ಮುಖಪುಟ ಕಾಂಗ್ರೆಸ್ ಗೆದ್ದ ನಂತರ ಕರ್ನಾಟಕದಲ್ಲಿ ಜನರು ಪಾಕಿಸ್ತಾನದ ಧ್ವಜವನ್ನು ಹಾರಿಸುತ್ತಿರುವುದನ್ನು ವೀಡಿಯೋ ತೋರಿಸುವುದಿಲ್ಲ

ಕಾಂಗ್ರೆಸ್ ಗೆದ್ದ ನಂತರ ಕರ್ನಾಟಕದಲ್ಲಿ ಜನರು ಪಾಕಿಸ್ತಾನದ ಧ್ವಜವನ್ನು ಹಾರಿಸುತ್ತಿರುವುದನ್ನು ವೀಡಿಯೋ ತೋರಿಸುವುದಿಲ್ಲ

ಮೂಲಕ: ರಜಿನಿ ಕೆ.ಜಿ

ಜೂನ್ 28 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕಾಂಗ್ರೆಸ್ ಗೆದ್ದ ನಂತರ ಕರ್ನಾಟಕದಲ್ಲಿ ಜನರು ಪಾಕಿಸ್ತಾನದ ಧ್ವಜವನ್ನು ಹಾರಿಸುತ್ತಿರುವುದನ್ನು ವೀಡಿಯೋ ತೋರಿಸುವುದಿಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು False

ವೈರಲ್ ಆಗಿರುವ ವೀಡಿಯೋದಲ್ಲಿ ಕಂಡುಬರುವ ಧ್ವಜವು ಇಸ್ಲಾಮಿಕ್ ಧ್ವಜವಾಗಿದ್ದು, ಇದು ಪಾಕಿಸ್ತಾನದ ಧ್ವಜಕ್ಕಿಂತ ಭಿನ್ನವಾಗಿದೆ ಎಂದು ಭಟ್ಕಳ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸಂದರ್ಭ

೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೧೩೫ ಸ್ಥಾನಗಳೊಂದಿಗೆ ವಿಜಯಶಾಲಿಯಾಗಿದ್ದು, ೬೬ ಸ್ಥಾನಗಳನ್ನು ಗಳಿಸಿದ ಬಿಜೆಪಿಯನ್ನು ಸೋಲಿಸಿದೆ. ೧೯ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಜೆಡಿಎಸ್ (ಜನತಾ ದಳ ಜಾತ್ಯತೀತ) ಮೂರನೆಯ ಸ್ಥಾನದಲ್ಲಿ ಬಂದಿದೆ. ಮೇ ೧೩ ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ, ಕಾಂಗ್ರೆಸ್ ಯಶಸ್ಸಿನ ಬಗ್ಗೆ ರಾಜ್ಯಾದ್ಯಂತ ಸಂಭ್ರಮಾಚರಣೆ ಪ್ರಾರಂಭವಾಯಿತು. ಜನರು ಕಾಂಗ್ರೆಸ್ ಅನ್ನು ಅಭಿನಂದಿಸಿದರು ಮತ್ತು ಸಂಭ್ರಮಾಚರಣೆಯ ದೃಶ್ಯಗಳನ್ನು ಹಂಚಿಕೊಂಡರು.

ಅಂತಹ ಒಂದು ವೀಡಿಯೋ, ಮತದಾನದ ಫಲಿತಾಂಶದ ನಂತರ ಭಟ್ಕಳದಲ್ಲಿ ಜನರು ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದೆ.

“ಭಟ್ಕಳ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ…” ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವಿಟರ್‌ನಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ, ಜನರು ಹಸಿರು ಧ್ವಜ ಮತ್ತು ಕೇಸರಿ ಧ್ವಜ ಸೇರಿದಂತೆ ವಿವಿಧ ಧ್ವಜಗಳನ್ನು ಹಾರಿಸುತ್ತಿರುವುದನ್ನು ಕಾಣಬಹುದು. ಭಟ್ಕಳದಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಲಾಗಿದೆ ಎಂದು ಬಹು ಟ್ವಿಟ್ಟರ್ ಬಳಕೆದಾರರು ಪ್ರತಿಪಾದಿಸಿದ್ದಾರೆ, ಆದರೆ ಮಾಳವೀಯ ಮತ್ತು ಹಲವರು ನಿಗೂಢ ಶೀರ್ಷಿಕೆಗಳೊಂದಿಗೆ - “ಕಾಂಗ್ರೆಸ್ ಇನ್ನೂ ಸರ್ಕಾರ ರಚನೆ ಮಾಡಿಲ್ಲ. ಇದನ್ನೇ ನಾವು ಕಳೆದುಕೊಂಡೆವು....”ವೀಡಿಯೋವನ್ನು ಹಂಚಿಕೊಂಡಿದ್ದಾರೆ. 

ವಾಸ್ತವವಾಗಿ

ವೈರಲ್ ವೀಡಿಯೋದಲ್ಲಿ ರಸ್ತೆಯ ವೃತ್ತದ ಮೇಲ್ಭಾಗದಲ್ಲಿ ನಾಲ್ಕು ಧ್ವಜಗಳನ್ನು ಹಾರಿಸಲಾಗಿದೆ.

ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಾಲ್ಕು ಧ್ವಜಗಳಲ್ಲಿ 'ಓಂ' ಎಂದು ಬರೆದ ಕೇಸರಿ ಧ್ವಜ, ಕಾಂಗ್ರೆಸ್ ಧ್ವಜ, ಡಾ. ಬಿ.ಆರ್. ಅಂಬೇಡ್ಕರ್ ಅವರ ಮುಖವನ್ನು ಒಳಗೊಂಡ ನೀಲಿ ಧ್ವಜ ಮತ್ತು ಹಸಿರು ಧ್ವಜ ಇರುವುದು ಕಂಡು ಬರುತ್ತದೆ. ಹಸಿರು ಧ್ವಜವನ್ನು ಪಾಕಿಸ್ತಾನ ಧ್ವಜ ಎಂದು ತಪ್ಪಾಗಿ ಗುರುತಿಸಲಾಗಿದೆ ಎಂದು ಸ್ಪಷ್ಟವಾಗುತ್ತದೆ.

ಈ ಹೇಳಿಕೆಗಳನ್ನು ಪರಿಶೀಲಿಸಲು, ನಾವು ವೀಡಿಯೋದಲ್ಲಿರುವ ಹಸಿರು ಧ್ವಜವನ್ನು ಪಾಕಿಸ್ತಾನದ ಧ್ವಜದೊಂದಿಗೆ ಹೋಲಿಸಿದೆವು.

ವೀಡಿಯೋದಲ್ಲಿರುವ ಹಸಿರು ಧ್ವಜವು ಪಾಕಿಸ್ತಾನದ ಧ್ವಜಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ.

ಅನೇಕ ಸಂದರ್ಭಗಳಲ್ಲಿ, ಬಣ್ಣ ಮತ್ತು ವಿನ್ಯಾಸದಲ್ಲಿನ ಹೋಲಿಕೆಯಿಂದಾಗಿ ಜನರು ಇಸ್ಲಾಮಿಕ್ ಧ್ವಜಗಳನ್ನು ಪಾಕಿಸ್ತಾನಿ ಧ್ವಜ ಎಂದು ತಪ್ಪಾಗಿ ಗುರುತಿಸಿದ್ದಾರೆ. ಆದರೆ, ಪಾಕಿಸ್ತಾನಿ ಧ್ವಜವು ವಿಶಾಲವಾದ ಬಿಳಿ ಗಡಿ, ಹಸಿರು ದೇಹ ಮತ್ತು ಅರ್ಧಚಂದ್ರ ಮತ್ತು ನಕ್ಷತ್ರದೊಂದಿಗೆ ನಿರ್ದಿಷ್ಟ ವಿನ್ಯಾಸವನ್ನು ಹೊಂದಿದೆ. ಮತ್ತೊಂದೆಡೆ, ಇಸ್ಲಾಮಿಕ್ ಧ್ವಜವು ಇಸ್ಲಾಮಿನ ಹೆಚ್ಚು ಸಾಮಾನ್ಯ ಪ್ರಾತಿನಿಧ್ಯವಾಗಿದೆ ಮತ್ತು ಹಸಿರು ಬಣ್ಣ ಮತ್ತು ಇಸ್ಲಾಮಿಕ್ ಚಿಹ್ನೆಗಳ ಮೇಲೆ ಕೇಂದ್ರೀಕರಿಸುವ ವಿವಿಧ ವಿನ್ಯಾಸಗಳನ್ನು ಹೊಂದಿರುತ್ತದೆ. ಈ ನಿದರ್ಶನದಲ್ಲಿ, ವೀಡಿಯೋದಲ್ಲಿ ಕಂಡುಬರುವ ಧ್ವಜವು ಯಾವುದೇ ಬಿಳಿ ಗಡಿಯಿಲ್ಲದೆ ಹಸಿರು ಹಿನ್ನೆಲೆಯನ್ನು ಹೊಂದಿದೆ ಮತ್ತು ಮಧ್ಯದಲ್ಲಿ ಅರ್ಧಚಂದ್ರಾಕಾರ ಮತ್ತು ನಕ್ಷತ್ರವನ್ನು ಹೊಂದಿದೆ, ಅದನ್ನು ಪಾಕಿಸ್ತಾನದ ಧ್ವಜದಿಂದ ಪ್ರತ್ಯೇಕಿಸುತ್ತದೆ. ಇಂತಹ ಇಸ್ಲಾಮಿಕ್ ಧ್ವಜಗಳನ್ನು ಮುಸ್ಲಿಂ ಮನೆಗಳಲ್ಲಿ ಅಥವಾ ಭಾರತದಲ್ಲಿ ಇಸ್ಲಾಮಿಕ್ ಸಂಸ್ಥೆಗಳು ಸಹ ಬಳಸುತ್ತಾರೆ.

ಲಾಜಿಕಲಿ ಫ್ಯಾಕ್ಟ್ಸ್ ಭಟ್ಕಳದ ಪೊಲೀಸ್ ಉಪ ಅಧೀಕ್ಷಕರನ್ನು ಸಂಪರ್ಕಿಸಿದೆ, ಅವರು ಈ ಹೇಳಿಕೆಗಳು ತಪ್ಪು ಮತ್ತು ನಿರಾಧಾರ ಎಂದು ಸ್ಪಷ್ಟಪಡಿಸಿದರು.

"ಎಸ್ಪಿ ಸರ್ ಈಗಾಗಲೇ ಹೇಳಿಕೆ ನೀಡಿದ್ದು, ಹೇಳಿಕೆ ತಪ್ಪಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಭಟ್ಕಳ ವೃತ್ತದಲ್ಲಿ ಯಾರೂ ಪಾಕಿಸ್ತಾನದ ಧ್ವಜ ಹಾರಿಸಿಲ್ಲ. ಜನರು ಚುನಾವಣಾ ವಿಜಯವನ್ನು ಆಚರಿಸಿದರು ಮತ್ತು ನಾಲ್ಕು ಬಾವುಟಗಳನ್ನು ಬೀಸಿದರು - ಕೇಸರಿ ಧ್ವಜ, ಕಾಂಗ್ರೆಸ್ ಪಕ್ಷದ ಧ್ವಜ, ಡಾ. ಬಿ.ಆರ್. ಅಂಬೇಡ್ಕರ್ ಧ್ವಜ ಮತ್ತು ಇಸ್ಲಾಮಿಕ್ ಧಾರ್ಮಿಕ ಧ್ವಜ. ಜನರು ತಮ್ಮ ಮನೆಗಳಲ್ಲಿ ಹಸಿರು ಧ್ವಜವನ್ನು ಬಳಸುತ್ತಾರೆ ಮತ್ತು ಅದು ಪಾಕಿಸ್ತಾನದ ಧ್ವಜವಲ್ಲ,” ಎಂದು ಅವರು ಹೇಳಿದರು. 

ತೀರ್ಪು

ಉತ್ತರ ಕನ್ನಡದ ಭಟ್ಕಳದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ವಿಜಯೋತ್ಸವದ ವೀಡಿಯೋವನ್ನು ಆ ಪ್ರದೇಶದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಲಾಗಿದೆ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ. ಹೇಳಿಕೆಗಳಿಗೆ ವಿರುದ್ಧವಾಗಿ, ನೋಡಲಾದ ಧ್ವಜವು ಪಾಕಿಸ್ತಾನದ ಧ್ವಜವಲ್ಲ ಆದರೆ ಇಸ್ಲಾಮಿಕ್ ಧ್ವಜವಾಗಿತ್ತು. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ