ಮೂಲಕ: ಉಮ್ಮೆ ಕುಲ್ಸುಮ್
ನವೆಂಬರ್ 22 2024
ಸೆಪ್ಟೆಂಬರ್ ೨೦೨೨ ರ ಈ ವೀಡಿಯೋ ಇರಾನ್ ಮಹಿಳೆ ಮಹ್ಸಾ ಅಮಿನಿಯ ಸಾವಿನ ನಂತರ ಜನರು ಬಿಲ್ಬೋರ್ಡ್ ಗೆ ಬೆಂಕಿ ಹಚ್ಚಿದ್ದನ್ನು ತೋರಿಸುತ್ತದೆ.
ಹೇಳಿಕೆ ಏನು?
ಡೊನಾಲ್ಡ್ ಟ್ರಂಪ್ ಅವರು ಯುನೈಟೆಡ್ ಸ್ಟೇಟ್ಸ್ ನ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇರಾನ್‌ನ ಜನರಲ್ಲಿ "ಹೆಚ್ಚಿದ ವಿಶ್ವಾಸ" ವನ್ನು ತೋರಿಸುತ್ತದೆ ಎಂಬ ಹೇಳಿಕೆಗಳ ನಡುವೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ತೋರಿಸುವ ಜಾಹೀರಾತು ಫಲಕಕ್ಕೆ ಬೆಂಕಿ ಹಚ್ಚಿದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. .
ಫೇಸ್‌ಬುಕ್ ನಲ್ಲಿನ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅದರ ಶೀರ್ಷಿಕೆ ಹೀಗಿದೆ, "ತಯಾರಿಕೆಯಲ್ಲಿ ಕ್ರಾಂತಿ
ಜನಸಮೂಹದಿಂದ ಅಯತೊಲ್ಲಾ ಅಲಿ ಖಮೇನಿ ಅವರ ಜಾಹೀರಾತು ಫಲಕಕ್ಕೆ ಬೆಂಕಿ ಹಚ್ಚಲಾಯಿತು. ಟ್ರಂಪ್ ವಿಜಯದ ನಂತರ ಇರಾನ್ ಜನರು ಧೈರ್ಯಶಾಲಿಯಾಗುತ್ತಿದ್ದಾರೆ." ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ವೈರಲ್ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ವೀಡಿಯೋ ವಾಸ್ತವವಾಗಿ ೨೦೨೨ ರದ್ದಾಗಿದೆ.
ನಾವು ಕಂಡುಕೊಂಡದ್ದು ಏನು?
ರಿವರ್ಸ್ ಇಮೇಜ್ ನಡೆಸಿದಾಗ, ಸೆಪ್ಟೆಂಬರ್ ೨೩, ೨೦೨೨ ರಂದು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ದಿ ಟೆಲಿಗ್ರಾಫ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಂಚಿಕೊಂಡ ಸ್ವಲ್ಪ ಉದ್ದವಾದ ವೀಡಿಯೋದಲ್ಲಿ ಅದೇ ಕ್ಲಿಪ್ ಅನ್ನು ಲಾಜಿಕಲಿ ಫ್ಯಾಕ್ಟ್ಸ್ ಗುರುತಿಸಿದೆ. ವೀಡಿಯೋದ ಶೀರ್ಷಿಕೆ ಹೀಗಿದೆ: "ಪೊಲೀಸ್ ಅಧಿಕಾರಿಯನ್ನು ಬೆಂಕಿ ಹಚ್ಚಿದ ನಂತರ ಅನುಚಿತವಾಗಿ ಹಿಜಾಬ್ ಧರಿಸಿದ್ದಕ್ಕಾಗಿ ಬಂಧನಕ್ಕೊಳಗಾದ ಮಹಿಳೆಯ ಸಾವಿನ ಬಗ್ಗೆ ಇರಾನ್‌ನಲ್ಲಿ ಅಶಾಂತಿ ಮುಂದುವರಿದಿದ್ದರಿಂದ ಪ್ರತಿಭಟನಾಕಾರರು ವಾಹನವನ್ನು ಸುಟ್ಟು ಹಾಕಿದರು."
ಈಗ-ವೈರಲ್ ಕ್ಲಿಪ್ ದಿ ಟೆಲಿಗ್ರಾಫ್‌ನ ವೀಡಿಯೋದಲ್ಲಿ ೩೨ -ಸೆಕೆಂಡ್ ಮಾರ್ಕ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ವರದಿಯ ಪ್ರಕಾರ, ಇರಾನ್‌ನ ಟೆಹ್ರಾನ್‌ನಲ್ಲಿ ಈ ಘಟನೆ ಸಂಭವಿಸಿದೆ, ಅಲ್ಲಿ ಜನರು ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಒಳಗೊಂಡ ಜಾಹೀರಾತು ಫಲಕಕ್ಕೆ ಬೆಂಕಿ ಹಚ್ಚಿದ್ದರು. ಈ ಕೃತ್ಯವು ತನ್ನ ಹಿಜಾಬ್ ಅನ್ನು ಸರಿಯಾಗಿ ಧರಿಸದ ಆರೋಪದ ಮೇಲೆ ಬಂಧಿಸಲ್ಪಟ್ಟ ನಂತರ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಯುವ ಇರಾನ್ ಯುವತಿ ಮಹ್ಸಾ ಅಮಿನಿಯ ಸಾವಿನ ನಂತರ ದೇಶಾದ್ಯಂತ ಭುಗಿಲೆದ್ದ ವ್ಯಾಪಕ ಪ್ರತಿಭಟನೆಗಳ ಭಾಗವಾಗಿತ್ತು.
ಅನೇಕ ಇತರ ಮಾಧ್ಯಮಗಳು ಸೆಪ್ಟೆಂಬರ್ ೨೦೨೨ ರಲ್ಲಿ ಈ ವೀಡಿಯೋವನ್ನು ಪ್ರಕಟಿಸಿದ್ದವು. ಉದಾಹರಣೆಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಇತ್ತೀಚೆಗೆ ಇರಾನ್‌ನಲ್ಲಿ ಪ್ರತಿಭಟನೆಗಳು ನಡೆದಿವೆಯಾ?
ಅಕ್ಟೋಬರ್ ೨೦೨೪ ರಲ್ಲಿ, ಟೆಹ್ರಾನ್‌ನಲ್ಲಿ ಒಂದು ಗುಂಪು ಪ್ರತಿಭಟನೆಗಳನ್ನು ಆಯೋಜಿಸಿತು, ಈ ಸಮಯದಲ್ಲಿ ಪ್ರತಿಭಟನಾಕಾರರು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ವಿರುದ್ಧ ಘೋಷಣೆ ಕೂಗಿದರು ಮತ್ತು ಇಂಟರ್ನೆಟ್ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಹೆಚ್ಚುವರಿಯಾಗಿ, ನವೆಂಬರ್ ೨೦, ೨೦೨೪ ರಂದು, ಇರಾನ್‌ನಲ್ಲಿ ಹಲವಾರು ನಿವೃತ್ತ ಶಿಕ್ಷಕರು ಪಾವತಿ ಮತ್ತು ಪಿಂಚಣಿ ಹೊಂದಾಣಿಕೆಗಳ ಕುರಿತು ಇರಾನ್ ಆಡಳಿತದ ಸಂಸತ್ತು ಮತ್ತು ಯೋಜನೆ ಹಾಗು ಬಜೆಟ್ ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಿದರು. ಆದರೆ, ಈ ಪ್ರತಿಭಟನೆಯಲ್ಲಿ ಯಾವುದೇ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿಲ್ಲ.
ಸೆಪ್ಟೆಂಬರ್ ೨೦೨೪ ರಲ್ಲಿ, ಮಹ್ಸಾ ಅಮಿನಿಯ ಮರಣದ ಎರಡು ವರ್ಷಗಳನ್ನು ಗುರುತಿಸಲು ವಿಶ್ವಾದ್ಯಂತ ಇರಾನಿಯನ್ನರು ಒಗ್ಗಟ್ಟಿನಿಂದ ಒಟ್ಟುಗೂಡಿದರು.
ನವೆಂಬರ್ ೨೦೨೪ ರ ಆರಂಭದಲ್ಲಿ, ಇರಾನಿನ ವಿದ್ಯಾರ್ಥಿನಿ ಅಹೂ ದರಿಯಾಯಿ, ಟೆಹ್ರಾನ್‌ನ ವಿಶ್ವವಿದ್ಯಾಲಯವೊಂದರಲ್ಲಿ ಇರಾನ್‌ನ ಕಡ್ಡಾಯ ಹಿಜಾಬ್ ಕಾನೂನಿನ ವಿರುದ್ಧ ತನ್ನ ಒಳ ಉಡುಪುಗಳನ್ನು ತೊಡೆದುಹಾಕಿದಾಗ ಅವಳ ಸ್ಪಷ್ಟ ಪ್ರತಿಭಟನೆಗಾಗಿ ಅಂತರರಾಷ್ಟ್ರೀಯ ಗಮನ ಸೆಳೆದಳು. ಅವಳನ್ನು ಬಂಧಿಸಲಾಯಿತು ಆದರೆ ನಂತರ ಬಿಡುಗಡೆ ಮಾಡಲಾಯಿತು ಮತ್ತು ಬಿಬಿಸಿ ವರದಿ ಮಾಡಿದಂತೆ ಆರೋಪಗಳನ್ನು ಎದುರಿಸುತ್ತಿಲ್ಲ.
ಹೆಚ್ಚುವರಿಯಾಗಿ, ಯು ಎಸ್ ಅಧ್ಯಕ್ಷೀಯ ಚುನಾವಣೆಯು ಇರಾನ್‌ನಲ್ಲಿ ಅಶಾಂತಿಯನ್ನು ಹುಟ್ಟುಹಾಕಿತು ಎಂಬ ಸಮರ್ಥನೆಯನ್ನು ಬೆಂಬಲಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಡೊನಾಲ್ಡ್ ಟ್ರಂಪ್ ಅವರ ಮರು-ಚುನಾವಣೆಯ ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಸಂಭವಿಸಿವೆ ಎಂದು ಸೂಚಿಸುವ ಮುಖ್ಯವಾಹಿನಿಯ ಮಾಧ್ಯಮಗಳಿಂದ ಯಾವುದೇ ವರದಿಗಳು ಲಾಜಿಕಲಿ ಫ್ಯಾಕ್ಟ್ಸ್ ಗೆ ಕಂಡುಬಂದಿಲ್ಲ.
ತೀರ್ಪು
೨೦೨೨ ರ ಸೆಪ್ಟೆಂಬರ್‌ನಲ್ಲಿ ಇರಾನ್‌ನಲ್ಲಿ ಮಾಹ್ಸಾ ಅಮಿನಿಯ ಸಾವಿನಿಂದ ಪ್ರಚೋದಿಸಲಾದ ಪ್ರತಿಭಟನೆಯನ್ನು ವೀಡಿಯೋ ತೋರುತ್ತದೆ, ಡೊನಾಲ್ಡ್ ಟ್ರಂಪ್ ಅವರ ವಿಜಯದ ನಂತರ ಇರಾನ್‌ನಲ್ಲಿ ಇತ್ತೀಚಿನ ಪ್ರತಿಭಟನೆಗಳು ಎಂದು ತಪ್ಪಾಗಿ ನಿರೂಪಿಸಲಾಗಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.