ಮುಖಪುಟ ಕರ್ನಾಟಕದ ರಾಜಕೀಯ ನಾಯಕರನ್ನು ಅಪಹಾಸ್ಯ ಮಾಡಲು ಎಡಿಟ್ ಮಾಡಿರುವ ಬಸ್‌ನ ಚಿತ್ರವನ್ನು ಹಂಚಿಕೊಳ್ಳಲಾಗಿದೆ

ಕರ್ನಾಟಕದ ರಾಜಕೀಯ ನಾಯಕರನ್ನು ಅಪಹಾಸ್ಯ ಮಾಡಲು ಎಡಿಟ್ ಮಾಡಿರುವ ಬಸ್‌ನ ಚಿತ್ರವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ

ಸೆಪ್ಟೆಂಬರ್ 8 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕರ್ನಾಟಕದ ರಾಜಕೀಯ ನಾಯಕರನ್ನು ಅಪಹಾಸ್ಯ ಮಾಡಲು ಎಡಿಟ್ ಮಾಡಿರುವ ಬಸ್‌ನ ಚಿತ್ರವನ್ನು ಹಂಚಿಕೊಳ್ಳಲಾಗಿದೆ ಆನ್‌ಲೈನ್‌ನಲ್ಲಿ ಮಾಡಿದ ಕ್ಲೈಮ್‌ಗಳ ಸ್ಕ್ರೀನ್‌ಶಾಟ್‌ಗಳು (ಮೂಲ: ಫೇಸ್‌ಬುಕ್, ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮೂಲ ಚಿತ್ರವು ಬಸ್ ಮಾರ್ಗ ೩೬೫ ಅನ್ನು ತೋರಿಸುತ್ತದೆ ಮತ್ತು ೪೨೦ ಅಲ್ಲ. ಈ ಮಾರ್ಗಕ್ಕೆ ಯಾವುದೇ ಬಸ್ ಮಾರ್ಗವನ್ನು ನಿಗದಿಪಡಿಸಲಾಗಿಲ್ಲ.

ನಿರೂಪಣೆ ಏನು?

ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ರಾಜ್ಯ ವಿಧಾನಸಭೆ ಭವನ ಮತ್ತು ನಗರ ಕಾರಾಗೃಹದ ನಡುವೆ ಬೆಂಗಳೂರಿನಲ್ಲಿ ನೇರ ಬಸ್ ಮಾರ್ಗವನ್ನು ಪರಿಚಯಿಸಿದೆ ಎಂಬ ಹೇಳಿಕೆಯೊಂದಿಗೆ ಕೆಂಪು ಬಸ್‌ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಚಿತ್ರವು ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟೇಶನ್ ಕಾರ್ಪೊರೇಶನ್ (ಬಿಎಂಟಿಸಿ) ಬಸ್ ಅನ್ನು '೪೨೦' ಸಂಖ್ಯೆಯನ್ನು ಪ್ರದರ್ಶಿಸುತ್ತದೆ-ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೪೨೦ ರ ಮುಸುಕಿನ ಉಲ್ಲೇಖವಾಗಿದ್ದು ಅದು ಮೋಸ ಮತ್ತು ಅಪ್ರಾಮಾಣಿಕತೆಗೆ ಸಂಬಂಧಿಸಿದೆ. ಎಲ್ಇಡಿ ಪರದೆಯಲ್ಲಿ ಪ್ರದರ್ಶಿಸಲಾದ ಮಾರ್ಗದ ಪ್ರಕಾರ, ಬಸ್ ವಿಧಾನ ಸೌಧ (ಕರ್ನಾಟಕ ವಿಧಾನಸಭೆ) ಮತ್ತು ಪರಪ್ಪನ ಅಗ್ರಹಾರ (ಬೆಂಗಳೂರು ಕೇಂದ್ರ ಕಾರಾಗೃಹ) ನಡುವೆ ಚಲಿಸುತ್ತದೆ. ವೈರಲ್ ಆಗಿರುವ ಫೋಟೋದಲ್ಲಿ ಕಂಡ ಬಸ್ಸಿನ ಮೇಲೆ ‘ರಾಜಕಾರಣಿಗಳ ವಿಶೇಷ’ ಎಂಬ ಪದವನ್ನೂ ಬರೆಯಲಾಗಿದೆ.

ಫೇಸ್‌ಬುಕ್‌ನಲ್ಲಿ ಫೋಟೋವನ್ನು ಹಂಚಿಕೊಂಡ ಬಳಕೆದಾರರು, "ಮೊದಲ ಬಾರಿಗೆ, ಬೆಂಗಳೂರಿನಲ್ಲಿ ಬಸ್ ಮಾರ್ಗವನ್ನು ಸಂಪೂರ್ಣವಾಗಿ ಯೋಜಿಸಲಾಗಿದೆ... ಮೂಲದಿಂದ ಗಮ್ಯಸ್ಥಾನಕ್ಕೆ. ಮಾರ್ಗ ಸಂಖ್ಯೆ ೪೨೦ ವಿಧಾನ ಸೌಧದಿಂದ ಪರಪ್ಪನ ಅಗ್ರಹಾರ (ಕೇಂದ್ರ ಕಾರಾಗೃಹ) ವರೆಗೆ. ಜೂಮ್ ಮಾಡಿ ನೀವೇ ನೋಡಿ!(sic)." ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ರಾಜಕಾರಣಿಗಳಿಗೆ ಬಸ್ ಅನ್ನು ಕಾಯ್ದಿರಿಸಲಾಗಿದೆ ಎಂದು ಇದೇ ರೀತಿಯ ನಿರೂಪಣೆಯೊಂದಿಗೆ ಫೋಟೋವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿಯೂ ಹಂಚಿಕೊಳ್ಳಲಾಗಿದೆ.

ಆನ್‌ಲೈನ್‌ನಲ್ಲಿ ಮಾಡಿದ ಕ್ಲೈಮ್‌ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಫೇಸ್‌ಬುಕ್, ಎಕ್ಸ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)


ಆದರೆ, ವೈರಲ್ ಚಿತ್ರವನ್ನು ಡಿಜಿಟಲ್ ಎಡಿಟ್ ಮಾಡಲಾಗಿದೆ ಮತ್ತು ಕರ್ನಾಟಕ ವಿಧಾನಸಭೆ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹದ ನಡುವೆ ನೇರ ಬಸ್ ಸೇವೆಯ ಬಗ್ಗೆಯ ಹೇಳಿಕೆಯು ತಪ್ಪಾಗಿದೆ.

ವಾಸ್ತವಾಂಶಗಳೇನು?

ಕನಿಷ್ಠ ೨೦೧೫ ರಿಂದ ಈ ಚಿತ್ರವು ತಪ್ಪು ಹೇಳಿಕೆಗಳೊಂದಿಗೆ ಪ್ರಸಾರವಾಗುತ್ತಿದೆ ಎಂದು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ.

ವೈರಲ್ ಚಿತ್ರದ ರಿವರ್ಸ್ ಇಮೇಜ್ ಸರ್ಚ್ ಮೂಲಕ ನಾವು ಫೇಸ್‌ಬುಕ್‌ನಲ್ಲಿ 'BMTC Volvo Bus' ಪೋಷ್ಟ್ ಮಾಡಿದ ಇಮೇಜ್ ಕಂಡುಕೊಂಡೆವು. ಈ ಖಾತೆಯು ಮೇ ೮, ೨೦೧೦ ರಂದು ಅದೇ ಬಸ್‌ನ ಫೋಟೋವನ್ನು (ಯಾವುದೇ ವಿವರಣೆಯಿಲ್ಲದೆ) ಪೋಷ್ಟ್ ಮಾಡಿದೆ. ಫೇಸ್‌ಬುಕ್ ಫೋಟೋದಲ್ಲಿರುವ ಬಸ್‌ನ ನೋಂದಣಿ ಸಂಖ್ಯೆ 'ಕೆಎ-೦೧-ಎಫ್-೩೯೭೫,'-ವೈರಲ್ ಚಿತ್ರದಲ್ಲಿ ಕೂಡ ಅದೇ ಸಂಖ್ಯೆ ಕಂಡುಬಂದಿದೆ.

ಫೇಸ್ ಬುಕ್ ಚಿತ್ರದಲ್ಲಿರುವ ಬಸ್ ಮಾರ್ಗ ಸಂಖ್ಯೆ ೩೬೫, ೪೨೦ ಅಲ್ಲ. ಬಸ್ಸಿನ ಎಲ್ಇಡಿ ಪರದೆಯ ಮೇಲೆ ಮಾರ್ಗದ ಹೆಸರು 'ನ್ಯಾಷನಲ್ ಪಾರ್ಕ್' ಎಂದು ತೋರಿಸುತ್ತದೆ. ಹೆಚ್ಚುವರಿಯಾಗಿ, ೨೦೧೦ ರ ಚಿತ್ರದಲ್ಲಿ 'ರಾಜಕಾರಣಿಗಳ ವಿಶೇಷ' ಎಂಬ ಪದಗಳು ಗೋಚರಿಸುವುದಿಲ್ಲ.

ಅಲ್ಲದೆ, ವೈರಲ್ ಚಿತ್ರದಲ್ಲಿರುವ ಎಲ್‌ಇಡಿ ಪರದೆಯ ಮೇಲಿನ ಪಠ್ಯದ ಬಣ್ಣವು ಫೇಸ್‌ಬುಕ್ ಚಿತ್ರದಲ್ಲಿನ ಬಣ್ಣ ಮತ್ತು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಅಂತಹ ಬಿಎಂಟಿಸಿ ಬಸ್‌ಗಳ ಪರದೆಯ ಮೇಲೆ ಪ್ರದರ್ಶಿಸುವ ಪಠ್ಯಕ್ಕಿಂತ ಭಿನ್ನವಾಗಿದೆ. ಪಠ್ಯದ ಫಾಂಟ್ ಕೂಡ ಸಾಮಾನ್ಯವಾಗಿ ಬಳಸುವುದಿಕ್ಕಿಂತ ಭಿನ್ನವಾಗಿದೆ. ಬಿಎಂಟಿಸಿ ಬೆಂಗಳೂರು ಮೂಲದ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು ಅದು ಕರ್ನಾಟಕದ ರಾಜಧಾನಿಯಲ್ಲಿ ಸಾರಿಗೆ ಸೇವೆಗಳನ್ನು ಒದಗಿಸುತ್ತದೆ.

ವೈರಲ್ ಚಿತ್ರ ಮತ್ತು ೨೦೧೦ ರ ಫೋಟೋ ಹೋಲಿಕೆ.
(ಮೂಲ: ಫೇಸ್‌ಬುಕ್/ ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಅಕ್ಟೋಬರ್ ೨೦೧೮ ರಲ್ಲಿ ಡೆಕ್ಕನ್ ಕ್ರಾನಿಕಲ್ ಪ್ರಕಟಿಸಿದ ವರದಿಯಲ್ಲಿ ಸಹ ಮೂಲ ಚಿತ್ರವನ್ನು ಸೇರಿಸಲಾಗಿದೆ. ಬಿಎಂಟಿಸಿ ಬಸ್ಸುಗಳಲ್ಲಿ ಬಸ್ ಮಾರ್ಗಗಳನ್ನು ಪ್ರದರ್ಶಿಸಲು ಚಿತ್ರವನ್ನು ಪ್ರತಿನಿಧಿ ಚಿತ್ರವಾಗಿ ಹಿಂದಿ ಭಾಷೆಯ ಬಳಕೆಯ ವರದಿಯಲ್ಲಿ ಬಳಸಲಾಗಿದೆ. ಈ ಚಿತ್ರವು ಬಸ್ ಮಾರ್ಗದ ಸಂಖ್ಯೆಯನ್ನು ೩೬೫ ಎಂದು ತೋರಿಸುತ್ತದೆ ಮತ್ತು ಬಸ್‌ನ ಎಲ್‌ಇಡಿ ಪರದೆಯಲ್ಲಿ 'ನ್ಯಾಷನಲ್ ಪಾರ್ಕ್' ಎಂಬ ಪದಗಳು ಇರುವುದನ್ನು ತೋರಿಸುತ್ತದೆ.

ಎಡಿಟ್ ಮಾಡದ ಚಿತ್ರದ ನಿಖರವಾದ ಮೂಲವನ್ನು ನಾವು ಖಚಿತಪಡಿಸಲು ಸಾಧ್ಯವಾಗದಿದ್ದರೂ, ಇದನ್ನು ಮೊದಲು ೨೦೦೯ ರಲ್ಲಿ 'ರೈಸಿಂಗ್ ಸಿಟಿಜನ್' ಬ್ಲಾಗ್ ಪೋಷ್ಟ್‌ನಲ್ಲಿ ಬಳಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಇದಲ್ಲದೆ, ನಾವು ಬಿಎಂಟಿಸಿ ಬಸ್ ಸಂಖ್ಯೆ ೩೬೫ ರ ಮಾರ್ಗವನ್ನು 'narasimhadatta.info ವೆಬ್‌ಸೈಟ್‌ನಲ್ಲಿ ಹುಡಿಕಿದೆವು, ಇದು ಬಿಎಂಟಿಸಿ ಬಸ್ ಮಾರ್ಗಗಳನ್ನು ಹುಡುಕಲು ಅನುವು ಮಾಡಿಕೊಡುತ್ತದೆ. ಬಸ್ ಮಾರ್ಗ ೩೬೫ ಕೆಂಪೇಗೌಡ ಬಸ್ ನಿಲ್ದಾಣ-ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮಾರ್ಗವನ್ನು ಸೂಚಿಸುತ್ತದೆ. ೪೨೦ ಸಂಖ್ಯೆಗೆ ನಿಗದಿಪಡಿಸಲಾದ ಯಾವುದೇ ಬಸ್ ಮಾರ್ಗವು ನಮಗೆ ಕಂಡುಬಂದಿಲ್ಲ.

ಮೂಲ ಬಸ್ ಮಾರ್ಗ ಸಂಖ್ಯೆ ಮತ್ತು ಅದರ ಪ್ರಯಾಣದ ವಿವರಗಳನ್ನು ತೋರಿಸುವ ಸ್ಕ್ರೀನ್‌ಶಾಟ್.
(ಮೂಲ: narasimhadatta.info/ ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಇದಲ್ಲದೆ, ವಿಧಾನಸೌಧ ಮತ್ತು ಪರಪ್ಪನ ಅಗ್ರಹಾರ ನಡುವೆ ನೇರ ಬಿಎಂಟಿಸಿ ಬಸ್ ಸೇವೆ ಇಲ್ಲ. 'narasimhadatta.info' ಪ್ರಕಾರ, ಈ ಎರಡು ಸ್ಥಳಗಳ ನಡುವೆ ಐದು ಬಸ್ ಮಾರ್ಗಗಳಿವೆ, ಆದರೆ ಯಾವುದೇ ನೇರ ಬಸ್ ಸೇವೆ ಅವುಗಳನ್ನು ಸಂಪರ್ಕಿಸುವುದಿಲ್ಲ.

ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ (ಸೆಂಟ್ರಲ್ ಜೈಲು) ಲಭ್ಯವಿರುವ ವಿವಿಧ ಮಾರ್ಗಗಳ ಸ್ಕ್ರೀನ್‌ಶಾಟ್.
(ಮೂಲ: narasimhadatta.info/ ಸ್ಕ್ರೀನ್‌ಶಾಟ್/ತಾರ್ಕಿಕ ಸತ್ಯಗಳಿಂದ ಮಾರ್ಪಡಿಸಲಾಗಿದೆ)

ಬಿಎಂಟಿಸಿ ಬಸ್‌ನ ಹಳೆಯ ಫೋಟೋಗೆ ಅಸ್ತಿತ್ವದಲ್ಲಿಲ್ಲದ ಬಸ್ ಮಾರ್ಗ ಮತ್ತು ಸಂಖ್ಯೆಯನ್ನು ಡಿಜಿಟಲಿ ಸೇರಿಸುವ ಮೂಲಕ ವೈರಲ್ ಚಿತ್ರವನ್ನು ರಚಿಸಲಾಗಿದೆ ಎಂದು ಮೇಲಿನ ಪುರಾವೆಗಳು ಸಾಬೀತುಪಡಿಸುತ್ತವೆ.

ತೀರ್ಪು

ರಾಜ್ಯ ಸರ್ಕಾರವು ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಮತ್ತು ಬೆಂಗಳೂರು ನಗರ ಕಾರಾಗೃಹದ ನಡುವೆ ನೇರ ಬಸ್ ಸೇವೆಯನ್ನು ಪ್ರಾರಂಭಿಸಿದೆ ಎಂಬ ಹೇಳಿಕೆಯೊಂದಿಗೆ ಡಿಜಿಟಲ್ ಎಡಿಟ್ ಮಾಡಿದ ಚಿತ್ರವು ಹರಿದಾಡುತ್ತಿದೆ. ಅಂತಹ ಯಾವುದೇ ನೇರ ಬಸ್ ಸೇವೆ ಲಭ್ಯವಿಲ್ಲ ಮತ್ತು ವೈರಲ್ ಹೇಳಿಕೆ ತಪ್ಪು.

ಅನುವಾದಿಸಿದವರು: ರಜಿನಿ ಕೆ.ಜಿ 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ