ಮೂಲಕ: ಸೋಹಮ್ ಶಾ
ಅಕ್ಟೋಬರ್ 19 2023
ವೀಡಿಯೋವನ್ನು ಆಗಸ್ಟ್ ೨೦೨೩ ರಲ್ಲಿ ಪೋಷ್ಟ್ ಮಾಡಲಾಗಿದೆ ಮತ್ತು ಇರಾಕ್‌ನಲ್ಲಿ ಅರ್ಬೈನ್ ವಾಕ್‌ನಲ್ಲಿ ಭಾರತೀಯರು ಭಾಗವಹಿಸುತ್ತಿರುವುದನ್ನು ತೋರಿಸುತ್ತದೆ.
ನಿರೂಪಣೆ ಏನು?
ಇಸ್ರೇಲಿ ಪಡೆಗಳ ದಾಳಿಗೆ ಒಳಗಾಗದೆ ಪ್ಯಾಲೆಸ್ತೀನ್‌ನಿಂದ ಸುರಕ್ಷಿತವಾಗಿ ಹೊರಬರಲು ಭಾರತೀಯ ತ್ರಿವರ್ಣ ಧ್ವಜವು ಪ್ಯಾಲೆಸ್ತೀನಿಯರಿಗೆ ಸಹಾಯ ಮಾಡುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿ ಬಹು ಪೋಷ್ಟ್ ಗಳು ಹೇಳಿಕೊಂಡಿವೆ. ಅನೇಕ ಜನರು ಭಾರತೀಯ ಧ್ವಜಗಳೊಂದಿಗೆ ನಡೆಯುತ್ತಿರುವುದನ್ನು ವೈರಲ್ ವೀಡಿಯೋ ತೋರಿಸುತ್ತದೆ. ಕೆಲವು ಪೋಷ್ಟ್ ಗಳ ಆರ್ಕೈವ್ ಲಿಂಕ್ ಅನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ವೀಡಿಯೋಗಳಿಗೆ ಹಿಂದಿಯಲ್ಲಿ ಶೀರ್ಷಿಕೆ ನೀಡಲಾಗಿದೆ. ಪ್ಯಾಲೆಸ್ತೀನ್ ಮುಸ್ಲಿಮರು ಪ್ಯಾಲೆಸ್ಟೈನ್ ನಿಂದ ಹೊರಬರಲು ಭಾರತೀಯ ಧ್ವಜವನ್ನು ಬಳಸುತ್ತಾರೆ, ಏಕೆಂದರೆ ಇಸ್ರೇಲಿ ಪಡೆಗಳು ಅದನ್ನು ಹಿಡಿದಿರುವವರ ಮೇಲೆ ದಾಳಿ ಮಾಡುತ್ತಿಲ್ಲ ಎಂಬುದನ್ನು ವೀಡಿಯೋ ತೋರಿಸುತ್ತಿದೆ ಎಂದು ಹೇಳಿಕೊಳ್ಳಲಾಗುತ್ತಿದೆ.
ವೈರಲ್ ವೀಡಿಯೋ ಪ್ಯಾಲೆಸ್ತೀನ್‌ನಿಂದ ಪಾರಾಗಲು ಪ್ಯಾಲೆಸ್ತೀನಿಯರು ಭಾರತದ ಧ್ವಜಗಳನ್ನು ಬೀಸುತ್ತಿರುವುದನ್ನು ತೋರಿಸುತ್ತದೆ. (ಮೂಲ: ಎಕ್ಸ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ವೀಡಿಯೋ ಪ್ಯಾಲೆಸ್ಟೈನ್‌ನಿಂದ ಅಲ್ಲ ಮತ್ತು ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ.
ವಾಸ್ತಾಂಶವೇನು?
ರಿವರ್ಸ್ ಇಮೇಜ್ ಹುಡುಕಾಟವನ್ನು ಬಳಸಿಕೊಂಡು, ವೀಡಿಯೋವನ್ನು ಆಗಸ್ಟ್ ೩೧, ೨೦೨೩ ರಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ (ಆರ್ಕೈವ್) ಪೋಷ್ಟ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
ನಡೆಯುತ್ತಿರುವ ಇಸ್ರೇಲಿ-ಹಮಾಸ್ ಘರ್ಷಣೆಯು ಅಕ್ಟೋಬರ್ ೭, ೨೦೨೩ ರಂದು ಪ್ರಾರಂಭವಾಯಿತು. ಇದು ವೀಡಿಯೋ ಸಂಘರ್ಷದ ಹಿಂದಿನದು ಎಂಬುದನ್ನು ಸಾಬೀತುಪಡಿಸುತ್ತದೆ. ಇದಲ್ಲದೆ, ವೀಡಿಯೋದ ಶೀರ್ಷಿಕೆಯು "ಅರಬೀನ್ ವಾಕ್ ೨೦೨೩" ಎಂದು ಹೇಳುತ್ತದೆ.
ಫ್ಯಾಕ್ಟ್-ಚೆಕ್ ಸಂಸ್ಥೆ ಬೂಮ್, ಖಾತೆಯ ಮಾಲೀಕರ ಪತಿ ಅಲಿ ಹಕ್ ಅವರನ್ನು ಸಂಪರ್ಕಿಸಿದೆ. ಅಲಿ ಹಕ್, “ಈ ವೀಡಿಯೋ ಪ್ಯಾಲೆಸ್ತೀನ್‌ನಿಂದ ಬಂದದ್ದಲ್ಲ. ಇದು ಇರಾಕ್‌ನ ಕರ್ಬಲಾದಿಂದ ಬಂದಿದೆ ಮತ್ತು ನಾನು ಅದನ್ನು ಆಗಸ್ಟ್ ೩೦, ೨೦೨೩ ರಂದು ಶೂಟ್ ಮಾಡಿದ್ದೇನೆ. ನನ್ನ ಹೆಂಡತಿ ಮಹಿಳೆಯರ ವಾಕಿಂಗ್ ಗುಂಪಿನಲ್ಲಿದ್ದಾಳೆ ಮತ್ತು ನಾವು ನಜಾಫ್‌ನಿಂದ ಕರ್ಬಲಾಕ್ಕೆ ಅರ್ಬೈನ್‌ನ ಧಾರ್ಮಿಕ ನಡಿಗೆಯನ್ನು ಮಾಡುತ್ತಿದ್ದೆವು" ಎಂದು ಹೇಳಿದ್ದಾರೆ. ತಾನು ಮತ್ತು ತನ್ನ ಪತ್ನಿ ಕರ್ನಾಟಕದ ಬೀದರ್‌ನವರು ಎಂದು ಅವರು ಹೇಳಿದರು. ಲಾಜಿಕಲಿ ಫ್ಯಾಕ್ಟ್ಸ್, ಇನ್ಸ್ಟಾಗ್ರಾಮ್ ಖಾತೆಯ ಮಾಲೀಕರನ್ನೂ ಸಂಪರ್ಕಿಸಿದೆ. ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದಾಗ ಈ ಕಥೆಯನ್ನು ನವೀಕರಿಸಲಾಗುತ್ತದೆ.
ಅಲ್ ಜಜೀರಾ ಪ್ರಕಾರ, ಅರ್ಬೈನ್ ನಡಿಗೆ ಇರಾಕ್‌ನಲ್ಲಿ ಪ್ರತಿ ವರ್ಷ ನಡೆಯುತ್ತದೆ, ಅಲ್ಲಿ ಜನರು ದೇಶದಾದ್ಯಂತ ಕರ್ಬಲಾ ನಗರಕ್ಕೆ ೨೦ ದಿನಗಳ ಕಾಲ ಕಾಲ್ನಡಿಗೆಯಲ್ಲಿ ನಡೆಯುತ್ತಾರೆ. ಕ್ರಿ.ಶ. ೬೮೦ ರಲ್ಲಿ ನಡೆದ ಯುದ್ಧದಲ್ಲಿ ಇಮಾಮ್ ಹುಸೇನ್‌ನ ಮರಣದ ನಂತರದ ೪೦ ನೇ ದಿನದ ಸ್ಮರಣಾರ್ಥ ಇದು, ಅವರ ಸಮಾಧಿ ಕರ್ಬಲಾದಲ್ಲಿದೆ. ಬ್ರಿಟಾನಿಕಾ ಪ್ರಕಾರ, ಇಮಾಮ್ ಹುಸೇನ್ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಮತ್ತು ಮೂರನೇ ಇಮಾಮ್ ಎಂದು ಶಿಯಾ ಮುಸ್ಲಿಮರು ಗೌರವಿಸುತ್ತಾರೆ.
ಏನ್ ಡಿ ಟಿವಿ ಪ್ರಕಾರ, ಈ ವರ್ಷ ಭಾರತದಿಂದ ಲಕ್ಷ ಶಿಯಾ ಮುಸ್ಲಿಮರು ಇರಾಕ್‌ಗೆ ಪ್ರಯಾಣ ಬೆಳೆಸಿದ್ದಾರೆ. ಭಾರತೀಯ ಯಾತ್ರಾರ್ಥಿಗಳು ನಡಿಗೆಯ ಸಮಯದಲ್ಲಿ ಕೆಲವೊಮ್ಮೆ ಭಾರತೀಯ ಧ್ವಜಗಳನ್ನು ಹೊತ್ತಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂತೆಯೇ, ಮಿಡ್-ಡೇ ವರದಿಯು ಭಾರತೀಯ ಧ್ವಜದೊಂದಿಗೆ ಯಾತ್ರಿಕರ ಫೋಟೋಗಳನ್ನು ತೋರಿಸುತ್ತದೆ.
ಅರ್ಬೈನ್ ನಡಿಗೆಯಲ್ಲಿ ಭಾರತೀಯ ಧ್ವಜವನ್ನು ಹೊತ್ತ ಜನರು (ಮೂಲ: ಮಿಡ್-ಡೇ/ಸ್ಕ್ರೀನ್‌ಶಾಟ್)
ಇರಾಕ್‌ನಿಂದ ಏನ್ ಡಿ ಟಿವಿ (NDTV) ಯ ಗ್ರೌಂಡ್ ರಿಪೋರ್ಟ್ ಈ ಶೀರ್ಷಿಕೆಯಡಿಯಲ್ಲಿ“Karbala: Arbaeen के मौके पर Karbala के रास्ते में Najaf शहर में भारतीय तीर्थयात्रियों से बातचीत” ಸೆಪ್ಟೆಂಬರ್ ೬, ೨೦೨೩ ರಂದು ಪೋಷ್ಟ್ ಮಾಡಲಾಗಿದ್ದು, ಅರ್ಬೈನ್ ಮೆರವಣಿಗೆಯಲ್ಲಿ ಭಾರತೀಯರು ಭಾರತೀಯ ಧ್ವಜವನ್ನು ಹೊತ್ತಿರುವುದನ್ನು ಸಹ ತೋರಿಸಲಾಗಿದೆ.
ಇರಾಕ್‌ನಿಂದ ಏನ್ ಡಿ ಟಿವಿ ವರದಿ. (ಮೂಲ: ಯೂಟ್ಯೂಬ್)
ತೀರ್ಪು
ಆಗಸ್ಟ್ ೨೦೨೩ ರಲ್ಲಿ ಚಿತ್ರಿಕರಿಸಿದ ಇರಾಕ್‌ನ ಅರ್ಬೈನ್ ವಾಕ್‌ನ ವೀಡಿಯೋ ಆಗಿರುವುದರಿಂದ ಮತ್ತು ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧವಿಲ್ಲ ಮತ್ತು ಪೂರ್ವಭಾವಿಯಾಗಿರುವ ಕಾರಣ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ರಜಿನಿ ಕೆ.ಜಿ)