ಮುಖಪುಟ INDIA ಘಟಬಂದನೆ ಸರ್ಕಾರ ರಚಿಸುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರಾ? ಇಲ್ಲ, ವೀಡಿಯೋವನ್ನು ಎಡಿಟ್ ಮಾಡಲಾಗಿದೆ!

INDIA ಘಟಬಂದನೆ ಸರ್ಕಾರ ರಚಿಸುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರಾ? ಇಲ್ಲ, ವೀಡಿಯೋವನ್ನು ಎಡಿಟ್ ಮಾಡಲಾಗಿದೆ!

ಮೂಲಕ: ಅಂಕಿತಾ ಕುಲಕರ್ಣಿ

ಜೂನ್ 5 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
INDIA ಘಟಬಂದನೆ  ಸರ್ಕಾರ ರಚಿಸುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರಾ? ಇಲ್ಲ, ವೀಡಿಯೋವನ್ನು ಎಡಿಟ್ ಮಾಡಲಾಗಿದೆ! INDIA ಬಣವು ಸರ್ಕಾರ ರಚಿಸುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಮೂಲ ವೀಡಿಯೋದಲ್ಲಿ, ಶಿವಕುಮಾರ್ ಅವರು ಎಕ್ಸಿಟ್ ಪೊಲ್ಸ್ ಗಳಲ್ಲಿ ನಂಬಿಕೆಯಿಲ್ಲ ಮತ್ತು INDIA ಘಟಬಂದನೆಯು ಸರ್ಕಾರವನ್ನು ರಚಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಹೇಳಿಕೆ ಏನು? 

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಏಳು ಸೆಕೆಂಡುಗಳ ವೀಡಿಯೋ ಸಾಮಾಜಿಕ ಮಾಧ್ಯಮಳಲ್ಲಿ ಹರಿದಾಡುತ್ತಿದೆ. ಕ್ಲಿಪ್‌ನಲ್ಲಿ, ಅವರು INDIA  ಬಣ "ಸರ್ಕಾರವನ್ನು ರಚಿಸುವುದಿಲ್ಲ" ಎಂದು ಹೇಳುವುದು ಕಂಡುಬರುತ್ತದೆ. ಶಿವಕುಮಾರ್ ಅವರು "ನನಗೆ ನಂಬಿಕೆ ಇಲ್ಲ... ನಾವು ಹೊಂದುತ್ತೇವೆ, INDIA  ಬಣ ಸರ್ಕಾರವನ್ನು ರಚಿಸುತ್ತದೆ (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ಹೇಳಿರುವುದನ್ನು ಕೇಳಬಹುದು.

ಅಂತಹ ಒಂದು ಪೋಷ್ಟ್  (ಇಲ್ಲಿ ಆರ್ಕೈವ್ ಮಾಡಲಾಗಿದೆ) ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ 'Mr. Sinha,' ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಅದು ಆನ್‌ಲೈನ್‌ನಲ್ಲಿ ತಪ್ಪು ಮಾಹಿತಿಯನ್ನು  ಹರಡಲು ಹೆಸರುವಾಸಿಯಾಗಿದೆ.  "I.N.D.I.A ಸರ್ಕಾರವನ್ನು ರಚಿಸುತ್ತದೆ ಎಂದು ನಾನು ನಂಬುವುದಿಲ್ಲ - ಡಿಕೆ ಶಿವಕುಮಾರ್" ಎಂಬ ಶೀರ್ಷಿಕೆಯನ್ನು ಹೊಂದಿದೆ ಮತ್ತು ಈ ಫ್ಯಾಕ್ಟ್-ಚೆಕ್ ಅನ್ನು ಬರೆಯುವ ಸಮಯದಲ್ಲಿ ಪೋಷ್ಟ್  ೫೪೪,೦೦೦ ವೀಕ್ಷಣೆಗಳನ್ನು ಗಳಿಸಿದೆ.

ಎಕ್ಸ್ ಮತ್ತು ಫೇಸ್‌ಬುಕ್‌ ನಲ್ಲಿನ ಅನೇಕ ಇತರ ಪೋಷ್ಟ್ ಗಳು ಸಹ ಇದೇ ರೀತಿಯ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ ಮತ್ತು ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ನಮ್ಮ ತನಿಖೆಯಲ್ಲಿ ಶಿವಕುಮಾರ್ ಅವರ ವೀಡಿಯೋವನ್ನು ಎಡಿಟ್ ಮಾಡಿ ಸಂದರ್ಭ ರಹಿತ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಮೂಲ ವೀಡಿಯೋದಲ್ಲಿ ಶಿವಕುಮಾರ್ ಅವರು ಎಕ್ಸಿಟ್ ಪೊಲ್ಸ್ ನ ಸಂಖ್ಯೆಗಳ ಮೇಲೆ ನಂಬಿಕೆ ಇಲ್ಲ ಮತ್ತು INDIA ಬಣ ಸರ್ಕಾರ ರಚಿಸುತ್ತದೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯ ನಂತರ ನಡೆಸಲಾದ ಬಹುತೇಕ ಎಕ್ಸಿಟ್ ಪೋಲ್ ಸಮೀಕ್ಷೆಗಳು ಕಾಂಗ್ರೆಸ್ ನೇತೃತ್ವದ INDIA  ಬಣಕ್ಕೆ ಸೋಲು ಮತ್ತು ಬಿಜೆಪಿ (ಭಾರತೀಯ ಜನತಾ ಪಾರ್ಟಿ) ನೇತೃತ್ವದ ಎನ್‌ಡಿಎ ಗೆ (ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್) ಗೆಲುವನ್ನು ಮುನ್ಸೂಚಿಸಿದೆ.

ನಾವು ಏನು ಕಂಡುಕೊಂಡಿದ್ದೇವೆ?

ವೈರಲ್ ಕ್ಲಿಪ್‌ನ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಜೂನ್ ೩, ೨೦೨೪ ರಂದು ಎಎನ್ಐ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಂಚಿಕೊಂಡ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೋ ವೈರಲ್ ಕ್ಲಿಪ್‌ನ ವಿಸ್ತೃತ ಆವೃತ್ತಿಯಾಗಿದೆ. ಈ ವೀಡಿಯೋದಲ್ಲಿ ಶಿವಕುಮಾರ್ ಅವರು ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಭವಿಷ್ಯದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಎಲ್ಲಾ ಏಳು ಸ್ಥಾನಗಳನ್ನೂ ಗೆಲ್ಲುತ್ತೇವೆ" ಎಂದು ಹೇಳಿದ್ದಾರೆ. ಆದರೆ, ವರದಿಗಾರ ಮತ್ತು ಶಿವಕುಮಾರ್ ಯಾವ ರಾಜ್ಯವನ್ನು ಉಲ್ಲೇಖಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ವರದಿಗಾರ ನಂತರ ಮುಂದಿನ ಪ್ರಶ್ನೆಯನ್ನು ಕೇಳುತ್ತಾನೆ: "ಈ ಎಕ್ಸಿಟ್ ಪೋಲ್‌ಗಳ ಭವಿಷ್ಯವೇನು ಸರ್?" ಶಿವಕುಮಾರ್, "ನನಗೆ ನಂಬಿಕೆ ಇಲ್ಲ... ನಾವು ಹೊಂದುತ್ತೇವೆ... INDIA ಸರ್ಕಾರ ರಚಿಸುತ್ತದೆ" ಎಂದು ಉತ್ತರಿಸಿದರು.

ವೈರಲ್ ಕ್ಲಿಪ್‌ನಲ್ಲಿ ವರದಿಗಾರರ ಪ್ರಶ್ನೆಯನ್ನು ಎಡಿಟ್ ಮಾಡಲಾಗಿದೆ ಎಂದು ಇದು ಸ್ಥಾಪಿಸುತ್ತದೆ ಮತ್ತು ಶಿವಕುಮಾರ್ ಅವರ ಪ್ರತಿಕ್ರಿಯೆಯನ್ನು, ಅವರು "I.N.D.I.A ಸರ್ಕಾರ ರಚಿಸುತ್ತದೆ ಎಂದು ನಾನು ನಂಬುವುದಿಲ್ಲ" ಎಂಬ ತಪ್ಪಾದ ರೀತಿಯಲ್ಲಿ ಹಂಚಿಕೊಂಡಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಂಚಿಕೊಂಡಿದೆ, ಅಲ್ಲಿ ಶಿವಕುಮಾರ್‌ ಅವರಿಗೆ ಎಕ್ಸಿಟ್ ಪೊಲ್ಸ್ ನ ಬಗ್ಗೆ ವರದಿಗಾರರ ಪ್ರಶ್ನೆಯನ್ನು ಸ್ಪಷ್ಟವಾಗಿ ಕೇಳಬಹುದು. ವೀಡಿಯೋ ಶೀರ್ಷಿಕೆಯಲ್ಲಿ, "ಭಾರತ ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ" ಎಂದು ಬರೆಯಲಾಗಿದೆ.

ಇದಲ್ಲದೆ, ಶಿವಕುಮಾರ್ ಅವರು ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಅಪನಂಬಿಕೆ ವ್ಯಕ್ತಪಡಿಸಿದ, ಮಾಧ್ಯಮಗಳಿಗೆ ಅವರ ಹಿಂದಿನ ಹೇಳಿಕೆಗಳನ್ನು ಗಮನಿಸಿದರೆ, INDIA ಬಣ ಸರ್ಕಾರ ರಚಿಸುವುದಿಲ್ಲ ಎಂದು ಅವರು ಹೇಳುವ ಸಾಧ್ಯತೆ ಇಲ್ಲ. ಜೂನ್ ೨ ರಂದು ಪ್ರಕಟವಾದ ಎನ್ ಡಿ ಟಿವಿ ವರದಿಯು ಶಿವಕುಮಾರ್ ೨೦೨೪ ರ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ನ ಮುನ್ನೋಟಗಳನ್ನು ತಳ್ಳಿಹಾಕಿರುವುದನ್ನು ಗಮನಿಸಿದೆ, "ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಎಕ್ಸಿಟ್ ಪೋಲ್ ಸಂಖ್ಯೆಗಳು ತಪ್ಪದಂತೆ ಈ ರೀತಿಯೂ ಸಹ ಆಗುತ್ತದೆ," ಎಂದು ಅವರು ಹೇಳಿದ್ದರು. 

ತೀರ್ಪು

ಎಕ್ಸಿಟ್ ಪೋಲ್ ಸಂಖ್ಯೆಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಕ್ಷೇಪಗಳಲ್ಲಿ ನನಗೆ ನಂಬಿಕೆ ಇಲ್ಲ ಮತ್ತು ೨೦೨೪ ರ ಭಾರತೀಯ ಲೋಕಸಭೆ ಚುನಾವಣೆಯ ನಂತರ INDIA ಬ್ಲಾಕ್ ಸರ್ಕಾರವನ್ನು ರಚಿಸುತ್ತದೆ ಎಂದು ಹೇಳಿದರು. ಆದರೆ, ವರದಿಗಾರರ ಪ್ರಶ್ನೆಯನ್ನು ಎಡಿಟ್ ಮಾಡಿ ವೈರಲ್ ಕ್ಲಿಪ್‌ನಲ್ಲಿ ಶಿವಕುಮಾರ್ ಅವರ ಪ್ರತಿಕ್ರಿಯೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ.

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ