ಮುಖಪುಟ ಇಲ್ಲ, ಇಟಲಿಯಲ್ಲಿ ನಡೆದ ಜಿ೭ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಯುಎಸ್ ರಾಷ್ಟ್ರಪತಿ ಬಿಡೆನ್ ಅವರ ಕೈ ಕುಲುಕಲು ನಿರಾಕರಿಸಲಿಲ್ಲ

ಇಲ್ಲ, ಇಟಲಿಯಲ್ಲಿ ನಡೆದ ಜಿ೭ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಯುಎಸ್ ರಾಷ್ಟ್ರಪತಿ ಬಿಡೆನ್ ಅವರ ಕೈ ಕುಲುಕಲು ನಿರಾಕರಿಸಲಿಲ್ಲ

ಮೂಲಕ: ವನಿತಾ ಗಣೇಶ್

ಜೂನ್ 18 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಇಟಲಿಯಲ್ಲಿ ನಡೆದ ಜಿ೭ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಯುಎಸ್ ರಾಷ್ಟ್ರಪತಿ ಬಿಡೆನ್ ಅವರ ಕೈ ಕುಲುಕಲು ನಿರಾಕರಿಸಲಿಲ್ಲ ಭಾರತದ ಪ್ರಧಾನಿ ಮೋದಿ ಅವರು ಯುಎಸ್ ಅಧ್ಯಕ್ಷ ಬಿಡೆನ್ ಅವರ ಹ್ಯಾಂಡ್‌ಶೇಕ್ ಅನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳುವ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್ (ಹಿಂದೆ ಟ್ವಿಟರ್)/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಕ್ಕದಲ್ಲಿರುವ ವ್ಯಕ್ತಿ ಯುಎಸ್ ಅಧ್ಯಕ್ಷ ಜೋ ಬಿಡನ್ ಅಲ್ಲ. ಮೋದಿ ಜಿ೭ ಶೃಂಗಸಭೆಯ ಸಂದರ್ಭದಲ್ಲಿ ಬಿಡೆನ್ ಅವರನ್ನು ಭೇಟಿ ಮಾಡಿದ್ದಾರೆ.

ಹೇಳಿಕೆ ಏನು?

ಇತ್ತೀಚೆಗೆ ಇಟಲಿಯಲ್ಲಿ ನಡೆದ ಗ್ರೂಪ್ ಆಫ್ ೭ (ಜಿ೭) ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ಕೈ ಕುಲುಕಲು ನಿರಾಕರಿಸಿದರು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಎಂಟು ಸೆಕೆಂಡುಗಳ ವೀಡಿಯೋವನ್ನು ಹಂಚಿಕೊಂಡಿದ್ದಾರೆ. 

ವೀಡಿಯೋದಲ್ಲಿ, ಜಿ೭ ಸ್ಥಳದಲ್ಲಿ ಮೋದಿ ಅವರು ಸೂಟ್‌ನಲ್ಲಿ ಇದ್ದ ಒಬ್ಬ ವ್ಯಕ್ತಿಯ ಜೊತೆಯಲ್ಲಿ ನಡೆದು ಹೋಗುತ್ತಿರುವುದನ್ನು ಕಾಣಬಹುದು. ಆ ವ್ಯಕ್ತಿ ತನ್ನ ಕೈಯನ್ನು ಚಾಚುತ್ತಾನೆ, ಆದರೆ ಮೋದಿ ಕೈ ಕುಲುಕುವುದನ್ನು ನಿರ್ಲಕ್ಷಿಸುತ್ತಾ ನಡೆಯುವುದನ್ನು ಮುಂದುವರೆಸುತ್ತಾರೆ. ನಂತರ ಕ್ಲಿಪ್‌ನಲ್ಲಿ, ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾಗಿದ್ದಾರೆ.

ವೀಡಿಯೋವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ: “ಜೋ ಬಿಡೆನ್ ಅವರೊಂದಿಗೆ ಕೈ ಕುಲುಕದೆ, ಮೋದಿಜಿ ಅಮೆರಿಕಕ್ಕೆ ಅದರ ಮೌಲ್ಯವನ್ನು ತೋರಿಸಿದರು. ನಮ್ಮ ಚುನಾವಣೆಯಲ್ಲಿ ಮಧ್ಯಪ್ರವೇಶಿಸಿದ ಪರಿಣಾಮ ಜಗತ್ತಿನ ಮುಂದೆ ನಿಮ್ಮ ಯೋಗ್ಯತೆಯನ್ನು ತೋರಿಸಲಾಗುತ್ತಿದೆ (ಹಿಂದಿಯಿಂದ ಅನುವಾದಿಸಲಾಗಿದೆ)!!” ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ನಾಯಕರು ಭಾಗವಹಿಸಿದ ಜಿ೭ ಶೃಂಗಸಭೆಯು ಜೂನ್ ೧೩ ರಿಂದ ಜೂನ್ ೧೫, ೨೦೨೪ ರವರೆಗೆ ಇಟಲಿಯ ಫಾಸಾನೊದಲ್ಲಿ ನಡೆಯಿತು. ಜೂನ್ ೧೪ ರಂದು ಜಿ೭ ಔಟ್ರೀಚ್ ಅಧಿವೇಶನದಲ್ಲಿ ಮೋದಿ ಭಾಗವಹಿಸಿದರು ಮತ್ತು ಹಲವಾರು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಚರ್ಚೆಯಲ್ಲಿ ತೊಡಗಿದ್ದರು.

ಬಿಡೆನ್ ಅವರ ಹ್ಯಾಂಡ್‌ಶೇಕ್ ಅನ್ನು ಮೋದಿ ನಿರ್ಲಕ್ಷಿಸಿದ್ದಾರೆ ಎಂದು ಹೇಳುವ ಹಿಂದಿಯಲ್ಲಿ ಶೀರ್ಷಿಕೆಯುಳ್ಳ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್ / ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ಪೋಷ್ಟ್‌ಗಳಲ್ಲಿ ಮಾಡಿದ ಹೇಳಿಕೆಗಳು ತಪ್ಪು.

ನಾವು ಕಂಡುಕೊಂಡದ್ದು

ವೈರಲ್ ವೀಡಿಯೋದಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ೨೦೨೪ ಜಿ೭ ಶೃಂಗಸಭೆಗಾಗಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಯೂಟ್ಯೂಬ್ ಚಾನಲ್‌ನಿಂದ ಅಪ್‌ಲೋಡ್ ಮಾಡಿದ ದೀರ್ಘ ಮತ್ತು ಸ್ಪಷ್ಟವಾದ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು: “ಜಿ೭ ನಿಯೋಗದ ಮುಖ್ಯಸ್ಥರ ಆಗಮನ - ಜಿ೭ ಶೃಂಗಸಭೆ.”

ಹೆಚ್ಚು ವಿಸ್ತೃತ ಮತ್ತು ಉತ್ತಮ-ಗುಣಮಟ್ಟದ ವೀಡಿಯೋ ಪ್ರಶ್ನೆಯಲ್ಲಿರುವ ವ್ಯಕ್ತಿಯು ಬಿಡೆನ್ ಅಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ, ಏಕೆಂದರೆ ಅವನ ಮುಖದ ಲಕ್ಷಣಗಳು ಮತ್ತು ದೇಹದ ರಚನೆಯು ಗಮನಾರ್ಹವಾಗಿ ವಿಭಿನ್ನವಾಗಿದೆ. ಅದೇ ವ್ಯಕ್ತಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ (೧೩:೩೦ ಟೈಮ್‌ಸ್ಟ್ಯಾಂಪ್‌ನಲ್ಲಿ), ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (೧೮:೨೮ ಕ್ಕೆ), ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (ವೀಡಿಯೋದಲ್ಲಿ ೨೦:೧೧ ಕ್ಕೆ) ಶುಭಾಶಯಗಳನ್ನು ಮತ್ತು ಬೆಂಗಾವಲು ಮಾಡುವುದನ್ನು ವೀಡಿಯೋ ತೋರಿಸುತ್ತದೆ.

ವಾಸ್ತವವಾಗಿ, ವೀಡಿಯೋದಲ್ಲಿ ೪೨:೪೬ ಕ್ಕೆ, ಆ ವ್ಯಕ್ತಿ ಬಿಡೆನ್ ಅವರೊಂದಿಗೆ ನಡೆಯುವುದನ್ನು ಕಾಣಬಹುದು. ಅದೇ ಕ್ಷಣದ ಫೋಟೋವನ್ನು ಶೃಂಗಸಭೆಯ ಅಧಿಕೃತ ಫ್ಲಿಕ್ಕರ್ ಖಾತೆಗೆ ಅಪ್‌ಲೋಡ್ ಮಾಡಲಾಗಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ). ಈಗ ವೈರಲ್ ಆಗಿರುವ ವೀಡಿಯೋದಲ್ಲಿರುವ ವ್ಯಕ್ತಿ ಜೋ ಬಿಡನ್ ಅಲ್ಲ ಎಂದು ಹೋಲಿಕೆ ತೋರಿಸುತ್ತದೆ.

ಇಟಲಿಯಲ್ಲಿ ನಡೆದ ಜಿ೭ ಶೃಂಗಸಭೆಯಲ್ಲಿ ಮೋದಿ ಮತ್ತು ಬಿಡೆನ್ ಜೊತೆಗಿನ ಸಿಬ್ಬಂದಿಯ ಸ್ಟಿಲ್‌ಗಳು. (ಮೂಲ: ಯೂಟ್ಯೂಬ್/ಜಿ೭ ಇಟಲಿ ೨೦೨೪)

ವೈರಲ್ ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳಲು ನಾವು ೨೦೨೪ ರ ಶೃಂಗಸಭೆಯ ಆತಿಥೇಯ ಜಿ೭ ಇಟಾಲಿಯಾ ಮಾಧ್ಯಮ ವಿಭಾಗಕ್ಕೆ ಮೇಲ್ ಬರೆದಿದ್ದೇವೆ.

ಜಿ೭ ಔಟ್‌ರೀಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶೃಂಗಸಭೆಯ ಸೈಡ್‌ಲೈನ್‌ನಲ್ಲಿ ಮೋದಿ ಬಿಡೆನ್ ಅವರನ್ನು ಭೇಟಿಯಾದರು ಎಂಬುದು ಗಮನಿಸಬೇಕಾದ ಸಂಗತಿ. ಜೂನ್ ೧೪ ರಂದು ಎಕ್ಸ್ ನಲ್ಲಿ ತಮ್ಮ ಕೈ ಕುಲುಕಿದ ಫೋಟೋಗಳನ್ನು ಹಂಚಿಕೊಂಡ ಮೋದಿ, ಎರಡೂ ದೇಶಗಳು "ಜಾಗತಿಕ ಕಲ್ಯಾಣವನ್ನು ಮುನ್ನಡೆಸಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ" ಎಂದು ಹೇಳಿದ್ದಾರೆ. ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ತೀರ್ಪು

ವೈರಲ್ ವೀಡಿಯೋದಲ್ಲಿರುವ ವ್ಯಕ್ತಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅಲ್ಲ, ಮತ್ತು ಜಿ೭ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಬಿಡೆನ್ ಅವರೊಂದಿಗೆ ಕೈ ಕುಲುಕಲು  ನಿರಾಕರಿಸಿದ್ದಾರೆ ಎಂಬ ಹೇಳಿಕೆ ತಪ್ಪು.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ