ಮೂಲಕ: ಅಂಕಿತಾ ಕುಲಕರ್ಣಿ
ಜೂನ್ 28 2023
೨,೦೦೦ ಕ್ಕಿಂತ ಕಡಿಮೆ ಮತಗಳ ಗೆಲುವಿನ ಅಂತರ ಕೇವಲ ೧೨ ಕ್ಷೇತ್ರಗಳಲ್ಲಿ ಕಂಡುಬಂದಿದೆ. ಈ ಪೈಕಿ ಬಿಜೆಪಿ ಏಳು ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಐದನ್ನು ಗೆದ್ದಿದೆ.
ಸಂದರ್ಭ
೨೦೨೩ ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಿ, ಕಾಂಗ್ರೆಸ್ ೨೨೪ ಸ್ಥಾನಗಳಲ್ಲಿ ೧೩೫ ಸ್ಥಾನಗಳನ್ನು ಗೆದ್ದು ನವ ಸರ್ಕಾರವನ್ನು ರಚಿಸಲಿದೆ, ಹಾಗು ಬಿಜೆಪಿ ೬೬ ಸ್ಥಾನಗಳನ್ನು ಗೆದ್ದಿದೆ. ಮೇ ೧೮ ರಂದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಮತ್ತು ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಳಕೆದಾರರು ಬಿಜೆಪಿ ೨೦೦೦ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ೫೮ ಸ್ಥಾನಗಳನ್ನು ಕಳೆದುಕೊಂಡಿದ್ದು, ೧೦೦೦ ಮತಗಳ ಅಂತರದಲ್ಲಿ ೪೧ ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ. ಅಂತಹ ಪೋಷ್ಟ್ ವೊಂದರ ಶೀರ್ಷಿಕೆ ಕನ್ನಡಕ್ಕೆ ಅನುವಾದಿಸಿದಾಗ , "ಹೆಚ್ಚಿನ H ಗಳು ನಾಗರಿಕತೆಗೆ ಬೆದರಿಕೆಯನ್ನು ಎಲ್ಲಿಯೂ ಕಾಣುತ್ತಿಲ್ಲ, ಹಿಂದೂಗಳಿಗೆ ನಂಬಿಕೆಯು ದ್ವಿತೀಯ ಪ್ರಾಮುಖ್ಯ ಮತ್ತು ವಸ್ತು ಪ್ರಯೋಜನ ಮೊದಲಾಗಿದೆ ಆದ್ದರಿಂದ, ಫ್ರೀಬೀಸ್ ರಾಕ್!" ಪೋಷ್ಟ್ ೩೪,೦೦೦ ವೀಕ್ಷಣೆಗಳನ್ನು ಮತ್ತು ೬೭೯ ಲೈಕ್‌ಗಳನ್ನು ಗಳಿಸಿದೆ. ಇದೆ ಹೇಳಿಕೆಯೊಂದಿಗೆ ಮತ್ತೊಂದು ಪೋಷ್ಟ್ ನಲ್ಲಿ ಕೋಮುವಾದದ ನಿರೂಪಣೆಯನ್ನು ಸೇರಿಸಲಾಗಿದೆ, "ಕರ್ನಾಟಕದ ಪ್ರತಿಯೊಬ್ಬ ಮುಸ್ಲಿಮರು ಎಲ್ಲಾ ಕೆಲಸಗಳನ್ನು ಬಿಟ್ಟು ಮೊದಲು ಮತ ಚಲಾಯಿಸಿದರು. ಕೆಲವು ಹಿಂದೂಗಳು ಚುನಾವಣಾ ದಿನವನ್ನು ರಜಾದಿನವೆಂದು ಪರಿಗಣಿಸಿ ತಮ್ಮ ವಿನಾಶವನ್ನು ಆಚರಿಸಿಕೊಂಡರು ಮತ್ತು ಮತ ಚಲಾಯಿಸಲು ಹೋಗಲಿಲ್ಲ."
ವಾಸ್ತವವಾಗಿ
ಭಾರತದ ಚುನಾವಣಾ ಆಯೋಗದ ಪ್ರಕಾರ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಅಂತರ ೨,೦೦೦ ಕ್ಕಿಂತ ಕಡಿಮೆ ಮತಗಳು ಇದ್ದದ್ದು ಕೇವಲ ೧೨ ಕ್ಷೇತ್ರಗಳಲ್ಲಿ.ಈ ಪೈಕಿ ೧,೦೦೦ ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದುಕೊಂಡರೆ, ಉಳಿದ ೭ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.
ಬಿಜೆಪಿ ಮುರೂ ಸ್ಥಾನಗಳನ್ನು ೧,೦೦೦ ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದು, ಉಳಿದ ನಾಲ್ಕು ಸ್ಥಾನಗಳನ್ನು ೧,೦೦೦ ದಿಂದ ೨,೦೦೦ ಮತಗಳ ಅಂತರದ ಒಳಗೆ ಗೆದ್ದಿದೆ. ಗೆಲುವಿನ ಅಂತರ ೨೦೦೦ಕ್ಕಿಂತ ಕಡಿಮೆ ಮತಗಳಿಸಿದ್ದ ಕ್ಷೇತ್ರಗಳ ಪಟ್ಟಿ ಇಲ್ಲಿದೆ.
ಬಿಜೆಪಿ ಗೆಲುವು:
ನರಗುಂದ - ಬಿಜೆಪಿ ೧,೭೯೧ ಮತಗಳ ಅಂತರದಿಂದ ಕಾಂಗ್ರೆಸ್ ಅನ್ನು ಸೋಲಿಸಿದೆ
ಹುಮನಾಬಾದ್ - ಬಿಜೆಪಿ ೧,೫೯೪ ಮತಗಳ ಅಂತರದಿಂದ ಕಾಂಗ್ರೆಸ್ ಅನ್ನು ಸೋಲಿಸಿದೆ
ಬೀದರ್ ದಕ್ಷಿಣ - ಬಿಜೆಪಿ ೧,೨೬೩ ಮತಗಳ ಅಂತರದಿಂದ ಕಾಂಗ್ರೆಸ್ ಅನ್ನು ಸೋಲಿಸಿತು
ಹಡಗಳ್ಳಿ - ಬಿಜೆಪಿ ೧,೪೪೪ ಮತಗಳ ಅಂತರದಿಂದ ಕಾಂಗ್ರೆಸ್ ಅನ್ನು ಸೋಲಿಸಿತು
ಚಿಂಚೋಳಿ - ಬಿಜೆಪಿ ೮೫೮ ಮತಗಳ ಅಂತರದಿಂದ ಕಾಂಗ್ರೆಸ್ ಅನ್ನು ಸೋಲಿಸಿತು
ಜಯನಗರ - ಬಿಜೆಪಿ ೧೬ ಮತಗಳ ಅಂತರದಿಂದ ಕಾಂಗ್ರೆಸ್ ಅನ್ನು ಸೋಲಿಸಿದೆ
ಕುಮಟಾ - ಬಿಜೆಪಿ ೬೭೬ ಮತಗಳ ಅಂತರದಿಂದ ಜೆಡಿಎಸ್‌ನ್ನು ಸೋಲಿಸಿದೆ
ಕಾಂಗ್ರೆಸ್ ಗೆಲುವು:
ಗಾಂಧಿನಗರ - ಕಾಂಗ್ರೆಸ್ ೧೦೫ ಮತಗಳ ಅಂತರದಿಂದ ಬಿಜೆಪಿಯನ್ನು ಸೋಲಿಸಿದೆ
ಜಗಳೂರು- ಕಾಂಗ್ರೆಸ್ ೮೭೪ ಮತಗಳ ಅಂತರದಿಂದ ಬಿಜೆಪಿಯನ್ನು ಸೋಲಿಸಿದೆ
ಮಾಲೂರು - ಕಾಂಗ್ರೆಸ್ ೨೪೮ ಮತಗಳ ಅಂತರದಿಂದ ಬಿಜೆಪಿಯನ್ನು ಸೋಲಿಸಿತು
ಮೂಡಿಗೆರೆ - ಕಾಂಗ್ರೆಸ್ ೭೨೨ ಮತಗಳ ಅಂತರದಿಂದ ಬಿಜೆಪಿಯನ್ನು ಸೋಲಿಸಿದೆ
ಶೃಂಗೇರಿ - ಕಾಂಗ್ರೆಸ್ ೨೦೧ ಮತಗಳ ಅಂತರದಿಂದ ಬಿಜೆಪಿಯನ್ನು ಸೋಲಿಸಿದೆ
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ೧೫೩ ಸ್ಥಾನಗಳಲ್ಲಿ ಗೆಲುವಿನ ಅಂತರ ೧೦,೦೦೦ ಮತಗಳಿಗಿಂತ ಹೆಚ್ಚಿತ್ತು. ಆ ಪೈಕಿ ಕಾಂಗ್ರೆಸ್ ಶೇ. ೬೫ ರಷ್ಟು ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಬಿಜೆಪಿ ಶೇ. ೨೪ ರಷ್ಟು ಸ್ಥಾನಗಳನ್ನು ಪಡೆದುಕೊಂಡಿದೆ.
ತೀರ್ಪು
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೇವಲ ೧೨ ಕ್ಷೇತ್ರಗಳಲ್ಲಿ ಗೆಲುವಿನ ಅಂತರ ೨,೦೦೦ ಮತಗಳಿಗಿಂತ ಕಡಿಮೆ ಇತ್ತು.ಈ ಪೈಕಿ ಬಿಜೆಪಿ ಏಳು ಮತ್ತು ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿವೆ. ಭಾರತದ ಚುನಾವಣಾ ಆಯೋಗದ ದಾಖಲೆಗಳು ವೈರಲ್ ಪೋಷ್ಟ್ ತಪ್ಪಾಗಿದೆ ಎಂದು ಸಾಬೀತುಪಡಿಸುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.