ಮೂಲಕ: ಅಂಕಿತಾ ಕುಲಕರ್ಣಿ
ಆಗಸ್ಟ್ 19 2024
ಭಾರತವು ಮಾಲ್ಡೀವ್ಸ್ ನ ೨೮ ದ್ವೀಪಗಳಲ್ಲಿ ಪೂರ್ಣಗೊಂಡ ನೀರು ಮತ್ತು ನೈರ್ಮಲ್ಯ ಯೋಜನೆಗಳನ್ನು ಮಾಲ್ಡೀವ್ಸ್‌ಗೆ ಹಸ್ತಾಂತರಿಸಿದೆ. ಇದು ದ್ವೀಪಗಳ ನಿಯಂತ್ರಣವನ್ನು ತೆಗೆದುಕೊಂಡಿಲ್ಲ.
ಹೇಳಿಕೆ ಏನು?
ಮಾಲ್ಡೀವ್ಸ್‌ನಲ್ಲಿರುವ ೨೮ "ಕಾರ್ಯತಂತ್ರದ ದ್ವೀಪ" ಗಳನ್ನು ಭಾರತವು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ಅನೇಕ ಸಾಮಾಜಿಕ ಮಾಧ್ಯಮದಲ್ಲಿ ಪೋಷ್ಟ್ ಗಳು ಹೇಳಿಕೊಂಡಿವೆ.
"ಮಾಲ್ಡೀವ್ಸ್ ತನ್ನ ೨೮ ದ್ವೀಪಗಳನ್ನು ಭಾರತಕ್ಕೆ ಹಸ್ತಾಂತರಿಸುತ್ತದೆ. ಅಧ್ಯಕ್ಷ ಮುಯಿಝು ಸ್ವತಃ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ" ಎಂದು ತಪ್ಪು ಮಾಹಿತಿಯ ಹರಡುವಿಕೆಗೆ ಹೆಸರಾದ ಬಾಬಾ ಬನಾರಸ್ ಹೆಸರಿನ ಖಾತೆಯಿಂದ ಹಂಚಿಕೊಂಡ ಎಕ್ಸ್ (ಹಿಂದೆ ಟ್ವಿಟರ್) ಪೋಷ್ಟ್ ಹೇಳುತ್ತದೆ. ಈ ಫ್ಯಾಕ್ಟ್-ಚೆಕ್ ಅನ್ನು ಬರೆಯುವ ಸಮಯದಲ್ಲಿ, ಪೋಷ್ಟ್ ೮೦,೯೦೦ ವೀಕ್ಷಣೆಗಳು, ೧,೭೦೦ ಮರು ಪೋಷ್ಟ್ ಮತ್ತು ೮,೨೦೦ ಲೈಕ್ ಗಳನ್ನು ಗಳಿಸಿತ್ತು. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿ ಮತ್ತು ಇದೇ ರೀತಿಯ ಇತರ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿವೆ.
ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಆಗಸ್ಟ್ ೯ ರಿಂದ ೧೧ ರವರೆಗೆ ಮಾಲ್ಡೀವ್ಸ್‌ಗೆ ಮೂರು ದಿನಗಳ ಭೇಟಿ ನೀಡಿದ ಹಿನ್ನೆಲೆಯಲ್ಲಿ ಈ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಆದರೆ, ಭಾರತ ಮಾಲ್ಡೀವ್ಸ್‌ನಿಂದ ೨೮ ದ್ವೀಪಗಳನ್ನು ಖರೀದಿಸಿದೆ ಎಂಬ ಹೇಳಿಕೆ ತಪ್ಪು.
ನಾವು ಕಂಡುಕೊಂಡಿದ್ದು ಏನು?
ಗೂಗಲ್ ಹುಡುಕಾಟವು ಇಂಡಿಯಾ ಟುಡೆ, ಎನ್‌ಡಿಟಿವಿ ಮತ್ತು ಪಿಟಿಐ ಪ್ರಕಟಿಸಿದ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು, ಇದು ಇಎಎಂ ಜೈಶಂಕರ್ ಅವರು ಮಾಲ್ಡೀವ್ಸ್ ನಲ್ಲಿ ಪೂರ್ಣಗೊಂಡ ನೀರು ಮತ್ತು ನೈರ್ಮಲ್ಯ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಅಧಿಕೃತವಾಗಿ ಹಸ್ತಾಂತರಿಸಿದರು ಎಂದು ಹೇಳುತ್ತವೆ. ಅಂದಾಜು ರೂ ೯೨೩ ಕೋಟಿ (ಯು ಎಸ್ ಡಿ ೧೧೦ ಮಿಲಿಯನ್) ಮೌಲ್ಯದ ಯೋಜನೆಗಳನ್ನು ೨೮ ಮಾಲ್ಡೀವಿಯನ್ ದ್ವೀಪಗಳಲ್ಲಿ ಕೈಗೊಳ್ಳಲಾಗಿತ್ತು ಮತ್ತು ಭಾರತೀಯ ಲೈನ್ ಆಫ್ ಕ್ರೆಡಿಟ್ ಫೆಸಿಲಿಟಿ (ಎಲ್‌ಒಸಿ) ಅಡಿಯಲ್ಲಿ ಇದನ್ನು ನಿಯೋಜಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.
ಮಾಧ್ಯಮ ವರದಿಗಳಲ್ಲಿ ಹೇಳಿರುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಪತ್ರಿಕಾ ಪ್ರಕಟಣೆಯು ಯೋಜನೆಗಳ ಬಗ್ಗೆ ಇದೇ ರೀತಿಯ ವಿವರಗಳನ್ನು ಒದಗಿಸಿದೆ. ಪ್ರಾಜೆಕ್ಟ್‌ಗಳ ವರ್ಚುವಲ್ ಉದ್ಘಾಟನೆಯನ್ನು ಎಂಇಎ ಯ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಆಗಸ್ಟ್ ೧೦, ೨೦೨೪ ರಂದು ನೇರ ಪ್ರಸಾರ ಮಾಡಲಾಗಿತ್ತು ಮತ್ತು "ಮಾಲ್ಡೀವ್ಸ್‌ನ ೨೮ ದ್ವೀಪಗಳಲ್ಲಿ (ಆಗಸ್ಟ್ ೧೦, ೨೦೨೪) ನೀರು ಮತ್ತು ನೈರ್ಮಲ್ಯ ಯೋಜನೆಗಳ ವರ್ಚುವಲ್ ಉದ್ಘಾಟನೆ" ಎಂದು ಶೀರ್ಷಿಕೆ ನೀಡಲಾಗಿದೆ.
ಎಂಇಎ ಅಪ್‌ಲೋಡ್ ಮಾಡಿದ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಸ್ಕ್ರೀನ್‌ಶಾಟ್)
೨೮ ದ್ವೀಪಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಒದಗಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು, ಇದು ಸುಮಾರು ೨೮,೨೯೮ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಹಾಗು ಏಳು ಪ್ರತಿಶತದಷ್ಟು ಜನಸಂಖ್ಯೆಯನ್ನು ಒಳಗೊಂಡಿದೆ ಎಂದು ಮಾಲ್ಡೀವ್ಸ್ ಪ್ರೆಸಿಡೆಂಟ್ ಕಚೇರಿಯ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಎಕ್ಸಿಮ್ ಬ್ಯಾಂಕ್ಸ್ ಲೈನ್ಸ್ ಆಫ್ ಕ್ರೆಡಿಟ್ (ಎಲ್‌ಒಸಿ) ಅಡಿಯಲ್ಲಿ ಮಾಲ್ಡೀವ್ಸ್‌ನಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಮಾರ್ಚ್ ೨೦೧೯ ರಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಸಹಿ ಹಾಕಲಾದ ತಿಳುವಳಿಕಾ ಒಪ್ಪಂದದ (ಎಂಒಯು) ಈ ಯೋಜನೆಯ ಒಂದು ಭಾಗವಾಗಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಜೈಶಂಕರ್ ಅವರ ಹೇಳಿಕೆಗಳ ಕುರಿತು ಎಂಇಎ ಯ ಮತ್ತೊಂದು ಪತ್ರಿಕಾ ಪ್ರಕಟಣೆಯಲ್ಲಿ, "ಇಂದು ಮಾಲ್ಡೀವ್ಸ್‌ನ ಅಧ್ಯಕ್ಷರ ಕಚೇರಿಯಲ್ಲಿ ಇಂಡಿಯನ್ ಲೈನ್ ಆಫ್ ಕ್ರೆಡಿಟ್ ಮೂಲಕ ೨೮ ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಯೋಜನೆಗಳ ವರ್ಚುಯಲ್ ಉದ್ಘಾಟನೆ ಮತ್ತು ಹಸ್ತಾಂತರಕ್ಕೆ ಬಂದಿರುವುದು ನಿಜವಾಗಿಯೂ ತುಂಬಾ ಸಂತೋಷವಾಗಿದೆ," ಎಂದು ವರದಿಯಾಗಿದೆ.
ಇದಲ್ಲದೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಕಚೇರಿ ಹೊರಡಿಸಿದ ಪತ್ರಿಕಾ ಟಿಪ್ಪಣಿಯನ್ನು ನಾವು ಕಂಡುಕೊಂಡಿದ್ದೇವೆ, ಜೈಶಂಕರ್ ಅವರು ಆಗಸ್ಟ್ ೧೦ ರಂದು ಮಾಲ್ಡೀವ್ಸ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಮೂಸಾ ಜಮೀರ್ ಅವರಿಗೆ ೨೮ ದ್ವೀಪಗಳ ಪೂರ್ಣಗೊಂಡ ನೀರು ಮತ್ತು ನೈರ್ಮಲ್ಯ ಯೋಜನೆಗಳನ್ನು ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ ಎಂದು ವಿವರಿಸಲಾಗಿದೆ.
ಮುಯಿಝು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಯೋಜನೆಗಳ ಬಗ್ಗೆ ಪೋಷ್ಟ್ ಮಾಡಿದ್ದಾರೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಹಾಗು ಹೀಗೆ ಬರೆಯಲಾಗಿದೆ "ಇಂದು @DrSJaishankar ಅವರನ್ನು ಭೇಟಿ ಮಾಡಲು ಮತ್ತು ಮಾಲ್ಡೀವ್ಸ್‌ನ ೨೮ ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ಯೋಜನೆಗಳ ಅಧಿಕೃತ ಹಸ್ತಾಂತರದಲ್ಲಿ ಅವರೊಂದಿಗೆ ಸೇರಲು ಸಂತೋಷವಾಗಿದೆ. ನಾನು ಅವರಿಗೆ ಧನ್ಯವಾದಗಳು ಭಾರತ ಸರ್ಕಾರ, ವಿಶೇಷವಾಗಿ ಪ್ರಧಾನ ಮಂತ್ರಿ @narendramodi ಯಾವಾಗಲೂ ಮಾಲ್ಡೀವ್ಸ್ ಅನ್ನು ಬೆಂಬಲಿಸುತ್ತಿದ್ದಾರೆ."
ಮಾಲ್ಡೀವಿಯನ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್)
ತೀರ್ಪು
ಭಾರತ ಮತ್ತು ಮಾಲ್ಡೀವಿಯನ್ ಸರ್ಕಾರಗಳ ಮಾಧ್ಯಮ ವರದಿಗಳು ಮತ್ತು ಪತ್ರಿಕಾ ಪ್ರಕಟಣೆಗಳು ಭಾರತವು ೨೮ ದ್ವೀಪಗಳಲ್ಲಿ ಪೂರ್ಣಗೊಂಡ ನೀರು ಮತ್ತು ನೈರ್ಮಲ್ಯ ಯೋಜನೆಗಳನ್ನು ಮಾಲ್ಡೀವ್ಸ್‌ಗೆ ಹಸ್ತಾಂತರಿಸಿದೆ ಎಂದು ಖಚಿತಪಡಿಸುತ್ತದೆ. ಮಾಲ್ಡೀವ್ಸ್‌ನ ೨೮ ದ್ವೀಪಗಳನ್ನು ಭಾರತ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂಬ ಹೇಳಿಕೆಯು ತಪ್ಪು.
Read this fact-check in English here.