ಮುಖಪುಟ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ೨೦೨೨ ರ ವೀಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗಿದೆ

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ೨೦೨೨ ರ ವೀಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ರಜಿನಿ ಕೆ.ಜಿ

ಜೂನ್ 28 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ೨೦೨೨ ರ ವೀಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗಿದೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಎರಡನೇ ಅವಧಿಗೆ ಆಯ್ಕೆಯಾದ ನಂತರ ಸಂಸತ್ತಿನಲ್ಲಿ ಸಂಸದರನ್ನು ನಿಂದಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ಹೇಳಿದ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ವೀಡಿಯೋ ೨೦೨೨ ರದ್ದು ಮತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಪ್ರಶ್ನೋತ್ತರ ವೇಳೆಯಲ್ಲಿ ಸಂಸದರೊಬ್ಬರನ್ನು ನಿಂದಿಸುತ್ತಿರುವುದನ್ನು ತೋರಿಸುತ್ತದೆ.

ಹೇಳಿಕೆ ಏನು? 

"ಗೌರವಾನ್ವಿತ ಸದಸ್ಯರೇ, ನಿಮಗೇನಾದರೂ ತೊಂದರೆ ಇದೆಯೇ? ಮತ್ತೆ ಮತ್ತೆ ನಿಂತರೆ ಹೊರಗೆ ಕಳುಹಿಸುತ್ತೇನೆ" ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ ಸದಸ್ಯರೊಬ್ಬರನ್ನು (ಎಂಪಿ) ಟೀಕಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಂಸತ್ತಿನ ಕೆಳಮನೆಯ ಸ್ಪೀಕರ್ ಆಗಿ ಮರು ಆಯ್ಕೆಯಾದ ನಂತರ ಅವರು ಸಂಸದರನ್ನು ನಿಂದಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರೊಬ್ಬರು ವೈರಲ್ ವೀಡಿಯೋವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, “ಓಂ ಬಿರ್ಲಾ ಜಿ ಅವರನ್ನು ಅದೇ ವರ್ತನೆ ಮತ್ತು ಶೈಲಿಗಾಗಿ ಮರು ಆಯ್ಕೆ ಮಾಡಲಾಗಿದೆ. ಬಲವಾದ ಮತ್ತು ಸ್ಫೋಟಕದಿಂದ ಪ್ರಾರಂಭವಾಯಿತು. ನಿಮ್ಮ ಸಂಖ್ಯೆಗಳು ಸ್ವಲ್ಪ ಹೆಚ್ಚಾದರೆ, ನೀವು ಬೆದರಿಸಲು ಪ್ರಾರಂಭಿಸುತ್ತೀರಿ ಎಂದು ನೀವು ಭಾವಿಸುತ್ತೀರಾ? ಬೆದರಿಸುವಿಕೆಯನ್ನು ಸಹಿಸುವುದಿಲ್ಲ. ನೀವು ಮೊದಲ ದಿನವೇ ದಾದಾ ಅವರ ವರ್ತನೆಯನ್ನು ನೋಡಿರಬೇಕು (ಹಿಂದಿಯಿಂದ ಅನುವಾದಿಸಲಾಗಿದೆ) ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಲಿಂಕ್ ಅನ್ನು ಇಲ್ಲಿ ಕಾಣಬಹುದು.

ಬಿರ್ಲಾ ಅವರು ಜೂನ್ ೨೬, ೨೦೨೪ ರಂದು ಧ್ವನಿ ಮತದ ಮೂಲಕ ೧೮ ನೇ ಲೋಕಸಭೆಯ ಸ್ಪೀಕರ್ ಆಗಿ ಮರು ಆಯ್ಕೆಯಾದರು. ಅವರು ಕಾಂಗ್ರೆಸ್ ಅಭ್ಯರ್ಥಿ ಕೋಡಿಕುನ್ನಿಲ್ ಸುರೇಶ್ ವಿರುದ್ಧ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ ನ (ಎನ್ ಡಿಎ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸ್ಪೀಕರ್ ಆಗಿ ಇದು ಅವರ ಎರಡನೇ ಅವಧಿಯಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ. ವೀಡಿಯೋ ೨೦೨೨ ರದ್ದು ಮತ್ತು ನಡೆಯುತ್ತಿರುವ ಸಂಸತ್ತಿನ ಅಧಿವೇಶವಲ್ಲ. 

ನಾವು ಕಂಡುಕೊಂಡಿದ್ದು ಏನು?

ವೀಡಿಯೋದ ಕೆಳಗಿನ ಬಲ ಮೂಲೆಯಲ್ಲಿ "12.12.22" ದಿನಾಂಕದ ಸ್ಟ್ಯಾಂಪ್ ಅನ್ನು ನಾವು ಗಮನಿಸಿದ್ದೇವೆ. ವೀಡಿಯೋ ೨೦೨೨ ರದ್ದು, ೨೦೨೪ ರದ್ದಲ್ಲ ಎಂದು ಇದು ಸೂಚಿಸುತ್ತದೆ.

ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್, ಇದು ದಿನಾಂಕದ ಸ್ಟ್ಯಾಂಪ್ ಅನ್ನು  ತೋರಿಸುತ್ತದೆ. (ಮೂಲ: ಫೇಸ್ಬುಕ್)

ಈ ಸುಳಿವನ್ನು ತೆಗೆದುಕೊಂಡು, ಡಿಸೆಂಬರ್ ೧೨, ೨೦೨೨  ರಂದು ನಡೆದ ಲೋಕಸಭಾ ಅಧಿವೇಶನದ ಲೈವ್ ವೀಡಿಯೋವನ್ನು ನಾವು ಸಂಸದ್ ಟಿವಿ ಯಲ್ಲಿ ಕಂಡುಕೊಂಡಿದ್ದೇವೆ (ಇಲ್ಲಿ ಆರ್ಕೈವ್ ಮಾಡಿ). ಅದರ ಶೀರ್ಷಿಕೆ ಹೀಗಿತ್ತು: “ಲೋಕಸಭೆಯ ಪ್ರಶ್ನೋತ್ತರ ಸಮಯ | ೧೧.೦೦ ಎಎಂ - ೧೨.೦೨ ಪಿಎಂ | ೧೨ ಡಿಸೆಂಬರ್ ೨೦೨೨.” ೫೨:೦೬ ಟೈಮ್‌ಸ್ಟ್ಯಾಂಪ್‌ನಲ್ಲಿ, ನಾವು ಈಗ ವೈರಲ್ ಕ್ಲಿಪ್ ಅನ್ನು ನೋಡಬಹುದು. 

ಲೋಕಸಭೆಯಲ್ಲಿ ಕರೆನ್ಸಿ ಅಪಮೌಲ್ಯೀಕರಣ ಮತ್ತು ವಿದೇಶಿ ವಿನಿಮಯ ಮೀಸಲು ಕುರಿತ ಪ್ರಶ್ನೆಯನ್ನು ಬಿರ್ಲಾ ಕೇಳುತ್ತಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಮುದಾಯ ಮತ್ತು ಹಿಂದಿಯಲ್ಲಿ ಅವರ ಪ್ರಾವೀಣ್ಯತೆಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ರೇವಂತ್ ರೆಡ್ಡಿ ಆರೋಪಿಸಿದ ನಂತರ, ಸದನದಲ್ಲಿ ಜಾತಿ ಅಥವಾ ಧರ್ಮವನ್ನು ಉಲ್ಲೇಖಿಸದಂತೆ ಅವರು ಸದಸ್ಯರಿಗೆ ಎಚ್ಚರಿಕೆ ನೀಡುವುದನ್ನು ಮೂಲ ವೀಡಿಯೋ ತೋರಿಸುತ್ತದೆ.

ಡಿಸೆಂಬರ್ ೧೨, ೨೦೨೨ ರಂದು ಪ್ರಕಟಿಸಿದ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ರೆಡ್ಡಿಯವರ ಕಾಮೆಂಟ್‌ಗಳ ನಂತರ, ಸದಸ್ಯರ ಚುನಾವಣೆಯಲ್ಲಿ ಜಾತಿ ಅಥವಾ ಧರ್ಮವು ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂದು ಬಿರ್ಲಾ ಹೇಳಿದರು. "ಇಲ್ಲಿ ಯಾರೇ ಆಗಲಿ ಸದನದಲ್ಲಿ ಇಂತಹ ಪದಗಳನ್ನು ಬಳಸಬಾರದು, ಇಲ್ಲವಾದರೆ ಅಂತಹ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ" ಎಂದು ಸ್ಪೀಕರ್ ಎಚ್ಚರಿಕೆ ನೀಡಿದ್ದರು.

ತೀರ್ಪು

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ೨೦೨೨ ರಲ್ಲಿ ಸಂಸತ್ತಿನ ಕೆಳಮನೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಿಗೆ ವಾಗ್ದಂಡನೆ ಮಾಡಿದ ವೀಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ