ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 7 2023
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕರ್ನಾಟಕ ಚುನಾವಣೆಗೆ ಸಂಭಂದಿಸಿ ಯಾವುದೇ ಪೋಷ್ಟ್ ಅನ್ನು ಮಾಡಿಲ್ಲ.
ಸಂಧರ್ಭ
೨೦೨೩ರ ಕರ್ನಾಟಕ ರಾಜ್ಯ ಚುನಾವಣೆಯು ಮೇ ೧೦ ರಂದು ನಡೆಯಿತು ಮತ್ತು ಮೇ ೧೩ ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೨೨೪ ರಲ್ಲಿ ೧೩೫ ಸ್ಥಾನಗಳನ್ನು ಗೆದ್ದುಕೊಂಡಿತು, ಹಾಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ೬೬ ಸ್ಥಾನಗಳನ್ನು ಪಡೆದುಕೊಂಡಿತು. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನವರದ್ದೆಂದು ತೋರಿಸುವ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸ್ಕ್ರೀನ್‌ಶಾಟ್‌ನಲ್ಲಿ ಉರ್ದುವಿನಲ್ಲಿ ಬರೆದಿರುವ ಟ್ವೀಟ್ ಇದೆ, ಅದರ ಕನ್ನಡ ಅನುವಾದವು ಹೀಗೆ ಹೇಳುತ್ತದೆ, “ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದ್ದಕ್ಕಾಗಿ ಕರ್ನಾಟಕದ ಜನರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳಲು ಬಯಸುತ್ತೇನೆ, ನಮ್ಮ ಎಸ್‌ಡಿಪಿಐ ಜೊತೆಗೆ ಕಾಂಗ್ರೆಸ್ ಭಾರತದಲ್ಲಿ ಇಸ್ಲಾಂ ಧರ್ಮವನ್ನು ಬಲಪಡಿಸಲು ಮತ್ತು ಕರ್ನಾಟಕದ ಸಾರ್ವಭೌಮತ್ವಕ್ಕಾಗಿ ಕೆಲಸ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. !"
ಈ ಟ್ವೀಟ್ ಅನ್ನು ಬಿಜೆಪಿ ಲೂಧಿಯಾನ ಗ್ರಾಮಾಂತರದ ಟ್ವಿಟರ್ ಖಾತೆ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಷರೀಫ್ ಅಂತಹ ಯಾವುದೇ ಟ್ವೀಟ್ ಅನ್ನು ಪೋಷ್ಟ್ ಮಾಡಿಲ್ಲ.
ವಾಸ್ತವವಾಗಿ
ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬರುವ ಟ್ವಿಟರ್ ಖಾತೆ (@CMShehbaz) ಮತ್ತು ಪ್ರೊಫೈಲ್ ಚಿತ್ರವು ಷರೀಫ್ ಅವರ ಅಧಿಕೃತ ಖಾತೆಗೆ ಹೋಲುತ್ತದೆ ಎಂದು ನಾವು ಗಮನಿಸಿದೆವು. ಆದರೆ ನಾವು ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಪರಿಶೀಲಿಸಿದಾಗ ಮೇ ೧೩, ೨೦೨೩ ದಿನದಂದು ವೈರಲ್ ಪೋಷ್ಟ್ ನಂತಹ ಯಾವುದೇ ಟ್ವೀಟ್ ಕಂಡುಬಂದಿಲ್ಲ. ಆ ದಿನಾಂಕದಂದು ಅವರು ಪೋಷ್ಟ್ ಮಾಡಿದ ಮೂರು ಟ್ವೀಟ್‌ಗಳು ಪಾಕಿಸ್ತಾನದ ರಾಜಕೀಯ ವ್ಯವಹಾರಗಳ ಬಗ್ಗೆ ಇದೆ ಮತ್ತು ಕರ್ನಾಟಕ ಚುನಾವಣೆಗಳಿಗೆ ಸಂಬಂಧಿಸಿಲ್ಲ.
"ಕರ್ನಾಟಕ" ಕೀವರ್ಡ್ ಬಳಸಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹುಡುಕಿದಾಗ ಇತ್ತೀಚಿಗೆ ಶೇರ್ ಮಾಡಿದ ಯಾವುದೇ ಟ್ವೀಟ್ ಕಂಡುಬಂದಿಲ್ಲ. "ಕಾಂಗ್ರೆಸ್" ಶಬ್ದವನ್ನು ಬಳಸಿ ಅವರು ನವೆಂಬರ್ ೧, ೨೦೨೨ ರಂದು ಮಾತ್ರ ಚೀನಾದ ಕಮ್ಯುನಿಸ್ಟ್ ಪಕ್ಷದ ೨೦ನೇ ರಾಷ್ಟ್ರೀಯ ಕಾಂಗ್ರೆಸ್‌ಗೆ ಆಹ್ವಾನಿತರಾಗಿರುವ ಬಗ್ಗೆ ಮಾತಾಡದಿದ್ದರು.
ಮೇ ೧೪ ರಂದು ಅವರ ಟ್ವಿಟರ್ ಖಾತೆಯ ಆರ್ಕೈವ್ ಅನ್ನೂ ಸಹ ನೋಡಿದಾಗ ವೈರಲ್ ಪೋಷ್ಟ್ ನಲ್ಲಿ ಕಂಡಂತಹ ಟ್ವೀಟ್ ಮಾಡಿರುವುದಕ್ಕೆ ಯಾವುದೇ ಪುರಾವೆಗಳು ನಮಗೆ ಕಂಡುಬಂದಿಲ್ಲ. ಸೋಶಿಯಲ್ ಬ್ಲೇಡ್, ವಿಶ್ಲೇಷಣಾ ಸಾಧನದ ಅನುಸಾರ ಷರೀಫ್ ಅವರ ಟ್ವಿಟ್ಟರ್ ಖಾತೆಯ ಡೇಟಾ ಮೇ ೧೩ ರಂದು ಅವರು ಕೇವಲ ಮೂರು ಟ್ವೀಟ್‌ಗಳನ್ನು ಪೋಷ್ಟ್ ಮಾಡಿದ್ದಾರೆ ಎಂದು ತೋರಿಸುತ್ತದೆ ಮಟ್ಟ ಎದು ಕರ್ನಾಟಕಕ್ಕೆ ಸಂಭಂದಿಸಿಲ್ಲ.
ವೈರಲ್ ಸ್ಕ್ರೀನ್‌ಶಾಟ್ ನಲ್ಲಿ ಕಂಡುಬಂದ ಟ್ವಿಟರ್ ಖಾತೆಯ ಬಯೋ, ಇದು ವಿಡಂಬನೆ ಖಾತೆ ಎಂದು ಹೇಳುತ್ತದೆ. ಷರೀಫ್ ಅವರು ಇಂತಹ ಹೇಳಿಕೆ ನೀಡಿದ ಯಾವುದೇ ಸುದ್ದಿ ವರದಿಗಳು ನಮಗೆ ಕಂಡುಬಂದಿಲ್ಲ. ಈ ಪುರಾವೆಗಳ ಆಧಾರದ ಮೇಲೆ ಎದು ಎಡಿಟೆಡ್ ಸ್ಕ್ರೀನ್‌ಶಾಟ್ ಎಂದು ನಾವು ಅರ್ಥಿಸಿಕೊಳ್ಳಬಹುದು.
ತೀರ್ಪು
೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದ್ದಕ್ಕಾಗಿ ಕರ್ನಾಟಕದ ಜನತೆಗೆ ಪಾಕಿಸ್ತಾನದ ಪ್ರಧಾನಿ ಧನ್ಯವಾದ ಹೇಳಿದ್ದಾರೆ ಎಂದು ಹೇಳಲು ಫ್ಯಾಬ್ರಿಕೇಟೆಡ್ ಸ್ಕ್ರೀನ್‌ಶಾಟ್ ಅನ್ನು ಬಳಸಲಾಗುತ್ತಿದೆ. ಷರೀಫ್ ಅವರು ಕರ್ನಾಟಕ ಚುನಾವಣೆಯ ಬಗ್ಗೆ ಯಾವುದೇ ಟ್ವೀಟ್ ಮಾಡಿಲ್ಲ ಮತ್ತು ಸಾರ್ವಜನಿಕವಾಗಿ ಅಂತಹ ಹೇಳಿಕೆಯನ್ನು ನೀಡಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.