ಮುಖಪುಟ ಪಾಕಿಸ್ತಾನಿ ಸೇನಾ ಅಧಿಕಾರಿಯನ್ನು, ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಮಹಿಳೆ ಸೀಮಾ ಹೈದರ್ ಎಂದು ತಪ್ಪಾಗಿ ಗುರುತಿಸಲಾಗಿದೆ

ಪಾಕಿಸ್ತಾನಿ ಸೇನಾ ಅಧಿಕಾರಿಯನ್ನು, ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಮಹಿಳೆ ಸೀಮಾ ಹೈದರ್ ಎಂದು ತಪ್ಪಾಗಿ ಗುರುತಿಸಲಾಗಿದೆ

ಮೂಲಕ: ವಿವೇಕ್ ಜೆ

ಜುಲೈ 24 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಪಾಕಿಸ್ತಾನಿ ಸೇನಾ ಅಧಿಕಾರಿಯನ್ನು, ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಮಹಿಳೆ ಸೀಮಾ ಹೈದರ್ ಎಂದು ತಪ್ಪಾಗಿ ಗುರುತಿಸಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಸೇನೆಯ ಸಮವಸ್ತ್ರವನ್ನು ಧರಿಸಿರುವ ವೈರಲ್ ಚಿತ್ರದ ಮಹಿಳೆ ಪಾಕಿಸ್ತಾನದ ಮೇಜರ್ ಸಮಿಯಾ ರೆಹಮಾನ್ ಆಗಿದ್ದು, ಅವರು ಕಾಂಗೋದಲ್ಲಿ ಯು.ಎನ್ ಶಾಂತಿಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ

ಸಂದರ್ಭ
ಗೇಮಿಂಗ್ ಸೈಟ್ ಪಬ್-ಜಿ ನಲ್ಲಿ ಭೇಟಿಯಾದ ಉತ್ತರ ಪ್ರದೇಶದ ವ್ಯಕ್ತಿಯೊಂದಿಗೆ ಅಕ್ರಮವಾಗಿ ಭಾರತಕ್ಕೆ ದಾಟಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಎಂಬ ಹೇಳಿಕೆಯೊಂದಿಗೆ ಮಿಲಿಟರಿ ಸಮವಸ್ತ್ರದಲ್ಲಿ ಮಹಿಳೆಯೊಬ್ಬರು ಪ್ರಮಾಣಪತ್ರದೊಂದಿಗೆ ಪೋಸ್ ನೀಡುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಚಿತ್ರವನ್ನು ಹಂಚಿಕೊಳ್ಳುವ ಮೂಲಕ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸೀಮಾ ಹೈದರ್ ಪಾಕಿಸ್ತಾನದ ಸೇನಾ ಮೇಜರ್ ಆಗಿದ್ದು, ಅವರನ್ನು ಭಾರತದ ಮೇಲೆ ಬೇಹುಗಾರಿಕೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, “#ಸೀಮಾಹೈದರ್‌, ಇವರಬಗ್ಗೆ ಒಂದು ಆಘಾತಕಾರಿ ವಿಷಯ ಹೊರಬಂದಿದೆ #ಸೀಮಾಹೈದರ್ ಅವರ ನಿಜವಾದ ಹೆಸರು #ಸಮಿಯಾ ರೆಹಮಾನ್ ಎಂದು ತಿಳಿದುಬಂದಿದೆ ಮತ್ತು ಅವರು #ಭಾರತೀಯ ಯುವಕರನ್ನು ಬಲೆಗೆ ಬೀಳಿಸಿ #ಭಾರತದಲ್ಲಿ ನೆಲೆಸುವ ಗುರಿಯನ್ನು ಹೊಂದಿದ್ದ #ಪಾಕ್‌ಸ್ತಾನ್ ಸೇನೆಯ #ಐಎಸ್‌ಯು ಏಜೆಂಟ್.”

ಆದರೆ, ವೈರಲ್ ಚಿತ್ರದಲ್ಲಿರುವ ಮಹಿಳೆಯನ್ನು ಸೀಮಾ ಹೈದರ್ ಎಂದು ತಪ್ಪಾಗಿ ಗುರುತಿಸಲಾಗಿದೆ.

ವಾಸ್ತವವಾಗಿ
ಚಿತ್ರದಲ್ಲಿರುವ ಮಹಿಳೆ ಪಾಕಿಸ್ತಾನದ ಮೇಜರ್ ಸಮಿಯಾ ರೆಹಮಾನ್ ಎಂದು ಸಂಶೋಧನೆಯು ನಮಗೆ ತೋರಿಸಿದೆ. ರೆಹಮಾನ್ ಅವರು ೨೦೧೯ ಮತ್ತು ೨೦೨೦ ರಲ್ಲಿ ಯುನೈಟೆಡ್ ನೇಷನ್ಸ್ (ಯು.ಎನ್) ಶಾಂತಿಪಾಲನಾ ಪಡೆಯಭಾಗವಾಗಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಸೇವೆಯನ್ನು ಸಲ್ಲಿಸಿದ್ದರು.

ರಿವರ್ಸ್ ಇಮೇಜ್ ಸರ್ಚ್ ವು ಮಾರ್ಚ್ ೧೪, ೨೦೨೦ ರಂದು ಯುನೈಟೆಡ್ ನೇಷನ್ಸ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು. ಪೋಷ್ಟ್ ವೈರಲ್ ಚಿತ್ರದಲ್ಲಿರುವ ಅದೇ ಮಹಿಳೆಯ ಫೋಟೋವನ್ನು ಒಳಗೊಂಡಿದೆ. ಇನ್ಸ್ಟಾಗ್ರಾಮ್ ಪೋಷ್ಟ್ ನ ಶೀರ್ಷಿಕೆ ಹೀಗಿದೆ: “#ಪಾಕಿಸ್ತಾನದ ಮೇಜರ್ ಸಮಿಯಾ ರೆಹಮಾನ್ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಮಕ್ಕಳೊಂದಿಗೆ ನಗುವನ್ನು ಹಂಚಿಕೊಂಡಿದ್ದಾರೆ. ಮೇಜರ್ ರೆಹಮಾನ್ ಅವರು ದೇಶದಲ್ಲಿ ಯು.ಎನ್ ಶಾಂತಿಪಾಲನಾ ಮಿಷನ್‌ನೊಂದಿಗೆ #ಶಾಂತಿಗಾಗಿ ಹೋರಾಡುತ್ತಿದ್ದಾರೆ."

ನಂತರ ಲಾಜಿಕಲಿ ಫ್ಯಾಕ್ಟ್ಸ್ ಮಾರ್ಚ್ ೧೧, ೨೦೨೦ ರಂದು ಮೊಣುಸ್ಕೋ ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ನಿಖರವಾದ ವೈರಲ್ ಚಿತ್ರವನ್ನು ಗುರುತಿಸಿದೆ. ಮೊಣುಸ್ಕೋ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಯುನೈಟೆಡ್ ನೇಷನ್ಸ್ ಆರ್ಗನೈಸೇಶನ್ ಸ್ಟೆಬಿಲೈಸೇಶನ್ ಮಿಷನ್‌ನ ಫ್ರೆಂಚ್ ಸಂಕ್ಷಿಪ್ತ ರೂಪವಾಗಿದೆ. ‘ಶಾಂತಿಪಾಲಕನಾಗುವ ಬಗ್ಗೆ ನನ್ನ ೮ ಮೆಚ್ಚಿನ ವಿಷಯಗಳು’ ಎಂಬ ಶೀರ್ಷಿಕೆಯ ಲೇಖನವನ್ನು ಮೇಜರ್ ಸಾಮಿಯಾ ರೆಹಮಾನ್ ಬರೆದಿದ್ದಾರೆ. ಅವರು ಶಾಂತಿಪಾಲಕನ ಅನುಭವದ ಬಗ್ಗೆ ಬರೆಯುತ್ತಾರೆ ಮತ್ತು ಕಾಂಗೋದಲ್ಲಿ ತನ್ನ ಸೇವೆಗಾಗಿ ಪ್ರಧಾನ ಕಾರ್ಯದರ್ಶಿ (ಎಸ್ ಆರ್ ಎಸ್ ಜಿ) ನ ವಿಶೇಷ ಪ್ರತಿನಿಧಿಯಿಂದ ವೈರಲ್ ಚಿತ್ರದಲ್ಲಿ ಕಂಡುಬರುವ ಮೆಚ್ಚುಗೆ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಲೇಖನವು ಸಮವಸ್ತ್ರದಲ್ಲಿ ನಾಗರಿಕರು ಮತ್ತು ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸುತ್ತಿರುವ ಅವರ ಹಲವಾರು ಚಿತ್ರಗಳನ್ನು ಒಳಗೊಂಡಿದೆ. "ಸಮುದಾಯಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳು ಮತ್ತು ವಿವಾದಗಳನ್ನು ನಿಯಂತ್ರಿಸಲು ಮತ್ತು ಸಶಸ್ತ್ರ ಗುಂಪುಗಳನ್ನು ಹಿಂಸೆಯಿಂದ ತಡೆಯಲು" ಅವರು ಕೆಲಸ ಮಾಡಿದರು ಎಂದು ಅವರು ಈ ಲೇಖನದಲ್ಲಿ ವಿವರಿಸಿದ್ದಾರೆ.

ಮಾರ್ಚ್ ೧೧, ೨೦೨೦ ರಂದು ಯು. ಎನ್ ಪೀಸ್ ಕೀಪಿಂಗ್‌ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಹಂಚಿಕೊಂಡ ಪೋಷ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಕಾಂಗೋದಲ್ಲಿ ಮೇಜರ್ ಸಮಿಯಾ ರೆಹಮಾನ್ ಅವರ ಕರ್ತವ್ಯವು ಏಪ್ರಿಲ್ ೬, ೨೦೨೦ ರಂದು ಕೊನೆಗೊಂಡಿತು ಎಂದು ತಿಳಿಸಲಾಗಿದೆ. ಹೆಚ್ಚಿನ ಸಂಶೋಧನೆಯು ಜನವರಿ ೧೮ ರಂದು ಮನರಂಜನಾ ವೆಬ್‌ಸೈಟ್‌ ‘ಶೋಬಿಜ್ ಪಾಕಿಸ್ತಾನ್’ದಲ್ಲಿ ಪ್ರಕಟವಾದ ವರದಿಗೆ ನಮ್ಮನ್ನು ಕರೆದೊಯ್ಯಿತು. ವರದಿಯು ವೈರಲ್ ಫೋಟೋದಿಂದ ಮಹಿಳೆಯನ್ನು ಮೇಜರ್ ರೆಹಮಾನ್ ಎಂದು ಗುರುತಿಸಿದೆ, ಹಾಗು ಅವರು ಇತ್ತೀಚೆಗೆ "ಸಿನ್ಫ್-ಎ-ಆಹಾನ್" ಎಂಬ ದೂರದರ್ಶನ ಸರಣಿಯಲ್ಲಿ ತಮ್ಮದೇ ಹೆಸರಿನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಗುರುತಿಸಿದೆ.

ಸೀಮಾ ಹೈದರ್ ಯಾರು?
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ೨೭ ವರ್ಷದ ವಿವಾಹಿತ ಮಹಿಳೆ ಸೀಮಾ ಹೈದರ್ ತನ್ನ ನಾಲ್ಕು ಮಕ್ಕಳೊಂದಿಗೆ ಸಚಿನ್ ಮೀನಾ ಎಂಬ ವ್ಯಕ್ತಿಯೊಂದಿಗೆ ಇರಲು ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಿದಳು. ಅವರು ಪಬ್-ಜಿ ಎಂಬ ಆನ್‌ಲೈನ್ ಆಟವನ್ನು ಆಡುವಾಗ ಪರಿಚಯವಾಗಿ ಪ್ರೀತಿಸ ತೊಡಗಿದರು. ಜುಲೈ ೪ ರಂದು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಮತ್ತು ಹೈದರ್‌ಗೆ ಆಶ್ರಯ ನೀಡಿದ್ದಕ್ಕಾಗಿ ದಂಪತಿಗಳನ್ನು ಬಂಧಿಸಲಾಯಿತು. ಮೂರು ದಿನಗಳ ನಂತರ ಅವರಿಗೆ ಜಾಮೀನು ನೀಡಲಾಯಿತು ಆದರೆ ಜುಲೈ ೧೭ ರಂದು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ವಿಚಾರಣೆಗಾಗಿ ಅವರನ್ನು ವಶಕ್ಕೆ ತೆಗೆದುಕೊಂಡಿತು. ಇದನ್ನು ಅನುಸರಿಸಿ, ಅವರು ರಾಷ್ಟ್ರೀಯ ಭದ್ರತೆಗೆ ಸಂಭಾವ್ಯ ಅಪಾಯವನ್ನುಂಟುಮಾಡಬಹುದೆಂಬ ಕಳವಳವನ್ನು ವ್ಯಕ್ತಪಡಿಸಲಾಗಿದೆ. ಆದರೆ, ಈ ವಿಷಯದಲ್ಲಿ ಇನ್ನೂ ತನಿಖೆ ನಡೆಯುತ್ತಿದೆ.

ಹಲವಾರು ಮಾಧ್ಯಮಗಳು ಸೀಮಾ ಹೈದರ್ ಅವರ ಛಾಯಾಚಿತ್ರಗಳನ್ನು ತಮ್ಮ ವರದಿಗಳಲ್ಲಿ ಸಾಗಿಸಿವೆ ಮತ್ತು ಯಾವುದೇ ಫೋಟೋಗಳು ವೈರಲ್ ಚಿತ್ರಕ್ಕೆ ಹೊಂದಿಕೆಯಾಗುವುದಿಲ್ಲ. ಆದ್ದರಿಂದ, ಪ್ರಶ್ನೆಯಲ್ಲಿರುವ ಚಿತ್ರವು ಪಾಕಿಸ್ತಾನಿ ಮೇಜರ್ ಸಮಿಯಾ ರೆಹಮಾನ್ ಅವರದ್ದು ಮತ್ತು ಸೀಮಾ ಹೈದರ್ ನದ್ದಲ್ಲ ಎಂಬುದು ಸ್ಪಷ್ಟವಾಗಿದೆ.

ತೀರ್ಪು
ಪಾಕಿಸ್ತಾನದ ಮೇಜರ್ ಸಮಿಯಾ ರೆಹಮಾನ್ ಅವರನ್ನು ಸೀಮಾ ಹೈದರ್ ಎಂದು ತಪ್ಪಾಗಿ ಗುರುತಿಸಲಾಗಿದೆ. ಸೀಮಾ ಹೈದೆರ್ ಇತ್ತೀಚೆಗೆ ಭಾರತದಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಇರಲು ಪಾಕಿಸ್ತಾನದ ಗಡಿಯನ್ನು ದಾಟಿದ್ದಾರೆ. ಆದ್ದರಿಂದ, ನಾವು ಕ್ಲೈಮ್ ಅನ್ನು ತಪ್ಪು ಎಂದು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ