ಮುಖಪುಟ ಇಲ್ಲ, ಬಿಜೆಪಿಯ ಚುನಾವಣಾ ಭರವಸೆಗಳ ಬಗ್ಗೆ ಅಮಿತ್ ಶಾ ಅನುಮಾನ ವ್ಯಕ್ತಪಡಿಸಲಿಲ್ಲ

ಇಲ್ಲ, ಬಿಜೆಪಿಯ ಚುನಾವಣಾ ಭರವಸೆಗಳ ಬಗ್ಗೆ ಅಮಿತ್ ಶಾ ಅನುಮಾನ ವ್ಯಕ್ತಪಡಿಸಲಿಲ್ಲ

ಮೂಲಕ: ಉಮ್ಮೆ ಕುಲ್ಸುಮ್

ಮೇ 27 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಬಿಜೆಪಿಯ ಚುನಾವಣಾ ಭರವಸೆಗಳ ಬಗ್ಗೆ ಅಮಿತ್ ಶಾ ಅನುಮಾನ ವ್ಯಕ್ತಪಡಿಸಲಿಲ್ಲ 'ಮೋದಿ ಕಿ ಗ್ಯಾರಂಟಿ' ಎಂದು ಅಮಿತ್ ಶಾ ಹೇಳಿರುವ ಪೋಷ್ಟ್‌ನ ಸ್ಕ್ರೀನ್‌ಶಾಟ್ ಆಧಾರರಹಿತವಾಗಿದೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಮೂಲ ವೀಡಿಯೋದಲ್ಲಿ, ಕೇಂದ್ರ ಗೃಹ ಸಚಿವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಚುನಾವಣಾ ಭರವಸೆಗಳ ಬಗ್ಗೆ ಮಾತನಾಡುವುದನ್ನು ಕೇಳಬಹುದು, ಬಿಜೆಪಿಯ ಭರವಸೆಗಳ ಬಗ್ಗೆ ಅಲ್ಲ.

ಹೇಳಿಕೆ ಏನು?

ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಉಲ್ಲೇಖಿಸಿ ಚುನಾವಣಾ ಸಮಯದಲ್ಲಿ ನೀಡಿದ ಭರವಸೆಗಳಿಗೆ ಯಾವುದೇ ಅರ್ಥವಿಲ್ಲ ಎಂದು ಹೇಳುವ ಮೂಲಕ ಭಾರತೀಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆರು ಸೆಕೆಂಡುಗಳ ಕ್ಲಿಪ್‌ನಲ್ಲಿ, ಶಾ ಹೀಗೆ ಹೇಳುವುದನ್ನು ಕೇಳಬಹುದು, "ಅದಕ್ಕಾಗಿಯೇ ನಾನು ಈ 'ಗ್ಯಾರಂಟಿ'ಗೆ ಯಾವುದೇ ಅರ್ಥವಿಲ್ಲ ಎಂದು ಹೇಳುತ್ತೇನೆ. ಅವರು ಚುನಾವಣೆಯ ಸಮಯದಲ್ಲಿ ಹೇಳುತ್ತಾರೆ ಮತ್ತು ನಂತರ ಮರೆತುಬಿಡುತ್ತಾರೆ."

ವೀಡಿಯೋವನ್ನು ಹಂಚಿಕೊಳ್ಳುವ ಮೂಲಕ, ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು ಇದು ಚುನಾವಣಾ ಗಿಮಿಕ್ ಆಗಿದೆ ಮತ್ತು ಮತದಾರರು ಜಾಗರೂಕರಾಗಿರಲು ಒತ್ತಾಯಿಸಿದರು, ಇದು "#ಮೋದಿಕಿಗ್ಯಾರಂಟಿಯ ಬಗ್ಗೆ ಅಮಿತ್ ಶಾ ಅವರಿಂದ ದೊಡ್ಡ ಬಹಿರಂಗ" ಎಂದು ಹೇಳಿಕೊಂಡಿದ್ದಾರೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಕ್ಲಿಪ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಅಲ್ಲಿ ಬಳಕೆದಾರರು ಶಾ ಅವರೇ ತಮ್ಮ ಪಕ್ಷವನ್ನು "ಬಹಿರಂಗಪಡಿಸಿದ್ದಾರೆ" ಎಂದು ಹೇಳಿದ್ದಾರೆ.


ಆನ್‌ಲೈನ್‌ನಲ್ಲಿ ಮಾಡಿದ ಕ್ಲೈಮ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಇದು ಸಂದರ್ಭದಿಂದ ಹೊರಗಿಡಲಾಗಿದೆ. ಮೂಲ ವೀಡಿಯೋದಲ್ಲಿ, ಶಾ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ನೀಡಿದ ಭರವಸೆಗಳನ್ನು ಉಲ್ಲೇಖಿಸುತ್ತಿದ್ದಾರೆಯೇ ಹೊರತು ಪ್ರಧಾನಿಯನ್ನಲ್ಲ.

ನಾವು ಕಂಡುಕೊಂಡದ್ದು

ಏಷ್ಯನ್ ನ್ಯೂಸ್ ಇಂಟರ್‌ನ್ಯಾಶನಲ್ (ANI) ಸುದ್ದಿ ಸಂಸ್ಥೆ ಯ ಪ್ರಧಾನ ಸಂಪಾದಕರಾದ ಸ್ಮಿತಾ ಪ್ರಕಾಶ್ ಅವರಿಗೆ ಅಮಿತ್ ಶಾ ಅವರು ಇತ್ತೀಚೆಗೆ ನೀಡಿದ ಸಂದರ್ಶನದ ಒಂದು ಸಣ್ಣ ಭಾಗವಾಗಿದೆ ಈ ವೀಡಿಯೋ. ಮೂಲ ವೀಡಿಯೋವನ್ನು ಏಜೆನ್ಸಿಯ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮೇ ೧೫, ೨೦೨೪ ರಂದು ಪ್ರಕಟಿಸಲಾಗಿದೆ.

ಸಂದರ್ಶನದ ಸಮಯದಲ್ಲಿ, ೨೫:೧೫ ನಿಮಿಷಗಳಲ್ಲಿ, ಪ್ರಕಾಶ್ ಅವರು ಈ ಹಿಂದೆ "ಚೀನೀ ಗ್ಯಾರಂಟಿಗಳು" ಎಂದು ಉಲ್ಲೇಖಿಸಿದ್ದ ಕಾಂಗ್ರೆಸ್‌ನ ಖಾತರಿಗಳ ಬಗ್ಗೆ ಶಾ ಅವರನ್ನು ಕೇಳಿದರು. ಪ್ರತಿಕ್ರಿಯೆಯಾಗಿ, "ನಾನು ಅದರ ಬಾಳಿಕೆಯ ಆಧಾರದ ಮೇಲೆ "ಚೀನೀ ಗ್ಯಾರಂಟಿ" ಎಂದು ಕರೆದಿದ್ದೇನೆ" ಎಂದು ಹೇಳಿದರು. ಆಗ ಅವರು, “ನಾನು ಈಗಷ್ಟೇ ತೆಲಂಗಾಣಕ್ಕೆ ಹೋಗಿದ್ದೆ. ಅಲ್ಲಿನ ಮಹಿಳೆಯರು ತಮ್ಮ ೧೨,೦೦೦ ರೂ. ಗಾಗಿ ಕಾಯುತ್ತಿದ್ದಾರೆ, ರೈತರು ತಮ್ಮ ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದಾರೆ ಮತ್ತು ಹುಡುಗಿಯರು ತಮ್ಮ ಭರವಸೆಯ ಸ್ಕೂಟರ್‌ಗಾಗಿ ಕಾಯುತ್ತಿದ್ದಾರೆ. ಇವು ರಾಹುಲ್ ಜೀ ನೀಡಿದ ಭರವಸೆಗಳು. ಈಗ ನೀವು ರಾಹುಲ್ ಜಿ ಹುಡುಕಲು ಪ್ರಯತ್ನಿಸಿ.”

ಪ್ರಕಾಶ್ ನಂತರ ಮಾತನಾಡುತ್ತಾ, ದಕ್ಷಿಣ ಭಾಗದಲ್ಲಿ ಚುನಾವಣೆ ಮುಗಿದಿದೆ ಮತ್ತು ರಾಹುಲ್ ಗಾಂಧಿ ದೇಶದ ಉತ್ತರ ಭಾಗಕ್ಕೆ ತೆರಳಿದ್ದಾರೆ. ಇದನ್ನು ಅನುಸರಿಸಿ, ೨೬:೦೫ ನಿಮಿಷಗಳಲ್ಲಿ, ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಹೇಳಿಕೆಯನ್ನು ಶಾ ಮಾಡಿದರು, "ಆದರೆ ಅವರು ದಕ್ಷಿಣದಲ್ಲಿದ್ದಾಗಲೂ ಅವರು ಭರವಸೆಗಳನ್ನು ನೀಡುತ್ತಿದ್ದರು, ಅದಕ್ಕಾಗಿಯೇ ನಾನು ಈ ಗ್ಯಾರಂಟಿ ಅರ್ಥಹೀನ ಎಂದು ಹೇಳುತ್ತೇನೆ. ಅವರು  ಚುನಾವಣೆಯ ಸಮಯದಲ್ಲಿ ಹೇಳುತ್ತಾರೆ ಮತ್ತು ಅದನ್ನು ಮರೆತುಬಿಡುತ್ತಾರೆ."

 

ಶಾ ಅವರು ವೈರಲ್ ಹೇಳಿಕೆ ನೀಡುವ ಮೊದಲು ಅಥವಾ ನಂತರ ಎಲ್ಲಿಯೂ "ಮೋದಿ ಕಿ ಗ್ಯಾರಂಟಿ" ಎಂದು ಹೇಳಿದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಎಎನ್ಐ (ANI) ಮೇ ೧೫, ೨೦೨೪ ರಿಂದ ಶಾ ಅವರ ಸಂದರ್ಶನದ ಈ ಭಾಗವನ್ನು ತಮ್ಮ ಅಧಿಕೃತ ಎಕ್ಸ್ ಚಾನಲ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಂಚಿಕೊಂಡಿದೆ.

ತೀರ್ಪು

ಅಮಿತ್ ಶಾ ಅವರ ಮೂಲ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸಲು ಈ ವೀಡಿಯೋವನ್ನು ಅನ್ನು ಕ್ಲಿಪ್ ಮಾಡಲಾಗಿದೆ. ಮೂಲತಃ, ಶಾ ಅವರು ತಮ್ಮ ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಆರೋಪಿಸುತ್ತಿದ್ದರು. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ