ಮುಖಪುಟ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸತ್ತಿದ್ದಾನೆ ಎಂದು ಹೇಳಲು ಪಾಕಿಸ್ತಾನದಲ್ಲಿ ನಡೆದ ಸ್ಫೋಟದ ಹಳೆಯ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ

ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸತ್ತಿದ್ದಾನೆ ಎಂದು ಹೇಳಲು ಪಾಕಿಸ್ತಾನದಲ್ಲಿ ನಡೆದ ಸ್ಫೋಟದ ಹಳೆಯ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರಜಿನಿ ಕೆ.ಜಿ

ಜನವರಿ 5 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸತ್ತಿದ್ದಾನೆ ಎಂದು ಹೇಳಲು ಪಾಕಿಸ್ತಾನದಲ್ಲಿ ನಡೆದ ಸ್ಫೋಟದ ಹಳೆಯ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ನವೆಂಬರ್ ೨೦೨೩ರಲ್ಲಿ ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ನಗರದಲ್ಲಿ ಸಂಭವಿಸಿದ ಸ್ಫೋಟವನ್ನು ವೀಡಿಯೋ ತೋರಿಸುತ್ತದೆ. ಇದನ್ನು ಮಸೂದ್ ಅಜರ್‌ನೊಂದಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ.

ಇಲ್ಲಿನ ಹೇಳಿಕೆಯೇನು?

ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಕೊಂದ ಸ್ಫೋಟವನ್ನು ಸೆರೆಹಿಡಿಯಲಾಗಿದೆ ಎಂಬ ಹೇಳಿಕೆಯೊಂದಿಗೆ ಬಾಂಬ್ ಸ್ಫೋಟವೊಂದರ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಜೈಶ್-ಎ-ಮೊಹಮ್ಮದ್ (ಜೆಇಎಂ) ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪಾಗಿದ್ದು, ಇದನ್ನು ಯು.ಎಸ್. ಮೂಲದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ (ಡಿಎನ್ಐ) ಭಯೋತ್ಪಾದಕ ಗುಂಪು ಎಂದು ಗೊತ್ತುಪಡಿಸಿದೆ. 

"ಪಾಕಿಸ್ತಾನ: ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ಭವಲ್ಪುರ್ ಮಸೀದಿಯಿಂದ ಹಿಂತಿರುಗುತ್ತಿದ್ದ ಅಪರಿಚಿತ ವ್ಯಕ್ತಿಗಳಿಂದ ಬಾಂಬ್ ಸ್ಫೋಟದಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ವರದಿಯಾಗಿದೆ" ಎಂಬ ಶೀರ್ಷಿಕೆಯೊಂದಿಗೆ ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಜನವರಿ ೧ ರಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ೧೩ ಸೆಕೆಂಡ್‌ಗಳ ಈ ವೀಡಿಯೋವು ನಿರತ ರಸ್ತೆಯನ್ನು ತೋರಿಸುತ್ತದೆ ಮತ್ತು ವೀಡಿಯೋದಲ್ಲಿ ಎರಡು ಸೆಕೆಂಡುಗಳಲ್ಲಿ ಸ್ಫೋಟವೊಂದು ಸಂಭವಿಸಿ ಜನರು ರಕ್ಷಣೆಗಾಗಿ ಓಡುವುದನ್ನು ತೋರಿಸುತ್ತದೆ. ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪ್ರಕಟಿಸುವ ಸಮಯದಲ್ಲಿ ಸುಮಾರು ೩,೭೦೦ ಇಷ್ಟಗಳು ಮತ್ತು ೩,೬೦,೦೦೦ ವೀಕ್ಷಣೆಗಳನ್ನು ಹೊಂದಿತ್ತು. ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ ಈ ಹೇಳಿಕೆಯು ತಪ್ಪು.

  • ವೈರಲ್ ವೀಡಿಯೋವನ್ನು ನವೆಂಬರ್ ೨೦೨೩ ರಲ್ಲಿ ಸೆರೆಹಿಡಿಯಲಾಗಿದೆ ಮತ್ತು ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ನಗರದಲ್ಲಿ ನಡೆದ ಸ್ಫೋಟವನ್ನು ತೋರಿಸುತ್ತದೆ.

  • ಮಸೂದ್ ಅಜರ್ ಸಾವನ್ನಪ್ಪಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಖಚಿತವಾದ ಸಾಕ್ಷ್ಯಗಳಿಲ್ಲ.

ವಾಸ್ತವಾಂಶಗಳು ಇಲ್ಲಿವೆ

ಗೂಗಲ್ ಸರ್ಚ್ ಮೂಲಕ, ವೀಡಿಯೋ ಹಳೆಯದು ಎಂದು ನಾವು ಸ್ಥಾಪಿಸಿದ್ದೇವೆ. ಇದೇ ವೀಡಿಯೋವನ್ನು ನವೆಂಬರ್ ೪, ೨೦೨೩ ರಂದು ಜಪಾನೀಸ್ ನ್ಯೂಸ್ ಚಾನೆಲ್ “TBS NEWS DIG powered by JNN” ನ ಯೂಟ್ಯೂಬ್ ಚಾನಲ್‌ನಲ್ಲಿ ಪೋಷ್ಟ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ವೀಡಿಯೋದ ಶೀರ್ಷಿಕೆಯನ್ನು ಜಪಾನೀಸ್ ಭಾಷೆಯಿಂದ ಸ್ಥೂಲವಾಗಿ ಅನುವಾದಿಸಿದಾಗ, "ವಾಯುವ್ಯ ಪಾಕಿಸ್ತಾನದಲ್ಲಿ ಸ್ಫೋಟವು ೫ ಜನರನ್ನು ಕೊಂದಿದೆ. ಅಫಘಾನ್ ಗಡಿಯ ಬಳಿ ಪೊಲೀಸರು ಮತ್ತು ೨೧ ಮಂದಿ ಗಾಯಗೊಂಡಿದ್ದಾರೆ | ಟಿಬಿಎಸ್ ನ್ಯೂಸ್ ಡಿಐಜಿ." ವೀಡಿಯೋ ವಿವರಣೆಯ ಪ್ರಕಾರ, ಜಪಾನೀಸ್ ಭಾಷೆಯಲ್ಲಿಯೂ ಸಹ, ತುಣುಕಿನಲ್ಲಿ ನವೆಂಬರ್ ೩, ೨೦೨೩ ರಂದು ಅಫ್ಘಾನಿಸ್ತಾನದ ಗಡಿಯ ಸಮೀಪ ವಾಯುವ್ಯ ಪಾಕಿಸ್ತಾನದ ಪಟ್ಟಣದಲ್ಲಿ ಅನೇಕ ಜನರು ನಡೆದುಕೊಂಡು ಹೋಗುತ್ತಿದ್ದ ಮತ್ತು ಚಾಲನೆ ಮಾಡುತ್ತಿದ್ದ ರಸ್ತೆಯಲ್ಲಿ ಅಗಾಧವಾದ ಜ್ವಾಲೆಯು ಹೊರಹೊಮ್ಮುವುದನ್ನು ತೋರಿಸುತ್ತದೆ.

ನವೆಂಬರ್ ೨೦೨೩ ರಲ್ಲಿ ಪಾಕಿಸ್ತಾನದಲ್ಲಿ ನಡೆದ ಸ್ಫೋಟದ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಸ್ಕ್ರೀನ್‌ಶಾಟ್)

ಇದಲ್ಲದೆ, ನವೆಂಬರ್ ೩, ೨೦೨೩ ರಂದು ಇಂಡಿಯಾ ಟುಡೇ ಪ್ರಕಟಿಸಿದ ಸುದ್ದಿ ವರದಿಯಲ್ಲಿ ನವೆಂಬರ್ ೩ ರ ವೀಡಿಯೋದ ಸ್ಕ್ರೀನ್‌ಗ್ರಾಬ್ ಅನ್ನು ಸಹ ಸೇರಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಸ್ಫೋಟವು ಪೊಲೀಸ್ ವ್ಯಾನ್ ಅನ್ನು ಗುರಿಯಾಗಿಸಿಕೊಂಡು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ನಗರದಲ್ಲಿ ಸಂಭವಿಸಿದೆ ಎಂದು ಹೇಳಲಾಗಿದೆ ಎಂದು ವರದಿ ಹೇಳಿದೆ. 

ಡೇರಾ ಇಸ್ಮಾಯಿಲ್ ಖಾನ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಗುಲ್ ಶೇರ್ ಖಾನ್ ಎಪಿ ನ್ಯೂಸ್‌ಗೆ ಖಚಿತಪಡಿಸಿದ್ದಾರೆ. ಪಾರುಗಾಣಿಕಾ ಅಧಿಕಾರಿ ಐಜಾಜ್ ಮೆಹಮೂದ್ ರಾಯಿಟರ್ಸ್ ಜೊತೆ ಮಾತನಾಡುತ್ತಾ, ಐದು ಸ್ಥಳೀಯ ನಾಗರಿಕರು ಬಲಿಯಾದರು ಮತ್ತು ಬಾಂಬ್ ದಾಳಿಯಲ್ಲಿ ನಾಗರಿಕರು ಮತ್ತು ಪೊಲೀಸ್ ಪೇದೆಗಳು ಸೇರಿದಂತೆ ೨೧ ವ್ಯಕ್ತಿಗಳು ಗಾಯಗೊಂಡಿದ್ದಾರೆ ಎಂದು ದೃಢಪಡಿಸಿದರು. ಮಸೂದ್ ಅಜರ್ ಹತ್ಯೆಗೀಡಾದ ಅಥವಾ ಜೆಇಎಂನ ಯಾವುದೇ ಸದಸ್ಯನ ಬಗ್ಗೆ ಸಾವುನೋವುಗಳ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ.

ಮಸೂದ್ ಅಜರ್ ಸಾವಿನ ವದಂತಿಗಳು

ಜೈಶ್-ಎ-ಮೊಹಮ್ಮದ್‌ನ ನಾಯಕ ಮಸೂದ್ ಅಜರ್‌ನನ್ನು ಯುಎನ್ ನ ೨೦೨೦ ರ ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಲಾಗಿದೆ, ಏಕೆಂದರೆ ಅಲ್-ಖೈದಾ ಜೊತೆಗಿನ ಸಂಬಂಧ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸುವ, ಧನಸಹಾಯ ಮತ್ತು ಬೆಂಬಲ ನೀಡುವಲ್ಲಿ ತೊಡಗಿಸಿಕೊಂಡಿದ್ದಾನೆ. ಭಾರತ ಸರ್ಕಾರವು ಪಾಕಿಸ್ತಾನವು ಅಜರ್‌ಗೆ ಆಶ್ರಯ ನೀಡುತ್ತಿದೆ ಮತ್ತು ಅವರಿಗೆ ಸುರಕ್ಷಿತ ನೆಲೆಯನ್ನು ಒದಗಿಸಿದೆ ಎಂದು ಆಗಾಗ್ಗೆ ಆರೋಪಿಸಿದೆ. "ಅಪರಿಚಿತ ವ್ಯಕ್ತಿ" "ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಜರ್‌ನನ್ನು ಬಾಂಬ್ ಸ್ಫೋಟದಲ್ಲಿ ಕೊಂದಿದ್ದಾನೆ" ಎಂದು ಹೇಳಲಾದ ಹೇಳಿಕೆಗಳೊಂದಿಗೆ ಪ್ರಸ್ತುತ ಸಾಮಾಜಿಕ ಮಾಧ್ಯಮವು ಅಬ್ಬರಿಸಿದೆ. ಆದರೆ, ಅಜರ್ ಸಾವಿನ ಕುರಿತು ಪಾಕಿಸ್ತಾನ ಸರ್ಕಾರ ಅಥವಾ ಪಾಕಿಸ್ತಾನ ಕಾನೂನು ಜಾರಿ ಯಾವುದೇ ಹೇಳಿಕೆ ಅಥವಾ ಅಂತಹ ಯಾವುದೇ ದೃಢೀಕರಣವನ್ನು ಬಿಡುಗಡೆ ಮಾಡಿಲ್ಲ. ಯಾವುದೇ ವಿಶ್ವಾಸಾರ್ಹ ಮಾಧ್ಯಮದಿಂದ ಅಜರ್‌ನನ್ನು ಕೊಲ್ಲಲಾಗಿದೆ ಎಂದು ಸೂಚಿಸುವ ಯಾವುದೇ ವರದಿಗಳು ಕಂಡುಬಂದಿಲ್ಲ. ಆದ್ದರಿಂದ, ಅಜರ್ ಸಾವನ್ನಪ್ಪಿದ್ದಾನೆ ಎಂದು ಸೂಚಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳು ಲಭ್ಯವಿಲ್ಲ.

ಲಾಜಿಕಲಿ ಫ್ಯಾಕ್ಟ್ಸ್ ಇದೇ ರೀತಿಯ ಸಾವಿನ ಸುಳ್ಳು ಸುದ್ದಿಗಳ ಬಗ್ಗೆ ಹಲವಾರು ಹೇಳಿಕೆಗಳನ್ನು ತಳ್ಳಿಹಾಕಿದೆ. ಸಾವಿನ ಸುಳ್ಳು ಸುದ್ದಿಗಳು ಏಕೆ ವೈರಲ್ ಆಗುತ್ತವೆ ಎಂಬುದರ ಕುರಿತು ನಮ್ಮ ವಿಶ್ಲೇಷಣೆಯನ್ನು ನೀವು ಇಲ್ಲಿ ಓದಬಹುದು.

ತೀರ್ಪು

ನವೆಂಬರ್‌ ೨೦೨೩ರಲ್ಲಿ ಡೇರಾ ಇಸ್ಮಾಯಿಲ್ ಖಾನ್ ನಗರದಲ್ಲಿ ಸಂಭವಿಸಿದ ಸ್ಫೋಟದ ದೃಶ್ಯಗಳನ್ನು ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಹತ್ಯೆಗೈದ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಅಜರ್ ಸತ್ತಿದ್ದಾನೆ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ ಮತ್ತು ಆದ್ದರಿಂದ, ನಾವು ಈ ಹೇಳಿಕೆಯನ್ನು ಸುಳ್ಳು ಎಂದು ಗುರುತಿಸುತ್ತೇವೆ.

(ಅನುವಾದಿಸಿದವರು : ವಿವೇಕ್.ಜೆ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ