ಮುಖಪುಟ ಪಾಕಿಸ್ತಾನದ ವ್ಯಕ್ತಿ ಪ್ರಧಾನಿ ಮೋದಿಯವರನ್ನು ಬೆಂಬಲಿಸು ಕೇಳಿಕೊಳ್ಳುತ್ತಿದ್ದಾನೆ ಎಂದು ಹೇಳಲು ಭಾರತೀಯ ಕಲಾವಿದನ ವೀಡಿಯೋವನ್ನು ವೈರಲ್ ಮಾಡಲಾಗಿದೆ

ಪಾಕಿಸ್ತಾನದ ವ್ಯಕ್ತಿ ಪ್ರಧಾನಿ ಮೋದಿಯವರನ್ನು ಬೆಂಬಲಿಸು ಕೇಳಿಕೊಳ್ಳುತ್ತಿದ್ದಾನೆ ಎಂದು ಹೇಳಲು ಭಾರತೀಯ ಕಲಾವಿದನ ವೀಡಿಯೋವನ್ನು ವೈರಲ್ ಮಾಡಲಾಗಿದೆ

ಮೂಲಕ:

ಏಪ್ರಿಲ್ 8 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಪಾಕಿಸ್ತಾನದ ವ್ಯಕ್ತಿ ಪ್ರಧಾನಿ ಮೋದಿಯವರನ್ನು ಬೆಂಬಲಿಸು ಕೇಳಿಕೊಳ್ಳುತ್ತಿದ್ದಾನೆ  ಎಂದು ಹೇಳಲು ಭಾರತೀಯ ಕಲಾವಿದನ ವೀಡಿಯೋವನ್ನು ವೈರಲ್ ಮಾಡಲಾಗಿದೆ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಕ್ಲಿಪ್ ಅನ್ನು ಮೊದಲು ಹಂಚಿಕೊಂಡ ಪುಟವು ತನ್ನನ್ನು 'ಕಲಾವಿದ' ಎಂದು ಗುರುತಿಸುತ್ತದೆ. ವೀಡಿಯೋದಲ್ಲಿ ಕಾಣಿಸಿಕೊಂಡ ನಟನ ಅದೇ ಇದೇ ರೀತಿಯ ಕ್ಲಿಪ್‌ಗಳನ್ನು ಪುಟದಲ್ಲಿ ನೋಡಬಹುದು.

ಹೇಳಿಕೆ ಏನು?
ಭಾರತದಲ್ಲಿ ಸಂಸತ್ತಿನ ಚುನಾವಣೆಗು ಮುನ್ನ, ಪಾಕಿಸ್ತಾನದ 'ಆಸಿಫ್ ಜರ್ದಾರಿ' ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಮತ್ತು ಬೆಂಬಲವನ್ನು ವ್ಯಕ್ತಪಡಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೋದ ಮೇಲೆ ಬರೆದ ಪಠ್ಯವು ಹೀಗಿದೆ, "ಈ ವ್ಯಕ್ತಿಯ ಮಾತನ್ನು ಓಮ್ಮೆ ಕೇಳಿ ಭಾರತದ ಮುಸಲ್ಮಾನರೇ." ಮತ್ತು ಕೆಳಗೆ ಹಿಂದಿಯಲ್ಲಿ ಪಠ್ಯವನ್ನು ಒಳಗೊಂಡಿದೆ, ಇದು ಪಾಕಿಸ್ತಾನದ ಧ್ವಜದ ಎಮೋಜಿಯೊಂದಿಗೆ "ಇದು ಪಾಕಿಸ್ತಾನದ ಮುಸ್ಲಿಂ, ಪಾಕಿಸ್ತಾನಿ ಆಸಿಫ್ ಜರ್ದಾರಿ" ಎಂದು ಓದುತ್ತದೆ.

ಒಂದು ನಿಮಿಷದ ಅವಧಿಯ ವೀಡಿಯೋ ಸಾಂಪ್ರದಾಯಿಕ ಇಸ್ಲಾಮಿಕ್ ಟೋಪಿಯನ್ನು ಧರಿಸಿ ಕಾರಿನಲ್ಲಿ ಕುಳಿತಿರುವ ವ್ಯಕ್ತಿಯನ್ನು ಚಿತ್ರಿಸುತ್ತದೆ. ಅವನು ತನ್ನ ವೀಕ್ಷಕರನ್ನು ಸ್ವಾಗತಿಸುತ್ತಾನೆ ಮತ್ತು ಭಾರತೀಯ ಮುಸ್ಲಿಮರನ್ನು ಉದ್ದೇಶಿಸಿ ತನ್ನನ್ನು ತಾನು ಪಾಕಿಸ್ತಾನದ ಆಸಿಫ್ ಜರ್ದಾರಿ ಎಂದು ಪರಿಚಯಿಸಿಕೊಳ್ಳುತ್ತಾನೆ. ನಂತರ ಪಾಕಿಸ್ತಾನಿಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳು ಮತ್ತು ಕಷ್ಟಗಳನ್ನು ಚರ್ಚಿಸುತ್ತಾರೆ, ವಿಶೇಷವಾಗಿ ಹಸಿವಿನ ಬಗ್ಗೆ, ಪವಿತ್ರ ರಂಜಾನ್ ತಿಂಗಳ ಮಧ್ಯೆ, ಅವುಗಳನ್ನು ಭಾರತದ ಜನರೊಂದಿಗೆ ಹೋಲಿಸುತ್ತಾರೆ.

ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರವನ್ನು ಅನುಮೋದಿಸಲು ಭಾರತೀಯ ಮುಸ್ಲಿಮರನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿ ನಿಯಂತ್ರಣವನ್ನು ತೆಗೆದುಕೊಳ್ಳಲು ಅವರ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಅಶ್ಲೀಲ ಬಳಕೆಯೊಂದಿಗೆ ವೀಡಿಯೋ ಕೊನೆಗೊಳ್ಳುತ್ತದೆ.

ಪಾಕಿಸ್ತಾನವು ಆಳವಾದ ಆರ್ಥಿಕ ಬಿಕ್ಕಟ್ಟು, ಪ್ರಮುಖ ಆರ್ಥಿಕ ಸಂಕಷ್ಟಗಳು, ನಿರುದ್ಯೋಗ, ಆಹಾರ ಮತ್ತು ತೈಲದಂತಹ ಅಗತ್ಯ ವಸ್ತುಗಳ ಬೆಲೆಗಳ ಏರಿಕೆಯೊಂದಿಗೆ ಹೋರಾಡುತ್ತಿದೆ.

ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್), ಈ ವೀಡಿಯೋವನ್ನು "ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನಿ ಮುಸಲ್ಮಾನರ ಸಂದೇಶ" ಮತ್ತು "ಭಾರತೀಯ ಮುಸ್ಲಿಮರನ್ನು ಅಪಹಾಸ್ಯ ಮಾಡುವ ಮತ್ತು ಭಾರತ್ ಮಾತೆಯ ಬಗೆಗಿನ ಅವರ ನಿಷ್ಠೆಯನ್ನು ಪ್ರಶ್ನಿಸಿದ್ದಕ್ಕಾಗಿ ಪಾಕಿಸ್ತಾನಿ ಮುಸ್ಲಿಮರನ್ನು ನಾನು ಬಲವಾಗಿ ಖಂಡಿಸುತ್ತೇನೆ" ಎಂಬ ಶೀರ್ಷಿಕೆಗಳ ಜೊತೆಗೆ ಶೇರ್ ಮಾಡಲಾಗಿದೆ. 

ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಈ ಫ್ಯಾಕ್ಟ್- ಚೆಕ್ ಅನ್ನು ಬರೆಯುವ ಸಮಯದಲ್ಲಿ, ವೀಡಿಯೋವನ್ನು ಒಳಗೊಂಡ ಅಂತಹ ಒಂದು ಪೋಷ್ಟ್ ೧೯,೦೦೦ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಹಲವಾರು ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಹಿಂದಿ ಸುದ್ದಿ ಚಾನೆಲ್ ಇಂಡಿಯಾ ಟಿವಿ ತಮ್ಮ ಅಧಿಕೃತ, ಪರಿಶೀಲಿಸಿದ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುವ ಲೈವ್ ವೀಡಿಯೋದಲ್ಲಿ ವೈರಲ್ ಕ್ಲಿಪ್ ಅನ್ನು ಬಳಸಿದೆ. ಹಿಂದಿಯಲ್ಲಿ ಬರೆದ ಶೀರ್ಷಿಕೆಯನ್ನು ಅನುವಾದಿಸಿದಾಗ: "ಪಿಎಂ ಮೋದಿ ಆನ್ ಪಾಕಿಸ್ತಾನ: ಪ್ರಧಾನಿ ಮೋದಿಯವರ ಹೊಸ ಯೋಜನೆ ಪಾಕಿಸ್ತಾನದಲ್ಲಿ ಕೋಲಾಹಲವನ್ನು ಉಂಟುಮಾಡಿದೆ... ಎಲ್ಲೆಲ್ಲೂ ಮೋದಿ, ಮೋದಿ ಮಾತ್ರ," ಎಂದು ಹೇಳುತ್ತದೆ. ಆರ್ಕೈವ್ ಅನ್ನು ಇಲ್ಲಿ ನೋಡಬಹುದು.

ಇಂಡಿಯಾ ಟಿವಿ ಲೈವ್ ವೀಡಿಯೋದ ಸ್ಕ್ರೀನ್‌ಶಾಟ್.
(ಮೂಲ: ಯೂಟ್ಯೂಬ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ವೀಡಿಯೋವನ್ನು ಪೋಷ್ಟ್ ಮಾಡಿದ ಸಾಮಾಜಿಕ ಮಾಧ್ಯಮ ಪುಟವು ಉತ್ತರ ಭಾರತದ ನಗರವಾದ ಉತ್ತರ ಪ್ರದೇಶದ ಆಗ್ರಾ ಮೂಲದ ಕಲಾವಿದ ಎಂದು ಹೇಳಿಕೊಂಡಿದೆ. ಇದು ಪಾಕಿಸ್ತಾನಿ ವ್ಯಕ್ತಿಯನ್ನು ಚಿತ್ರಿಸುವುದಿಲ್ಲ.

ವೀಡಿಯೋದಲ್ಲಿರುವ ವ್ಯಕ್ತಿ ಯಾರು?

ಮಲಯಾಳಂ ಶೀರ್ಷಿಕೆಯೊಂದಿಗೆ ವೀಡಿಯೋದ ವೈರಲ್ ಪೋಷ್ಟ್ ನಲ್ಲಿ, ''dhirendra_raghav_79' ಎಂಬ ಹೆಸರು ಗೋಚರಿಸುವುದನ್ನು ನಾವು ನೋಡಿದೆವು.

ಇನ್‌ಸ್ಟಾಗ್ರಾಮ್ ಬಳಕೆದಾರ ಹೆಸರು 'dhirendra_raghav_79' ಅನ್ನು ತೋರಿಸುವ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಆ ಬಳಕೆದಾರರ  ಹೆಸರಿನೊಂದಿಗೆ ಇನ್‌ಸ್ಟಾಗ್ರಾಮ್ ನಲ್ಲಿ ಹುಡುಕಿದಾಗ ಮಾರ್ಚ್ ೨೩ ರಂದು 'ಧೀರೇಂದ್ರ ರಾಘವ್' ಅವರ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಷ್ಟ್ ಮಾಡಿದ ವೈರಲ್ ವೀಡಿಯೋವನ್ನು ಕಂಡುಕೊಂಡೆವು. ಇದಲ್ಲದೆ, ಬಳಕೆದಾರರು ಒಂದೇ ವೀಡಿಯೋವನ್ನು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್ ಎರಡರಲ್ಲೂ ಪೋಷ್ಟ್  ಮಾಡಿದ್ದಾರೆ (ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) . ಹಿಂದಿ ಶೀರ್ಷಿಕೆಯೊಂದಿಗಿನ  ಪೋಷ್ಟ್ ಗಳು "ಪ್ರಧಾನಿ ಮೋದಿಯವರಂತೆ ಯಾರೂ ಇಲ್ಲ... 🇮🇳❤️" ಎಂದು ಅನುವಾದಿಸುತ್ತವೆ.

ಧೀರೇಂದ್ರ ರಾಘವ್ ಅವರ ಇನ್‌ಸ್ಟಾಗ್ರಾಮ್ ನಲ್ಲಿ ಮಾರ್ಚ್ ೨೩, ೨೦೨೪ ರಂದು ಪೋಷ್ಟ್ ಮಾಡಲಾದ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ:ಇನ್‌ಸ್ಟಾಗ್ರಾಮ್ /ಧೀರೇಂದ್ರ ರಾಘವ್/ಸ್ಕ್ರೀನ್‌ಶಾಟ್)

ರಾಘವ್ ಅವರ ಇನ್‌ಸ್ಟಾಗ್ರಾಮ್  ಬಯೋ ಅವರನ್ನು ಕಲಾವಿದ ಎಂದು ಗುರುತಿಸುತ್ತದೆ ಮತ್ತು ಅವರ ಪ್ರೊಫೈಲ್ ವಿವಿಧ ರೀತಿಯ ವೀಡಿಯೋಗಳನ್ನು ಹೊಂದಿದೆ.

ಅವರ ಪುಟದ ವಿಷಯವನ್ನು ಪರಿಶೀಲಿಸಿದ ನಂತರ, ವೈರಲ್ ವೀಡಿಯೋದಲ್ಲಿ ನೋಡಿದಂತೆ ಹೆಚ್ಚಿನ ವೀಡಿಯೋಗಳಲ್ಲಿ ವಿಭಿನ್ನ ಬಟ್ಟೆಗಳನ್ನು, ವಿಭಿನ್ನ ಪಾತ್ರಗಳನ್ನು ನಿರ್ವಹಿಸುವುದು ಮತ್ತು ಕೆಲವೊಮ್ಮೆ ಕಾರಿನಲ್ಲಿ ಕುಳಿತುಕೊಳ್ಳುವುದನ್ನು ನಾವು ಗಮನಿಸಿದ್ದೇವೆ. ಅವರ ಅನೇಕ ವೀಡಿಯೋಗಳಲ್ಲಿ, ಅವರು ಸದ್ದಾಂ ಹುಸೇನ್ ಮತ್ತು ಭಾವನಾ ಅವರಂತಹ ಹೆಸರುಗಳನ್ನು ಅಳವಡಿಸಿಕೊಂಡಿದ್ದಾರೆ.

ಅವರ ವೀಡಿಯೋಗಳಲ್ಲಿ ಹಾಡುಗಳನ್ನು ಒಳಗೊಂಡ ರೀಲ್‌ಗಳನ್ನು ರಚಿಸುತ್ತಾರೆ. ಅವರ ಕೆಲವು ರೀಲ್‌ಗಳಲ್ಲಿ, ಅವರು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಮತ್ತು ರಾಜಕಾರಣಿ ಮುಖ್ತಾರ್ ಅನ್ಸಾರಿಯ ಸಾವಿನಂತಹ ಪ್ರಸ್ತುತ ಘಟನೆಗಳನ್ನು ಚರ್ಚಿಸುತ್ತಾರೆ. ಇದಲ್ಲದೆ, ಅವರ ವೀಡಿಯೋವೊಂದರಲ್ಲಿ, ಅವರು ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ಅವರು ಹಿಂದೂ ಮತ್ತು ಮುಸ್ಲಿಂ ಪಾತ್ರಗಳನ್ನು ಚಿತ್ರಿಸುವ ರೀಲ್‌ಗಳನ್ನು ಸಹ ರಚಿಸಿದ್ದಾರೆ.

ವೈರಲ್ ವೀಡಿಯೋದಲ್ಲಿರುವ ವ್ಯಕ್ತಿಯನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ ಪುಟಗಳಲ್ಲಿ ಹಲವಾರು ಇತರ ವೀಡಿಯೋಗಳಲ್ಲಿ ಕಾಣಬಹುದು. (ಮೂಲ: ಇನ್‌ಸ್ಟಾಗ್ರಾಮ್ /ಫೇಸ್‌ಬುಕ್‌/ಸ್ಕ್ರೀನ್‌ಶಾಟ್)

ರಾಘವ್ ಅವರ ಫೇಸ್‌ಬುಕ್ ಪುಟವೂ ಸಹ ಅವರನ್ನು ವೀಡಿಯೋ  ಕ್ರಿಯೇಟರ್ ಮತ್ತು 'ಡಿಜಿಟಲ್ ಕ್ರಿಯೇಟರ್' ಎಂದು ಗುರುತಿಸಿದೆ. ಅವರು ಉತ್ತರ ಪ್ರದೇಶದ ಆಗ್ರಾದಲ್ಲಿ ನೆಲೆಸಿದ್ದಾರೆ ಮತ್ತು  ಎಂದು ಅವರ ಪ್ರೊಫೈಲ್ ಸೂಚಿಸುತ್ತದೆ.

ಧೀರೇಂದ್ರ ರಾಘವ್ ಅವರ ಫೇಸ್‌ಬುಕ್ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ಅವರು ಉತ್ತರ ಪ್ರದೇಶದ ಆಗ್ರಾದಿಂದ ಬಂದವರು ಮತ್ತು ಅಲ್ಲಿ ಪ್ರಸ್ತುತ ನೆಲೆಸಿದ್ದಾರೆ ಎಂದು ತೋರಿಸುತ್ತದೆ.
(ಮೂಲ: ಫೇಸ್‌ಬುಕ್/ ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ರಾಘವ್ ಅವರ ಸ್ಥಳವನ್ನು ಖಚಿತಪಡಿಸಲು ನಾವು ಅವರ ಕೆಲವು ವೀಡಿಯೋಗಳನ್ನು ಪರಿಶೀಲಿಸಿದ್ದೇವೆ. ಅವರ ಫೇಸ್‌ಬುಕ್ ಪುಟದಲ್ಲಿ ರೀಲ್‌ ಒಂದರಲ್ಲಿ (ಇಲ್ಲಿ ಆರ್ಕೈವ್) ಅವರು ಜನಪ್ರಿಯ ಬಾಲಿವುಡ್ ಹಾಡಿಗೆ ರಸ್ತೆಯಲ್ಲಿ ನೃತ್ಯ ಮಾಡುವುದನ್ನು ನೋಡಬಹುದು. ಹಿನ್ನಲೆಯಲ್ಲಿ ಕೆಲವು ಅಂಗಡಿ ಮುಂಗಟ್ಟುಗಳನ್ನು ನೋಡಿದಾಗ ನಮಗೆ ಅಗರವಾಲ್ ಡೈರಿ ಎಂಬ ಅಂಗಡಿಯ ಪಕ್ಕದಲ್ಲಿ ಜ್ಯೋತಿ ಮೇಕ್ ಓವರ್ ಎಂಬ ಸಲೂನ್ ಕಾಣಿಸಿತು. ಈ ಎರಡು ಸುಳಿವುಗಳನ್ನು ಬಳಸಿಕೊಂಡು, ನಾವು ವೀಡಿಯೋವನ್ನು ಚಿತ್ರೀಕರಿಸಿದ ಪ್ರದೇಶವನ್ನು ಆಗ್ರಾದ ಪುಷ್ಪಾಂಜಲಿ ರಸ್ತೆ ಎಂದು ಕಂಡುಹಿಡಿದೆವು.

ರಾಘವ್ ಅವರ ಪ್ರೊಫೈಲ್‌ನಲ್ಲಿರುವ ಈ ರೀಲ್ ಅನ್ನು ಆಗ್ರಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ತೋರಿಸುವ ಚಿತ್ರ ಹೋಲಿಕೆ. (ಮೂಲ: ಫೇಸ್‌ಬುಕ್/ಗೂಗಲ್ ನಕ್ಷೆಗಳು/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಸ್ಪಷ್ಟವಾಗಿ, ಈ ವೀಡಿಯೋ ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನಿ ಮುಸಲ್ಮಾನರ ಸಂದೇಶವನ್ನು ತೋರಿಸುವುದಿಲ್ಲ ಆದರೆ ಆಗ್ರಾ ಮೂಲದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ನ ವೀಡಿಯೋ ಇದಾಗಿದೆ, ಅವರು ನಿಯಮಿತವಾಗಿ ವಿಭಿನ್ನ ಪಾತ್ರಗಳನ್ನು ಆಧರಿಸಿ ಅಂತಹ ವೀಡಿಯೋಗಳನ್ನು ಮಾಡುತ್ತಾರೆ.

ಕಾಮೆಂಟ್ಗಾಗಿ ಲಾಜಿಕಲಿ ಫ್ಯಾಕ್ಟ್ಸ್ ರಾಘವ್ ಅವರನ್ನು ಸಂಪರ್ಕಿಸಿದೆ. ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದಾಗ  ಈ ಫ್ಯಾಕ್ಟ್-ಚೆಕ್ ಅನ್ನು ನವೀಕರಿಸಲಾಗುವುದು. 

ತೀರ್ಪು
ಮೂಲತಃ ಉತ್ತರ ಪ್ರದೇಶದ ಆಗ್ರಾ ಮೂಲದ ಕಲಾವಿದನೆಂದು ಗುರುತಿಸಿಕೊಂಡಿರುವ ಬಳಕೆದಾರರು ಹಂಚಿಕೊಂಡ ವೈರಲ್ ವೀಡಿಯೋವನ್ನು ಪಾಕಿಸ್ತಾನಿ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿಯನ್ನು ಬೆಂಬಲಿಸುವಂತೆ ಭಾರತೀಯರನ್ನು ಒತ್ತಾಯಿಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವ್ಯಕ್ತಿಯು ಭಾರತದಿಂದ ಬಂದವರು ಮತ್ತು ಅಂತಹುದೇ ವೀಡಿಯೋಗಳನ್ನು ಅವರ ಪುಟದಲ್ಲಿ ಕಾಣಬಹುದು. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ