ಮುಖಪುಟ ಇಲ್ಲ, ಬಿಜೆಪಿ ಜೊತೆ ಟಿಡಿಪಿ ಮೈತ್ರಿ ತಾತ್ಕಾಲಿಕ ಎಂದು ಚಂದ್ರಬಾಬು ನಾಯ್ಡು ಹೇಳಿಲ್ಲ

ಇಲ್ಲ, ಬಿಜೆಪಿ ಜೊತೆ ಟಿಡಿಪಿ ಮೈತ್ರಿ ತಾತ್ಕಾಲಿಕ ಎಂದು ಚಂದ್ರಬಾಬು ನಾಯ್ಡು ಹೇಳಿಲ್ಲ

ಮೂಲಕ: ರೋಹಿತ್ ಗುಟ್ಟಾ

ಮಾರ್ಚ್ 28 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಬಿಜೆಪಿ ಜೊತೆ ಟಿಡಿಪಿ ಮೈತ್ರಿ ತಾತ್ಕಾಲಿಕ ಎಂದು ಚಂದ್ರಬಾಬು ನಾಯ್ಡು ಹೇಳಿಲ್ಲ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಬಿಜೆಪಿಯೊಂದಿಗೆ ಟಿಡಿಪಿಯ ಮೈತ್ರಿಯು 'ತಾತ್ಕಾಲಿಕವಾಗಿದೆ' ಎಂದು ಹೇಳಿಕೊಂಡು ಚಂದ್ರಬಾಬು ನಾಯ್ಡು ಅವರು ಬರೆದಿರುವ ಸುಳ್ಳು ಪತ್ರದಿಂದ ಈ ಹೇಳಿಕೆ ಉದ್ಭವಿಸಿದೆ.

ಹೇಳಿಕೆ ಏನು?
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಒಳಗೊಂಡ ೧೧ ಸೆಕೆಂಡುಗಳ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ನಾಯ್ಡು ಅವರು ಭಾರತೀಯ ಜನತಾ ಪಕ್ಷದೊಂದಿಗಿನ (ಬಿಜೆಪಿ) ಮೈತ್ರಿಯನ್ನು 'ತಾತ್ಕಾಲಿಕ' ಮತ್ತು ಕೇವಲ ಮುಂಬರುವ ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಯವರಗೆ ಮಾತ್ರ ಎಂದು ಹೇಳಲಾಗಿದೆ. 

ವೀಡಿಯೋದಲ್ಲಿ ನಾಯ್ಡು ಅವರು ತೆಲುಗಿನಲ್ಲಿ ಮಾತನಾಡುತ್ತಿದ್ದು, "ನನಗೆ ಕೇಂದ್ರ ಸರ್ಕಾರ ಬೇಕು, ಮತ್ತು ಅವರು (ಬಿಜೆಪಿ) ಮೈತ್ರಿಗಾಗಿ ನಮ್ಮನ್ನು ಸಂಪರ್ಕಿಸಿದಾಗ, ನಾನು ಒಪ್ಪಿಕೊಂಡೆ. ನಾನು ಮೈತ್ರಿ ಕೇಳಲು ಹೋಗಲಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ಈ ವೀಡಿಯೋದ ಶೀರ್ಷಿಕೆಯು, "ನಿನ್ನೆ ಅವರು ಮೈತ್ರಿ ತಾತ್ಕಾಲಿಕ ಮತ್ತು ಕೇವಲ ೨ ತಿಂಗಳು ಮಾತ್ರ ಎಂದು ಹೇಳಿದರು, ಇಂದು ಅವರು ಮತ್ತೆ ಮೈತ್ರಿ ಬಯಸಿದ @BJP4Andhra ಎಂದು ಹೇಳುತ್ತಿದ್ದಾರೆ ಮತ್ತು ಅವರ ನಷ್ಟಕ್ಕೆ @BJP4India ಅನ್ನು ದೂಷಿಸಲು ಸಿದ್ಧರಾಗಿದ್ದಾರೆ.(ಕನ್ನಡಕ್ಕೆ ಅನುವಾದಿಸಲಾಗಿದೆ)" ಈ ಪೋಷ್ಟ್  ಮೈತ್ರಿ ಬಗ್ಗೆ ನಾಯ್ಡು ಅವರು ಇಂತಹ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ವ್ಯಾಪಕವಾಗಿ ನಂಬಲಾಗಿದೆ ಎಂದು ಸೂಚಿಸುತ್ತದೆ. ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಗಮನಾರ್ಹವಾಗಿ, ಟಿಡಿಪಿಯು ಬಿಜೆಪಿ ಮತ್ತು ನಟ-ರಾಜಕಾರಣಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (ಜೆಎಸ್‌ಪಿ) ಯೊಂದಿಗೆ ಮೈತ್ರಿಯನ್ನು ಘೋಷಿಸಿದೆ, ಆಂಧ್ರಪ್ರದೇಶದಲ್ಲಿ ಮುಂಬರುವ ಚುನಾವಣೆಗೆ ಮೇ ೧೩, ೨೦೨೪ ರಂದು ನದಿಯಲಿದೆ. ಈ ಒಕ್ಕೂಟವು ಆಡಳಿತದ-ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಿರುದ್ಧ ಸ್ಪರ್ಧಿಸಲಿದೆ. 

ವೈರಲ್  ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ನಾಯ್ಡು ಅವರನ್ನು ಒಳಗೊಂಡಿರುವ ವೀಡಿಯೋ ಸತ್ಯವಾಗಿದ್ದರು, ನಾಯ್ಡು ಅವರು ಮೈತ್ರಿಯನ್ನು "ತಾತ್ಕಾಲಿಕ" ಎಂದು ಘೋಷಿಸಿದ್ದಾರೆ ಎಂಬ ಹೇಳಿಕೆಯು ಆಂಧ್ರದ ರಾಜಕಾರಣಿ ಬರೆದಿದ್ದಾರೆ ಎಂದು ಹೇಳಲಾದ ಬಹಿರಂಗ ಪತ್ರದಂತೆ ಪ್ರಸಾರವಾದ ನಕಲಿ ದಾಖಲೆಯಿಂದ ಹುಟ್ಟಿಕೊಂಡಿದೆ.

ನಾವು ಕಂಡುಹಿಡಿದದ್ದು ಏನು?
ಬಿಜೆಪಿ ಮತ್ತು ಟಿಡಿಪಿ ನಡುವಿನ ಮೈತ್ರಿಯ ಕ್ಷಣಿಕ ಸ್ವರೂಪದ ಬಗ್ಗೆ ನಾಯ್ಡು ಅವರ ಹೇಳಿಕೆಯನ್ನು ನಾವು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಆದರೆ, ಈ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಕಂಡುಬಂದಿಲ್ಲ. ಬದಲಿಗೆ, ನಮ್ಮ ಗಮನವನ್ನು ನಾಯ್ಡು ಅವರು ಬರೆದ ಮತ್ತು ಅವರ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಪತ್ರದ ಕಡೆಗೆ ನಿರ್ದೇಶಿಸಿತು.

ವೈರಲ್ ಪತ್ರದಲ್ಲಿ, ನಾಯ್ಡು ಅವರು ಮೈತ್ರಿಯ ನಿಯಮಗಳನ್ನು ವಿವರಿಸಿದ್ದಾರೆ, ಚುನಾವಣೆಯವರೆಗೆ ಅದರ ಅವಧಿಯನ್ನು ಪ್ರತಿಪಾದಿಸಿದ್ದಾರೆ ಮತ್ತು ನೀರಾವರಿ ಯೋಜನೆಗಳಿಗೆ ಅಸಮರ್ಪಕ ಹಣ, ವಿಶೇಷ ವರ್ಗದ ಸ್ಥಾನಮಾನವನ್ನು ನೀಡುವಲ್ಲಿ ವಿಫಲತೆ ಸೇರಿದಂತೆ ಆಂಧ್ರಪ್ರದೇಶಕ್ಕೆ ಗ್ರಹಿಸಿದ ಅನ್ಯಾಯಗಳಿಗೆ ಬಿಜೆಪಿಯನ್ನು ಹೊಣೆಗಾರರನ್ನಾಗಿ ಮಾಡುವ ಅವರ ಉದ್ದೇಶವಾಗಿದೆ. ರಾಜ್ಯ, ಮತ್ತು ಹೊಸ ರಾಜಧಾನಿಯ ಅಭಿವೃದ್ಧಿಗೆ ಸಾಕಷ್ಟು ಬೆಂಬಲವಿಲ್ಲ. ಬಿಜೆಪಿ ಆಂಧ್ರಪ್ರದೇಶದ ಹಿತಾಸಕ್ತಿಗೆ ದ್ರೋಹ ಬಗೆದಿದೆ ಎಂದು ನಾಯ್ಡು ಆರೋಪಿಸಿದ್ದಾರೆ.

ಆರಂಭದಲ್ಲಿ, ನಾವು ಸುದ್ದಿ ವರದಿಗಳಿಗಾಗಿ ಹುಡುಕಿದೆವು ಮತ್ತು ಅವರು ನಿಜವಾಗಿಯೂ ಅಂತಹ ಪತ್ರವನ್ನು ಬರೆದಿದ್ದಾರೆಯೇ ಎಂದು ಪರಿಶೀಲಿಸಲು ನಾಯ್ಡು ಮತ್ತು ಟಿಡಿಪಿ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದ್ದೇವೆ. ಆದರೆ, ಅಂತಹ ಯಾವುದೇ ವರದಿಗಳು ಅಥವಾ ಪೋಷ್ಟ್ ಗಳು ಕಂಡುಬಂದಿಲ್ಲ.

ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಟಿಡಿಪಿ ಬೆಂಬಲಿಗರಿಗೆ ನಾಯ್ಡು ಬರೆದ ಸಂದೇಶ ಎಂದು ಹಂಚಿಕೊಂಡ ಪತ್ರ (ಮೂಲ: ಫೇಸ್‌ಬುಕ್)

ಉದ್ದೇಶಿತ ಪತ್ರವು ಹಲವಾರು ಕಾಗುಣಿತ ದೋಷಗಳನ್ನು ಪ್ರದರ್ಶಿಸಿದೆ. ಹೆಚ್ಚುವರಿಯಾಗಿ, ಲೆಟರ್‌ಹೆಡ್‌ನಲ್ಲಿರುವ ದಿನಾಂಕವನ್ನು ೨೦-೨೩-೨೦೨೪ ಎಂದು ಪಟ್ಟಿ ಮಾಡಲಾಗಿದೆ, ಇದು ಸಂಭವನೀಯ ಟ್ಯಾಂಪರಿಂಗ್ ಅನ್ನು ಸೂಚಿಸುತ್ತದೆ.

ಇದಲ್ಲದೆ, ನಾವು ವೈರಲ್ ಲೆಟರ್‌ಹೆಡ್ ಅನ್ನು ಪಕ್ಷವು ನೀಡಿದ ಅಧಿಕೃತ ಲೆಟರ್‌ಹೆಡ್‌ನೊಂದಿಗೆ ಹೋಲಿಸಿದ್ದೇವೆ, ವಿವಿಧ ವ್ಯತ್ಯಾಸಗಳನ್ನು ಗುರುತಿಸಬಹುದು. 

ವ್ಯತ್ಯಾಸ ೧: ಲೆಟರ್‌ಹೆಡ್‌ನಲ್ಲಿ ಫಾಂಟ್
ಉದ್ದೇಶಿತ ಲೆಟರ್‌ಹೆಡ್‌ನ ಮೇಲಿನ ಬಲಭಾಗದಲ್ಲಿರುವ ವಿಳಾಸ ವಿಭಾಗದಲ್ಲಿ ಬಳಸಲಾದ ಫಾಂಟ್ ಅಧಿಕೃತ ಲೆಟರ್‌ಹೆಡ್‌ಗಿಂತ ಭಿನ್ನವಾಗಿದೆ.  ವಿಳಾಸದ ಅಂತಿಮ ಸಾಲು ಮತ್ತು ಹೆಡರ್ ನಡುವಿನ ಅಂತರವು ಅಧಿಕೃತ ಆವೃತ್ತಿಯಿಂದ ಗಮನಾರ್ಹವಾಗಿ ಬದಲಾಗಿದೆ.

ವೈರಲ್ ಲೆಟರ್‌ಹೆಡ್ ಮತ್ತು ಮೂಲ ಲೆಟರ್‌ಹೆಡ್ ನಡುವಿನ ಹೋಲಿಕೆ (ಮೂಲ: ಫೇಸ್‌ಬುಕ್)

ವ್ಯತ್ಯಾಸ ೨: ಪಕ್ಷದ ಚಿಹ್ನೆ
ಟಿಡಿಪಿಯ ಲಾಂಛನದ ಚಿತ್ರಣದಲ್ಲಿನ ವ್ಯತ್ಯಾಸಗಳನ್ನು ಸಹ ಗುರುತಿಸಲಾಗಿದೆ. ಹಳದಿ ಧ್ವಜವು ಅಧಿಕೃತ ಲೆಟರ್‌ಹೆಡ್‌ನಲ್ಲಿ ಸ್ವಲ್ಪ ಓರೆಯಾಗಿ ಕಂಡುಬಂದಿದೆ, ವೈರಲ್ ಪತ್ರದಲ್ಲಿ ವಿವರ ಇಲ್ಲ. ಇದಲ್ಲದೆ, ಲಾಂಛನದ ಕೆಂಪು ಚಕ್ರದೊಳಗೆ ಜಾಗವನ್ನು ತುಂಬುವ ಬಣ್ಣವು ಎರಡು ಆವೃತ್ತಿಗಳಲ್ಲಿ ಭಿನ್ನವಾಗಿದೆ - ವೈರಲ್ ಲೆಟರ್‌ಹೆಡ್ ಹಳದಿ ಫಿಲ್ ಅನ್ನು ಹೊಂದಿದ್ದು, ಧ್ವಜದ ವರ್ಣದೊಂದಿಗೆ ಮಿಶ್ರಣವಾಗಿದೆ. ಮತ್ತು ಅಧಿಕೃತ ಲೆಟರ್‌ಹೆಡ್‌ನಲ್ಲಿ ಧ್ವಜವನ್ನು ಭದ್ರಪಡಿಸುವ ದಾರವು ಅದರ ಕೆಳಗೆ ಮೊದಲ ಹಾಗು ಎರಡನೆಯ ತೆಲುಗು ಅಕ್ಷರಗಳನ್ನು ಛೇದಿಸಿವೆ. ಇದಕ್ಕೆ ವಿರುದ್ಧವಾಗಿ, ಪ್ರಸಾರವಾದ ಲೆಟರ್‌ಹೆಡ್‌ನಲ್ಲಿ, ಇದು ಆರಂಭಿಕ ಅಕ್ಷರದ ಮಧ್ಯದಲ್ಲಿ ಕತ್ತರಿಸಲ್ಪಟ್ಟಿದೆ.

ವೈರಲ್ ಲೆಟರ್‌ಹೆಡ್ ಮತ್ತು ಮೂಲ ಲೆಟರ್‌ಹೆಡ್ ನಡುವಿನ ಹೋಲಿಕೆ (ಮೂಲ: ಫೇಸ್‌ಬುಕ್)

ಈ ಅಸಂಗತತೆಗಳು  ಹಂಚಿಕೊಳ್ಳಲಾದ ಪತ್ರವು ಸುಳ್ಳು ಎಂದು ಬಲವಾಗಿ ಸೂಚಿಸುತ್ತವೆ ಮತ್ತು ಟಿಡಿಪಿ-ಬಿಜೆಪಿ ಮೈತ್ರಿಯ ಆಪಾದಿತ ತಾತ್ಕಾಲಿಕ ಸ್ವರೂಪದ ಬಗ್ಗೆ ನಾಯ್ಡು ಅವರ ಉದ್ದೇಶಿತ ಹೇಳಿಕೆಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ. ಲಾಜಿಕಲಿ ಫ್ಯಾಕ್ಟ್ಸ್  ಈ ಹಿಂದೆ ನಾಯ್ಡು ಅವರು ಬರೆದಿದ್ದಾರೆ ಎಂದು ಹೇಳಲಾದ ಇದೇ ರೀತಿಯ ಪತ್ರಗಳನ್ನು ಫ್ಯಾಕ್ಟ್-ಚೆಕ್ ಮಾಡಿದೆ ಮತ್ತು ಅವುಗಳನ್ನು ಇಲ್ಲಿ ಹಾಗು ಇಲ್ಲಿ ಓದಬಹುದು.

ತೀರ್ಪು
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಬರೆದ ಪತ್ರವೆಂದು ನಕಲಿ ಲೆಟರ್‌ಹೆಡ್ ಇರುವ ಚಿತ್ರವನ್ನು, ಬಿಜೆಪಿಯೊಂದಿಗೆ ಟಿಡಿಪಿಯ ಮೈತ್ರಿ ತಾತ್ಕಾಲಿಕವಾಗಿದೆ ಎಂದು ಹೇಳಲು ಹಂಚಿಕೊಳ್ಳಲಾಗಿದೆ. ಪರಿಣಾಮವಾಗಿ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ