ಮುಖಪುಟ ಪಂಜಾಬ್ ಯೂಟ್ಯೂಬರ್ ಬಂಧನದ ವಿರುದ್ಧ ನಡೆದ ಪ್ರತಿಭಟನೆಯನ್ನು ಇತ್ತೀಚಿನ ರೈತರ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಂಜಾಬ್ ಯೂಟ್ಯೂಬರ್ ಬಂಧನದ ವಿರುದ್ಧ ನಡೆದ ಪ್ರತಿಭಟನೆಯನ್ನು ಇತ್ತೀಚಿನ ರೈತರ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ಅಜ್ರಾ ಅಲಿ

ಫೆಬ್ರವರಿ 15 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಪಂಜಾಬ್ ಯೂಟ್ಯೂಬರ್ ಬಂಧನದ ವಿರುದ್ಧ ನಡೆದ ಪ್ರತಿಭಟನೆಯನ್ನು ಇತ್ತೀಚಿನ ರೈತರ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.(ಮೂಲ: ಎಕ್ಸ್ / ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಸಾಮಾಜಿಕ ಮಾಧ್ಯಮ ಪ್ರಭಾವಿ ಭಾನಾ ಸಿಧು ಬಂಧನದ ನಂತರ ಜನರು ಸಂಗ್ರೂರ್‌ನಲ್ಲಿರುವ ಪಂಜಾಬ್ ಮುಖ್ಯಮಂತ್ರಿ ನಿವಾಸದ ಕಡೆಗೆ ಹೊರಟಿದ್ದನ್ನು ಈ ವೀಡಿಯೋ ತೋರಿಸುತ್ತದೆ.

ಹೇಳಿಕೆ ಏನು?

ಟ್ರಾಕ್ಟರ್‌ಗಳಲ್ಲಿ ವ್ಯಕ್ತಿಗಳು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಕಾನೂನು ಜಾರಿ ಅಧಿಕಾರಿಗಳೊಂದಿಗೆ ತೊಡಗಿಸಿಕೊಳ್ಳುತ್ತಿರುವುದನ್ನು ಚಿತ್ರಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದು ದೆಹಲಿಯತ್ತ ಸಾಗುತ್ತಿರುವ ರೈತರನ್ನು ತೋರಿಸುತ್ತದೆ ಎಂದು ಹೇಳಲಾಗುತ್ತದೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ರಾಜ್ಯಗಳ ರೈತರು ತಮ್ಮ ಆರಂಭಿಕ ಸುದೀರ್ಘ ಪ್ರತಿಭಟನೆಯ ನಂತರ ಸುಮಾರು ಎರಡು ವರ್ಷಗಳ ನಂತರ ನವದೆಹಲಿಗೆ ಮೆರವಣಿಗೆ ಮಾಡುವ ಉದ್ದೇಶವನ್ನು ಘೋಷಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯು, ರೈತರ ರ‍್ಯಾಲಿ ಅವರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಉದ್ದೇಶವನ್ನು ಹೊಂದಿದೆ, ಇದರಲ್ಲಿ, ಅವರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂ ಎಸ್ ಪಿ) ಕಾನೂನು ಭರವಸೆಯನ್ನು ನೀಡುವುದು ಎಂದು ಸೂಚಿಸುತ್ತದೆ

ಸಂಯುಕ್ತ ಕಿಸಾನ್ ಮೋರ್ಚಾ (ಯುನೈಟೆಡ್ ಫಾರ್ಮರ್ಸ್ ಫ್ರಂಟ್ - ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಪ್ರತಿನಿಧಿಸುವ ರೈತರಲ್ಲಿ ಅಸಮಾಧಾನವು ಹೆಚ್ಚುತ್ತಿದೆ, ಸರ್ಕಾರದ ಜೊತೆಗಿನ ಮಾತುಕತೆಗಳ ಸ್ಥಗಿತದ ನಂತರ. ಇದಕ್ಕೆ ಪ್ರತಿಯಾಗಿ ದೆಹಲಿಯ ಗಡಿಯಲ್ಲಿ ರೈತರ ಪಾದಯಾತ್ರೆಯನ್ನು ವಿಫಲಗೊಳಿಸಲು ಬ್ಯಾರಿಕೇಡ್‌ಗಳು ಮತ್ತು ತಂತಿ ತಡೆಗಳನ್ನು ನಿರ್ಮಿಸುವುದು ಸೇರಿದಂತೆ ವ್ಯಾಪಕ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಈ ಸಂದರ್ಭದಲ್ಲಿ, ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಬಳಕೆದಾರರು ಈ ವೀಡಿಯೋವನ್ನು (ಆರ್ಕೈವ್ ಇಲ್ಲಿದೆ) ಹಂಚಿಕೊಂಡಿದ್ದಾರೆ, ಮತ್ತು ಅದರ ಶೀರ್ಹಿಕೆ ಹೀಗಿದೆ, "ಬಿಗ್ ಬ್ರೇಕಿಂಗ್ *ಕಿಸಾನ್ ಕೋ ಕೋಯಿ ನಹಿಂ ರೋಕ್ ಸಕ್ತೇ !*ದೆಹಲಿ ಹರಿಯಾಣ ಹೆದ್ದಾರಿ ಬಂದ್ ಮಾಡಿದ್ದ ಪೋಲಿಸ್ ಬ್ಯಾರಿಕೇಡ್ ದಾಟಿ ಕೊಂಡು ದೆಹಲಿಗೆ ಹೋರಟ ರೈತರು. ಮೋದಿ ಸರ್ಕಾರದ ವಿರುದ್ಧ ದೇಶದ ರೈತರ ಸಂಘಟನೆಗಳು ದೊಡ್ಡ ಪ್ರತಿಭಟನೆ. ಜೈ ಜವಾನ್ ಜೈ ಕಿಸಾನ್." ಇದೇ ರೀತಿಯ  ಪೋಷ್ಟ್ ಗಳ  ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. 

ವೈರಲ್  ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.(ಮೂಲ: ಎಕ್ಸ್ / ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ಪಂಜಾಬಿ ಯೂಟ್ಯೂಬರ್ ಭಾನಾ ಸಿಧು ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜನರು ಸಂಗ್ರೂರ್ ಕಡೆಗೆ ಮೆರವಣಿಗೆ ನಡೆಸುತ್ತಿರುವುದನ್ನು ವೈರಲ್ ವೀಡಿಯೋ ತೋರಿಸುತ್ತದೆ. ವೀಡಿಯೋದಲ್ಲಿರುವ ಸ್ಥಳವು ರಾಷ್ಟ್ರೀಯ ಹೆದ್ದಾರಿ ೭ ರಲ್ಲಿ ಪಂಜಾಬ್‌ನ ಬದ್ಬಾರ್ ಟೋಲ್ ಪ್ಲಾಜಾ ಆಗಿದೆ.

ಸತ್ಯಾಂಶಗಳು

ವೈರಲ್ ವೀಡಿಯೋದ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಇದು ಫೆಬ್ರವರಿ ೩, ೨೦೨೪ ರಂದು ಅದೇ ತುಣುಕನ್ನು ಹೊಂದಿರುವ ಪಂಜಾಬ್‌ನ ಜಲಂಧರ್ ಮೂಲದ ಪ್ರಾದೇಶಿಕ ಡಿಜಿಟಲ್ ಸುದ್ದಿ ಔಟ್‌ಲೆಟ್ ಜೆಮ್ ಟಿವಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೋದ ವಿವರಣೆಯು ಹೀಗೆ ಹೇಳುತ್ತದೆ, “ಇಂದಿನ ಪ್ರತಿಭಟನೆಯ ಇತ್ತೀಚಿನ ದೃಶ್ಯಗಳು ಭಾನಾ ಸಿಧು ಮತ್ತು ಲಾಖಾ ಸಿಧಾನಾ ಅವರ ಬೆಂಬಲಿಗರು ಟ್ರಾಕ್ಟರುಗಳಲ್ಲಿ ಸಂಗ್ರೂರ್ ಬಳಿ ಪಂಜಾಬ್ ಪೊಲೀಸ್ ತಡೆಗಳನ್ನು ದಾಟಿದ್ದರೆ . ಭಾನಾ ಸಿಧು ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಫೆಬ್ರವರಿ ೩, ೨೦೨೪ ರಂದು “ಪಂಜಾಬ್” ಎಂಬ ಶೀರ್ಷಿಕೆಯೊಂದಿಗೆ ಪೋಷ್ಟ್ ಮಾಡಲಾದ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸವನ್ನು ತಲುಪಲು ಯುವಕರು ಮತ್ತು ರೈತರು ಸೇರಿದಂತೆ ಅನೇಕ ಪ್ರತಿಭಟನಾಕಾರರು ಸಂಗ್ರೂರ್ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸಿದ್ದು ಬೆಂಬಲಿಗರು ಬ್ಯಾರಿಕೇಡ್‌ಗಳನ್ನು ಮುರಿದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ನಂತರ ಪ್ರತಿಭಟನೆ ತೀವ್ರಗೊಂಡಿತು. ಫೆಬ್ರವರಿ ೧೦ ರೊಳಗೆ ಸಿಧು ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದ ನಂತರ ಅಂತಿಮವಾಗಿ ಧರಣಿ ಸತ್ಯಾಗ್ರಹವನ್ನು ಬಗೆಹರಿಸಲಾಯಿತು. ವರದಿಗಳ ಪ್ರಕಾರ ಅಂತಿಮವಾಗಿ ಸಿಧು ಅವರನ್ನು ಫೆಬ್ರವರಿ ೧೨ ರಂದು ಬಿಡುಗಡೆ ಮಾಡಲಾಯಿತು.

ಹೆಚ್ಚುವರಿ ಪರಿಶೀಲನೆಗಾಗಿ, ನಾವು ಜೆಮ್ ಟಿವಿ  ಅನ್ನು ಸಂಪರ್ಕಿಸಿದೆವು, ಇದು ತುಣುಕನ್ನು ಸೆರೆಹಿಡಿದ ಸ್ವತಂತ್ರ ಪತ್ರಕರ್ತರಿಗೆ ನಮ್ಮನ್ನು ನಿರ್ದೇಶಿಸಿತು. ಅನಾಮಧೇಯರಾಗಿ ಉಳಿಯಲು ಆದ್ಯತೆ ನೀಡುತ್ತಾ, ಪತ್ರಕರ್ತ ಪಂಜಾಬ್ ಪೊಲೀಸ್ ಬ್ಯಾರಿಕೇಡ್‌ಗಳನ್ನು ಚಿತ್ರಿಸಲಾಗಿದೆ ಎಂದು ದೃಢಪಡಿಸಿದರು, ಆ ಮೂಲಕ ದೆಹಲಿ-ಎನ್‌ಸಿಆರ್ ಗಡಿಗಳಲ್ಲಿ ಅದನ್ನು ಚಿತ್ರೀಕರಿಸುವ ಸಾಧ್ಯತೆಯನ್ನು ಹೊರತುಪಡಿಸಲಾಗಿದೆ. ನಿಜವಾದ ಸ್ಥಳವನ್ನು ಪಂಜಾಬ್‌ನ ಬರ್ನಾಲಾ ಬಳಿಯ ರಾಷ್ಟ್ರೀಯ ಹೆದ್ದಾರಿ ೭ ರಲ್ಲಿನ ಬದ್ಬಾರ್ ಟೋಲ್ ಪ್ಲಾಜಾ ಎಂದು ಗುರುತಿಸಲಾಗಿದೆ. ಫೆಬ್ರವರಿ ೩, ೨೦೨೪ ರಂದು ಭಾನಾ ಸಿಧು ಅವರ ಬೆಂಬಲಿಗರು ಟ್ರಾಕ್ಟರ್‌ಗಳಲ್ಲಿ ಸಂಗ್ರೂರ್‌ಗೆ ಹೋಗುತ್ತಿರುವುದನ್ನು ತುಣುಕಿನಲ್ಲಿ ತೋರಿಸಲಾಗಿದೆ, ಇದು ಟೋಲ್ ಪ್ಲಾಜಾದಲ್ಲಿ ಗಮನಾರ್ಹ ಟ್ರಾಫಿಕ್ ಅಡಚಣೆಯನ್ನು ಉಂಟುಮಾಡಿತು ಮತ್ತು ಪಂಜಾಬ್ ಪೊಲೀಸರೊಂದಿಗೆ ಘರ್ಷಣೆಗೆ ಕಾರಣವಾಯಿತು ಎಂದು ಅವರು ಹೇಳಿದರು.

ಈಗ ರದ್ದಾದ ಮೂರು ಕೃಷಿ ಕಾನೂನುಗಳ ವಿರುದ್ಧ ೨೦೨೦-೨೦೨೧ ರ ರೈತರ ಪ್ರತಿಭಟನೆಯ ಸಂದರ್ಭದಲ್ಲಿ, ಸಿಧು ರೈತ ಸಂಘಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಅವರ ಬಿಡುಗಡೆಗೆ ಆಗ್ರಹಿಸಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಈ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು. ಭಾರತೀಯ ಕಿಸಾನ್ ಒಕ್ಕೂಟದ (ಭಾರತೀಯ ರೈತರ ಒಕ್ಕೂಟ) ಧ್ವಜವು ವೀಡಿಯೋದಲ್ಲಿ ೦.೪೦-ಸೆಕೆಂಡ್‌ನಲ್ಲಿ ಗೋಚರಿಸುತ್ತದೆ. ಆದರೆ, ಈ ವೀಡಿಯೋವನ್ನು ರೈತರ ನವದೆಹಲಿಯ ಪಾದಯಾತ್ರೆಯೊಂದಿಗೆ ತಪ್ಪಾಗಿ ಜೋಡಿಸಲಾಗಿದೆ. ೨೦೨೪ರ ಫೆಬ್ರುವರಿ ೩ ರಂದು ಸಂಗ್ರೂರ್‌ನಲ್ಲಿರುವ ಪಂಜಾಬ್ ಮುಖ್ಯಮಂತ್ರಿಯವರ ನಿವಾಸಕ್ಕೆ ಭಾನಾ ಸಿಧು ಅವರ ಬಿಡುಗಡೆಗಾಗಿ ಮೆರವಣಿಗೆ ನಡೆಸುವುದು ವೀಡಿಯೋದಲ್ಲಿನ ರೈತರ ನಿಜವಾದ ಉದ್ದೇಶವಾಗಿತ್ತು.

ತೀರ್ಪು

ವ್ಯಕ್ತಿಗಳು ಪೊಲೀಸರೊಂದಿಗೆ ಘರ್ಷಣೆ ಮಾಡುವುದನ್ನು ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಬ್ಯಾರಿಕೇಡ್‌ಗಳ ಮೂಲಕ ಮುನ್ನುಗ್ಗುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೋ, ಫೆಬ್ರವರಿ ೩, ೨೦೨೪ ರಂದು ಪಂಜಾಬ್‌ನ ಸಂಗ್ರೂರ್‌ಗೆ ಪ್ರತಿಭಟನಾ ಮೆರವಣಿಗೆಯನ್ನು ಸೆರೆಹಿಡಿಯುತ್ತದೆ, ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ಭಾನಾ ಸಿಧು ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಇದನ್ನು ನಡೆಸಲಾಗಿತ್ತು. ರೈತರು ದೆಹಲಿಯತ್ತ ಸಾಗುತ್ತಿರುವುದನ್ನು ಇದು ಚಿತ್ರಿಸಿಲ್ಲ. ಆದ್ದರಿಂದ, ನಾವು ವೈರಲ್ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ