ಮುಖಪುಟ ನಾಜಿ ಸರ್ವಾಧಿಕಾರಿಯನ್ನು ಮೋದಿಯೊಂದಿಗೆ ಹೋಲಿಸಲು ಹಿಟ್ಲರ್‌ನ ಚಿತ್ರವನ್ನು ಎಡಿಟ್ ಮಾಡಲಾಗಿದೆ

ನಾಜಿ ಸರ್ವಾಧಿಕಾರಿಯನ್ನು ಮೋದಿಯೊಂದಿಗೆ ಹೋಲಿಸಲು ಹಿಟ್ಲರ್‌ನ ಚಿತ್ರವನ್ನು ಎಡಿಟ್ ಮಾಡಲಾಗಿದೆ

ಮೂಲಕ: ರಜಿನಿ ಕೆ.ಜಿ

ಜುಲೈ 10 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ನಾಜಿ ಸರ್ವಾಧಿಕಾರಿಯನ್ನು ಮೋದಿಯೊಂದಿಗೆ ಹೋಲಿಸಲು ಹಿಟ್ಲರ್‌ನ ಚಿತ್ರವನ್ನು ಎಡಿಟ್ ಮಾಡಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಮುಳ್ಳುತಂತಿಯ ಮುಂಭಾಗದಲ್ಲಿರುವ ಹಿಟ್ಲರನ ಫೋಟೋವನ್ನು ಎಡಿಟ್ ಮಾಡಲಾಗಿದೆ, ಅದನ್ನು ಪ್ರಧಾನಿ ಮೋದಿ ಅವರು ಇತ್ತೀಚೆಗೆ ಮಕ್ಕಳೊಂದಿಗೆ ಸಂವಾದ ಮಾಡುತ್ತಿರುವ ಚಿತ್ರಕ್ಕೆ ಹೋಲಿಸಲಾಗಿದೆ.

ಸಂದರ್ಭ

ನಟ ಮತ್ತು ರಾಜಕಾರಣಿ ಪ್ರಕಾಶ್ ರಾಜ್ ಮೇ ೪ ರಂದು ಅಡಾಲ್ಫ್ ಹಿಟ್ಲರ್ ಅನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಹೋಲಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ವೈರಲ್ ಚಿತ್ರವು ಹಿಟ್ಲರ್ ಮತ್ತು ಮೋದಿ ಮುಳ್ಳುತಂತಿಯ ಬೇಲಿಗಳ ಹಿಂದೆ ಇರುವ ಮಕ್ಕಳ ಮುಂದೆ ನಿಂತಿರುವ ಎರಡು ಚಿತ್ರಗಳ ಕೊಲಾಜ್ ಆಗಿದೆ. ಶೇರ್ ಮಾಡಿದ ಪೋಷ್ಟ್ ಗೆ ರಾಜ್ ಅವರು ಹೀಗೆ ಬರೆದಿದ್ದಾರೆ "History repeats..Future is behind the Barbed wire .. BEWARE..ಇತಿಹಾಸ ಮರುಕಳಿಸುತ್ತಿದೆ .. ಭವಿಷ್ಯ ಮುಳ್ಳು ತಂತಿಯ ಹಿಂದಿದೆ . ಎಚ್ಚೆತ್ತುಕೊಳ್ಳಿ #justasking.” ಪೋಷ್ಟ್ ೩೧.೨ ಸಾವಿರ ಲೈಕ್‌ಗಳನ್ನು ಮತ್ತು ೭,೭೦೦ ರೀಟ್ವೀಟ್‌ಗಳನ್ನು ಗಳಿಸಿದೆ. ಅನೇಕ ಇತರ ಟ್ವಿಟರ್ ಮತ್ತು ಫೇಸ್‌ಬುಕ್ ಬಳಕೆದಾರರು ಸಹ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ.

ವಾಸ್ತವವಾಗಿ

ಹಿಟ್ಲರನ ಚಿತ್ರವನ್ನು ಮಾರ್ಫ್ ಮಾಡಲಾಗಿದೆ ಹಾಗೂ ಎಡಿಟಿಂಗ್ ಉಪಕರಣಗಳನ್ನು ಬಳಸಿಕೊಂಡು ಎರಡು ಚಿತ್ರಗಳನ್ನು ವಿಲೀನಗೊಳಿಸಿ ರಚಿಸಲಾಗಿದೆ ಎಂದು ರಿವರ್ಸ್ ಇಮೇಜ್ ಸರ್ಚ್ ತೋರುತ್ತದೆ. ಒಂದು ಚಿತ್ರ ಹಿಟ್ಲರ್ ನಿಂತಿರುವುದನ್ನು ತೋರಿಸುತ್ತದೆ, ಇನ್ನೊಂದು ಮುಳ್ಳುತಂತಿ ಬೇಲಿಯ ಹಿಂದೆ ಆಶ್ವಿಟ್ಜ್‌ನಿಂದ ಬದುಕುಳಿದವರ ಮಕ್ಕಳನ್ನು ಸೆರೆಹಿಡಿದಿರುತ್ತದೆ. ನಾವು ಹಿಟ್ಲರನ ಚಿತ್ರವನ್ನು ಸ್ಟಾಕ್ ಇಮೇಜ್ ವೆಬ್‌ಸೈಟ್ ಅಲಾಮಿಯಲ್ಲಿ ಪತ್ತೆ ಮಾಡಿದ್ದೇವೆ, ಮತ್ತು ಮಕ್ಕಳ ಚಿತ್ರವು ಯುನೈಟೆಡ್ ಸ್ಟೇಟ್ಸ್ ಹತ್ಯಾಕಾಂಡದ ಸ್ಮಾರಕ ವಸ್ತುಸಂಗ್ರಹಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಎರಡನೆಯದು ಆಶ್ವಿಟ್ಜ್ ವಿಮೋಚನೆಯ ಬಗ್ಗೆ ಸೋವಿಯತ್ ಚಲನಚಿತ್ರದಿಂದ ಬಂದಿದೆ, ಇದನ್ನು ಜನವರಿ ೨೭, ೧೯೪೫ ರಿಂದ ಹಲವಾರು ತಿಂಗಳುಗಳವರೆಗೆ ಚಿತ್ರೀಕರಿಸಲಾಗಿದೆ. ಚಲನಚಿತ್ರವು ಸ್ಕ್ರಿಪ್ಟ್ ಮತ್ತು ನೈಜ ದೃಶ್ಯಗಳನ್ನು ಒಳಗೊಂಡಿದೆ. ಬದುಕುಳಿದಿರುವ ವಯಸ್ಕ ಮತ್ತು ಮಕ್ಕಳ ವಿಮೋಚನೆಯ ಗಂಟೆಗಳು ಮತ್ತು ದಿನಗಳನ್ನು ಸೆರೆಹಿಡಿಯಲಾಗಿದೆ; ಮತ್ತು ವಾರಗಳು ಅಥವಾ ತಿಂಗಳುಗಳ ನಂತರ ಅವರ ಸ್ಥಳಾಂತರಿಸುವಿಕೆಯ ದೃಶ್ಯಗಳನ್ನು ತೋರಿಸಲಾಗಿದೆ. ಆಶ್ವಿಟ್ಜ್ ಕಾನ್ಸಂಟ್ರೇಶನ್ ಕ್ಯಾಂಪ್‌ನಲ್ಲಿ ಮಕ್ಕಳನ್ನು ಸೆರೆಹಿಡಿಯುವ ಫ್ರೇಮ್‌ಗೆ ಹಿಟ್ಲರನ ಚಿತ್ರವನ್ನು ಡಿಜಿಟಲಿ ಎಡಿಟ್ ಮಾಡುವ ಮೂಲಕ ವೈರಲ್ ಚಿತ್ರವನ್ನು ಸ್ಪಷ್ಟವಾಗಿ ರಚಿಸಲಾಗಿದೆ.

ಮುಳ್ಳುತಂತಿಯ ಬೇಲಿಯ ಹಿಂದೆ ನಿಂತಿರುವ ಮಕ್ಕಳತ್ತ ಮೋದಿ ಕೈ ಬೀಸುತ್ತಿರುವ ಇನ್ನೊಂದು ಚಿತ್ರ, ರಾಜ್ಯ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಕಲಬುರ್ಗಿಗೆ ಭೇಟಿ ನೀಡಿದಾಗ ಕರ್ನಾಟಕದಲ್ಲಿ ತೆಗೆದದ್ದು. ಭೇಟಿಯ ವೇಳೆ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು.

ತೀರ್ಪು

ಮೋದಿ ಮತ್ತು ಹಿಟ್ಲರ್ ನಡುವೆ ತಪ್ಪು ಹೋಲಿಕೆಯನ್ನು ಸೃಷ್ಟಿಸಲು ನಾಜಿ ಜರ್ಮನಿಯ ಎರಡು ಚಿತ್ರಗಳನ್ನು ವಿಲೀನಗೊಳಿಸಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ