ಮುಖಪುಟ ಇಲ್ಲ, ಶ್ವಾಸಕೋಶದ ಕ್ಯಾನ್ಸರ್ ಅನ್ನು ಶುಂಠಿಯ ರಸ ನೀವಾರಿಸುವುದಿಲ್ಲ

ಇಲ್ಲ, ಶ್ವಾಸಕೋಶದ ಕ್ಯಾನ್ಸರ್ ಅನ್ನು ಶುಂಠಿಯ ರಸ ನೀವಾರಿಸುವುದಿಲ್ಲ

ಮೂಲಕ: ಅಂಕಿತಾ ಕುಲಕರ್ಣಿ

ನವೆಂಬರ್ 25 2022

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಶ್ವಾಸಕೋಶದ ಕ್ಯಾನ್ಸರ್ ಅನ್ನು ಶುಂಠಿಯ ರಸ ನೀವಾರಿಸುವುದಿಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮಾನವರಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಶುಂಠಿಯನ್ನು ಬಳಸಬಹುದೆಂದು ಸಾಬೀತುಪಡಿಸಲು ಯಾವುದೇ ಗಣನೀಯ ವೈದ್ಯಕೀಯ ಪುರಾವೆಗಳಿಲ್ಲ.


ಸಂದರ್ಭ

ಪುರಾತನ ಕಾಲದಿಂದಲೂ ಹಲವಾರು ಗಿಡಮೂಲಿಕೆಗಳನ್ನು ವಿವಿಧ ರೋಗಗಳನ್ನು ನಿವಾರಿಸಲು ಉಪಯೋಗಿಸಲಾಗುತ್ತಿದೆ. ಆದರೆ ಅದರ ಸಂಭಾವ್ಯ ಬಳಕೆಯ ಬಗ್ಗೆ ತಪ್ಪು ಮಾಹಿತಿಗಳು ಅನಾದಿ ಕಾಲದಿಂದಲೂ ಹರಡುತ್ತಿವೆ. ಹೀಗೆ ವೀಬಾ ಕಿಚನ್ ಅನ್ನೊ ಫೇಸ್ಬುಕ್ ಖಾತೆಯಿಂದ ಅಪ್ಲೋಡ್ ಆದ ವೀಡಿಯೋದಲ್ಲಿ, ಶುಂಠಿಯ ರಸದಿಂದ ಕ್ಯಾನ್ಸರ್, ಕೆಮ್ಮು, ಶೀತ, ಹಾಗು ಫಲವತ್ತತೆಯ ಸಮಸ್ಯೆಗಳನ್ನು ನಿವಾರಿಸಬಹುದೆಂದು ಹೇಳುತ್ತದೆ . ಆದರೆ ಮಾನವರಲ್ಲಿ ಯಾವುದೇ ರೀತಿಯ ಕ್ಯಾನ್ಸರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಶುಂಠಿಯನ್ನು ಬಳಸಿರುವುದಕ್ಕೆ ಗಣನೀಯ ಪುರಾವೆಗಳಿಲ್ಲ.


ವಾಸ್ತವವಾಗಿ

ಗ್ಯಾಸ್ಟ್ರೋಎಂಟರಾಲಜಿ ರಿಸರ್ಚ್ & ಪ್ರಾಕ್ಟೀಸ್ ಜರ್ನಲ್ ನಲ್ಲಿ ಪ್ರಕಟವಾದ, ೨೦೧೫ ರ ಸಂಶೋಧನಾ ಲೇಖನವು, ಕ್ಯಾನ್ಸರ್ ಚಿಕಿತ್ಸೆಗಾಗಿ ಶುಂಠಿಯನ್ನು ಬಳಸಲು ಮತ್ತು ಅದರ ಪರಿಣಾಮಕಾರಿತ್ವವನ್ನು ಪ್ರದರ್ಶಿಸಲು ಅತಿಹೆಚ್ಚಿನ ವ್ಯಾಪಕವಾದ ಮಾನವ ಅಧ್ಯಯನದ ಅಗತ್ಯವಿದೆ ಎಂದು ಹೇಳುತ್ತದೆ. ಆದರೆ ಶುಂಠಿಯಲ್ಲಿರುವ ಅನೇಕ ಸಕ್ರಿಯ ಸಂಯುಕ್ತಗಳು ವಿವಿಧ ಖಾಯಿಲೆಗಳಿಗೆ ಹಾಗು ಜೀರ್ಣಾಂಗವ್ಯೂಹದ ಕ್ಯಾನ್ಸರ್ ನಂತಹ ಲಿವರ್ ಮತ್ತು ಪ್ಯಾಂಕ್ರಿಯಾಸ್ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿ ಹೊಮ್ಮಿವೆ ಎಂದು ಉಲ್ಲೇಖಿಸುತ್ತದೆ.


ಇಂದಿನವರೆಗೆ, ಶುಂಠಿಯಲ್ಲಿರುವ ಸಕ್ರಿಯ ಸಂಯುಕ್ತಗಳ ಪ್ರಯೋಗ ಕೇವಲ ವಿಟ್ರೋ ರೀತಿಯಲ್ಲಿ ನಡೆಸಲಾಗಿದೆ. ಅಂದರೆ ಶುಂಠಿಯ ಹೊರತೆಗೆಯುವಿಕೆಯನ್ನು ಲ್ಯಾಬ್ ನಲ್ಲಿ ಮತ್ತು ಪ್ರಾಣಿಗಳ ಮೇಲೆ ಅಧ್ಯಯನಮಾಡಲಾಗಿದೆ . ಮನುಷ್ಯನ ಮೇಲೆ ಮಾಡಿದ ಹಲವು ಕ್ಲಿನಿಕಲ್ ಅಧ್ಯಯನಗಳು ಭರವಸೆಯ ಫಲಿತಾಂಶವನ್ನು ನೀಡಿದ್ದರೂ ಶುಂಠಿಯನ್ನು ಕ್ಯಾನ್ಸರ್ ಚಿಕಿತ್ಸೆಗಾಗಿ ಸಮರ್ಥವೆಂದು ಹೇಳಲು ನಿರ್ಣಾಯಕ ಪುರಾವೆಗಳಿಲ್ಲ. 


ಅಂತೆಯೇ, ಹೆಲ್ತ್ ಫೀಡ್ ಬ್ಯಾಕ್ ನಲ್ಲಿ ಪ್ರಕಟವಾದ ತನಿಖೆಯ ಪ್ರಕಾರ, ಇಲಿಗಳ ಮೇಲೆ ಹಾಗು ಲ್ಯಾಬ್ ನಲ್ಲಿ ನಡೆಸಲಾದ ವೈಜ್ಞಾನಿಕ ಸಂಶೋಧನೆಯನ್ನು ತಪ್ಪು ಅರ್ಥೈಸಲಾಗಿದೆ ಎಂದು ಸೂಚಿಸುತ್ತದೆ. ಇಲಿಗಳಲ್ಲಿ ಶುಂಠಿಯ ರಸವನ್ನು ಹಾಕಿದಾಗ ಕ್ಯಾನ್ಸರ್ ನಿಂದ ಹರಡುವ ಜೀವಕೋಶದ ಸಂಖ್ಯೆ ಕಡಿಮೆಯಾಗಿದ್ದು ಕಂಡುಬಂದಿದೆ. ಈ ಸಂಶೋಧನೆಗಳು ಮನುಷ್ಯರ ದೇಹದ ಗುಣಲಕ್ಷಣಗಳಿಗೆ ಸಾಮಾನ್ಯೀ ಕರಿಸಲಾಗುವುದಿಲ್ಲಎಂದು ಈ ಪ್ರಯೋಗವು ಸ್ಪಷ್ಟಪಡಿಸುತ್ತದೆ. 


ಇದೇ ರೀತಿ, ಬ್ರಿಟೀಷರ ಕ್ಯಾನ್ಸರ್ ಸಂಶೋಧನಾ ಕೇಂದ್ರವು ಹೇಳುವುದೇನೆಂದರೆ, ಶುಂಠಿಯನ್ನು ಕಿಮೋಥೆರಪಿಯಿಂದ ಉಂಟಾಗುವ ಖಾಯಿಲೆಗಳಿಗೆ ಬಳಸಬಹುದು. ವೈದ್ಯಕೀಯ ಆಹಾರ ತಜ್ಞರಾದ ಎಮ್ಮಾ ಸ್ಲ್ಯಾಟರಿ ಅವರ ಪ್ರಕಾರ, "ಶುಂಠಿಯನ್ನು ವಾಕರಿಕೆ ಹಾಗೂ ಜಠರದ ಉರಿತ ಸಮಸ್ಯೆಗಳಿಗೆ ಚಿಕಿತ್ಸೆಗಾಗಿ ಬಳಕೆಮಾಡಬಹುದು. ಆದರೆ ಇದು ಕೆಮ್ಮು ಮತ್ತು ಜ್ವರಕ್ಕೆ ಉಪಯೋಗಿಸಬಹುದೆಂದು ಹೇಳಲು ಯಾವುದೇ ಕ್ಲಿನಿಕಲ್ ಪುರಾವೆಗಳಿಲ್ಲ" ಎಂದು ಉಲ್ಲೇಖಿಸುತ್ತಾರೆ.


ಇಂಟರ್ನ್ಯಾಷನಲ್ ಜರ್ನಲ್ ಆಫ್ ರಿಪ್ರಡಕ್ಟಿವ್ ಬಯೋಮೆಡಿಸಿನ್ ನಲ್ಲಿ ಬಂದ ೨೦೧೬ ರ ಅಧ್ಯಯನ, ಫಲವತ್ತತೆಯ ಸಮಸ್ಯೆಗಳಿಗೆ ಶುಂಠಿಯನ್ನು ಬಳಸಿರುವ ವ್ಯಕ್ತತೆಗಳಿಲ್ಲ ಎಂದು ಧೃಡಪಡಿಸುತ್ತದೆ. ಹೀಗೆ ಮೇಲ್ಕಂಡ ವಿವರಗಳನುಸಾರ ಶುಂಠಿಯಂತಹ ಮನೆ ಮದ್ದುಗಳನ್ನು ಬಳಕೆಮಾಡುವ ಬದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮವೆಂದು ಸೂಚಿಸುತ್ತದೆ.


ತೀರ್ಪು 

ಶುಂಠಿಯಿಂದ ತೆಗೆದ ರಸವನ್ನು ಕಿಮೋಥೆರಪಿ ಮತ್ತು ಕ್ಯಾನ್ಸರ್ ನಿಂದ ಉಂಟಾಗುವ ಕೆಲವು ಖಾಯಿಲೆಗಳ ಚಿಕಿತ್ಸೆಗಾಗಿ ಬಳಸಬಹುದು. ಆದರೆ ಅದರಲ್ಲಿ ಕ್ಯಾನ್ಸರನ್ನು ತಡೆಗಟ್ಟುವ ಶಕ್ತಿಯಿಲ್ಲ, ಇದಕ್ಕೆ ಪುರಾವೆಗಳ ಕೊರತೆಯಿದೆ. ಹಾಗಾಗಿ ಈ ಹಕ್ಕು ತಪ್ಪೆಂದು ಗುರುತಿಸುತ್ತಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ