ಮುಖಪುಟ ಇಲ್ಲ, ಉಚ್ಚಾಟನೆಯ ನಂತರ ಭಾರತೀಯ ರಾಜಕಾರಣಿ ಮಹುವಾ ಮೊಯಿತ್ರಾ ಅವರನ್ನು ಸಂಸತ್ತಿನಿಂದ ಹೊರಗೆ ಎಳೆದು ಹಾಕಲಾಗಿಲ್ಲ

ಇಲ್ಲ, ಉಚ್ಚಾಟನೆಯ ನಂತರ ಭಾರತೀಯ ರಾಜಕಾರಣಿ ಮಹುವಾ ಮೊಯಿತ್ರಾ ಅವರನ್ನು ಸಂಸತ್ತಿನಿಂದ ಹೊರಗೆ ಎಳೆದು ಹಾಕಲಾಗಿಲ್ಲ

ಮೂಲಕ: ಉಮ್ಮೆ ಕುಲ್ಸುಮ್

ಡಿಸೆಂಬರ್ 19 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಉಚ್ಚಾಟನೆಯ ನಂತರ ಭಾರತೀಯ ರಾಜಕಾರಣಿ ಮಹುವಾ ಮೊಯಿತ್ರಾ ಅವರನ್ನು ಸಂಸತ್ತಿನಿಂದ ಹೊರಗೆ ಎಳೆದು ಹಾಕಲಾಗಿಲ್ಲ ಮಹುವಾ ಮೊಯಿತ್ರಾ ಅವರ ಉಚ್ಚಾಟನೆಯ ನಂತರ ಅವರನ್ನು ಸಂಸತ್ತಿನಿಂದ ಹೊರಗೆ ಎಳೆದು ಹಾಕುವುದನ್ನು ಈ ವೀಡಿಯೋ ತೋರಿಸುತ್ತದೆ ಎಂದು ಹೇಳಿಕೊಂಡು ಹಂಚಿಕೊಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಅಕ್ಟೋಬರ್‌ ನಲ್ಲಿ ಹೊಸದಿಲ್ಲಿಯ ಕೃಷಿ ಭವನದ ಮುಂದೆ ಧರಣಿ ಪ್ರತಿಭಟನೆಯ ನಂತರ ಮೊಯಿತ್ರಾ ಅವರನ್ನು ಪೊಲೀಸರು ಬಂಧಿಸಿದನ್ನು ಈ ವೀಡಿಯೋ ತೋರಿಸುತ್ತದೆ.

ಇಲ್ಲಿನ ಹೇಳಿಕೆ ಏನು?

ಪೊಲೀಸ್ ಸಿಬ್ಬಂದಿಯು ಭಾರತೀಯ ಸಂಸತ್ತಿನ ಸದ್ಯರಾದ ಮಹುವಾ ಮೊಯಿತ್ರಾ ಅವರನ್ನು ಎಳೆದುಕೊಂಡು ಹೋಗುತ್ತಿರುವ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರನ್ನು ದುಷ್ಕೃತ್ಯದ ಆರೋಪದ ಮೇಲೆ ಲೋಕಸಭೆಯಿಂದ (ಸಂಸತ್ತಿನ ಕೆಳಮನೆ) ಹೀಗೆ ಹೊರಹಾಕಲಾಯಿತು ಎಂಬುದನ್ನು ತೋರಿಸುತ್ತದೆ ಎಂದು ಹೇಳಲಾಗುತ್ತಿದೆ. ಎಕ್ಸ್‌ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಳ್ಳಲಾದ ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. ಪೋಲೀಸ್ ಸಿಬ್ಬಂದಿಯು ಬಲವಂತವಾಗಿ ಮೋಯಿತ್ರಾ ಅವರನ್ನು ಎತ್ತಿ ಎಳೆದುಕೊಂಡು ಹೋಗುವುದನ್ನು ತೋರಿಸುವ ಆ ವೀಡಿಯೋ ಫೇಸ್‌ಬುಕ್‌ನಲ್ಲಿಯೂ ಕೂಡ ಇದೇ ರೀತಿಯ ನಿರೂಪಣೆಯೊಂದಿಗೆ ಗಮನಾರ್ಹವಾಗಿ ಹಂಚಿಕೊಳ್ಳಲಾಗಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ.)

ಆನ್‌ಲೈನ್‌ನಲ್ಲಿ ಮಾಡಿದ  ಹೇಳಿಕೆಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ದುಬಾರಿ ಉಡುಗೊರೆಗಳು ಸೇರಿದಂತೆ ಲಂಚವನ್ನು ಸ್ವೀಕರಿಸಿದ್ದಾರೆ ಎಂದು ಮೊಯಿತ್ರಾ ಅವರ ವಿರುದ್ಧ ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದರು. ಸಂಸದೀಯ ನೀತಿಶಾಸ್ತ್ರ ಸಮಿತಿಯು ಮೊಯಿತ್ರಾ ಅವರನ್ನು ಉಚ್ಚಾಟಿಸುವಂತೆ ಶಿಫಾರಸು ಮಾಡಿತ್ತು, ಅದರ ನಂತರ ಅವರನ್ನು ಉಚ್ಚಾಟಿಸುವ ಪ್ರಸ್ತಾಪವನ್ನು ಅಂಗೀಕರಿಸಿದ ನಂತರ ಡಿಸೆಂಬರ್ ೮ ರಂದು ಮೊಯಿತ್ರಾ ಅವರನ್ನು  ಲೋಕಸಭೆಯಿಂದ ಅನರ್ಹಗೊಳಿಸಲಾಯಿತು.

ಮೊಯಿತ್ರಾ ಅವರನ್ನು ಉಚ್ಚಾಟಿಸಿದ ನಂತರ ಪೋಲೀಸ್ ಸಿಬ್ಬಂದಿ ಅವರನ್ನು ಸಂಸತ್ತಿನಿಂದ ಹೊರಗೆ ಎಳೆದು ಹಾಕಲಾಯಿತು ಎಂಬ ಪೋಷ್ಟ್ ಗಳು ಆಧಾರ ರಹಿತವಾಗಿವೆ. ಅಂತಹ ಹೇಳಿಕೆಗಳಿಗೆ ಪುರಾವೆಯಾಗಿ ಹಂಚಿಕೊಳ್ಳಲಾದ ವೀಡಿಯೋ ಅವರ ಉಚ್ಚಾಟಯ ಮೊದಲೇ ಸೆರೆಹಿಡಿಯಲಾಗಿತ್ತು. 

ಸತ್ಯಾಂಶಗಳು

ವೈರಲ್ ಕ್ಲಿಪ್‌ನ ಕೀಫ್ರೇಮ್‌ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಅಕ್ಟೋಬರ್ ೪ ರಂದು ನ್ಯೂಸ್ ಔಟ್‌ಲೆಟ್ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ಯೂಟ್ಯೂಬ್ ವೀಡಿಯೋಗೆ ನಮ್ಮನ್ನು ನಿರ್ದೇಶಿಸಿತು. ವೀಡಿಯೋ ವರದಿಯ ವಿವರಣೆಯಲ್ಲಿ ಮೊಯಿತ್ರಾ ಅವರನ್ನು ಇತರ ಟಿಎಂಸಿ ನಾಯಕರೊಡನೆ ಪ್ರತಿಭಟನೆಯ ಸಮಯದಲ್ಲಿ ಬಂಧಿಸಲಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಅದು ನವದೆಹಲಿಯ ಕೃಷಿ ಭವನದ ಒಳಗೆ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಭೇಟಿ ಮಾಡಲು ನಿರಾಕರಿಸಿದ ಸಮಯದಲ್ಲಿ ಸೆರೆಡಿಡಿಯಲಾದ ದೃಷ್ಯ ಎಂದು ಹೇಳಲಾಗಿದೆ. ಪಶ್ಚಿಮ ಬಂಗಾಳದ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, ೨೦೦೫ (ಎಂಎನ್‌ಆರ್‌ಇಜಿಎ) ಅಡಿಯಲ್ಲಿ ಬಾಕಿ ಇರುವ ಹುದ್ದೆಗಳ ಬಗ್ಗೆ ಚರ್ಚಿಸಲು ಟಿಎಂಸಿ ಮುಖಂಡರು ಸಚಿವರನ್ನು ಭೇಟಿಯಾಗುವಂತೆ ಕೋರಿದ್ದರು.

ಅಕ್ಟೋಬರ್ ೩ ರಂದು ಮೊಯಿತ್ರಾ ಅವರು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಇದೇ ವೀಡಿಯೋವನ್ನು ಹಂಚಿಕೊಂಡಿದ್ದರು. "ಭಾರತ ಸರ್ಕಾರದ ಸಚಿವರನ್ನು ಭೇಟಿ ಮಾಡಲು ಅಪಾಯಿಂಟ್‌ಮೆಂಟ್ ನೀಡಿದ ನಂತರ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾಯಿತ ಸಂಸದರಿಗೆ ನೀಡಿದ ಚಿಕಿತ್ಸೆ ಇದು, ನಮ್ಮನ್ನು ೩ ಗಂಟೆಗಳ ಕಾಲ ಕಾಯುವಂತೆ ಮಾಡಿದ ನಂತರ ಅದನ್ನು ಗೌರವಿಸಲು ನಿರಾಕರಿಸಿದರು (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ವೀಡಿಯೋ ಪೋಷ್ಟ್ ಗೆ ಶೀರ್ಷಿಕೆ ನೀಡಲಾಗಿದೆ.

ಹಲವಾರು ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳು ಘಟನೆಯ ಬಗ್ಗೆ ವರದಿ ಮಾಡಿದ್ದವು. ಹಿಂದೂಸ್ತಾನ್ ಟೈಮ್ಸ್ ಅಕ್ಟೋಬರ್ ೩ ರಂದು ಘಟನೆಯ ಕುರಿತು ವರದಿಯನ್ನು ಪ್ರಕಟಿಸಿದ್ದು, ವೈರಲ್ ಕ್ಲಿಪ್ ಮತ್ತು ಮಹುವಾ ಅವರ ಎಕ್ಸ್ ಪೋಷ್ಟ್ ನ  ಸ್ಕ್ರೀನ್‌ಶಾಟ್‌ಗಳನ್ನು ಹೊಂದಿದೆ.

ಮಹುವಾ ಮೊಯಿತ್ರಾ ಅವರ ಉಚ್ಚಾಟನೆಯ ಬಗ್ಗೆ

ನೈತಿಕ ಸಮಿತಿಯ ವರದಿಯ ಮೇಲೆ ಸಂಸತ್ತಿನಲ್ಲಿ ಚರ್ಚೆಯ ನಂತರ, ಮೊಯಿತ್ರಾ ಅವರನ್ನು ಸದನದಿಂದ ಅನರ್ಹಗೊಳಿಸಲಾಯಿತು. ನಂತರ ಅವರು ತಮ್ಮ ಉಚ್ಚಾಟನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು ಮತ್ತು ಅವರ  ವಿಷಯವನ್ನು ತುರ್ತಾಗಿ ಆಲಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಡಿಸೆಂಬರ್ ೧೩ ರಂದು, ಅರ್ಜಿಯನ್ನು ತುರ್ತಾಗಿ ಆಲಿಸಬೇಕೆಂಬ ಸಂಸದರ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

ತೀರ್ಪು

ವೈರಲ್ ವೀಡಿಯೋ ಮೊಯಿತ್ರಾ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸುವ ಮೊದಲೇ ಸೆರೆಹಿಡಿಯಲಾಗಿತ್ತು. ಅಕ್ಟೋಬರ್‌ನಲ್ಲಿ ಹೊಸದಿಲ್ಲಿಯಲ್ಲಿ ಧರಣಿ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಅವರನ್ನು ಮತ್ತು ಹಲವಾರು ಟಿಎಂಸಿ ನಾಯಕರನ್ನು ಬಂಧಿಸಿದಾಗ ತೆಗೆದುಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ