ಮುಖಪುಟ ಎಡಿಟ್ ಮಾಡಿರುವ ವೀಡಿಯೋ ರಾಹುಲ್ ಗಾಂಧಿಯವರು "ಗಾಂಧೀಜಿಯವರೊಂದಿಗೆ ಮಾತನಾಡಿದೆ" ಎಂದು ಹೇಳುವಂತೆ ತೋರಿಸುತ್ತದೆ

ಎಡಿಟ್ ಮಾಡಿರುವ ವೀಡಿಯೋ ರಾಹುಲ್ ಗಾಂಧಿಯವರು "ಗಾಂಧೀಜಿಯವರೊಂದಿಗೆ ಮಾತನಾಡಿದೆ" ಎಂದು ಹೇಳುವಂತೆ ತೋರಿಸುತ್ತದೆ

ಮೂಲಕ: ವಿವೇಕ್ ಜೆ

ನವೆಂಬರ್ 28 2022

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಎಡಿಟ್ ಮಾಡಿರುವ ವೀಡಿಯೋ ರಾಹುಲ್ ಗಾಂಧಿಯವರು "ಗಾಂಧೀಜಿಯವರೊಂದಿಗೆ ಮಾತನಾಡಿದೆ" ಎಂದು ಹೇಳುವಂತೆ ತೋರಿಸುತ್ತದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ರಾಹುಲ್ ಗಾಂಧಿಯವರ ವಿಸ್ತಾರವಾದ ಭಾಷಣವೊಂದರ ಸಣ್ಣ ನಿರ್ದಿಷ್ಟ ಭಾಗವನ್ನು ಹಂಚುವ ಮೂಲಕ ಅವರ ಹೇಳಿಕೆಯ ಬಗ್ಗೆ ತಪ್ಪು ಸುದ್ದಿ ಹರಡಿಸಲಾಗಿದೆ.


ಸಂದರ್ಭ

ಕೇರಳದ ವೈನಾಡ್ ಕ್ಷೇತ್ರದ ಎಂ.ಪಿ ಯಾದ ರಾಹುಲ್ ಗಾಂಧಿಯವರು ಮಹಾತ್ಮಾ ಗಾಂಧಿಯವರ ಜೊತೆ ಮಾತನಾಡಿದ್ದೆ ಎಂದು ಹೇಳುವಂತೆ ತೋರಿಸಿಕೊಳ್ಳುವ ವೀಡಿಯೋ ಕ್ಲಿಪ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ೪೨ ಸೆಕೆಂಡ್ಸ್ ದೀರ್ಘದ ಈ ಕ್ಲಿಪ್ಪಿನಲ್ಲಿ ಅವರು ಒಂದು ವಿಷಯದ ಬಗ್ಗೆ ಗಾಂಧೀಜಿಯವರ ಜೊತೆ ಚರ್ಚೆ ಮಾಡಿದೆ ಎಂದು ಹೇಳುವಂತೆ ಕಾಣಿಸಿಕೊಂಡಿದೆ. ಈ ಕ್ಲಿಪ್ ಬಹಳಷ್ಟು ಜನ ರಾಹುಲ್ ಗಾಂಧಿಯವರನ್ನು ಅಣಕಿಸುವ ರೀತಿಯಲ್ಲಿ ಹಾಗೂ ಅವರ ಈ ಹೇಳಿಕೆಯ ಸಮಗ್ರತೆಯನ್ನು ಪ್ರಶ್ನಿಸುವ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ಇನ್ನಷ್ಟು ಮಂದಿ, ಮಹಾತ್ಮಾ ಗಾಂಧಿಯವರು ೧೯೪೮ ರಲ್ಲಿ ಮೃತಪಟ್ಟಿದ್ದು, ೧೯೭೦ ರಲ್ಲಿ ಹುಟ್ಟಿದ ರಾಹುಲ್ ಅವರ ಜೊತೆ ಸಂಭಾಷಣೆ ನಡೆಸಲು ಹೇಗೆ ಸಾಧ್ಯ? ಎಂದು ಅಪಹಾಸ್ಯ ಮಾಡಿದ್ದಾರೆ.


ವಾಸ್ತವವಾಗಿ

ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ತಾವೇ ಸ್ವತಃ ಗಾಂಧೀಜಿಯವರ ಜೊತೆ ಮಾತನಾಡಿದ್ದೆ ಎಂದು ಹೇಳಿಕೊಂಡಿಲ್ಲ. ಅವರು ಹೇಳಿದ್ದೇನೆಂದರೆ, ಅವರ ಅಜ್ಜ ಹಾಗು ಭಾರತದ ಮೊದಲ ಪ್ರಧಾನಿಯಾಗಿದ್ದ ಶ್ರೀ ಜವಾಹರ್ಲಾಲ್ ನೆಹರುರವರು ಗಾಂಧೀಜಿಯವರ ಬಗ್ಗೆ ಪತ್ರವೊಂದರಲ್ಲಿ ಉಲ್ಲೇಖಿಸದ್ದರು ಎಂದು ಮಾತ್ರ. ಎಕನಾಮಿಕ್ ಟೈಮ್ಸ್ ಪ್ರಕಟಿಸಿದ ವರದಿಯೊಂದು ಫೆಬ್ರವರಿ ೨೦೨೨ ರಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದ ಕಾಂಗ್ರೆಸ್ ಪಕ್ಷದ "ಚಿಂತನ್ ಶಿವಿರ್" ಎಂಬ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯವರು ಮಾತನಾಡವ ದೀರ್ಘವಾದ ವಿಡಿಯೋ ಒಂದನ್ನು ಹಂಚಿಕೊಂಡಿದೆ. ೩೧ ನಿಮಿಷಗಳ ಈ ವಿಡಿಯೋ ಕಾಂಗ್ರೆಸ್ ಪಕ್ಷದ ಯೂಟ್ಯೂಬ್ ಚಾನಲ್ನಲ್ಲಿ ಕೂಡ ಪ್ರಕಟಿಸಲಾಗಿದೆ.


ಈ ವಿಡಿಯೋವನ್ನು ಪೂರ್ಣವಾಗಿ ವಿಶ್ಲೇಷಿಸಿದ್ದಲ್ಲಿ ರಾಹುಲ್ ಗಾಂಧಿಯವರು ಹೇಳಿದ್ದೇನು ಎಂದು ಸ್ಪಷ್ಟವಾಗುತ್ತದೆ. ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ, ನೆಹರು ಅವರು ಬರೆದ ಪತ್ರವೊಂದರಲ್ಲಿ ಗಾಂಧೀಜಿಯವರ ಜೊತೆ ನಡೆಸಿದ ಒಂದು ಚರ್ಚೆಯ ನಂತರ ಉಂಟಾದ ಉಭಯಸಂಕಟದ ಬಗ್ಗೆ ಬರೆದಿದ್ದರು ಎಂದು ಹೇಳಿಕೊಂಡಿದ್ದಾರೆ. ಇದೇ ಭಾಷಣದಲ್ಲಿ ರಾಹುಲ್ ಅವರು ಆ ಕಾಗದದ ಸಂಪೂರ್ಣ ಸಂಧರ್ಭವನ್ನು ಕೂಡಾ ಹಂಚಿಕೊಂಡಿದ್ದಾರೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವಂತಹ ಸಣ್ಣ ವಿಡಿಯೋ ಕ್ಲಿಪ್ನಲ್ಲಿ ರಾಹುಲ್ ಅವರ ಭಾಷಣದ ಮುಖ್ಯವಾದ ಭಾಗವನ್ನು ಬಿಟ್ಟುಬಿಡುವುದರ ಮೂಲಕ ಸುಳ್ಳು ಪ್ರಚಾರ ಹರಡಿಸಲಾಗಿದೆ. 


ತೀರ್ಪು 

ರಾಹುಲ್ ಗಾಂಧಿಯವರು ಮಹಾತ್ಮಾ ಗಾಂಧಿಯವರ ಜೊತೆ ಮಾತನಾಡಿದ್ದೆ ಎಂದು ಹೇಳಿಕೊಂಡಿಲ್ಲ. ರಾಹುಲ್ ಅವರು ೨೦೨೨ ರಲ್ಲಿ ನೀಡಿದ ಭಾಷಣವೊಂದರ ಸಣ್ಣ ಕ್ಲಿಪ್ಪನ್ನು ಅವರು ಗಾಂಧೀಜಿಯವರ ಜೊತೆ ಮಾತನಾಡಿದ್ದರು ಎಂದು ಹೇಳಿಕೊಳ್ಳುವಂತೆ ತೋರಿಸಿ, ಅವರನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ಹಂಚಿಕೊಳ್ಳಲಾಗಿದೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ