ಮುಖಪುಟ ಮೋಹನ್ ಭಾಗವತ್ ಅವರು ಭಾರತದ ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್ ಪಾತ್ರವನ್ನು ಶ್ಲಾಘಿಸುವ ೨೦೧೮ ರ ವೀಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗಿದೆ

ಮೋಹನ್ ಭಾಗವತ್ ಅವರು ಭಾರತದ ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್ ಪಾತ್ರವನ್ನು ಶ್ಲಾಘಿಸುವ ೨೦೧೮ ರ ವೀಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್

ಮೇ 23 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮೋಹನ್ ಭಾಗವತ್ ಅವರು ಭಾರತದ ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್ ಪಾತ್ರವನ್ನು ಶ್ಲಾಘಿಸುವ ೨೦೧೮ ರ ವೀಡಿಯೋವನ್ನು  ಇತ್ತೀಚಿನದ್ದು ಎಂದು  ಹಂಚಿಕೊಳ್ಳಲಾಗಿದೆ ಐದನೇ ಹಂತದ ಲೋಕಸಭೆ ಚುನಾವಣೆಯ ನಂತರ ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್‌ನ ಪಾತ್ರವನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶ್ಲಾಘಿಸಿದ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಈ ವೀಡಿಯೋ ಸೆಪ್ಟೆಂಬರ್ ೨೦೧೮ ರದ್ದು, ನವದೆಹಲಿಯಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವತ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರದ ಬಗ್ಗೆ ಮಾತನಾಡಿದ್ದರು.

ಹೇಳಿಕೆ ಏನು? 

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತದ ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವನ್ನು ಶ್ಲಾಘಿಸುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಮೇ ೨೦ ರಂದು ಲೋಕಸಭೆಯ ಚುನಾವಣೆಯ ಐದನೇ ಹಂತದ ಮತದಾನ ಮುಗಿದ ನಂತರ ಅವರು ಹೇಳಿಕೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಚುನಾವಣೆಯ ನಂತರ ಸರ್ಕಾರದಲ್ಲಿ ಸಂಭವನೀಯ ಬದಲಾವಣೆಯನ್ನು ಗ್ರಹಿಸಿದ ನಂತರ ಭಾಗವತ್ ಕಾಂಗ್ರೆಸ್ ಕೊಡುಗೆಯನ್ನು ಗುರುತಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ.

ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ ಭಾಗವತ್ ಅವರು, "ನಮ್ಮ ದೇಶದ ಜನರಿಗೆ ರಾಜಕೀಯ ಅರಿವು ಕಡಿಮೆ ಇದೆ, ಯಾರು ಅಧಿಕಾರ ನಡೆಸುತ್ತಾರೆ ಎಂಬುದರ ಬಗ್ಗೆ ಅವರಿಗೆ ಹೆಚ್ಚು ತಿಳಿದಿಲ್ಲ, ಈ ದೇಶದ ಜನರಲ್ಲಿ ರಾಜಕೀಯ ಅರಿವು ಇರಬೇಕು. ಅದಕ್ಕಾಗಿಯೇ ಕಾಂಗ್ರೆಸ್‌ನ ರೂಪದಲ್ಲಿ ಒಂದು ಪ್ರಮುಖ ಚಳುವಳಿಯು ಇಂದು ನಮ್ಮ ಜೀವನವನ್ನು ಪ್ರೇರೇಪಿಸುವ ಅನೇಕ ಮಹಾನ್ ವ್ಯಕ್ತಿಗಳನ್ನು ಹೊಂದಿತ್ತು ಮತ್ತು ಆ ಚಳುವಳಿಯು ನಮ್ಮ ಸ್ವಾತಂತ್ರ್ಯದ ಹಾದಿಯಲ್ಲಿ ಪ್ರಮುಖವಾಗಿ ಕೊಡುಗೆ ನೀಡಿತು."

ಈ ವೀಡಿಯೋವನ್ನು ಗುಜರಾತ್ ಕಾಂಗ್ರೆಸ್ ಎಸ್‌ಸಿ ಸೆಲ್ ಅಧ್ಯಕ್ಷ ಹಿತೇಂದ್ರ ಪಿತಾಡಿಯಾ ಅವರು ಹಂಚಿಕೊಂಡಿದ್ದು, "ಐದನೇ ಹಂತದ ನಂತರ, ಆರ್‌ಎಸ್‌ಎಸ್‌ನ ಮೋಹನ್ ಭಾಗವತ್ ಕೂಡ ಕಾಂಗ್ರೆಸ್ ಕೊಡುಗೆಯನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದರು.!! ಮೋದಿ ಹೋಗುತ್ತಿದ್ದಾರೆ.. INDIA ದ ಸರ್ಕಾರ ಬರಲಿದೆ. " ಪೋಷ್ಟ್ ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್.  
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ) 

ಈ ವೀಡಿಯೋವನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ಮೇ ೨೧, ೨೦೨೪ ರಂದು ಹಂಚಿಕೊಂಡಿದ್ದಾರೆ, ಪೋಷ್ಟ್ ನ ಮೂಲಕ ಕಾಂಗ್ರೆಸ್ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಟೀಕೆಗಳನ್ನು ಕೇಳಲು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಕೇಳಿದರು. ಅವರು ವೀಡಿಯೋದ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡದಿದ್ದರೂ, ಪ್ರಸ್ತುತ ಚುನಾವಣೆಗಳ ಸಂದರ್ಭದಲ್ಲಿ ಹಲವಾರು ಬಳಕೆದಾರರು ಅವರ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಆದರೆ, ಈ ವೀಡಿಯೋ ಸೆಪ್ಟೆಂಬರ್ ೨೦೧೮ ರದ್ದು ಎಂದು ನಾವು ಕಂಡುಕೊಂಡಿದ್ದೇವೆ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾವೇಶದಲ್ಲಿ ಭಾರತದ ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್ ಪಾತ್ರದ ಬಗ್ಗೆ ಮಾತನಾಡಿದ್ದರು.

ನಾವು ಕಂಡುಹಿಡಿದದ್ದು ಏನು? 

ವೈರಲ್ ವೀಡಿಯೋ  'HT' (ಹಿಂದೂಸ್ತಾನ್ ಟೈಮ್ಸ್) ಮತ್ತು ಸುದ್ದಿ ಸಂಸ್ಥೆ ಎಎನ್ಐ ನ ಲೋಗೋಗಳನ್ನು ಹೊಂದಿದೆ. ಇದನ್ನು ಸೂಚನೆಯಾಗಿ ಬಳಸಿಕೊಂಡು, ಸೆಪ್ಟೆಂಬರ್ ೧೮, ೨೦೧೮ ರಂದು ಹಿಂದೂಸ್ತಾನ್ ಟೈಮ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಮೂಲ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಿ) ನಾವು ಕಂಡುಕೊಂಡೆವು.  ದಿನಾಂಕವನ್ನು ನಾವು ಸ್ಥಳ ಪಠ್ಯದ ಕೆಳಗೆ ವೀಡಿಯೋದ ಮೇಲಿನ ಎಡ ಮೂಲೆಯಲ್ಲಿ ನೋಡಬಹುದು.

ನವದೆಹಲಿಯಲ್ಲಿ  ಆರ್‌ಎಸ್‌ಎಸ್  ಆಯೋಜಿಸಿದ್ದ ಮೂರು ದಿನಗಳ ಉಪನ್ಯಾಸ ಸರಣಿಯಲ್ಲಿ ಈ ವೀಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಭಾಗವತ್, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಿದೆ ಮತ್ತು ಭಾರತಕ್ಕೆ ಹಲವಾರು ಮಹಾನ್ ವ್ಯಕ್ತಿಗಳನ್ನು ನೀಡಿದೆ ಎಂದು ಹೇಳಿದರು.

ವೀಡಿಯೋದಲ್ಲಿ ೧೮-ಸೆಕೆಂಡ್ ಮಾರ್ಕ್‌ನಲ್ಲಿ, ಭಾಗವತ್ ಅವರ ಅದೇ ಹೇಳಿಕೆಯನ್ನು ಕೇಳಬಹುದು.

ಅದೇ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಸೆಪ್ಟೆಂಬರ್ ೧೮, ೨೦೧೮ ರಂದು ಎಎನ್ಐ ನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. 

ಭಾಗವತ್ ಅವರು ಸೆಪ್ಟೆಂಬರ್ ೧೭, ೨೦೧೮ ರಂದು ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಸೆಪ್ಟೆಂಬರ್ ೧೮ ರಿಂದ ಅವರ ಸಂಪೂರ್ಣ ಭಾಷಣವನ್ನು (ಇಲ್ಲಿ ಆರ್ಕೈವ್ ಮಾಡಿ) ಸಂಸದ್ ಟಿವಿ ಯ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಕೇಳಬಹುದು. 

ತಮ್ಮ ಭಾಷಣದ ಸಮಯದಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥರು ೧೮೫೭ ರ ಕ್ರಾಂತಿ ಮತ್ತು ದೇಶದಲ್ಲಿ ಹೊರಹೊಮ್ಮಿದ ನಂತರದ ಸ್ವಾತಂತ್ರ್ಯ ಚಳುವಳಿಗಳ ಬಗ್ಗೆ ಮಾತನಾಡಿದರು. ಗದರ್ ಕ್ರಾಂತಿ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಸಶಸ್ತ್ರ ಹೋರಾಟದ ಕುರಿತು ಮಾತನಾಡಿದರು. ನಂತರ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದ್ದರು. ವೀಡಿಯೋದಲ್ಲಿ ೧೮:೫೮ ರಿಂದ ೨೩:೨೦ ರ ನಡುವೆ ಸಂಬಂಧಿತ ಭಾಗವನ್ನು ನೋಡಬಹುದು.

ತೀರ್ಪು

ಮೋಹನ್ ಭಾಗವತ್ ಅವರ ೨೦೧೮ ರ ಭಾಷಣವನ್ನು ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನದ ನಂತರ ಆರ್‌ಎಸ್‌ಎಸ್ ಮುಖ್ಯಸ್ಥರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎಂದು ಸಂದರ್ಭ ರಹಿತ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ