ಮೂಲಕ: ರಾಜೇಶ್ವರಿ ಪರಸ
ಫೆಬ್ರವರಿ 5 2024
ವೀಡಿಯೋದಲ್ಲಿ ನೆಲದ ಮೇಲೆ ಕಾಣುವ ವ್ಯಕ್ತಿ ಮಾಲ್ಡೀವಿಯನ್ ಸಂಸದ ಅಬ್ದುಲ್ಲಾ ಶಹೀಮ್ ಅಬ್ದುಲ್ ಹಕೀಮ್, ಅಧ್ಯಕ್ಷ ಮೊಹಮ್ಮದ್ ಮುಯಿಝು ಅಲ್ಲ.
ನಿರೂಪಣೆ ಏನು?
ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುತ್ತಿರುವ ೧೫ ಸೆಕೆಂಡುಗಳ ವೀಡಿಯೋವು ಹಲವಾರು ವ್ಯಕ್ತಿಗಳ ನಡುವೆ ದೈಹಿಕ ವಾಗ್ವಾದವನ್ನು ಚಿತ್ರಿಸುತ್ತದೆ, ಇದು ಸಂಸತ್ತಿನ ಆವರಣದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಮೇಲಿನ ದಾಳಿಯನ್ನು ಸೆರೆಹಿಡಿಯುತ್ತದೆ ಎಂದು ಹೇಳಲಾಗಿದೆ. ಇತರರು ಮಧ್ಯಪ್ರವೇಶಿಸುವ ಪ್ರಯತ್ನಗಳ ನಡುವೆ ಒಬ್ಬ ವ್ಯಕ್ತಿಯು ನೆಲದ ಮೇಲೆ ಕೆಳಗಿರುವ ಇನ್ನೊಬ್ಬನ ಕೂದಲನ್ನು ಆಕ್ರಮಣಕಾರಿಯಾಗಿ ಎಳೆಯುವ ಅಸ್ತವ್ಯಸ್ತವಾಗಿರುವ ದೃಶ್ಯವನ್ನು ತುಣುಕು ಬಹಿರಂಗಪಡಿಸುತ್ತದೆ.
ಜನವರಿ ೨೯, ೨೦೨೪ ರಂದು, ಈ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಷ್ಟ್ ಮಾಡಲಾಗಿದೆ: "ಇಂದು, ಮಾಲ್ಡೀವಿಯನ್ ಮೊಹಮ್ಮದ್ ಮುಯಿಜ್ಜು ಸಂಸತ್ತಿನಲ್ಲಿ ಥಳಿಸಿದ್ದಾರೆ. ಭಾರತದ ಬಹಿಷ್ಕಾರದಿಂದಾಗಿ ಆರ್ಥಿಕತೆ ಕುಂಠಿತಗೊಂಡಿದೆ (sic)."
ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಹೇಳಿಕೆಗಳ ಸ್ಕ್ರೀನ್‌ಶಾಟ್ (ಮೂಲ: ಫೇಸ್‌ಬುಕ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ಯಿಂದ ಮಾರ್ಪಡಿಸಲಾಗಿದೆ)
ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಗಲಾಟೆ ಭುಗಿಲೆದ್ದ ಕೆಲವು ದಿನಗಳ ನಂತರ ಈ ಘಟನೆ ಸಂಭವಿಸಿದೆ, ಮಾಲ್ಡೀವ್ಸ್ ಮಂತ್ರಿಗಳು ಭಾರತ ಮತ್ತು ಅದರ ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿಯ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆಗಳಿಂದ ಪ್ರಚೋದಿಸಲ್ಪಟ್ಟರು. ವಿವಾದವು ಭಾರತದಲ್ಲಿ ಸಾಮಾಜಿಕ ಮಾಧ್ಯಮ ಪ್ರಚಾರವನ್ನು ಹುಟ್ಟುಹಾಕಿತು, #ಬಾಯ್ಕಾಟ್ ಮಾಲ್ಡೀವ್ಸ್ ನಂತಹ ಹ್ಯಾಶ್‌ಟ್ಯಾಗ್‌ಗಳು ಪ್ರವಾಸೋದ್ಯಮಕ್ಕಾಗಿ ದೇಶೀಯ ಸ್ಥಳಗಳನ್ನು ಅನ್ವೇಷಿಸಲು ಜನರನ್ನು ಒತ್ತಾಯಿಸುತ್ತದೆ.
ಭಾರತದಲ್ಲಿ ಬಹಿಷ್ಕಾರದ ಕರೆಗಳು ಹೊರಹೊಮ್ಮಿದ ನಂತರ ಮಾಲ್ಡೀವಿಯನ್ ಆರ್ಥಿಕತೆ 'ವಿಫಲವಾಗಿದೆ' ಆದ್ದರಿಂದ ಅಧ್ಯಕ್ಷ ಮುಯಿಝು ಮೇಲೆ ದಾಳಿಯಾಗಿದೆ ಎಂದು ಬಳಕೆದಾರರು ಹೇಳಿಕೊಂಡಿರುವುದರಿಂದ ಈ ಜಗಳದ ವೀಡಿಯೋವನ್ನು ರಾಜತಾಂತ್ರಿಕ ಗದ್ದಲಕ್ಕೆ ಲಿಂಕ್ ಮಾಡಲಾಗಿದೆ. ಆದರೆ, ಈ ಹೇಳಿಕೆ ತಪ್ಪು.
ನಾವು ಏನು ಕಂಡುಕೊಂಡಿದ್ದೇವೆ?
ಪ್ರಸರಣ ಹೇಳಿಕೆಗಳಿಗೆ ವಿರುದ್ಧವಾಗಿ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಮೇಲಿನ ಯಾವುದೇ ದಾಳಿಯ ಬಗ್ಗೆ ಯಾವುದೇ ಪರಿಶೀಲಿಸಿದ ಸುದ್ದಿ ವರದಿ ಇಲ್ಲ. ಮಾಧ್ಯಮ ಪ್ರಸಾರವು ವಾಸ್ತವವಾಗಿ ಜನವರಿ ೨೮, ೨೦೨೪ ರಂದು ಮಾಲ್ಡೀವ್ಸ್ ಸಂಸತ್ತಿನೊಳಗೆ ಘರ್ಷಣೆಯನ್ನು ಸೂಚಿಸುತ್ತದೆ.
ಜನವರಿ ೩೦, ೨೦೨೪ ರಂದು ದಿ ಟೆಲಿಗ್ರಾಫ್‌ನ ವರದಿಯು, ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷವು, ಅಧ್ಯಕ್ಷ ಮುಯಿಝು ಅವರ ಕ್ಯಾಬಿನೆಟ್‌ಗೆ ನಾಲ್ಕು ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವುದನ್ನು ವಿರೋಧಿಸಿದ ನಂತರ ವಾಗ್ವಾದ ನಡೆಯಿತು ಎಂದು ವಿವರಿಸಿದೆ. ಈ ಭಿನ್ನಾಭಿಪ್ರಾಯ ಸದಸ್ಯರ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು.
ಸಂಸದರಾದ ಇಸಾ ಮತ್ತು ಅಬ್ದುಲ್ಲಾ ಶಹೀಂ ಅಬ್ದುಲ್ ಹಕೀಂ ಎಂದು ಟೆಲಿಗ್ರಾಫ್ ಘರ್ಷಣೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿದೆ. ಇತರರು ಅವರನ್ನು ತಡೆಯಲು ಪ್ರಯತ್ನಿಸುತ್ತಿರುವಾಗ ಇಸಾ "ಶಹೀಮ್‌ನ ಕುತ್ತಿಗೆಯನ್ನು ಒದೆಯುವುದು ಮತ್ತು ಅವನ ಕೂದಲನ್ನು ಎಳೆಯುವುದು" ಕಂಡುಬಂದಿದೆ ಎಂದು ವರದಿ ವಿವರಿಸಿದೆ.
ಜನವರಿ ೩೦, ೨೦೨೪ ರಂದು "ಮಾಲ್ಡೀವ್ಸ್‌ನಲ್ಲಿ ಸಂಸತ್ತಿನ ಅಧಿವೇಶನದಲ್ಲಿ ಹಿಂಸಾತ್ಮಕ ಕಾದಾಟವು ಪ್ರಾರಂಭವಾಯಿತು" ಎಂಬ ಶೀರ್ಷಿಕೆಯೊಂದಿಗೆ ಟೆಲಿಗ್ರಾಫ್‌ನ ಯೂಟ್ಯೂಬ್ ಚಾನೆಲ್‌ಗೆ ಜಗಳದ ವೀಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಟೈಮ್‌ಸ್ಟ್ಯಾಂಪ್ ೦:೨೮ ರಿಂದ ೦:೪೦ ವರೆಗೆ ನಾವು ಈಗ ವೈರಲ್ ಆಗಿರುವ ದೃಶ್ಯಗಳನ್ನು ನೋಡಬಹುದು.
ಮತ್ತೊಂದು ಮಾಲ್ಡೀವ್ಸ್ ಸ್ಥಳೀಯ ವೆಬ್‌ಸೈಟ್, ಊರೆಡೊ, ವೈರಲ್ ವೀಡಿಯೋದ ಫೋಟೋವನ್ನು, "ಜನವರಿ ೨೮, ೨೦೨೪ ರಂದು ಸರ್ಕಾರದ ಪರ ಸಂಸದರು ಮತ್ತು ವಿರೋಧ ಪಕ್ಷದ ಸಂಸದರ ನಡುವೆ ನಡೆದ ಹಿಂಸಾಚಾರದಲ್ಲಿ ಕಂಡಿತೀಮು ಸಂಸದ ಅಬ್ದುಲ್ಲಾ ಶಹೀಮ್ ಅಬ್ದುಲ್ ಹಕೀಮ್ ಗಾಯಗೊಂಡಿರುವುದನ್ನು ತೋರಿಸುವ ವೀಡಿಯೋದ ಸ್ಕ್ರೀನ್‌ಗ್ರಾಬ್" ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿತು.
ವೈರಲ್ ವೀಡಿಯೋ, ಟೆಲಿಗ್ರಾಫ್ ವೀಡಿಯೋ ಮತ್ತು ಅಧ್ಯಕ್ಷ ಮುಯಿಝು ಅವರ ಚಿತ್ರಗಳ ನಡುವಿನ ಹೋಲಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಹೇಳಿಕೆಗೆ ವಿರುದ್ಧವಾಗಿದೆ. ಗಲಾಟೆಯಲ್ಲಿ ಗಾಯಗೊಂಡಿದ್ದು ಸಂಸದ ಹಕೀಂ ಹೊರತು ಮಾಲ್ಡೀವ್ಸ್ ಅಧ್ಯಕ್ಷರಲ್ಲ.
ಹೋಲಿಕೆಯು ವೀಡಿಯೋದಲ್ಲಿರುವ ವ್ಯಕ್ತಿ ಮತ್ತು ಮಾಲ್ಡೀವಿಯನ್ ಅಧ್ಯಕ್ಷರ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ. (ಮೂಲ: ಎಕ್ಸ್/ಟೆಲಿಗ್ರಾಫ್/ಸ್ಕ್ರೀನ್‌ಶಾಟ್‌ಗಳು)
ತೀರ್ಪು
ಮಾಲ್ಡೀವಿಯನ್ ಸಂಸದರನ್ನು ಒಳಗೊಂಡ ಸಂಸತ್ತಿನಲ್ಲಿ ನಡೆದ ಘರ್ಷಣೆಯನ್ನು ಅಧ್ಯಕ್ಷ ಮುಯಿಝು ಮೇಲಿನ ದಾಳಿ ಎಂದು ತಪ್ಪಾಗಿ ಪ್ರಸ್ತುತಪಡಿಸಲಾಗಿದೆ. ಹೀಗಾಗಿ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ರಜಿನಿ ಕೆ.ಜಿ)
Read this fact-check in English here.