ಮುಖಪುಟ ಕರ್ನಾಟಕದ ಐಟಿ ದಾಳಿಯಲ್ಲಿ ವಶಪಡಿಸಿಕೊಂಡ ಹಣದ ಚಿತ್ರವನ್ನು ಆಂಧ್ರಪ್ರದೇಶದ ರಾಜಕಾರಣಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಕರ್ನಾಟಕದ ಐಟಿ ದಾಳಿಯಲ್ಲಿ ವಶಪಡಿಸಿಕೊಂಡ ಹಣದ ಚಿತ್ರವನ್ನು ಆಂಧ್ರಪ್ರದೇಶದ ರಾಜಕಾರಣಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ: ರೋಹಿತ್ ಗುಟ್ಟಾ

ಅಕ್ಟೋಬರ್ 26 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕರ್ನಾಟಕದ ಐಟಿ ದಾಳಿಯಲ್ಲಿ ವಶಪಡಿಸಿಕೊಂಡ ಹಣದ ಚಿತ್ರವನ್ನು ಆಂಧ್ರಪ್ರದೇಶದ ರಾಜಕಾರಣಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಸಾಮಾಜಿಕ ಮಾಧ್ಯಮದಲ್ಲಿ ಕಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು (ಮೂಲ: ಎಕ್ಸ್‌/ಸ್ಕ್ರೀನ್‌ಶಾಟ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಬೆಂಗಳೂರಿನ ಪೌರಕಾರ್ಮಿಕ ಸಂಸ್ಥೆಯ ಗುತ್ತಿಗೆದಾರರೊಬ್ಬರ ಆವರಣದಲ್ಲಿ ಐಟಿ ವಶಪಡಿಸಿಕೊಂಡ ನಗದು ಹಣವನ್ನು ಚಿತ್ರವು ತೋರಿಸುತ್ತದೆ. ಇದು ಆಂಧ್ರಪ್ರದೇಶಕ್ಕೆ ಸಂಬಂಧಿಸಿಲ್ಲ.

ನಿರೂಪಣೆ ಏನು?

ಆದಾಯ ತೆರಿಗೆ ಇಲಾಖೆಯು ಅಕ್ಟೋಬರ್ ೧೨ ರಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಗುನ್ನಂ ಚಂದ್ರ ಮೌಳಿ ಅವರ ಆವರಣದಲ್ಲಿ ಶೋಧ ನಡೆಸಿತು. ದಕ್ಷಿಣ ಭಾರತದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಟಿಡಿಪಿ ಪ್ರಮುಖ ವಿರೋಧ ಪಕ್ಷವಾಗಿದೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ ೧೩ ರಂದು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಒಂದು ಚಿತ್ರವನ್ನು ಹಂಚಿಕೊಳ್ಳಲಾಗಿದೆ ಮತ್ತು ಅದರ ಶೀರ್ಷಿಕೆ ಹೀಗಿದೆ, "ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಕಿನಾಡ ಜಿಲ್ಲೆಯ ಟಿಡಿಪಿ ನಾಯಕ ಗುನ್ನಂ ಚಂದ್ರ ಮೌಳಿ ಅವರ ನಿವಾಸ ಮತ್ತು ಇತರ ಆವರಣಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ." ಪೋಷ್ಟ್ ನಲ್ಲಿ ಹಂಚಿಕೊಂಡ ಚಿತ್ರವು ಈ ದಾಳಿಯ ಸಮಯದಲ್ಲಿ ಸೆರೆಹಿಡುಯಲಾಗಿದೆ ಎಂದು ಸೂಚಿಸಲಾಗಿದೆ. (ಇಲ್ಲಿ ಆರ್ಕೈವ್ ಮಾಡಲಾಗಿದೆ)

ಮತ್ತೊಬ್ಬ ಬಳಕೆದಾರರು ಅಕ್ಟೋಬರ್ ೧೩ ರಂದು ಈ ಪೋಷ್ಟ್ ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡು, "ಟಿಡಿಪಿ ನಾಯಕರ ಮನೆಗಳಲ್ಲಿ ಹಣದ ಚೀಲಗಳನ್ನು ಕಂಡುಹಿಡಿಯಲಾಗಿದೆ," ಎಂದು ಹೇಳಿಕೊಂಡಿದ್ದಾರೆ. (ಇಲ್ಲಿ ಆರ್ಕೈವ್ ಮಾಡಲಾಗಿದೆ)

ಸಾಮಾಜಿಕ ಮಾಧ್ಯಮದಲ್ಲಿ ಕಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು
(ಮೂಲ: ಎಕ್ಸ್‌/ಸ್ಕ್ರೀನ್‌ಶಾಟ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಚಿತ್ರವು ಮೌಳಿ ಅವರ ಆವರಣದಲ್ಲಿ ಸೆರೆಹಿಡಿದದ್ದಲ್ಲ .

ವಾಸ್ತವಾಂಶಗಳು

ಅಕ್ಟೋಬರ್ ೧೩ ರಂದು ಬೆಂಗಳೂರು ನಾಗರಿಕ ಸಂಸ್ಥೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಲ್ಲಿ ಕೆಲಸ ಮಾಡುವ ಗುತ್ತಿಗೆದಾರರೊಬ್ಬರ ಮನೆಯನ್ನು ಶೋಧಿಸಿದ ನಂತರ ಆದಾಯ ತೆರಿಗೆ ಇಲಾಖೆಯು ವಶಪಡಿಸಿಕೊಂಡ ಹಣವನ್ನು ಚಿತ್ರವು ತೋರಿಸುತ್ತದೆ ಎಂದು ರಿವರ್ಸ್ ಇಮೇಜ್ ಸರ್ಚ್ ಮೂಲಕ ನಾವು ಕಂಡುಕೊಂಡೆವು. 

ದಿ ಹಿಂದೂ ಪತ್ರಿಕೆಯ ವರದಿಯ ಪ್ರಕಾರ ಆದಾಯ ತೆರಿಗೆ ಅಧಿಕಾರಿಗಳು ನಗರದ ಪ್ರಮುಖ ಗುತ್ತಿಗೆದಾರರೊಬ್ಬರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿದರು ಮತ್ತು ₹ ೪೦ ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ. ವರದಿಯು ವೈರಲ್ ಪೋಷ್ಟ್ ನಲ್ಲಿರುವ ಅದೇ ಚಿತ್ರವನ್ನು ಹೊಂದಿದೆ. ವರದಿಯು ಗುತ್ತಿಗೆದಾರರನ್ನು ಕರ್ನಾಟಕದ ಬಹು ಗುತ್ತಿಗೆದಾರರ ಸಂಘಗಳ ಪದಾಧಿಕಾರಿ ಆರ್ ಅಂಬಿಕಾಪತಿ ಎಂದು ಗುರುತಿಸಿದೆ.

ಬೆಂಗಳೂರಿನಲ್ಲಿರುವ ಗುತ್ತಿಗೆದಾರರಾದ ಅಂಬಿಕಾಪತಿಗೆ ಸಂಬಂಧಿಸಿದ ಆಸ್ತಿಗಳಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದಾಗ ಪತ್ತೆಯಾದ ನಗದನ್ನು ವಿವರಿಸುವ ದಿ ಹಿಂದೂ ಪತ್ರಿಕೆಯಲ್ಲಿ ಕಾಣಿಸಿಕೊಂಡಿರುವ ಚಿತ್ರದ ಸ್ಕ್ರೀನ್‌ಶಾಟ್. (ಮೂಲ: ದಿ ಹಿಂದೂ)

ಅದೇ ರೀತಿ, ಟೈಮ್ಸ್ ಆಫ್ ಇಂಡಿಯಾ ಮತ್ತು ದಿ ಏಷ್ಯನ್ ಏಜ್ ತಮ್ಮ ವರದಿಗಳಲ್ಲಿ ಹುಡುಕಾಟದ ವಿವರಗಳನ್ನು ಮತ್ತು ಅದೇ ಚಿತ್ರವನ್ನು ಪ್ರಕಟಿಸಿವೆ. 

ಅದಲ್ಲದೆ, ಮೌಳಿ ಅವರ ಆಸ್ತಿಯಿಂದ ಯಾವುದೇ ಹಣವನ್ನು ವಶಪಡಿಸಿಕೊಂಡ ವರದಿಗಳಿಲ್ಲ, ಮತ್ತು ದಾಳಿಯಿಂದ ಯಾವುದೇ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಲಾಗಿಲ್ಲ.

ತೀರ್ಪು

ಆದಾಯ ತೆರಿಗೆ ಇಲಾಖೆಯು ಬೆಂಗಳೂರಿನ ಗುತ್ತಿಗೆದಾರರೊಬ್ಬರ ನಿವೇಶನದಿಂದ ವಶಪಡಿಸಿಕೊಂಡ ನಗದಿನ ಚಿತ್ರವನ್ನು ಆಂಧ್ರಪ್ರದೇಶದ ಟಿಡಿಪಿ ನಾಯಕರೊಬ್ಬರ ನಿವೇಶನದಿಂದ ವಶಪಡಿಸಿಕೊಂಡ ಚಿತ್ರವೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ