ಮುಖಪುಟ ಇಲ್ಲ, ಹರಳೆಣ್ಣೆಯು ಗೆಡ್ಡೆಗಳು, ಮೂಳೆ ಸ್ಪರ್ಸ್ ಮತ್ತು ಗರ್ಭಾಶಯದ ಫೈಬ್ರಾಯ್ಡ್‌ಗಳನ್ನು ಗುಣಪಡಿಸುವುದಿಲ್ಲ

ಇಲ್ಲ, ಹರಳೆಣ್ಣೆಯು ಗೆಡ್ಡೆಗಳು, ಮೂಳೆ ಸ್ಪರ್ಸ್ ಮತ್ತು ಗರ್ಭಾಶಯದ ಫೈಬ್ರಾಯ್ಡ್‌ಗಳನ್ನು ಗುಣಪಡಿಸುವುದಿಲ್ಲ

ಮೂಲಕ: ವಿವೇಕ್ ಜೆ

ಜುಲೈ 6 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಹರಳೆಣ್ಣೆಯು ಗೆಡ್ಡೆಗಳು, ಮೂಳೆ ಸ್ಪರ್ಸ್ ಮತ್ತು ಗರ್ಭಾಶಯದ ಫೈಬ್ರಾಯ್ಡ್‌ಗಳನ್ನು ಗುಣಪಡಿಸುವುದಿಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಹರಳೆಣ್ಣೆ ಟ್ಯೂಮರ್ ಮತ್ತು ಸ್ತನ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂದು ಹೇಳಲು ಯಾವುದೇ ವೈಜ್ಞಾನಿಕವಾಗಿ ಸಾಬೀತಾಗಿರುವ ಪುರಾವೆಗಳಿಲ್ಲ.

ಸಂದರ್ಭ

ಹರಳೆಣ್ಣೆಯ ಕಂಪ್ರೆಸ್ಸ್ ಗಳು (ಬಟ್ಟೆಯ ತುಂಡು ಅಥವಾ ಹರಳೆಣ್ಣೆಯಲ್ಲಿ ನೆನೆಸಿದ ಪ್ಯಾಕ್) ಅನ್ನು "ದೇಹದಲ್ಲಿ ಕಂಡುಬರುವ ಉಂಡೆಗಳು, ಉಬ್ಬುಗಳು, ದಟ್ಟಣೆಗಳು, ಅಂಟಿಕೊಳ್ಳುವಿಕೆ ಮತ್ತು ಮೂಳೆಗಳ ಸ್ಪರ್ಸ್" ವಿರುದ್ಧ ಪರಿಣಾಮಕಾರಿ ಚಿಕಿತ್ಸೆಯಾಗಿ ಬಳಸಬಹುದು ಎಂದು ಫೇಸ್‌ಬುಕ್‌ ನಲ್ಲಿ ಹಂಚಿಕೊಂಡ ವೀಡಿಯೋವೊಂದು ಹೇಳುತ್ತದೆ. ಈ ವೀಡಿಯೋ ಹರಳೆಣ್ಣೆಯ ಬಳಕೆಯು ಟ್ಯೂಮರ್ ಗಳು , ಉಬ್ಬುಗಳು ಮತ್ತು ಸ್ತನ ಕ್ಯಾನ್ಸರ್ ವಿರುದ್ಧ ಬಳಸಬಹುದು ಎಂದು ಕೂಡ ಸೂಚಿಸುತ್ತದೆ. ೧೪೦,೦೦ ಕ್ಕೂ ಹೆಚ್ಚು ಜನರು ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಆದರೆ, ಈ ವೀಡಿಯೋದಲ್ಲಿನ ಹೇಳಿಕೆಗಳನ್ನು ಯಾವುದೇ ವೈದ್ಯಕೀಯ ಪುರಾವೆಗಳು ಬೆಂಬಲಿಸುವುದಿಲ್ಲ.

ವಾಸ್ತವವಾಗಿ

ವೀಡಿಯೋವಿನ ಸ್ಕ್ರೀನ್‌ಶಾಟ್‌ನ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ “ಲಿವಿಂಗ್ ಸ್ಪ್ರಿಂಗ್ಸ್ ರಿಟ್ರೀಟ್” ಹೆಸರಿನ ಚಾನಲ್‌ನಿಂದ ಫೆಬ್ರವರಿ ೨, ೨೦೧೮ ರಂದು ಯೂಟ್ಯೂಬ್ ಗೆ ಅಪ್‌ಲೋಡ್ ಮಾಡಲಾದ ಹೆಚ್ಚು ವಿಸ್ತೃತ ಆವೃತ್ತಿ ನಮಗೆ ಕಂಡುಬಂತು. ವೀಡಿಯೋದಲ್ಲಿ ೧೩.೩೪ ನಿಮಿಷದ ಸಮಯದಲ್ಲಿ, ಕಂಪ್ರೆಸ್ಸ್ ಗಳು ಗರ್ಭಾಶಯದ ಫೈಬ್ರಾಯ್ಡ್‌ಗಳನ್ನು ಗುಣಪಡಿಸಬಹುದು ಎಂದು ಕೂಡ ಹೇಳಿಕೊಳ್ಳುತ್ತಾರೆ.

ಯೌಟ್ಯೂಬ್ ವೀಡಿಯೋದ ವಿವರಣೆ ಪೆಟ್ಟಿಗೆಯು ಹರಳೆಣ್ಣೆ ಬಳಕೆಯನ್ನು ಪ್ರದರ್ಶಿಸುವ ವ್ಯಕ್ತಿ ಬಾರ್ಬರಾ ಓ'ನೀಲ್ ಎಂದು ಸೂಚಿಸಿದೆ. ಅವರು ನೋಂದಾಯಿಸದ ವೈದ್ಯರಾಗಿದ್ದು, ಅವರು ನರರೋಗ ಚಿಕಿತ್ಸೆ, ಪೌಷ್ಟಿಕತಜ್ಞ ಸಲಹೆಗಳು ಹಾಗು ಆರೋಗ್ಯ ಶಿಕ್ಷಣತಜ್ಞರಾಗಿ ಸೇವೆಗಳನ್ನು ಒದಗಿಸಿ ಬಂದಿದ್ದಾರೆ ಎಂದು ಕೂಡ ಕಂಡುಬಂದಿದೆ. ೨೦೧೯ ರಲ್ಲಿ ನ್ಯೂ ಸೌತ್ ವೇಲ್ಸ್ ಹೆಲ್ತ್ ಕೇರ್ ಕಂಪ್ಲೇಂಟ್ಸ್ ಕಮಿಷನ್ (ಎಚ್‌ಸಿಸಿಸಿ) ನಡೆಸಿದ ತನಿಖೆಯು "ಶಿಶು ಪೋಷಣೆ, ಕಾರಣಗಳು ಮತ್ತು ಕ್ಯಾನ್ಸರ್, ಪ್ರತಿಜೀವಕಗಳು ಮತ್ತು ವ್ಯಾಕ್ಸಿನೇಷನ್‌ಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಓ'ನೀಲ್ ಸಂಶಯಾಸ್ಪದ ಮತ್ತು ಅಪಾಯಕಾರಿ ಆರೋಗ್ಯ ಸಲಹೆಗಳನ್ನು ನೀಡಿದ್ದಾರೆ " ಎಂದು ಘೋಷಿಸಿತು. ಸೆಪ್ಟೆಂಬರ್ ೨೪, ೨೦೧೯ ರಂದು ಹೆಚ್‌ಸಿಸಿಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಓ'ನೀಲ್ ಆರೋಗ್ಯ ಸೇವೆಗಳನ್ನು ಒದಗಿಸುವುದನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ ಮತ್ತು ಆಕೆಯ ಆಯ್ದ ಮಾಹಿತಿಯ ವಿತರಣೆಯು ಜನರಿಗೆ ಅಪಾಯಕಾರಿ ಎಂದು ಗುರುತಿಸಲಾಗಿದೆ ಎಂದು ಹೇಳುತ್ತದೆ.

ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ ಡಿ ಎ) ಹರಳೆಣ್ಣೆ ಕೇವಲ ಸುರಕ್ಷಿತ ಮತ್ತು ಉತ್ತೇಜಕ ವಿರೇಚಕವಾಗಿ ಪರಿಣಾಮಕಾರಿಯಾಗಿದೆ ಎಂದು ಸೂಚಿಸುತ್ತದೆ. ಹರಳೆಣ್ಣೆ ಕರುಳಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡುವ ಸಾಂದರ್ಭಿಕ ಮಲಬದ್ಧತೆಗೆ ಚಿಕಿತ್ಸೆ ನೀಡುತ್ತದೆ ಎಂದು ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಟಿಸಿದ ಲೇಖನವು ಹೇಳುತ್ತದೆ. ಆದರೆ ಅಲರ್ಜಿಯ ಪ್ರತಿಕ್ರಿಯೆಗಳು, ಅತಿಸಾರ, ವಾಕರಿಕೆ, ಹೊಟ್ಟೆ ನೋವು ಮತ್ತು ವಾಂತಿಯಂತಹ ಅಡ್ಡಪರಿಣಾಮಗಳನ್ನು ವರದಿ ಮಾಡಿರುವುದರಿಂದ ಈ ಔಷಧಿಯನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ತೆಗೆದುಕೊಳ್ಳಬೇಕು. ಹೊಟ್ಟೆ, ಕರುಳಿನ ಸಮಸ್ಯೆಗಳು ಅಥವಾ ಗರ್ಭಧಾರಣೆಯಂತಹ ಪೂರ್ವನಿರ್ಧರಿತ ಆರೋಗ್ಯ ಪರಿಸ್ಥಿತಿಗಳು ಇದ್ದಲ್ಲಿ ತೈಲವನ್ನು ತೆಗೆದುಕೊಳ್ಳುವ ಮೊದಲು ವೈದ್ಯರಿಗೆ ತಿಳಿಸಬೇಕು ಎಂದು ಕೂಡ ಎಫ್.ಡಿ.ಎ ಸ್ಪಷ್ಟಪಡಿಸಿದೆ. ಯು.ಎಸ್. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಡ್ರಗ್ ಡೇಟಾಬೇಸ್‌ನ ಡೈಲಿ ಮೆಡ್‌ನ ಮಾಹಿತಿಯು ಪ್ರಿಸ್ಕ್ರಿಪ್ಷನ್ ಇಲ್ಲದೆ ಲಭ್ಯವಾಗುವ ರೆಕ್ಸಾಲ್‌ಗೆ ಇದೇ ರೀತಿಯ ಶಿಫಾರಸುಗಳನ್ನು ಸೂಚಿಸುತ್ತದೆ.

ಇದಲ್ಲದೆ, ಹರಳೆಣ್ಣೆ ಕ್ಯಾನ್ಸರ್ ಅಥವಾ ಟ್ಯೂಮರ್ ಗಳಿಗೆ ಚಿಕಿತ್ಸೆ ನೀಡಬಲ್ಲದು ಎಂಬುದನ್ನು ದೃಢೀಕರಿಸುವ ಯಾವುದೇ ಕ್ಲಿನಿಕಲ್ ವೈಜ್ಞಾನಿಕ ಅಧ್ಯಯನಗಳು ನಮಗೆ ಕಂಡುಬಂದಿಲ್ಲ. ೨೦೦೭ ರಲ್ಲಿ ಅಮೇರಿಕನ್ ಕಾಲೇಜ್ ಆಫ್ ಟಾಕ್ಸಿಕಾಲಜಿ ತನ್ನ ಅಂತಿಮ ವರದಿಯಲ್ಲಿ ಪ್ರಕಟಿಸಿದ ಅಧ್ಯಯನವು "ಪುರುಷ ಕುನ್ಮಿಂಗ್ ಇಲಿಗಳಲ್ಲಿನ ARS ಅಸ್ಸೈಟ್ಸ್ ಕ್ಯಾನ್ಸರ್ ಹಾಗು ಎಸ್೧೮೦ ದೇಹದ ಟ್ಯೂಮರ್ ಮೇಲೆ ಹರಳೆಣ್ಣೆ ಸಾರವು ಪ್ರಬಲವಾದ ನಿಗ್ರಹ ಪರಿಣಾಮವನ್ನು ಹೊಂದಿದೆ," ಈ ಸಂಶೋಧನೆಗಳನ್ನು ಮಾನವರಿಗೆ ಸಾಮಾನ್ಯೀಕರಿಸಲಾಗುವುದಿಲ್ಲ.

ತೀರ್ಪು

ವೈದ್ಯಕೀಯ ಅಭ್ಯಾಸ ಮಾಡುವುದನ್ನು ನಿಷೇಧಿಸಿರುವ ನೋಂದಾಯಿತ ವೈದ್ಯರಿಂದ ಈ ಹೇಳಿಕೆಯನ್ನು ಹಂಚಿಕೊಳ್ಳಲಾಗಿದೆ. ಹರಳೆಣ್ಣೆ ಟ್ಯೂಮರ್ ಗಳು, ಮೂಳೆ ಸ್ಪರ್ಸ್, ದೇಹದಲ್ಲಿ ಕಂಡುಬರುವ ಚೀಲಗಳು ಮತ್ತು ಗರ್ಭಾಶಯದ ಫೈಬ್ರಾಯ್ಡ್‌ಗಳನ್ನು ಗುಣಪಡಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕವಾಗಿ ಸಾಬೀತಾಗಿರುವ ಪುರಾವೆಗಳಿಲ್ಲ. ಆದ್ದರಿಂದ ಈ ಹೇಳಿಕೆಯನ್ನು ನಾವು ತಪ್ಪು ಎಂದು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ