ಮುಖಪುಟ ಕರ್ನಾಟಕದ ಕಲಬುರಗಿಯಲ್ಲಿ ಚಾಕು ಹಿಡಿದ ವ್ಯಕ್ತಿಯ ಮೇಲೆ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿದ ಘಟನೆಯನ್ನು ಉತ್ತರ ಪ್ರದೇಶಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಕರ್ನಾಟಕದ ಕಲಬುರಗಿಯಲ್ಲಿ ಚಾಕು ಹಿಡಿದ ವ್ಯಕ್ತಿಯ ಮೇಲೆ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿದ ಘಟನೆಯನ್ನು ಉತ್ತರ ಪ್ರದೇಶಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ:

ಫೆಬ್ರವರಿ 22 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕರ್ನಾಟಕದ ಕಲಬುರಗಿಯಲ್ಲಿ ಚಾಕು ಹಿಡಿದ ವ್ಯಕ್ತಿಯ ಮೇಲೆ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿದ ಘಟನೆಯನ್ನು ಉತ್ತರ ಪ್ರದೇಶಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಕರ್ನಾಟಕದ ಕಲಬುರಗಿಯಲ್ಲಿ ನಡೆದ ಘಟನೆಯನ್ನು ಉತ್ತರ ಪ್ರದೇಶದಲ್ಲಿ ನಡೆದಿರುವುದು ಎಂದು ತಪ್ಪಾಗಿ ಬಿಂಬಿಸಲಾಗಿದೆ.


ಸಂದರ್ಭ

ಸಾರ್ವಜನಿಕ ಸ್ಥಳದಲ್ಲಿ ಚಾಕು ತೋರಿಸಿ ಜನರನ್ನು ಬೆದರಿಸಿದ ಉತ್ತರ ಪ್ರದೇಶದ ಗುಲಬರ್ಗ್ ನಿವಾಸಿಯಾದ ಅಬ್ದುಲ್ ಜಾಫರ್ ಎಂಬುವನ ವಿರುದ್ಧ ಅಲ್ಲಿನ ಪೊಲೀಸರು ಕಾಲಿಗೆ ಗುಂಡು ಹಾರಿಸಿ ನಿಯಂತ್ರಿಸಿದರು ಎಂದು ಹೇಳುವ ವೀಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾದ ಯೋಗಿ ಆದಿತ್ಯನಾಥ್ ರವರ ಒಳ್ಳೆಯ ಆಡಳಿತ ಅಲ್ಲಿರುವುದರಿಂದ ದಾದಾಗಿರಿ ನಿಯಂತ್ರಣ ಸಾಧ್ಯವಾಯಿತು ಎಂದು  ಬರೆಯಲಾಗಿದೆ. ಆದರೆ ಬೇರೆ ರಾಜ್ಯದಲ್ಲಿ ನಡೆದ ಘಟನೆಯ ತುಣುಕೊಂದನ್ನು ತೋರಿಸಿ ತಪ್ಪಾಗಿ ಅರ್ಥೈಸುವಂತೆ ಮಾಡಲಾಗಿದೆ. 


ವಾಸ್ತವವಾಗಿ

ವೈರಲ್ ವೀಡಿಯೋನ ಕೀ ಫ್ರೇಮ್ಸ್ ಬಳಸಿ ಹುಡುಕಿದಾಗ ಘಟನೆಗೆ ಸಂಬಂದಿಸಿದ ಹಲವು ವರದಿಗಳು ಪ್ರಕಟಗೊಂಡಿರುವುದು ಕಂಡುಬರುತ್ತದೆ. ೨೦೨೩ ರ ಫೆಬ್ರವರಿ ತಿಂಗಳಿನ ಮೊದಲ ವಾರದಲ್ಲಿ ಈ ಘಟನೆ ಕರ್ನಾಟಕ ರಾಜ್ಯದ ಕಲಬುರಗಿಯಲ್ಲಿ ನಡೆದಿದ್ದು ಎಂದು ತಿಳಿಯ ಪಡುತ್ತದೆ. ದಿ ನ್ಯೂಸ್ ಮಿನಿಟ್ ಸುದ್ದಿ ಸಂಸ್ಥೆಯು ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ವೀಡಿಯೋ ಶೇರ್ ಮಾಡಿ ತಲೆಬರಹದಲ್ಲಿ ಈಗೆಂದು ಬರೆದಿದೆ : "ಕರ್ನಾಟಕ ಪೊಲೀಸರು ಕಲ್ಬುರ್ಗಿಯಲ್ಲಿ ಚಾಕು ಝಳಪಿಸುತ್ತಿದ್ದ ಓರ್ವ ವ್ಯಕ್ತಿಯ ಮೇಲೆ ಗುಂಡು ಹಾರಿಸಿದರು."

ಇಂಡಿಯಾ ಟುಡೇ ವರದಿಯಲ್ಲಿ ವೈರಲ್ ವೀಡಿಯೋದ ತುಣುಕನ್ನು ಪ್ರಕಟಿಸಿ ನಡೆದ ಘಟನೆಯ ಬಗ್ಗೆ ವಿವರಿಸಲಾಗಿದೆ. ಆ ಪ್ರಕಾರ ಕಲಬುರಗಿಯ ಸೂಪರ್ ಮಾರ್ಕೆಟ್ ಬಳಿ ಫಝಲ್ ಭಗವಾನ್ ಎಂಬಾತ ಚಾಕು ಹಿಡಿದು ಅಲ್ಲಿ ನೆರೆದಿದ್ದ ಜನರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದ. ಆಗ ಪೊಲೀಸರು ಧಾವಿಸಿ ಅವನಿಗೆ ತಿಳಿ ಹೇಳಿ ಹಿಡಿದಿದ್ದ ಹರಿತವಾದ ಆಯುಧವನ್ನು ಬಿಸಾಕಲು ಹೇಳಿದರು. ಆದರೆ ಫಝಲ್ ಪೊಲೀಸರ ಮಾತನ್ನು ಕೇಳದೆ ಇದ್ದುದರಿಂದ ಅವರು ಅವನ ಕಾಲಿಗೆ ಗುಂಡು ಹಾರಿಸಿ ನಂತರ ಅವನನ್ನು ಸುಪರ್ದಿಗೆ ತೆಗೆದುಕೂಂಡರು ಮತ್ತು ಅರೆಸ್ಟ್ ಕೂಡ ಮಾಡಲಾಯಿತು. 

ಇಂಡಿಯನ್ ಎಕ್ಸ್‌ಪ್ರೆಸ್‌ ತನ್ನ ವರದಿಯಲ್ಲಿ ಕಲಬುರಗಿಯ ಮಾರ್ಕೆಟ್ ಏರಿಯಾದಲ್ಲಿ ನಡೆದ ಗಲಾಟೆಯ ವೀಡಿಯೋವಿನ ಸ್ಕ್ರೀನ್‌ಗ್ರಾಬ್ (screengrab) ಹಾಕಿ ಸುದ್ದಿ ಪ್ರಕಟಿಸಿದೆ. ಈ ಎಲ್ಲ ವರದಿಗಳು ಘಟನೆಯು ಕರ್ನಾಟಕದ ಕಲಬುರಗಿಯಲ್ಲಿ ನಡೆದದ್ದು ಉತ್ತರ ಪ್ರದೇಶದಲ್ಲಲ್ಲ ಎಂದು ಸೂಚಿಸುತ್ತದೆ.


ತೀರ್ಪು

ಕರ್ನಾಟಕದ ಕಲಬುರಗಿಯ ವ್ಯಕ್ತಿಯೊಬ್ಬ ಚಾಕು ಹಿಡಿದು ಗಲಾಟೆ ಮಾಡಿದ ವೀಡಿಯೋ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಹೇಗೆ ನಿಭಾಯಿಸಲಾಗಿತು ಎಂದು ತಪ್ಪಾಗಿ ನಿರೂಪಿಸಲಾಗಿದೆ. ಆದ್ದರಿಂದ ಮೇಲಿನ ಹೇಳಿಕೆಯನ್ನು ತಪ್ಪು ಎಂದು ಪರಿಗಣಿಸಲಾಗಿದೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ