ಮುಖಪುಟ ಇಲ್ಲ, ಪಾಕಿಸ್ತಾನವು ಭಾರತೀಯ ಮುಸ್ಲಿಮರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಆವೃತ್ತಿಯನ್ನು ಜಾರಿಗೆ ತರುತ್ತಿಲ್ಲ

ಇಲ್ಲ, ಪಾಕಿಸ್ತಾನವು ಭಾರತೀಯ ಮುಸ್ಲಿಮರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಆವೃತ್ತಿಯನ್ನು ಜಾರಿಗೆ ತರುತ್ತಿಲ್ಲ

ಮೂಲಕ: ಉಮ್ಮೆ ಕುಲ್ಸುಮ್

ಮಾರ್ಚ್ 14 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಪಾಕಿಸ್ತಾನವು ಭಾರತೀಯ ಮುಸ್ಲಿಮರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಆವೃತ್ತಿಯನ್ನು ಜಾರಿಗೆ ತರುತ್ತಿಲ್ಲ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್ / ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಲಾಜಿಕಲಿ ಫ್ಯಾಕ್ಟ್ಸ್ ಇಬ್ಬರು ಪಾಕಿಸ್ತಾನಿ ಪತ್ರಕರ್ತರನ್ನು ಸಂಪರ್ಕಿಸಿದ್ದು, ಅವರು ವೈರಲ್ ಪೋಷ್ಟ್ 'ಸಂಪೂರ್ಣವಾಗಿ ತಪ್ಪು' ಮತ್ತು 'ಯಾವುದೇ ಆಧಾರವಿಲ್ಲ' ಎಂದು ದೃಢಪಡಿಸಿದರ.

ಸಂದರ್ಭ

ಮಾರ್ಚ್ ೧೧, ೨೦೨೪ ರಂದು, ಕೇಂದ್ರ ಗೃಹ ಸಚಿವಾಲಯವು (ಎಂಹೆಚ್ಎ) ಪೌರತ್ವ ತಿದ್ದುಪಡಿಯ ನಿಯಮಗಳು ೨೦೨೪, ಅನ್ನು ಸೂಚಿಸಿತು. ಇದು ೨೦೧೯ ರಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನವನ್ನು ಸಕ್ರಿಯಗೊಳಿಸುತ್ತದೆ. ಈ ಕಾನೂನು,  ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ- ಎಲ್ಲಾ ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ಡಿಸೆಂಬರ್ ೩೧, ೨೦೧೪ ರಂದು ಅಥವಾ ಮೊದಲು ಭಾರತಕ್ಕೆ ಆಗಮಿಸಿದ ಕಿರುಕುಳಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ  ಭಾರತೀಯ ಪೌರತ್ವಕ್ಕೆವನ್ನು ಒದಗಿಸುತ್ತದೆ. 

ಆದರೆ, ಸಿಎಎ ಭಾರತದೊಳಗೆ ಮಹತ್ವದ ವಿವಾದವನ್ನು ಹುಟ್ಟುಹಾಕಿದೆ, ಈ ನೆರೆಯ ದೇಶಗಳಿಂದ ಮುಸ್ಲಿಮರನ್ನು ಹೊರಗಿಟ್ಟಿರುವುದರಿಂದ ಟೀಕೆಗಳಿಗೆ ಒಳಗಾಗಿದೆ. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) - ಭಾರತೀಯ ನಾಗರಿಕರ ಪ್ರಸ್ತಾವಿತ ಅಧಿಕೃತ ದಾಖಲೆ - ಹೊಸ ಕಾನೂನು ಭಾರತೀಯ ಮುಸ್ಲಿಮರ ವಿರುದ್ಧ ತಾರತಮ್ಯವನ್ನು ಹೊಂದಿದೆ ಎಂದು ವಿಮರ್ಶಕರು ವಾದಿಸುತ್ತಾರೆ. ಶಾಸನವನ್ನು ವಿರೋಧಿಸಿ ೨೦೧೯ ಮತ್ತು ೨೦೨೦ ರ ಆರಂಭದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ಭುಗಿಲೆದ್ದವು.

ಹೇಳಿಕೆ ಏನು?

ಈ ಕಾನೂನಿನ ಸುತ್ತ ಚರ್ಚೆಗಳ ನಡುವೆ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಎಕ್ಸ್ (ಹಿಂದೆ ಟ್ವಿಟರ್) ಪೋಷ್ಟ್ ನ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ಕ್ರೀನ್‌ಶಾಟ್‌ನಲ್ಲಿರುವ ಪಠ್ಯವು ಹೀಗಿದೆ: “ಭಾರತದ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ಕೋಮುವಾದಿ ಸಿಎಎಯನ್ನು ಎದುರಿಸಲು, ಪಾಕಿಸ್ತಾನದ ಸರ್ಕಾರವು ಪಾಕಿಸ್ತಾನದ ಸ್ವಂತ ಸಿಎಎಗೆ ಸೂಚನೆ ನೀಡಲು ನಿರ್ಧರಿಸಿದೆ, ಇದರಲ್ಲಿ ಭಾರತದಲ್ಲಿ ಕಿರುಕುಳ ಅನುಭವಿಸುವ ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನದ ಪೌರತ್ವವನ್ನು ನೀಡಲಾಗುತ್ತದೆ (sic),” ಎಂದು ಹೇಳಲಾಗಿದೆ.  ಈ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುವ ಅಂತಹ ಒಂದು ಪೋಷ್ಟ್ ೩,೬೦,೦೦೦ ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಬರೆಯುವ ಸಮಯದಲ್ಲಿ ೪,೦೦೦ ಬಾರಿ ಮರುಹಂಚಿಕೊಳ್ಳಲಾಗಿದೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. 

ಈ ಹೇಳಿಕೆಯನ್ನು ಬ್ರೇಕಿಂಗ್ ನ್ಯೂಸ್ ಪ್ರಸಾರದ ರೂಪದಲ್ಲಿಯೂ ಹಂಚಿಕೊಳ್ಳಲಾಗಿದೆ. ಒಬ್ಬ ಎಕ್ಸ್ ಬಳಕೆದಾರರು ಹೀಗೆ ಬರೆದಿದ್ದಾರೆ, “೧೯೪೭ ರ ವಿಭಜನೆಯ ಸಮಯದಲ್ಲಿ ಭಾರತದಲ್ಲಿ ಉಳಿದುಕೊಂಡಿರುವ ಭಾರತೀಯ ಇಸ್ಲಾಮಿಕ್ ವ್ಯಕ್ತಿಗಳಿಗೆ ಪಾಕಿಸ್ತಾನದ ಸರ್ಕಾರವು ಪಾಕಿಸ್ತಾನದ ಸಿಎಎ ಆವೃತ್ತಿಯನ್ನು ಜಾರಿಗೊಳಿಸುವ ಸಾಧ್ಯತೆಯಿದೆ. ಭಾರತದಲ್ಲಿ ಕಿರುಕುಳ ಅನುಭವಿಸುವ ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನಿ ಸಿಎಎ ಪಾಕಿಸ್ತಾನ ಪೌರತ್ವವನ್ನು ನೀಡಲು ನಿರ್ಧರಿಸಿದೆ.~ ಸುದ್ದಿ ಪಾಕಿಸ್ತಾನದಿಂದ ಅಜ್ಞಾತ ಮೂಲ (sic).” ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಪೋಷ್ಟ್ ಗಳ  ಸ್ಕ್ರೀನ್‌ಶಾಟ್ (ಮೂಲ: ಎಕ್ಸ್ / ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ನಾವು ಕಂಡುಹಿಡಿದದ್ದು ಏನು?

ಲಾಜಿಕಲಿ ಫ್ಯಾಕ್ಟ್ಸ್‌ನ ತನಿಖೆಯು ಆಪಾದಿತ ಎಕ್ಸ್ ಪೋಷ್ಟ್ "BHKslams" ಹೆಸರಿನ ಖಾತೆಯಿಂದ ಹುಟ್ಟಿಕೊಂಡಿದೆ ಎಂದು ಕಂಡು ಹಿಡಿದಿದೆ, ಇದು ಪ್ರಾಥಮಿಕವಾಗಿ ಮೀಮ್‌ಗಳು ಮತ್ತು ವಿಡಂಬನೆಗಳನ್ನು, ರಾತ್ರಿ ೮:೦೦ ಗಂಟೆಯ ಸುಮಾರಿಗೆ ಹಂಚಿಕೊಳ್ಳುತ್ತದೆ. ಮಾರ್ಚ್ ೧೧, ೨೦೨೪ ರಂದು. ಪೋಷ್ಟ್ ನ ಹಾಸ್ಯದ ಉದ್ದೇಶದ ಹೊರತಾಗಿಯೂ, ಇದನ್ನು ವಾಸ್ತವಿಕ ವರದಿಯಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಷರೀಫ್ ಅವರ ಅಧಿಕೃತ ಎಕ್ಸ್ ಖಾತೆಯ ಹೆಚ್ಚಿನ ಪರಿಶೀಲನೆಯು ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ವಿವರಿಸಿದ ಪೋಷ್ಟ್ ಗಳಿಗೆ ಹೊಂದಿಕೆಯಾಗುವ ಯಾವುದೇ ಪೋಷ್ಟ್ ಗಳನ್ನು ಬಹಿರಂಗಪಡಿಸಲಿಲ್ಲ. ಮಾರ್ಚ್ ೧೦, ೨೦೨೪ ರ ದಿನಾಂಕದ ಅವರ ಇತ್ತೀಚಿನ ಪೋಷ್ಟ್, ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮದ್ ಮುಯಿಜ್ಜು ಅವರು ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಬಗ್ಗೆ ಅಭಿನಂದನಾ ಸಂದೇಶಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

ವೇಬ್ಯಾಕ್ ಮೆಷಿನ್ ಮೂಲಕ ಷರೀಫ್ ಅವರ ಎಕ್ಸ್ ಖಾತೆಯ ಪರೀಕ್ಷೆಯು ಮಾರ್ಚ್ ೮, ೧೨, ಮತ್ತು ೧೩ ರಂದು ನಮೂದುಗಳನ್ನು ತೋರಿಸಿದೆ ಆದರೆ ಮಾರ್ಚ್ ೧೦ ಅಥವಾ ೧೧ ಕ್ಕೆ ಯಾವುದೂ ಇಲ್ಲ. ಸಾಮಾಜಿಕ ಮಾಧ್ಯಮ ವಿಶ್ಲೇಷಣಾ ಸಾಧನವಾದ ಸೋಶಿಯಲ್ ಬ್ಲೇಡ್‌ನ ವಿಶ್ಲೇಷಣೆಯು ಷರೀಫ್ ಮಾರ್ಚ್ ೧೧ ರಂದು ನಾಲ್ಕು ಬಾರಿ ಪೋಷ್ಟ್ ಮಾಡಿದ್ದಾರೆ ಎಂದು ಸೂಚಿಸಿದೆ (ಸರಿಹೊಂದಿಸಲಾಗಿದೆ ಸಮಯ ವಲಯಗಳಲ್ಲಿನ ವ್ಯತ್ಯಾಸವನ್ನು ಪರಿಗಣಿಸಲು ಮಾರ್ಚ್ ೧೦ ರವರೆಗೆ) ಮತ್ತು ಆ ಅವಧಿಯಿಂದ ಯಾವುದೇ ಪೋಷ್ಟ್ ಗಳನ್ನು ಅಳಿಸಲಾಗಿಲ್ಲ.

 

ಸೋಶಿಯಲ್ ಬ್ಲೇಡ್‌ನಿಂದ ವಿಶ್ಲೇಷಣೆಯ ಸ್ಕ್ರೀನ್‌ಶಾಟ್. (ಮೂಲ: ಸ್ಕ್ರೀನ್‌ಶಾಟ್/ಸೋಶಿಯಲ್ ಬ್ಲೇಡ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಯಾವುದೇ ವಿಶ್ವಾಸಾರ್ಹ ಮೂಲಗಳು ಅಥವಾ ಸುದ್ದಿ ವರದಿಗಳು ಸಿಎಎ ತರಹದ ಕಾನೂನನ್ನು ಜಾರಿಗೆ ತರಲು ಪಾಕಿಸ್ತಾನ ಯೋಜಿಸುತ್ತಿದೆ ಎಂಬ ಹೇಳಿಕೆಯನ್ನು ಬೆಂಬಲಿಸುವುದಿಲ್ಲ. ಅಂತಹ ಪ್ರಕಟಣೆಯು ವ್ಯಾಪಕ ಗಮನವನ್ನು ಸೆಳೆಯುವ ಸಾಧ್ಯತೆಯಿದೆ.

ಲಾಜಿಕಲಿ ಫ್ಯಾಕ್ಟ್ಸ್ ಇಬ್ಬರು ಪಾಕಿಸ್ತಾನಿ ಪತ್ರಕರ್ತರನ್ನು ಸಹ ಸಂಪರ್ಕಿಸಿದ್ದು ಅವರು ಸಾಮಾಜಿಕ ಮಾಧ್ಯಮದಲ್ಲಿನ ಮಾಹಿತಿಯು "ಸಂಪೂರ್ಣವಾಗಿ ತಪ್ಪು" ಮತ್ತು "ಯಾವುದೇ ಆಧಾರವಿಲ್ಲ" ಎಂದು ದೃಢಪಡಿಸಿದರು. ಇಸ್ಲಾಮಾಬಾದ್ ಮೂಲದ ಪತ್ರಕರ್ತ ನವೀದ್ ಅಕ್ಬರ್ ಅವರು ಪಾಕಿಸ್ತಾನದಲ್ಲಿ ಅಂತಹ ಯಾವುದೇ ಕಾನೂನನ್ನು "ಕೆಳಮಟ್ಟದಲ್ಲಿಯೂ ತಂದಿಲ್ಲ" ಎಂದು ಹೇಳಿದರು. 

ತೀರ್ಪು

ಭಾರತೀಯ ಮುಸ್ಲಿಮರಿಗೆ ಸಿಎಎಯ ಆವೃತ್ತಿಯನ್ನು ಜಾರಿಗೊಳಿಸುವ ಯೋಜನೆಯನ್ನು ಪಾಕಿಸ್ತಾನ ಸರ್ಕಾರ ಘೋಷಿಸಿಲ್ಲ. ಆದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ