುಝಮಾನ್ ಅಲ್ಲ.
ನಾವು ಕಂಡುಕೊಂಡಿದ್ದು ಏನು?
ರಿವರ್ಸ್ ಇಮೇಜ್ ಸರ್ಚ್ ಮೂಲಕ, ಜೂನ್ ೧೧, ೨೦೨೪ ರಂದು ಅಸ್ಲಾಮಿಯಾ ಫೌಂಡೇಶನ್ ತನ್ನ ಅಧಿಕೃತ ಟಿಕ್‌ಟಾಕ್ ಖಾತೆಯಲ್ಲಿ ಪೋಷ್ಟ್ ಮಾಡಿದ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ - @aslamiyafoundation (ಇಲ್ಲಿ ಆರ್ಕೈವ್ ಮಾಡಲಾಗಿದೆ), ಇದರ ಶೀರ್ಷಿಕೆ ಹೀಗಿದೆ: “ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯದ ಈವೆಂಟ್‌ಗೆ ಶಿಕ್ಷಕರನ್ನು ಸ್ವಾಗತಿಸುತ್ತಾರೆ #love # ಮುಸ್ಲಿಂ #ಸಹೋದರರು #ಗೌರವ #ಶೇಖ್ #fyp ರಲ್ಲಿ ಮಸೀದಿ ಸೆಂಟರ್ ಬೆಡ್ಫೋರ್ಡ್ನಲ್ಲಿ (sic)."
ಅಸ್ಲಾಮಿಯಾ ಫೌಂಡೇಶನ್ ಹಂಚಿಕೊಂಡ ವೀಡಿಯೋದ ಸ್ಕ್ರೀನ್‌ಶಾಟ್.
(ಮೂಲ: ಟಿಕ್ ಟಾಕ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಕ್ ಮಾಡಲಾಗಿದೆ)
ಅದೇ ಬೆಡ್‌ಫೋರ್ಡ್ ಈವೆಂಟ್‌ನ ಮತ್ತೊಂದು ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಜೂನ್ ೧೧, ೨೦೨೪ ರಂದು ಅಸ್ಲಾಮಿಯಾ ಫೌಂಡೇಶನ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಷ್ಟ್ ಮಾಡಲಾಗಿದೆ ಹಾಗು ಅದರ ಶೀರ್ಷಿಕೆ: “ಬ್ರದರ್ ಶೇಖ್ ಜೊತೆ ಬಯಾಹ್ ತೆಗೆದುಕೊಳ್ಳುತ್ತಿದ್ದಾರೆ | ಬೆಡ್‌ಫೋರ್ಡ್ ಯುಕೆ ಜೂನ್ ೨೦೨೪," ಎಂದು ಬರೆಯಲಾಗಿದೆ. ವೈರಲ್ ವೀಡಿಯೋದಲ್ಲಿ ಕನ್ನಡಕ ಮತ್ತು ಹಸಿರು ಸ್ಕಾರ್ಫ್ ಧರಿಸಿರುವ ವ್ಯಕ್ತಿ ಮತ್ತು ನೀಲಿ ಶಾಲು ಧರಿಸಿರುವ ವ್ಯಕ್ತಿ ಇಬ್ಬರನ್ನೂ ಯೂಟ್ಯೂಬ್ ವೀಡಿಯೋದಲ್ಲಿ ಕ್ರಮವಾಗಿ ೦:೧೨ ಮತ್ತು ೦:೪೬ ರ ಮಾರ್ಕ್ ನಲ್ಲಿ ನೋಡಬಹುದು.
ವೈರಲ್ ವೀಡಿಯೋ ಮತ್ತು ಅಸ್ಲಾಮಿಯಾ ಫೌಂಡೇಶನ್‌ನ ಯೂಟ್ಯೂಬ್ ವೀಡಿಯೋ ಹೋಲಿಕೆ.
(ಮೂಲ: ಎಕ್ಸ್/ಯೂಟ್ಯೂಬ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಕ್ ಮಾಡಲಾಗಿದೆ)
ಅಸ್ಲಾಮಿಯಾ ಫೌಂಡೇಶನ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದೇ ವ್ಯಕ್ತಿಯ ಅನೇಕ ವೀಡಿಯೋಗಳನ್ನು ಪೋಷ್ಟ್ ಮಾಡಿದೆ, ಅವರು "ಶೇಖ್ ಸೂಫಿ ಮುಹಮ್ಮದ್ ಅಸ್ಗರ್ ಅಸ್ಲಾಮಿ" ಎಂದು ಹೇಳಲಾಗಿದೆ. ಸೂಫಿ ಮುಹಮ್ಮದ್ ಅವರ ಅಧಿಕೃತ ಫೇಸ್‌ಬುಕ್ ಪುಟವನ್ನು (ಇಲ್ಲಿ ಆರ್ಕೈವ್) ನಾವು ಕಂಡುಕೊಂಡಿದ್ದೇವೆ, ಇದು ಅವರು ಯು.ಕೆ. ಯಲ್ಲಿ ಅನೇಕ ಧಾರ್ಮಿಕ ಕೂಟಗಳಲ್ಲಿ ಭಾಗವಹಿಸುತ್ತಿರುವುದನ್ನು ತೋರಿಸುತ್ತದೆ.
ಶೇಖ್ ಸೂಫಿ ಮುಹಮ್ಮದ್ ಅಸ್ಗರ್ ಅಸ್ಲಾಮಿಯನ್ನು ತೋರಿಸುವ ಯೂಟ್ಯೂಬ್ ಚಾನಲ್‌ನ ಸ್ಕ್ರೀನ್‌ಶಾಟ್.
(ಮೂಲ: ಯೂಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಕ್ ಮಾಡಲಾಗಿದೆ)
ಬ್ರೈಟನ್ ಮತ್ತು ಹೋವ್ ಸಿಟಿ ಕೌನ್ಸಿಲ್ ವೆಬ್‌ಸೈಟ್‌ನ ಪ್ರಕಾರ, ಮೊಹಮ್ಮದ್ ಅಸಾದುಜ್ಜಮಾನ್ ಅವರು ಮೇ ೨೦೨೪ ರಲ್ಲಿ ಬ್ರೈಟನ್ ಸಿಟಿಯ ಹೊಸ ಮೇಯರ್ ಆಗಿ ಆಯ್ಕೆಯಾದರು. ಹಿಂದೆ, ಅವರು ನಗರದ ಉಪ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಅವರು ಬಾಂಗ್ಲಾದೇಶದಲ್ಲಿ ಜನಿಸಿದರು ಮತ್ತು ೧೯೯೫ ರಲ್ಲಿ ಯು.ಕೆ.ಗೆ ತೆರಳಿದ್ದರು. ಅವರು ಬ್ರೈಟನ್‌ನಲ್ಲಿ ೩೦ ವರ್ಷಗಳಿಂದ ವಾಸಿಸುತ್ತಿದ್ದಾರೆ.
ಬ್ರೈಟನ್‌ನ ಮೇಯರ್ ಮೊಹಮ್ಮದ್ ಅಸಾದುಜ್‌ಮಾನ್ ಮತ್ತು ಶೇಖ್ ಸೂಫಿ ಮುಹಮ್ಮದ್ ಅಸ್ಗರ್ ಅಸ್ಲಾಮಿ ಅವರ ಚಿತ್ರಗಳ ನಡುವಿನ ಹೋಲಿಕೆಯು ಇಬ್ಬರೂ ವಿಭಿನ್ನ ಜನರು ಎಂದು ತೋರಿಸುತ್ತದೆ.
ಬ್ರೈಟನ್ ಮೇಯರ್ ಮತ್ತು ಮುಸ್ಲಿಂ ಧರ್ಮಗುರು ಶೇಖ್ ಸೂಫಿ ಮುಹಮ್ಮದ್ ಅಸ್ಗರ್ ಅಸ್ಲಾಮಿ ಅವರ ಹೋಲಿಕೆ.
(ಮೂಲ: ಫೇಸ್‌ಬುಕ್/ಬ್ರೈಟನ್ ಅಂಡ್ ಹೋವ್ ಸಿಟಿ ಕೌನ್ಸಿಲ್ ವೆಬ್‌ಸೈಟ್)
ಈಗ ವೈರಲ್ ಆಗಿರುವ ವೀಡಿಯೋ ಕುರಿತು ಪ್ರತಿಕ್ರಿಯೆಗಾಗಿ ನಾವು ಅಸ್ಲಾಮಿಯಾ ಫೌಂಡೇಶನ್ ಅನ್ನು ಸಂಪರ್ಕಿಸಿದ್ದೇವೆ. ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ಕಥೆಯನ್ನು ನವೀಕರಿಸಲಾಗುವುದು.
ತೀರ್ಪು
ವೀಡಿಯೋದಲ್ಲಿರುವ ವ್ಯಕ್ತಿ ಮುಸ್ಲಿಂ ಧರ್ಮಗುರು ಶೇಖ್ ಸೂಫಿ ಮುಹಮ್ಮದ್ ಅಸ್ಗರ್ ಅಸ್ಲಾಮಿ, ಬ್ರೈಟನ್‌ನ ಹೊಸದಾಗಿ ಆಯ್ಕೆಯಾದ ಮೇಯರ್ ಮೊಹಮ್ಮದ್ ಅಸಾದುಜ್ಮನ್ ಅಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.