ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 25 2023
ಬೆಂಗಳೂರಿನಲ್ಲಿ ಮುಸ್ಲಿಂ ವ್ಯಕ್ತಿಯು ಪಾಪ್‌ಕಾರ್ನ್ ತಯಾರಿಸಲು ಮೂತ್ರವನ್ನು ಬಳಸಿದ್ದಾನೆ ಎಂಬ ಆರೋಪವನ್ನು ಪೊಲೀಸರು ಸುಳ್ಳು ಎಂದು ಖಚಿತಪಡಿಸಿದ್ದಾರೆ.
ಸಂದರ್ಭ
ಜನಸಂದಣಿಯಿಂದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಪ್‌ಕಾರ್ನ್ ತಯಾರಿಸುವಾಗ ಮುಸ್ಲಿಂ ವ್ಯಕ್ತಿಯೊಬ್ಬನು ಉಪ್ಪನ್ನು ಬಳಸುವ ಬದಲು ಮೂತ್ರವನ್ನು ಬಳಸಿದ್ದಾನೆ ಎಂದು ಹೇಳಿಕೊಂಡು ಹಲವಾರು ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ಪೊಲೀಸರೊಂದಿಗೆ ಕನ್ನಡದಲ್ಲಿ ಮಾತನಾಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ, ನಂತರ ಯುವಕನನ್ನು ಪೊಲೀಸರು ಬಂಧಿಸಿ ಕರೆದೊಯುತ್ತಾರೆ. ಹಿಂದಿಯಲ್ಲಿ ಬರೆಯಲಾದ ಪೋಷ್ಟ್ ಒಂದರ ಶೀರ್ಷಿಕೆ ಕನ್ನಡಕ್ಕೆ ಅನುವಾದಿಸಿದಾಗ, "ಉಗುಳಿದ ನಂತರ ಈಗ ಮೂತ್ರ ಜಿಹಾದ್. ಬೆಂಗಳೂರಿನಲ್ಲಿ ಪಾಪ್‌ಕಾರ್ನ್ ಸ್ಟಾಲ್ ಮಾಲೀಕನೊಬ್ಬ ಉಪ್ಪಿನ ಬದಲು ಮೂತ್ರವನ್ನು ಬೆರೆಸಿ ಪಾಪ್‌ಕಾರ್ನ್ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ!." ಎಂದು ಹೇಳುತ್ತದೆ . ಹಳದಿ ದ್ರವದಿಂದ ತುಂಬಿದ ಬಾಟಲಿಯನ್ನು ವೀಡಿಯೋದಲ್ಲಿ ಕಾಣಬಹುದು. ಟ್ವೀಟ್ ೬೪,೦೦೦ ವೀಕ್ಷಣೆಗಳನ್ನು ಗಳಿಸಿದೆ ಮತ್ತು ೩,೦೦೦ ಕ್ಕೂ ಹೆಚ್ಚು ಲೈಕ್ ಗಳು ಮತ್ತು ಮರುಟ್ವೀಟ್‌ಗಳನ್ನು ಹೊಂದಿದೆ.
ಆದರೆ, ಈ ಹೇಳಿಕೆ ತಪ್ಪಾಗಿದೆ. ೨೦೨೨ರಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಪೊಲೀಸರು, ಪಾಪ್‌ಕಾರ್ನ್ ಮಾಡುವ ಮೊದಲು ಎಣ್ಣೆಯಲ್ಲಿ ಉಗುಳಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದ ಘಟನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.
ವಾಸ್ತವವಾಗಿ
ವೈರಲ್ ಆಗಿರುವ ವೀಡಿಯೋ ಟಿವಿ ೯ ಕನ್ನಡದ ಸುದ್ದಿ ವರದಿ ಎಂದು ನಾವು ಪತ್ತೆಹಚ್ಚಿದ್ದೇವೆ. ೨೦೨೦ ರ ಜೂನ್ ೧೧ ರಂದು ಸಂಸ್ಥೆಯ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೋವನ್ನು, "Lalbagh: ಪಾಪ್‌ಕಾರ್ನ್ ಮಾರಾಟಗಾರರ ವಿರುದ್ಧ ಸ್ಥಳೀಯರ ಆರೋಪ" ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ.
ಆರೋಪಿ, ಪಾಪ್‌ಕಾರ್ನ್ ಮಾರಾಟಗಾರ- ಪಾಪ್‌ಕಾರ್ನ್ ತಯಾರಿಸುವ ಮೊದಲು ಎಣ್ಣೆ ಬಾಟಲಿಯಲ್ಲಿ ಉಗುಳುವುದನ್ನು ತಾನು ಕಣ್ಣಾರೆ ಕಂಡಿದ್ದೇನೆ ಎಂದು ವ್ಯಕ್ತಿಯೊಬ್ಬ ಕೂಗಾಡುತ್ತಿರುವದನ್ನು ವೀಡಿಯೋದಲ್ಲಿ ನೋಡಬಹುದು. ಆರೋಪಿಯು ಈ ಹೇಳಿಕೆಯನ್ನು ನಿರಾಕರಿಸುತ್ತಾ, ದೃಢೀಕರಣಕ್ಕಾಗಿ ಇತರ ಅಂಗಡಿಯವರನ್ನು ಕೇಳಲು ಸೂಚಿಸಿದ್ದಾನೆ. ಒಂದು ನಿಮಿಷದ ಮಾರ್ಕ್ ನಲ್ಲಿ, ಕೂಗಾಡುತ್ತಿರು ವ್ಯಕ್ತಿ ಪಕ್ಕದಲ್ಲಿದ್ದವನಿಗೆ ಹೀಗೆ ಹೇಳುತ್ತಾನೆ, "ಅವನು ಮೂರು ಬಾರಿ ಉಗುಳಿದ್ದಾನೆ ಮತ್ತು ಕೇಳಿದಾಗ ಅವನು ಕ್ಷಮಿಸಿ ಸರ್ ಎಂದು ಹೇಳುತ್ತಾನೆ. ಪಾಪ್ ಕಾರ್ನ್ ಮಾಡುತ್ತಿದ್ದಾನೆ ಮತ್ತು ಆ ಎಣ್ಣೆಗೆ ೩ ಬಾರಿ ಉಗುಳಿದ್ದಾನೆ. ಅವನು ಮುಸ್ಲಿಂ."
ಜೂನ್ ೧೪, ೨೦೨೨ ರ ದಿ ನ್ಯೂಸ್ ಮಿನಿಟ್‌ನ ವರದಿಯ ಪ್ರಕಾರ, ಆರೋಪಿ ನವಾಜ್ ಪಾಷಾ ತನ್ನ ಸ್ಟಾಲ್ ಅನ್ನು ಸಿದ್ಧಪಡಿಸುತ್ತಿದ್ದಾಗ ಕೆಲವು ದಾರಿಹೋಕರು ಅವನು ಎಣ್ಣೆ ಪ್ಯಾಕೆಟ್ ಅನ್ನು ಕಚ್ಚುವುದನ್ನು ನೋಡಿ, ಪಾಷಾ ಪಾಪ್‌ಕಾರ್ನ್ ಮಾಡುವ ಮೊದಲು ಎಣ್ಣೆಗೆ ಉಗುಳಿದ್ದ ಎಂದು ಆರೋಪಿಸಿದರು. ಇದರಿಂದ ಆಕ್ರೋಶಗೊಂಡ ಗುಂಪು ಅವನ ಮೇಲೆ ಹಲ್ಲೆಗೆ ಯತ್ನಿಸಿತು ಮತ್ತು ಸ್ಥಳದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹಾಜರಿದ್ದು, ಜನಸಂದಣಿಯನ್ನು ಕಂಡಾಗ ಮಧ್ಯಪ್ರವೇಶಿಸಿದರು. ಪೊಲೀಸರು ಪಾಷಾನನ್ನು ಠಾಣೆಗೆ ಕರೆದೊಯ್ದು ಸ್ವಯಂಪ್ರೇರಿತ ಕ್ರಮ ಕೈಗೊಂಡು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಪಾಷಾ ಎಣ್ಣೆಯಲ್ಲಿ ಉಗುಳಲಿಲ್ಲ ಕೇವಲ ಪ್ಯಾಕೆಟ್ನ ಕವರ್ ಅನ್ನು ತೆಗೆಯಲು ಕಚ್ಚುತ್ತಿದ್ದ ಎಂದು ಹೇಳಿಕೊಂಡಿದ್ದಾನೆ.
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ನ್ಯೂಸ್ ಮಿನಿಟ್ ಪಾಷಾ ನೊಂದಿಗೆ ಮಾತನಾಡಿದರು. ವೀಡಿಯೋ ಸಂದರ್ಶನದಲ್ಲಿ ಮಾತನಾಡಿದ ಪಾಷಾ ನ ಹೇಳಿಕೆ ಹೀಗಿದೆ, ತಾನು ಎಣ್ಣೆಯ ಪ್ಯಾಕೆಟ್ ಅನ್ನು ಕೈಗಳಿಂದ ಹರಿದು, ತುಂಡನ್ನು ಬಾಯಿಯಲ್ಲಿ ಇಟ್ಟುಕೊಂಡು ಎಣ್ಣೆಯನ್ನು ಬಾಟಲಿಗೆ ಸುರಿಯುತ್ತಿದ್ದಾಗ, ಅಲ್ಲಿನ ಗುಂಪೊಂದು ಅವನು ಎಣ್ಣೆಯ ಮೇಲೆ ಉಗುಳಿದ್ದಾನೆ ಎಂದು ಆರೋಪಿಸಲು ಪ್ರಾರಂಭಿಸಿತು. ಆಗ ವ್ಯಕ್ತಿಯೊಬ್ಬನು ಅವನ ಬಳಿಗೆ ಬಂದು ಹೆಸರನ್ನು ತಿಳಿದಿಕೊಂಡು, ಅವನು ಮುಸ್ಲಿಂ ಎಂದು ಕೂಗಲು ಪ್ರಾರಂಭಿಸಿ ಅವನು ಎಣ್ಣೆಯ ಮೇಲೆ ಉಗುಳಿದ್ದಾನೆ ಎಂದು ಹೇಳಿದರು.
ಲಾಜಿಕಲಿ ಫ್ಯಾಕ್ಟ್ಸ್ ದೂರಿನ ಪ್ರತಿಯನ್ನು ಕಂಡುಕೊಂಡಿದೆ, ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕೃತ್ಯ, ಸೋಂಕು ಹರಡುವ ಮಾರಣಾಂತಿಕ ಕೃತ್ಯ, ಮಾರಾಟ ಮಾಡಲು ಉದ್ದೇಶಿಸಿರುವ ಆಹಾರ ಅಥವಾ ಪಾನೀಯದ ಕಲಬೆರಕೆ ಮತ್ತು ಹಾನಿಕಾರಕ ಆಹಾರ ಅಥವಾ ಪಾನೀಯದ ಮಾರಾಟಕ್ಕಾಗಿ ಪಾಷಾ ನನ್ನು ಬಂಧಿಸಲಾಗಿತ್ತು ಎಂದು ಹೇಳುತ್ತದೆ.
ವೈರಲ್ ವೀಡಿಯೋದಲ್ಲಿ ಕಂಡುಬರುವ ಬಾಟಲಿಯು ಎಣ್ಣೆಯ ಬಾಟಲಿಯಾಗಿದ್ದು, ಅದರಲ್ಲಿ ಪಾಷಾ ಉಗುಳಿದ್ದಾನೆ ಎಂದು ಆರೋಪಿಸಲಾಗಿತ್ತು ಮತ್ತು ಇದನ್ನು ಅವನು ಪಾಪ್‌ಕಾರ್ನ್‌ನಲ್ಲಿ ಮೂತ್ರವನ್ನು ಬೆರೆಸಿದ್ದಾನೆ ಎಂದು ಹೇಳಲು ಆಧಾರವಾಗಿ ಬಳಸಲಾಗಿದೆ.
ಈ ಘಟನೆಯಲ್ಲಿ ಮೂತ್ರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಂತ್ ಕೆ ಭಜಂತ್ರಿ ಅವರು, "ಇದು ತಪ್ಪು ಮಾಹಿತಿ. ಅವನು ಮೂತ್ರವನ್ನು ಬಳಸುತ್ತಿರಲಿಲ್ಲ" ಎಂದು ಲಾಜಿಕಲಿ ಫ್ಯಾಕ್ಟ್ಸ್ ಗೆ ತಿಳಿಸಿದ್ದಾರೆ.
ತೀರ್ಪು
೨೦೨೨ರ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆದ ಸಂಬಂಧವಿಲ್ಲದ ಘಟನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ಮುಸ್ಲಿಂ ವ್ಯಕ್ತಿಯೊಬ್ಬ ಪಾಪ್‌ಕಾರ್ನ್ ಮಾಡಲು ಮೂತ್ರವನ್ನು ಬಳಸಿದ್ದಾನೆ ಎಂದು ತಪ್ಪಾಗಿ ಹೇಳಲಾಗಿದೆ. ವಾಸ್ತವದಲ್ಲಿ, ವೈರಲ್ ವೀಡಿಯೋದಲ್ಲಿರುವ ವ್ಯಕ್ತಿ ಪಾಪ್‌ಕಾರ್ನ್ ಮಾಡುವ ಮೊದಲು ಎಣ್ಣೆಯಲ್ಲಿ ಉಗುಳಿದ್ದಾನೆ ಎಂಬ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.