ಮುಖಪುಟ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಹಿಂದೂ ಪುರೋಹಿತರೊಂದಿಗಿನ ವರ್ಚುವಲ್ ಭೇಟಿಯ ವೀಡಿಯೋ ಎಡಿಟ್ ಮಾಡಲಾಗಿದೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಹಿಂದೂ ಪುರೋಹಿತರೊಂದಿಗಿನ ವರ್ಚುವಲ್ ಭೇಟಿಯ ವೀಡಿಯೋ ಎಡಿಟ್ ಮಾಡಲಾಗಿದೆ

ಮೂಲಕ: ರಾಜೇಶ್ವರಿ ಪರಸ

ಡಿಸೆಂಬರ್ 18 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಹಿಂದೂ ಪುರೋಹಿತರೊಂದಿಗಿನ ವರ್ಚುವಲ್ ಭೇಟಿಯ ವೀಡಿಯೋ ಎಡಿಟ್ ಮಾಡಲಾಗಿದೆ ವೈರಲ್ ಹೇಳಿಕೆಯ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋ ಜೂನ್‌ ತಿಂಗಳಲ್ಲಿ ಒಡಿಶಾದ ಬಾಲಸೋರ್ ರೈಲು ಅಪಘಾತದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಪರಿಶೀಲನಾ ಸಭೆಯದ್ದು.

ಇಲ್ಲಿನ ಹೇಳಿಕೆಯೇನು?

ಭಾರತದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಅಧಿಕಾರಿಗಳು ಹಿಂದೂ ಅರ್ಚಕ ಪ್ರೇಮಾನಂದ ಗೋವಿಂದ್ ಮಹಾರಾಜ್ ಅವರೊಂದಿಗೆ ಟೆಲಿಕಾನ್ಫರೆನ್ಸ್‌ ಮೂಲಕ ಸಭೆ ನಡೆಸುವುದನ್ನು ತೋರಿಸುವ ವೀಡಿಯೋವೊಂದು ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಬಳಕೆದಾರರು ಈ ವೀಡಿಯೋವನ್ನು ಹಿಂದಿ ಶೀರ್ಷಿಕೆಯೊಂದಿಗೆ ಹೀಗೆ ಹಂಚಿಕೊಂಡಿದ್ದಾರೆ, “ಪೂರ್ಣ ವೀಡಿಯೋವನ್ನು ಕೇಳಿನೋಡಿ ಮತ್ತು ದೇಶದ ಪ್ರಯೋಜನಕ್ಕಾಗಿ ಅದನ್ನು ಹಂಚಿಕೊಳ್ಳಿ. ಮಹಾರಾಜ ಶ್ರೀಗಳ ಮಾತಿಗೆ ಕಿವಿಗೊಡಿ! ಮೋದಿಜಿ ಸೇರಿದಂತೆ ಎಲ್ಲರೂ ಕೇಳುತ್ತಿದ್ದಾರೆ. ಜೈ ಶ್ರೀ ರಾಮ್."

ಡಿಸೆಂಬರ್ ೧೪ ರ ಹೊತ್ತಿಗೆ, ಈ ವೀಡಿಯೋ ಹೊಂದಿರುವ ಪೋಷ್ಟ್ ಸರಿಸುಮಾರು ೩೪೮,೦೦೦ ವೀಕ್ಷಣೆಗಳು ಮತ್ತು ೨,೭೦೦ ಮರುಪೋಷ್ಟ್ ಗಳನ್ನು ಗಳಿಸಿದೆ. ಹಲವಾರು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಗಳೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಆದರೆ, ಈ ಹೇಳಿಕೆಯು ತಪ್ಪಾಗಿದೆ ಮತ್ತು ವೀಡಿಯೋವನ್ನು ಎಡಿಟ್ ಮಾಡಲಾಗಿದೆ.

ವೈರಲ್ ಹೇಳಿಕೆಯ ಸ್ಕ್ರೀನ್‌ಶಾಟ್ (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಸತ್ಯಾಂಶಗಳೇನು?

ವೀಡಿಯೋದ ಕೀಫ್ರೇಮ್ ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಜೂನ್ ೩ ರಂದು ಅಧಿಕೃತ ಆಲ್ ಇಂಡಿಯಾ ರೇಡಿಯೋ ನ್ಯೂಸ್ (ಎಐಆರ್) ಖಾತೆಯಿಂದ ಪೋಷ್ಟ್ ಮಾಡಿದ ಇದೇ ರೀತಿಯ ೧೯-ಸೆಕೆಂಡಿನ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಎಐಆರ್ ಪೋಷ್ಟ್ ನ ಶೀರ್ಷಿಕೆ ಹೀಗಿದೆ, "#OdishaTrainAccident: ಈ ಕೆಳಗಿನ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. #ಬಾಲಸೋರ್‌ನಲ್ಲಿ ರೈಲು ಅಪಘಾತ. ಇಂದು ಪ್ರಧಾನಿ ಮೋದಿ ಒಡಿಶಾಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. #BalasoreTrainAccident."

ಮೂಲ ವೀಡಿಯೋದಲ್ಲಿ, ಹಿಂದೂ ಪುರೋಹಿತರ ಬದಲಿಗೆ ಕೊಠಡಿಯಲ್ಲಿರುವ ಟಿವಿ ಪರದೆಯ ಮೇಲೆ ರೈಲು ಸಂಕೇತಗಳ ಡಿಜಿಟಲ್ ಪ್ರಾತಿನಿಧ್ಯದ ಪ್ರಸ್ತುತಿಯನ್ನು ನೋಡಬಹುದು.

ಪರಿಶೀಲನಾ ಸಭೆಯ ಕುರಿತು ಆಲ್ ಇಂಡಿಯಾ ರೇಡಿಯೋ ಮಾಡಿದ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಎಬಿಪಿ ನ್ಯೂಸ್ ಲೈವ್ ಕೂಡ ಈ ಸಭೆಯ ಕುರಿತು “ಕೊರೊಮ್ಯಾಂಡಲ್ ಎಕ್ಸ್‌ಪ್ರೆಸ್ ಅಪಘಾತ: ಪಿಎಂ ಮೋದಿ ಪರಿಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ, ಸಮಾನವಾದ ಚಿತ್ರವನ್ನು ಹೊಂದಿರುವ ವರದಿಯನ್ನು ಪ್ರಕಟಿಸಿದೆ.

ಎಬಿಪಿ ನ್ಯೂಸ್ ಲೈವ್‌ನಲ್ಲಿ ಪ್ರಕಟವಾದ ಸುದ್ದಿ ವರದಿಯ ಸ್ಕ್ರೀನ್‌ಶಾಟ್ (ಮೂಲ: ಎಬಿಪಿ ನ್ಯೂಸ್ ಲೈವ್/ಸ್ಕ್ರೀನ್‌ಶಾಟ್)

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಪ್ರೇಮಾನಂದ ಗೋವಿಂದ್ ಮಹಾರಾಜ್ ಅವರನ್ನು ಅಧಿಕೃತ ವರ್ಚುವಲ್ ಸಭೆಯಲ್ಲಿ ಭೇಟಿಯಾದರು ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳು ನಮಗೆ ಕಂಡುಬಂದಿಲ್ಲ.

ಹೆಚ್ಚುವರಿಯಾಗಿ, ಮತ್ತಷ್ಟು ಪರಿಶೀಲಿಸಿದಾಗ ವೈರಲ್ ವೀಡಿಯೋದಲ್ಲಿನ ಟಿವಿ ಯಲ್ಲಿ ಪೂಜಾರಿಯವರೊಂದಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸುಮಾರು ೨:೧೪ ನಿಮಿಷಗಳ ಟೈಮ್ ಸ್ಟ್ಯಾಂಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮೋಹನ್ ಭಾಗವತ್ ಅವರ ಕಡೆಗೆ ತಿರುಗಿರುವುದನ್ನು ವೀಡಿಯೋ ತೋರಿಸುತ್ತದೆ ಹೊರತು, ಅಧಿಕಾರಿಗಳ ಕಡೆ ಅಲ್ಲ. 

ಟಿವಿ ಪರದೆಯ ಮೇಲೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇರುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇನ್ನಷ್ಟು ತನಿಖೆ ಮಾಡಿದಾಗ ಅವರ ನಿಜವಾದ ಸಭೆಯ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ಭಜನ್ ಮಾರ್ಗ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ನವೆಂಬರ್ ೨೯, ೨೦೨೩ ರಂದು ಅವರ ಸಂಭಾಷಣೆಯ ವೀಡಿಯೋವನ್ನು ಅಪ್‌ಲೋಡ್ ಮಾಡಿದೆ. ವೈರಲ್ ವೀಡಿಯೋದಲ್ಲಿ ಕಂಡುಬರುವ ಭಾಗವತ್ ಅವರ ಅದೇ ಚಿತ್ರವು ಸಭೆಯ ಈ ವೀಡಿಯೋದಲ್ಲಿಯೂ ಕಂಡುಬರುತ್ತದೆ.

ತೀರ್ಪು 

ಇಲ್ಲಿನ ಹೇಳಿಕೆಯು ಎರಡು ಪ್ರತ್ಯೇಕ ಘಟನೆಗಳಿಂದ ದೃಶ್ಯಗಳನ್ನು ಬಳಸಿಕೊಂಡು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಒಂದು ದೃಶ್ಯ ಉನ್ನತ ಮಟ್ಟದ ಪರಿಶೀಲನಾ ಸಭೆಯದ್ದಾದರೆ ಮತ್ತೊಂದು ದೃಶ್ಯ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಹಿಂದೂ ಪುರೋಹಿತರ ನಡುವಿನ ಸಭೆಯದ್ದು. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ